ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಿಸಿ ಆದರೆ, ವಿಪಕ್ಷ ನಾಯಕನ ಬದಲಾವಣೆ ಬೇಡ; ಮಿಸ್ತ್ರಿ ಎದುರು ರಾಜ್ಯ ಕೈ ನಾಯಕರ ಪ್ರಸ್ತಾವನೆ

ಸದ್ಯ ರಾಜ್ಯ ಕಾಂಗ್ರೆಸ್​​ ನಾಯಕರ ಅಭಿಪ್ರಾಯ ಪಡೆದಿರುವ ಮಧುಸೂಧನ್​​​ ಮಿಸ್ತ್ರಿ, ಹೈಕಮಾಂಡ್​ ಮುಂದೆ ಇಡಲಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಧುಸೂದನ್ ಮಿಸ್ತ್ರಿ

ಮಧುಸೂದನ್ ಮಿಸ್ತ್ರಿ

  • Share this:
ಬೆಂಗಳೂರು(ಡಿ.19): ಉಪಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ಹಾಗೂ ಶಾಸಕಾಂಗ ಪಕ್ಷ ನಾಯಕ ಸ್ಥಾನಕ್ಕೆ ಮತ್ತು ದಿನೇಶ್ ಗುಂಡೂರಾವ್​​ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ಇಂದು ಬೆಂಗಳೂರಿನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್​ ಮಿಸ್ತ್ರಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ರಾಜೀನಾಮೆ ವಾಪಸ್​ ಪಡೆಯುವಂತೆ ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ಮಿಸ್ತ್ರಿ ಅವರ ಮನವಿಯನ್ನು ನಿರಾಕರಿಸಿದ್ದರು.

ಬಳಿಕ ಮಧುಸೂದನ್​ ಮಿಸ್ತ್ರಿ ಈ ಕುರಿತು ರಾಜ್ಯ ಕಾಂಗ್ರೆಸ್​​ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದರು. 55 ಕೈ ನಾಯಕರು ತಮ್ಮ ಅಭಿಪ್ರಾಯವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಂದೆ ಮಂಡಿಸಿದ್ದರು. "ಪ್ರತಿಪಕ್ಷ ನಾಯಕರ ಬದಲಾವಣೆ ಬೇಡ. ಸಿದ್ದರಾಮಯ್ಯ ಬಿಟ್ಟರೆ ಆ ಸ್ಥಾನವನ್ನು ತುಂಬಬಲ್ಲ ಸಮರ್ಥ ನಾಯಕ ಬೇರೆ ಯಾರೂ ಇಲ್ಲ. ಬೇಕಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿ," ಎಂದು ಹೇಳಿದರು.

ಇನ್ನು, ಕೆ ಹೆಚ್ ಮುನಿಯಪ್ಪ, ಡಿಕೆ ಶಿವಕುಮಾರ್, ಜಿ ಪರಮೇಶ್ವರ್ ಹಾಗೂ ಬಿ ಕೆ ಹರಿಪ್ರಸಾದ್, ಹೆಚ್ ಕೆ ಪಾಟೀಲ ಸೇರಿ ಕೆಲವರು ಮಾತ್ರ ಎರಡು ಹುದ್ದೆಗಳಿಗೆ ಹೊಸಬರನ್ನು ನೇಮಿಸಿ ಎಂದು ಹೇಳಿದರು.

ಯಾರನ್ನು ಮೆಚ್ಚಿಸಲು ಅಮಾಯಕರ ಮೇಲೆ ಗೋಲಿಬಾರ್ ನಡೆಸಿ, ಬಲಿ ತೆಗೆದುಕೊಂಡಿರಿ? ರಾಜ್ಯ ಸರ್ಕಾರಕ್ಕೆ ಎಚ್​ಡಿಕೆ ಪ್ರಶ್ನೆ

"ಇಬ್ಬರೂ ರಾಜೀನಾಮೆ ನೀಡಿದ್ದಾಗಿದೆ. ಮತ್ತೆ ಅವರನ್ನೇ ಕೂರಿಸಿದರೆ ರಾಜ್ಯದಲ್ಲಿ ಮತ್ಯಾರು ಸಮರ್ಥ ನಾಯಕರಿಲ್ಲವೇ ಎನ್ನುವ  ಸಂದೇಶ ರವಾನೆಯಾಗುತ್ತದೆ.  ಆದ್ದರಿಂದ ಸಿದ್ದರಾಮಯ್ಯ ಹಾಗೂ ದಿನೇಶ್​​ ಗುಂಡೂರಾವ್ ರಾಜೀನಾಮೆ ಅಂಗೀಕರಿಸಿ," ಎನ್ನುವ ಅಭಿಪ್ರಾಯ ಮಂಡಿಸಿದ್ದಾರೆ.

ಉಳಿದಂತೆ ಬಹುತೇಕ ನಾಯಕರು ಸಿದ್ದರಾಮಯ್ಯ ಪ್ರತಿಪಕ್ಷ ನಾಯಕನ ಹುದ್ದೆಯಲ್ಲಿ  ಮುಂದುವರೆಯಲಿ ಅಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್​​​ ಗುಂಡೂರಾವ್ ಬದಲಿಗೆ ಡಿಕೆಶಿ, ಈಶ್ವರ್​​​ ಖಂಡ್ರೆ, ಕೆ ಹೆಚ್ ಮುನಿಯಪ್ಪ ಹಾಗೂ ಎಂ ಬಿ ಪಾಟೀಲ್​​ ಅವರ ಹೆಸರನ್ನು ಕೈ ನಾಯಕರು ಪ್ರಸ್ತಾಪಿಸಿದ್ದಾರೆ. ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಹೆಚ್ ಕೆ ಪಾಟೀಲ ಹೆಸರು, ಸಿಎಲ್​​ಪಿ ಸ್ಥಾನಕ್ಕೆ ಜಿ. ಪರಮೇಶ್ವರ್ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಬಹುಮತ ಇದೆ ಎಂದು ಮನಬಂದಂತೆ ವರ್ತಿಸಬೇಡಿ: ಕೇಂದ್ರ ಸರ್ಕಾರಕ್ಕೆ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ

ಸದ್ಯ ರಾಜ್ಯ ಕಾಂಗ್ರೆಸ್​​ ನಾಯಕರ ಅಭಿಪ್ರಾಯ ಪಡೆದಿರುವ ಮಧುಸೂಧನ್​​​ ಮಿಸ್ತ್ರಿ, ಹೈಕಮಾಂಡ್​ ಮುಂದೆ ಇಡಲಿದ್ದಾರೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

 

 
Published by:Latha CG
First published: