KN Rajanna ಪರ ನಿಂತ ಅಹಿಂದ ಸಂಘಟನೆ; ರಾಜಣ್ಣ ವಿಚಾರಕ್ಕೆ ಧಕ್ಕೆ ಬಂದ್ರೆ ಸುಮ್ಮನೆ ಇರಲ್ಲ

ಚುನಾವಣೆ ಗಮನದಲ್ಲಿಟ್ಟುಕೊಂಡು ಗದಪ್ರಹಾರ ಮಾಡುವುದು ತಪ್ಪು. ಇದು ನಿಲ್ಲಿಸಬೇಕು. ರಾಜಣ್ಣ ತೇಜೋವದೆ ಮಾಡೋದನ್ನ ಅಹಿಂದ ಸಂಘಟನೆ ಖಂಡಿಸುತ್ತದೆ ಎಂದು ಮಾಜಿ ಶಾಸಕರ ಅಂಜಿನಪ್ಪ ಬ್ಯಾಟ್ ಬೀಸಿದರು.

ಕೆ ಎನ್ ರಾಜಣ್ಣ ಮತ್ತು ಹೆಚ್ ಡಿ ದೇವೇಗೌಡ

ಕೆ ಎನ್ ರಾಜಣ್ಣ ಮತ್ತು ಹೆಚ್ ಡಿ ದೇವೇಗೌಡ

  • Share this:
ತುಮಕೂರು ಜಿಲ್ಲೆಯ ಮಧುಗಿರಿ (Madhugiri, Tumakuru) ತಾಲೂಕಿನ ಗ್ರಾಮವೊಂದರಲ್ಲಿ ಮಾಜಿ ಶಾಸಕ ಕೆ ಎನ್ ರಾಜಣ್ಣ (Former MLA KN Rajanna) ನೀಡಿದ ಹೇಳಿಕೆ ಕರ್ನಾಟಕ ರಾಜಕಾರಣದಲ್ಲಿ (Karnataka Politics) ಸಂಚನ ಸೃಷ್ಟಿದೆ. ರಾಜಣ್ಣ ಅವರ ಹೇಳಿಕೆ ಕಾಂಗ್ರೆಸ್ ನಾಯಕರು (Congress Leaders) ಸಹ ವಿರೋಧಿಸಿದ್ರೆ, ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ ನಡೆಸಿದರು. ತಮ್ಮ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಲೇ ಕೆಎನ್ ರಾಜಣ್ಣ ವಿಷಾಧ ವ್ಯಕ್ತಪಡಿಸಿದ್ದರು. ಇನ್ನು ದೇವೇಗೌಡರ ಕುಟುಂಬ (Devegowda's Famiy) ಕಟು ಪದಗಳಲ್ಲಿ ಕೆಎನ್ ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿತ್ತು. ಇದೀಗ ಕೆಎನ್ ರಾಜಣ್ಣ ಹೇಳಿಕೆ ಬೆಂಬಲಿಸಿ ಅಹಿಂದ ಸಂಘಟನೆ (Ahinda Organization) ಸುದ್ದಿಗೋಷ್ಠಿ ನಡೆಸಿದೆ.

ಕೆಎನ್ ರಾಜಣ್ಣ ಪರವಾಗಿ ತುಮಕೂರಿನಲ್ಲಿ ಅಹಿಂದ ಸಂಘಟನೆ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಮಾತನಾಡಿದ ಜಿಲ್ಲಾ ಅಹಿಂದ ಮುಖಂಡ ಧನ್ಯಕುಮಾರ್, ರಾಜಣ್ಣ ಈಗಾಗಲೇ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಹೋರಾಟ ಮಾಡೊದು, ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಮಾಡಿದ್ದಾರೆ. ದೇವೇಗೌಡರ ಬಗ್ಗೆ ಅಪಾರ ಗೌರವವಿದೆ. ತಳಮಟ್ಟದಲ್ಲಿ ನೂರಾರು ಸಮಾಜಗಳಿವೆ. ತಳಮಟ್ಟದ ಸಮಾಜವನ್ನ ಕಾಪಾಡುತ್ತಿರುವ ರಾಜಣ್ಣಅವರು ಎಂದು ಹೇಳಿದರು.

ರಾಜಣ್ಣರನ್ನ ನಿಂದಿಸಿದ್ರೆ ಸುಮ್ನೆ ಇರಲ್ಲ

40 ವರ್ಷದಿಂದ ರಾಜಣ್ಣ ನಮ್ಮ ಕೈ ಹಿಡಿದಿದ್ದಾರೆ. ಅವರ ವಿಚಾರಕ್ಕೆ ಧಕ್ಕೆ ಬಂದರೆ ಹೋರಾಟ ಮಾಡಲಾಗುತ್ತದೆ. ಯಾವುದೇ ವ್ಯಕ್ತಿ ಸಮಾಜ ವಿರುದ್ಧ ನಾವು ಹೋಗಲ್ಲ. ರಾಜಣ್ಣ ಅವರನ್ನ ನಿಂದಿಸಿದರೇ ನಾವು ಸುಮ್ಮನೇ ಇರಲ್ಲ ಎಂದು ಹೇಳಿದರು.

ಇದನ್ನೂ ಓದಿ:  KN Rajanna: ಅವನು ಇನ್ನೆಷ್ಟು ದಿನ ಬದುಕಿರ್ತಾನೆ, ನಾವು ನೋಡ್ತೀವಿ: ಅನಿತಾ ಕುಮಾರಸ್ವಾಮಿ ಆಕ್ರೋಶ

ತಳಮಟ್ಟದವರು ರಾಜಕೀಯದಲ್ಲಿ ಇರಬಾರದು. ರಾಜಣ್ಣರ ಮೈ ಮೇಲೆ ಬೀಳ್ತಿವಿ ಎನ್ನೋದು ಸೋಲಿಸ್ತಿವಿ ಅನ್ನೋದು ತಪ್ಪು. ರಾಜಣ್ಣ ಎಲ್ಲಾ ಸಮಾಜದ ಪರವಾಗಿದ್ದಾರೆ ಎಂದು ಜಿಲ್ಲಾ ಅಹಿಂದ ಮುಖಂಡ ಧನ್ಯಕುಮಾರ್ ಹೇಳಿಕೆ ನೀಡಿದ್ದಾರೆ.

ಅಹಿಂದ ಸಮಾಜ ಸುಮ್ಮನೇ ಇರಲ್ಲ

ರಾಜಣ್ಣ ಮೊನ್ನೆ ಕಾರ್ಯಕ್ರಮವೊಂದರಲ್ಲಿ ಕೊನೆ ಚುನಾವಣೆ ಅಂತಾ ಹೇಳಿದ್ದಾರೆ. ಕಾರ್ಯಕರ್ತವೊಬ್ಬ ದೇವೇಗೌಡರ ಬಗ್ಗೆ ಹೇಳಿರುವುದು ಸತ್ಯ. ಅದನ್ನೇ ರಾಜಣ್ಣ ಮಾತನಾಡಿದ್ದಾರೆ. ಈಗಾಗಲೇ ರಾಜಣ್ಣ ವಿಷಾದ ವ್ಯಕ್ತಪಡಿಸಿದರೂ ಆದರೂ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಮುಂದುವರಿದರೇ ಅಹಿಂದ ಸಮಾಜ ಸುಮ್ಮನೇ ಇರಲ್ಲ ಎಂದು ಅಂಜಿನಪ್ಪ ಎಚ್ಚರಿಕೆ ನೀಡಿದರು.

ರಾಜಣ್ಣ ಜಿಲ್ಲೆಯ ಅಹಿಂದ ನಾಯಕರು

ರಾಜಣ್ಣ ಜಿಲ್ಲೆಯಲ್ಲಿ ಅಹಿಂದಕ್ಕೆ ನಾಯಕರು. ದೇವೇಗೌಡರ ಬಗ್ಗೆ ರಾಜಣ್ಣ ಅವರಿಗೆ ಅಪಾರ ಗೌರವವಿದೆ. ಚುನಾವಣೆ ಗಮನದಲ್ಲಿಟ್ಟುಕೊಂಡು ಗದಪ್ರಹಾರ ಮಾಡುವುದು ತಪ್ಪು. ಇದು ನಿಲ್ಲಿಸಬೇಕು. ರಾಜಣ್ಣ ತೇಜೋವದೆ ಮಾಡೋದನ್ನ ಅಹಿಂದ ಸಂಘಟನೆ ಖಂಡಿಸುತ್ತದೆ ಎಂದು ಮಾಜಿ ಶಾಸಕರ ಅಂಜಿನಪ್ಪ ಬ್ಯಾಟ್ ಬೀಸಿದರು.

ರಾಜಣ್ಣ ಬೆಂಬಲಿಸಿ ಸುದ್ದಿಗೋಷ್ಠಿ

ಜೆಡಿಎಸ್ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆ ರಾಜಣ್ಣ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಲಾಗಿತ್ತು. ಇದೀಗ ಕೆ.ಎನ್.ರಾಜಣ್ಣರನ್ನು ಬೆಂಬಲಿಸಿ ನಿರಂತರ ಸುದ್ದಿಗೋಷ್ಠಿ ಮಾಡಲಾಗುತ್ತಿದೆ. ಅಹಿಂದ ಮುಖಂಡರ ಬಳಿಕ ಈಗ ಒಕ್ಕಲಿಗ ಮುಖಂಡರ ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಹಿರೇಹಳ್ಳಿ ದೇವರಾಜು, ವಿಎಸ್ ಎಸ್ ಎನ್ ಅಧ್ಯಕ್ಷ ಮೂರ್ತಿ, ಬಂದ್ರೆನಹಳ್ಳಿ ನಾಗೇಶ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಿತು.

ಇದನ್ನೂ ಓದಿ:  Karnataka Politics: ರಾಜಣ್ಣನಿಗೆ ದೇವೇಗೌಡರ ಚಾಲೆಂಜ್; ಕೈ ನಾಯಕನ ವಿರುದ್ಧ ಗೌಡ್ರ ಮಕ್ಕಳು, ಮೊಮ್ಮಕ್ಕಳು ಫುಲ್ ಗರಂ

ಕ್ಷಮೆ ಕೇಳಲು ಸೂಚಿಸುವೆ

ದೇವೇಗೌಡರು ಪ್ರಧಾನಿಯಾಗಲು ಹಿಂದೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡಿತ್ತು. ನಾವು ದೇವೇಗೌಡರನ್ನು ಬಹಳ ಗೌರವಯುತವಾಗಿ ಕಾಣುತ್ತಿದ್ದೇವೆ. ಅಂತಹ ಹಿರಿಯ ನಾಯಕರ ಆರೋಗ್ಯದ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಕೂಡಲೇ ರಾಜಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೋರುವಂತೆ ಸೂಚನೆ ನೀಡುತ್ತೇನೆ. ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಪೂಜ್ಯ ಸಮಾನರಾದ ದೇವೇಗೌಡರಿಗೆ ಉತ್ತಮ ಆರೋಗ್ಯ ಮತ್ತು ಇನ್ನಷ್ಟು ಸೇವೆ ಮಾಡುವ ಅವಕಾಶವನ್ನು ದೇವರು ಕರುಣಿಸಲಿ ಎಂದು ನಾವು ಪ್ರಾರ್ಥನೆ ಮಾಡುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
Published by:Mahmadrafik K
First published: