ಹಣಕ್ಕಾಗಿ ಗ್ರಾಹಕರ ಪರದಾಟ, ಅಹಿಂದ ವೇದಿಕೆಯಿಂದ ಎಟಿಎಂ ತಿಥಿಯೂಟ

news18
Updated:April 19, 2018, 4:40 PM IST
ಹಣಕ್ಕಾಗಿ ಗ್ರಾಹಕರ ಪರದಾಟ, ಅಹಿಂದ ವೇದಿಕೆಯಿಂದ ಎಟಿಎಂ ತಿಥಿಯೂಟ
news18
Updated: April 19, 2018, 4:40 PM IST
ಶಿವರಾಮ ಅಸುಂಡಿ, ನ್ಯೂಸ್ 18 ಕನ್ನಡ

ಕಲಬುರ್ಗಿ( ಏ.19) :  ಎಟಿಎಂ ಗಳಲ್ಲಿ ಹಣ ಸಿಗದೇ ಇರುವುದನ್ನು ಖಂಡಿಸಿ, ಬ್ಯಾಂಕ್ ವ್ಯವಸ್ಥೆ ಹದಗೆಡ್ಡಿರುವುದನ್ನು ವಿರೋಧಿಸಿ ಕಲಬುರಗಿಯಲ್ಲಿ ವಿನೂತನವಾಗಿ ಪ್ರತಿಭಟಿಸಲಾಯಿತು. ಅಹಿಂದ ಚಿಂತಕರ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರಿಗೆ ತಿಥಿ ಊಟ ಹಾಕುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು

ಕಳೆ ಒಂದೂವರೆ ತಿಂಗಳಿನಿಂದ ಕಲಬುರ್ಗಿಯಲ್ಲಿ ಶೇ.90 ರಷ್ಟು ಎಟಿಎಂಗಳು ಹಣವಿಲ್ಲದೆ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಎಲ್ಲಿ ನೋಡಿದರೂ ನೋ ಕ್ಯಾಷ್ ಎಂಬ ಫಲಕಗಳು ರಾರಾಜಿಸುತ್ತಿವೆ.

ಮತ್ತೊಂದೆಡೆ ಬ್ಯಾಂಕ್ ಗಳಿಗೆ ತೆರಳಿದರೂ ಮೂರು ಸಾವಿರ, ಐದು ಸಾವಿರ ರೂಪಾಯಿಗಿಂತ ಹೆಚ್ಚು ಹಣ ಕೊಡುತ್ತಿಲ್ಲ. ಇದರಿಂದಾಗಿ ಖಾತೆಯಲ್ಲಿ ಹಣವಿದ್ದರೂ ಅದನ್ನು ಮರಳಿ ಪಡೆಯಲಾರದ ಸ್ಥಿತಿ ಗ್ರಾಹಕರದ್ದಾಗಿದೆ. ಜಿಲ್ಲೆಯಾದ್ಯಂತ ಇದೇ ಪರಿಸ್ಥಿತಿ ಮುಂದುವರೆದಿದೆ.

ಹಣಕಾಸು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ, ಬ್ಯಾಂಕಿಂಗ್ ವ್ಯವಸ್ಥೆ ಸತ್ತು ಹೋಗಿದೆ ಎಂದು ಆರೋಪಿಸಿ ಅಹಿಂದ ಚಿಂತಕರ ವೇದಿಕೆ ತಿಥಿ ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿತು. ಸರ್ದಾರ್ ಪಟೇಲ್ ವೃತ್ತದಲ್ಲಿ ಎಟಿಎಂಗಳ ಅಣಕು ಶವ ಸಿದ್ಧಪಡಿಸಿ, ಅದಕ್ಕೆ ಹೂವಿನ ಹಾಕ ಹಾಕಿ, ರಸ್ತೆಯ ಮೇಲೆ ಇಟ್ಟು ಅಂತ್ಯಕ್ರಿಯೆ ಮಾಡಲಾಯಿತು.

ನಂತರ ಬ್ಯಾಂಕ್, ಎಂಟಿಎಂ ಮತ್ತು ಆರ್.ಬಿ.ಐ ಗ್ರಾಹಕರ ಪಾಲಿಕೆ ಸತ್ತಿವೆ ಎಂದು ಕಣ್ಣೀರು ಹಾಕಿ, ಸಾರ್ವಜನಕರಿಗೆ ತಿಥಿ ಊಟ ಹಾಕಿಸಲಾಯಿತು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲಾಯಿತು. ಕೂಡಲೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಲಾಯಿತು.
First published:April 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...