ಸಚಿವ ಸ್ಥಾನಕ್ಕಾಗಿ ಬ್ಲಾಕ್​ಮೇಲ್ ತಂತ್ರಕ್ಕೆ ಮುಂದಾದರಾ ಹೆಚ್​. ವಿಶ್ವನಾಥ್​?; ಪುಸ್ತಕ ಬರೆಯುವ ನೆಪದಲ್ಲಿ ಮಂತ್ರಿಗಿರಿ ಲಾಬಿ?

ಬಿಜೆಪಿ ಆಪರೇಷನ್ ಕಮಲದ ಸಹಾಯದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಹಿನ್ನೆಲೆಯನ್ನು ವಸ್ತುವನ್ನಾಗಿಸಿ, ಆಪರೇಷನ್ ಕಮಲ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಪುಸ್ತಕ ಬರೆಯುವುದಾಗಿ ಹೆಚ್​. ವಿಶ್ವನಾಥ್​ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವುದು ಇದೀಗ ಬಿಜೆಪಿ ಪಾಳಯದಲ್ಲಿ ತಳಮಳಕ್ಕೆ ಕಾರಣವಾಗಿದೆ.

ಹೆಚ್.ವಿಶ್ವನಾಥ್​

ಹೆಚ್.ವಿಶ್ವನಾಥ್​

  • Share this:
ಬೆಂಗಳೂರು (ಜನವರಿ 29); ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಗಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಏರಲು ಹೆಚ್. ವಿಶ್ವನಾಥ್ ಪ್ರಮುಖ ಕಾರಣ. ಆದರೆ, ಉಪ ಚುನಾವಣೆಯಲ್ಲಿ ಸೋಲನುಭವಿಸಿರುವ ಹಿನ್ನೆಲೆ ಅವರಿಗೆ ಸಚಿವ ಸ್ಥಾನ ನೀಡುವ ಯಾವುದೇ ಸಾಧ್ಯತೆ ಇಲ್ಲ ಎಂದು ಬಿಜೆಪಿ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ಸಚಿವ ಸ್ಥಾನ ಪಡೆಯಲೇಬೇಕು ಎಂದು ನಿರ್ಧರಿಸಿರುವ ಹೆಚ್. ವಿಶ್ವನಾಥ್ ಇದೀಗ ಪುಸ್ತಕದ ಹೆಸರಿನಲ್ಲಿ ಬ್ಲಾಕ್​ಮೇಲ್ ತಂತ್ರಕ್ಕೆ ಮುಂದಾಗಿದ್ದಾರಾ? ಎಂಬ ಅನುಮಾನಕ್ಕೆ ಕಾರಣವಾಗಿದೆ ಅವರ ಪ್ರಸ್ತುತ ನಡೆ.

ಬಿಜೆಪಿ ನಾಯಕರಿಂದ ಸಚಿವ ಸ್ಥಾನ ನಿರಾಕರಣೆ ಹಿನ್ನೆಲೆ ತಮ್ಮ ಆಪ್ತರ ಬಳಿ ಮಾತನಾಡಿರುವ ಹೆಚ್. ವಿಶ್ವನಾಥ್, “ಬಿಜೆಪಿ ಆಪರೇಷನ್ ಕಮಲದ ಸಹಾಯದಿಂದ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಹಿನ್ನೆಲೆಯನ್ನು ವಸ್ತುವನ್ನಾಗಿಸಿ, ಆಪರೇಷನ್ ಕಮಲ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಪುಸ್ತಕ ಬರೆಯುವುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ಪುಸ್ತಕದಲ್ಲಿ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ಹೇಗೆ? ಬಿಜೆಪಿ ಅಧಿಕಾರಕ್ಕೆ ಬರಲು ವೇದಿಕೆ ಕಲ್ಪಿಸಿದ್ದು ಹೇಗೆ? ಬಿಜೆಪಿಗೆ ಸಂಖ್ಯೆಯ ಅಗತ್ಯತೆಯಿದ್ದಾಗ ಅದನ್ನು ಒಗ್ಗೂಡಿಸಿದ್ದು ಹೇಗೆ?, ಆಪರೇಷನ್ ಕಮಲದಲ್ಲಿ ಹೆಚ್. ವಿಶ್ವನಾಥ್ ಹಾಗೂ ರಮೇಶ್ ಜಾರಕಿಹೊಳಿ ಪಾತ್ರವೇನು? ಆಪರೇಷನ್ ಕಮಲ ಮಾಡುವಾಗ ಬಿಜೆಪಿಯಿಂದ ಸಿಕ್ಕ ಭರವಸೆ, ಆಶ್ವಾಸನೆಗಳೇನು? ಉಪ-ಚುನಾವಣೆ ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದಿದ್ದು ಹೇಗೆ? ಹೀಗೆ ಎಲ್ಲಾ ವಿಚಾರವನ್ನು ಆ ಪುಸ್ತಕದಲ್ಲಿ ಬರೆಯುವುದಾಗಿ ಹೆಚ್. ವಿಶ್ವನಾಥ್ ಹೇಳಿಕೊಂಡಿದ್ದಾರೆ.

ಈ ಸುದ್ದಿ ಇದೀಗ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ವಿಶ್ವನಾಥ್ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಅಲ್ಲದೆ, ಸಚಿವ ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಸಲುವಾಗಿ ಅವರು ಹೀಗೊಂದು ಬ್ಲಾಕ್​ಮೇಲ್ ತಂತ್ರಕ್ಕೆ ಮುಂದಾಗಿದ್ದಾರಾ? ಎಂಬ ಅನುಮಾನಕ್ಕೂ ಅವರ ಈ ನಡೆ ಕಾರಣವಾಗಿದೆ.

ಇದನ್ನೂ ಓದಿ : ದಲಿತನ ಶವ ಸಂಸ್ಕಾರಕ್ಕೆ ಮೇಲ್ಜಾತಿಯವರ ಅಡ್ಡಿ; ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿ ಇದೆಯೇ?; ಸಿದ್ದರಾಮಯ್ಯ ಕಿಡಿ
First published: