• Home
  • »
  • News
  • »
  • state
  • »
  • Eidgah Maidaan: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಆಗ್ರಹ; ಅಡಕತ್ತರಿಯಲ್ಲಿ ಸಿಲುಕಿಕೊಂಡ ಪಾಲಿಕೆ

Eidgah Maidaan: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಆಗ್ರಹ; ಅಡಕತ್ತರಿಯಲ್ಲಿ ಸಿಲುಕಿಕೊಂಡ ಪಾಲಿಕೆ

ಈದ್ಗಾ ಮೈದಾನ

ಈದ್ಗಾ ಮೈದಾನ

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಈ ಕುರಿತು ಪಾಲಿಕೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಇದರ ಬಗ್ಗೆ ನಾನೇನು ಹೆಚ್ಚು ಹೇಳಲ್ಲ ಅಂತ ಜಾರಿಕೊಂಡಿದ್ದಾರೆ.

  • News18 Kannada
  • Last Updated :
  • Hubli-Dharwad (Hubli), India
  • Share this:

ಹುಬ್ಬಳ್ಳಿ - ಹುಬ್ಬಳ್ಳಿಯ ಈದ್ಗಾ ಮೈದಾನ (Hubballi Eidgah Maidaan) ಸದಾ ಒಂದಲ್ಲ ಒಂದು ಕಾರಣಕ್ಕೆ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ವರ್ಷದ ಎರಡು ಬಾರಿ ಮುಸ್ಲಿಮರಿಗೆ (Muslim) ಸಾಮೂಹಿಕ ಪ್ರಾರ್ಥನೆಗೆ (Namaz) ಅವಕಾಶ, ಜನವರಿ 26 ಹಾಗೂ ಆಗಸ್ಟ್ 15 ರಂದು ರಾಷ್ಟ್ರ ಧ್ವಜಾರೋಹಣಕ್ಕೆ (National Flag hosting) ಮಾತ್ರ ಅವಕಾಶವಿತ್ತು. ಆದ್ರೆ ಹಿಂದೂಪರ ಸಂಘಟನೆಗಳ (Hindu Organization) ಪಟ್ಟಿನಿಂದಾಗಿ ಪಾಲಿಕೆ ಗಣೇಶೋತ್ಸವಕ್ಕೆ (Ganeshotsava) ಅವಕಾಶ ಮಾಡಿಕೊಟ್ಟಿತ್ತು. ಇದೇ ಈಗ ಮಹಾನಗರ ಪಾಲಿಕೆ ಅಡಕತ್ತರಿಯಲ್ಲಿ ಸಿಲುಕಿಕೊಳ್ಳುವಂತೆ ಮಾಡಿದೆ. ಒಂದೆಡೆ ಟಿಪ್ಪು ಜಯಂತಿ (Tipu Jayanti), ಮತ್ತೊಂದೆದೆ ಕನಕ ಜಯಂತಿಗೆ (Kanaka Jayanti) ಅವಕಾಶ ಕೋರಿ ಮನವಿ ಸಲ್ಲಿಸಲಾಗಿದೆ. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ (Hubballi) ಈದ್ಗಾ ಮೈದಾನ ವಿವಾದ ಮತ್ತೆ ಮುನ್ನಲೆಗೆ ಬಂದಿದೆ.


ಟಿಪ್ಪು ಜಯಂತಿಗೆ ಅವಕಾಶ ನೀಡುವಂತೆ ಎಐಎಂಐಎಂ ಮನವಿ ಮಾಡಿದ್ದು, ಹಿಂದೂಪರ ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸಿವೆ. ಮತ್ತೊಂದೆಡೆ ನವೆಂಬರ್ 11ಕ್ಕೆ ಕನಕ ಜಯಂತಿ ಆಚರಣೆಗೆ ಅವಕಾಶ ನೀಡುವಂತೆ ಶ್ರೀರಾಮಸೇನೆ ಸಂಘಟನೆ ಪಾಲಿಕೆಗೆ ಮನವಿ ಮಾಡಿದ್ದು, ಮಹಾನಗರ ಪಾಲಿಕೆ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.


ಪಾಲಿಕೆ ಆಯುಕ್ತರಿಗೆ ಮನವಿ


ಪಾಲಿಕೆ ಈ ಹಿಂದೆ ಗಣೇಶೋತ್ಸವಕ್ಕೆ ಅವಕಾಶ ನೀಡಿತ್ತು. ಈಗ ವಿವಿಧ ಜಯಂತಿ, ಉತ್ಸವಗಳಿಗೆ ಅವಕಾಶ ನೀಡೋ ಅನಿವಾರ್ಯತೆ ಪಾಲಿಕೆಯದ್ದಾಗಿದೆ. ಟಿಪ್ಪು ಜಯಂತಿಗಾಗಿ ಎಐಎಂಐಎಂ ಹಾಗೂ ಸಮತಾ ಸೈನಿಕ ದಳಗಳು ಹುಬ್ಬಳ್ಳಿ ಮಾಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿವೆ.


Hindu Organization seeks permission to Ganesha idol induction in Hubballi idgah maidana
ಈದ್ಗಾ ಮೈದಾನ


ಎಐಎಂಐಎಂ ವರ್ಸಸ್ ಶ್ರೀರಾಮಸೇನೆ


ಟಿಪ್ಪು ಸುಲ್ತಾನ 272 ನೇ ಜಯಂತಿಗೆ ಅವಕಾಶಕ್ಕೆ ಮನವಿ ಸಲ್ಲಿಸಲಾಗಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿರೋ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದ್ದು ಇಷ್ಟೆಲ್ಲಾ ಬೆಳವಣಿಗೆಗೆ ಕಾರಣವಾಗಿದೆ.


ಗಣೇಶೋತ್ಸವದಂತೆ ಟಿಪ್ಪು ಜಯಂತಿಗೂ ಅವಕಾಶ ನೀಡುವಂತೆ ಮನವಿ ಮಾಡಿದ್ದು, ಇದಕ್ಕೆ ಪ್ರಮೋದ್ ಮುತಾಲಿಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮತಾಂಧ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡದಿರುವಂತೆ ಮುತಾಲಿಕ್ ಆಗ್ರಹಿಸಿದ್ದಾರೆ.


ಮುತಾಲಿಕ್ ಗಡಿಪಾರಿಗೆ ಆಗ್ರಹ


ಮುತಾಲಿಕ್ ಹೇಳಿಕೆಗೆ ಎಂಐಎಂ ಮುಖಂಡರು ಕಿಡಿಕಾರಿದ್ದಾರೆ. ಪ್ರಮೋದ್ ಮುತಾಲಿಕ್ ಕೋಮು ದ್ವೇಷ ಹಬ್ಬುವ ಕೆಲಸ ಮಾಡ್ತಿದಾರೆ. ಕೂಡಲೇ ಮುತಾಲಿಕ್ ಅವರನ್ನು ಬಂಧಿಸಬೇಕು. ಧಾರವಾಡ ಜಿಲ್ಲಾ ಗಡಿಪಾರು ಮಾಡುವಂತೆ ಎಐಎಂಐಎಂ ಮುಖಂಡ ವಿಜಯ್ ಗುಂಟ್ರಾಳ ಆಗ್ರಹಿಸಿದ್ದಾರೆ.


ಟಿಪ್ಪು ಜಯಂತಿಗೆ ಎರಡು ದಿನಗಳಲ್ಲಿ ಅನುಮತಿ ನೀಡಬೇಕು. ಇಲ್ಲದಿದ್ದಲ್ಲಿ ನವೆಂಬರ್ 10 ರಂದು ಈದ್ಗಾದಲ್ಲಿ ಆಚರಿಸಿಯೇ ತೀರುತ್ತೇವೆ ಎಂದು ಎಐಎಂಐಎಂ ಪಟ್ಟು ಹಿಡಿದಿದೆ.


Chamarajpete Idgah Maidan Controversy Hearing in High Court tomorrow
ಈದ್ಗಾ ಮೈದಾನ


ಶ್ರೀರಾಮಸೇನೆಯಿಂದ ಪ್ರತಿದಾಳ


ಇದಕ್ಕೆ ಶ್ರೀರಾಮಸೇನೆ ಸಂಘಟನೆ ಪ್ರತಿದಾಳ ಹಾಕಿದೆ. ಕನಕದಾಸ ಜಯಂತಿ ಆಚರಣೆಗೆ ಅನುಮತಿ ನೀಡುವಂತೆ ಪಾಲಿಕೆಗೆ ಮನವಿ ಮಾಡಿದೆ. ಪಾಲಿಕೆ ಎದುರು ಪ್ರತಿಭಟನೆ ಮಾಡಿರೋ ಶ್ರೀರಾಮಸೇನೆ, ಕನಕ ಜಯಂತಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದೆ.


ಇದನ್ನೂ ಓದಿ:  ಗಾಂಧೀಜಿಯೇ ಎಲ್ಲ ಹೇಳಿದ್ದಾರೆ; ಬಿಜೆಪಿಯಿಂದ ಸುಮ್ಮನೆ ವಿವಾದ: ಟಿಪ್ಪು ಸುಲ್ತಾನ್ ವಂಶಸ್ಥರ ಬೇಸರ


ಇದರಿಂದಾಗಿ ಜೇನು ಗೂಡಿಗೆ ಕೈಹಾಕಿದ ಸ್ಥಿತಿಯಲ್ಲಿ ಪಾಲಿಕೆ ಇದೆ. ಗಣೇಶೋತ್ಸವಕ್ಕೆ ಅವಕಾಶ ನೀಡಿರೋದ್ರಿಂದ ಇವುಗಳಿಗೂ ಅವಕಾಶ ನೀಡಬೇಕಾದ ಅನಿವಾರ್ಯತೆಯಲ್ಲಿದೆ.


ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ


ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಈ ಕುರಿತು ಪಾಲಿಕೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಇದರ ಬಗ್ಗೆ ನಾನೇನು ಹೆಚ್ಚು ಹೇಳಲ್ಲ ಅಂತ ಜಾರಿಕೊಂಡಿದ್ದಾರೆ.


ಇದನ್ನೂ ಓದಿ:  Satish Jarkiholi: ನನ್ನ ಭಾಷಣ ಇನ್ನೂ 10 ಸಲ ನೋಡಿ, ತಪ್ಪಿದ್ರೆ ಚರ್ಚೆ ಮುಂದುವರಿಸಿ; ಜಾರಕಿಹೊಳಿ ಸ್ಪಷ್ಟನೆ


ಒಟ್ಟಾರೆ ಎಲ್ಲವೂ ಪಾಲಿಕೆ ಆಯುಕ್ತರ ನಿರ್ಧಾರದ ಮೇಲೆ ಅವಲಂಬಿತಗೊಂಡಿದ್ದು ಆಯುಕ್ತರು ಮಾತ್ರ ಮೌನ ಮುರಿಯುತ್ತಿಲ್ಲ.

Published by:Mahmadrafik K
First published: