ಡಿಎಂಕೆ ಕನಸು ನನಸಾಗಲ್ಲ, ಎಐಎಡಿಎಂ ನೇತೃತ್ವದ ಎನ್​ಡಿಎ ಮೈತ್ರಿ ಅಧಿಕಾರಕ್ಕೆ ಬರಲಿದೆ; ಸಿ.ಟಿ. ರವಿ

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷ  ಮೈತ್ರಿ ಮಾಡಿಕೊಂಡಿವೆ. ನಾಲ್ಕು ಸುತ್ತುಗಳ ಮಾತುಕತೆ ಬಳಿಕ ಎಐಎಡಿಎಂಕೆ ಪಕ್ಷ ಬಿಜೆಪಿಗೆ 20 ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ. ಇದರ ಜೊತೆಗೆ ಉಪಚುನಾವಣೆ ಎದುರಿಸುತ್ತಿರುವ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರವನ್ನೂ ಬಿಜೆಪಿಗೆ ಕೊಡಲು ಎಐಎಡಿಎಂಕೆ ಒಪ್ಪಿಕೊಂಡಿದೆ.

ಸಿ ಟಿ ರವಿ

ಸಿ ಟಿ ರವಿ

  • Share this:
ಬೆಂಗಳೂರು: ತಮಿಳುನಾಡಿನಲ್ಲಿ ಬಿಜೆಪಿ‌ ಎರಡಂಕಿ ಮುಟ್ಟುವಲ್ಲಿ ಸಫಲವಾಗಲಿದ್ದು, ಮತ್ತೊಮ್ಮೆ ಡಿಎಂಕೆ ಅಧಿಕಾರಕ್ಕೆ ಬರುವ ಕನಸು ಹುಸಿಯಾಗಲಿದೆ, ಎಐಎಡಿಎಂಕೆ ನೇತೃತ್ವದಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅಣ್ಣಾಮಲೈ,‌ ಖುಷ್ಬು ಸ್ಪರ್ಧೆ ಮಾಡಿದ್ದಾರೆ. ಬಿಜೆಪಿ ಭವಿಷ್ಯದ ಬೆಳವಣಿಗೆಗೆ ಬೇಕಾದ ಫಲಿತಾಂಶ ಲಭ್ಯವಾಗಲಿದೆ. ಡಿಎಂಕೆ ಮೈತ್ರಿಗಿಂತ ನಮ್ಮ ಮೈತ್ರಿ ಉತ್ತಮವಾಗಿದೆ. ಜನರಿಗೆ  10 ವರ್ಷದ ಹಿಂದಿನ‌ ಡಿಎಂಕೆ‌ ಗುಂಡಾ ರಾಜ್ಯದ ನೆನಪು ಸಾಕಾಗಿದೆ ಅವರಿಗೆ ಯಾರು ಮತ ಹಾಕುವುದಿಲ್ಲ ಎಂದಿದ್ದಾರೆ.

ಪ್ರಜಾಪ್ರಭುತ್ವ ಮೌಲ್ಯ ಇಟ್ಟುಕೊಂಡಿರುವ ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೈತ್ರಿ ಕೂಟ ಬೇಕಾ? ಅಥವಾ ಭ್ರಷ್ಟಾಚಾರ, ಭೂ ಕಬಳಿಕೆ, ಗೂಂಡಾ ಚಟುವಟಿಕೆ, ಮಾಫಿಯಾಗಳು ಬೇಕಾ ಎನ್ನುವ ಪ್ರಶ್ನೆ ಮುಂದಿಡುತ್ತಿದ್ದೇವೆ, ಅಲ್ಲಿನ ಜನರು ಮಾಫಿಯಾ ರಾಜ್ಯ ಬೇಡ ಎನ್ನುತ್ತಿದ್ದಾರೆ. ಹಾಗಾಗಿ ಮತ್ತೊಮ್ಮೆ ಎಐಎಡಿಎಂಕೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಗಣನೀಯ ಸಾಧನೆ ಮಾಡಲಿದೆ. ನಾವು ಎರಡಂಕಿ ಮುಟ್ಟುತ್ತೇವೆ. 234 ಕ್ಷೇತ್ರಗಳೂ ನಮ್ಮ ಕ್ಷೇತ್ರಗಳೇ ಆಗಿವೆ. ಬಿಜೆಪಿ ನೇರವಾಗಿ ಸ್ಪರ್ಧೆ ಮಾಡಿರಲಿ ಅಥವಾ ಎಐಎಡಿಎಂಕೆ ಸೇರಿ ಮಿತ್ರ ಪಕ್ಷಗಳು ಸ್ಪರ್ಧೆ ಮಾಡಿರಲಿ. ಅವರೆಲ್ಲ ನಮ್ಮ ಅಭ್ಯರ್ಥಿಗಳೇ. ಅವರನ್ನು ಗೆಲ್ಲಿಸಲು ಬಿಜೆಪಿ ಶ್ರಮಿಸಲಿದೆ. ನಮ್ಮ ಚಿನ್ಹೆಯಡಿ 20 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅವರ ಗೆಲುವಿಗೆ ವಿಶೇಷ ಪ್ರಯತ್ನ ಮಾಡುತ್ತಿದ್ದೇವೆ. ಒಳ್ಳೆಯ ಅಭ್ಯರ್ಥಿ ನಿಲ್ಲಿಸಿದ್ದೇವೆ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದು ಇದರ ಲಾಭ ಪಕ್ಷಕ್ಕೆ ಆಗಲಿದೆ ಎಂದರು.

ಇದನ್ನು ಓದಿ: ಸಿಡಿ ಪ್ರಕರಣ ಬಯಲಾದ 24 ಗಂಟೆಯೊಳಗೆ ನೈತಿಕವಾಗಿ ರಾಜೀನಾಮೆ ಪಡೆಯುವುದು ಬಿಜೆಪಿ ಮಾತ್ರ; ಅರುಣ್ ಸಿಂಗ್

2016 ರಲ್ಲಿ ನಾವು ಅಧಿಕಾರಕ್ಕೆ ಬಂದೇ ಬಿಟ್ಟೆವು ಎಂದು ಡಿಎಂಕೆ ನಾಯಕರು ಶ್ಯಾಡೋ ಕ್ಯಾಬಿನೆಟ್ ಮಾಡಿಕೊಂಡಿದ್ದರು. ಪ್ರಮಾಣ ವಚನ ಸ್ವೀಕಾರಕ್ಕೆ ತಯಾರಾಗಿದ್ದರು. ಈಗಲೂ ಕೂಡ ಅಧಿಕಾರಕ್ಕೆ ಬರುತ್ತೇವೆ. ಎಂದು ಖಾತೆಗಳ ಹಂಚಿಕೆ ನಡೆಯುತ್ತಿದೆ. ಆದರೆ ಮತದಾರ ಸೂಕ್ಷ್ಮನಿದ್ದಾನೆ, ಅವರ ನಿಲುವೇ ಬೇರೆಯಾಗಲಿದೆ. ಡಿಎಂಕೆ ಈ ಬಾರಿಯೂ ಅಧಿಕಾರಕ್ಕೆ ಬರಲ್ಲ ಎಂದರು. ಇನ್ನೂ ಕೋರ್ ಕಮಿಟಿ ಸಭೆ ಮುಗಿಸಿ ಅವರು, ಇಂದೇ ತಮಿಳುನಾಡಿಗೆ ಪ್ರಯಾಣ ಬೆಳೆಸಿದರು.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷ  ಮೈತ್ರಿ ಮಾಡಿಕೊಂಡಿವೆ. ನಾಲ್ಕು ಸುತ್ತುಗಳ ಮಾತುಕತೆ ಬಳಿಕ ಎಐಎಡಿಎಂಕೆ ಪಕ್ಷ ಬಿಜೆಪಿಗೆ 20 ಕ್ಷೇತ್ರಗಳನ್ನ ಬಿಟ್ಟುಕೊಡಲು ನಿರ್ಧರಿಸಿದೆ. ಇದರ ಜೊತೆಗೆ ಉಪಚುನಾವಣೆ ಎದುರಿಸುತ್ತಿರುವ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರವನ್ನೂ ಬಿಜೆಪಿಗೆ ಕೊಡಲು ಎಐಎಡಿಎಂಕೆ ಒಪ್ಪಿಕೊಂಡಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಎಲ್ಲಾ 234 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತಾದರೂ ಒಂದೂ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ದ್ರಾವಿಡ ನೆಲದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮುಂದಾಗಿದೆ. ಅಷ್ಟೇ ಅಲ್ಲದೇ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹಾಗೂ ಕಾಂಗ್ರೆಸ್ ಮಾಜಿ ನಾಯಕಿ ಖುಷ್ಬೂ ಅವರು ಬಿಜೆಪಿ ಸೇರಿರುವುದು ಪಕ್ಷಕ್ಕೆ ಬಲ ಸಿಕ್ಕಂತಾಗಿದೆ.
Published by:HR Ramesh
First published: