• Home
  • »
  • News
  • »
  • state
  • »
  • ನಡುರಾತ್ರಿ ಆಗುಂಬೆ ಘಾಟ್​ನಲ್ಲಿ ನಿಂತಿತ್ತು ಹೆಣ್ಣುಮಗು!; ಕೊನೆಗೂ ಬಯಲಾಯ್ತು ರಹಸ್ಯ

ನಡುರಾತ್ರಿ ಆಗುಂಬೆ ಘಾಟ್​ನಲ್ಲಿ ನಿಂತಿತ್ತು ಹೆಣ್ಣುಮಗು!; ಕೊನೆಗೂ ಬಯಲಾಯ್ತು ರಹಸ್ಯ

ಆಗುಂಬೆ ಘಾಟ್​ನಲ್ಲಿ ಸಿಕ್ಕ ಬಾಲಕಿ ಅಮ್ಮನ ಜೊತೆ

ಆಗುಂಬೆ ಘಾಟ್​ನಲ್ಲಿ ಸಿಕ್ಕ ಬಾಲಕಿ ಅಮ್ಮನ ಜೊತೆ

ಚಿಕ್ಕಮಗಳೂರಿನ ಬೀನು ಎಂಬುವವರು ಕುಟುಂಬ ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು. ಪ್ರವಾಸದಿಂದ ವಾಪಾಸ್ ಬರುವಾಗ ರಾತ್ರಿ ತೀರ್ಥಹಳ್ಳಿಯ ಆಗುಂಬೆ ಘಾಟ್​ನ 7ನೇ ತಿರುವಿನ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದರು.

  • Share this:

ಶಿವಮೊಗ್ಗ (ಫೆ. 1): ತೀರ್ಥಹಳ್ಳಿಯ ಆಗುಂಬೆ ಘಾಟ್​ ಎಂದರೆ ಹಗಲು ಹೊತ್ತಿನಲ್ಲೂ ಪ್ರಯಾಣಿಸಲು ಸ್ವಲ್ಪ ಭಯಪಡಬೇಕಾದ ಜಾಗ. ಸುತ್ತಲೂ ದಟ್ಟ ಕಾಡು ಮಾತ್ರವಲ್ಲದೆ, ಬಹಳ ಕಡಿದಾದ ತಿರುವುಗಳಿರುವ ಈ ಘಾಟ್​​ನಲ್ಲಿ ಹೋಗಲು ಎಷ್ಟು ಜಾಗರೂಕರಾಗಿದ್ದರೂ ಸಾಲದು. ಈ ಘಾಟ್​ನಲ್ಲಿ ನಡುರಾತ್ರಿ ತೆರಳುತ್ತಿದ್ದ ಕಾರು ಚಾಲಕನಿಗೆ ರಸ್ತೆಯ ಪಕ್ಕದಲ್ಲಿ ಮಗುವೊಂದು ಅಳುತ್ತಾ ನಿಂತಿರುವುದು ಕಂಡಿತ್ತು. ನಿರ್ಜನವಾದ ಕಾಡಿನಲ್ಲಿ ಅದೂ ನಡುರಾತ್ರಿಯಲ್ಲಿ ಪುಟ್ಟ ಹುಡುಗಿಯೊಬ್ಬಳು ನಿಂತಿರುವುದನ್ನು ನೋಡಿದ ಚಾಲಕನಿಗೆ ಅಚ್ಚರಿಯಾಗಿತ್ತು.


ಸುತ್ತಲೂ ಕಗ್ಗತ್ತಲು ತುಂಬಿದ್ದ ರಸ್ತೆಯ ಪಕ್ಕ ಕಾರು ನಿಲ್ಲಿಸಿದ ಚಾಲಕ ಕೆಳಗಿಳಿದು ಹೋಗಲೋ, ಬೇಡವೋ ಎಂದು ಯೋಚಿಸಲಾರಂಭಿಸಿದ. ಕೊನೆಗೂ ಧೈರ್ಯ ಮಾಡಿ ಕೆಳಗಿಳಿದ ಆತ ಆ ಪುಟ್ಟ ಹೆಣ್ಣುಮಗುವಿನತ್ತ ನಡೆದ. ಆತನನ್ನು ನೋಡುತ್ತಿದ್ದಂತೆ ಅಳತೊಡಗಿದ ಮಗುವನ್ನು ಕಾರಿನಲ್ಲಿ ಕೂರಿಸಿಕೊಂಡು ಪೊಲೀಸ್ ಠಾಣೆಗೆ ತೆರಳಿದ ಆತ ನಡೆದ ವಿಚಾರವನ್ನು ತಿಳಿಸಿದ.


ಅಷ್ಟಕ್ಕೂ ಅಲ್ಲಿ ಆಗಿದ್ದೇನು?:
ಚಿಕ್ಕಮಗಳೂರಿನ ಕೊಟ್ಟಿಗೆಹಾರ ಮೂಲದ ಬೀನು ಎಂಬುವವರು ಗುರುವಾರ ಆಗುಂಬೆ ಘಾಟ್​ ಮೂಲಕ ಪ್ರಯಾಣಿಸುತ್ತಿದ್ದರು. ತೀರ್ಥಹಳ್ಳಿಯ ಆಗುಂಬೆ ಘಾಟ್​ನ  7ನೇ ತಿರುವಿನ ರಸ್ತೆಯಲ್ಲಿ ನಡುರಾತ್ರಿ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದರು. ಕಾರಿನ ಚಾಲಕ ರಾತ್ರಿ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದ ವೇಳೆ 5 ವರ್ಷದ ಹೆಣ್ಣು ಮಗು ಕೂಡ ಕಾರಿನಿಂದ ಕೆಳಗೆ ಇಳಿದಿತ್ತು. ನಿದ್ರೆಯ ಗುಂಗಿನಲ್ಲಿದ್ದ ಮನೆಯವರು ಇದನ್ನು ಗಮನಿಸಿರಲಿಲ್ಲ.


ಇದನ್ನೂ ಓದಿ: ಕೇರಳದಲ್ಲಿ ಜೀಪ್​ನಿಂದ ಬಿದ್ದು ಬಚಾವಾದ ಮಗು; ಹಸುಳೆಯ ತಂದೆ-ತಾಯಿ ವಿರುದ್ಧ ಕೇಸ್ ದಾಖಲು


ಗುರುವಾರ ರಾತ್ರಿ 9.30ರ ವೇಳೆ ಕಾರೊಂದು ಮಂಗಳೂರಿನಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿರುವಾಗ ಘಾಟಿಯಲ್ಲಿ 5 ವರ್ಷದ ಹೆಣ್ಣುಮಗು ಅಳುತ್ತಾ ನಿಂತಿತ್ತು. ಅದನ್ನು ನೋಡಿದ ಆ ಕಾರಿನ ಚಾಲಕ ಮಗುವನ್ನು ಕರೆದುಕೊಂಡು ಹೋಗಿ ಆಗುಂಬೆ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಮಗುವಿನ ಪೋಷಕರು ಯಾರು ಎಂದು ಪೋಲಿಸರು ಪತ್ತೆಹಚ್ಚಲು ಮುಂದಾದಾಗ ಪೋಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.


ಕೊಟ್ಟಿಗೆಹಾರದ ಬೀನು ಎಂಬುವವರು ಕುಟುಂಬ ಸಮೇತರಾಗಿ ಕೇರಳ ಮತ್ತು ತಮಿಳುನಾಡಿಗೆ ಪ್ರವಾಸ ಹೋಗಿದ್ದರು. ಪ್ರವಾಸದಿಂದ ವಾಪಾಸ್ ಬರುವಾಗ ರಾತ್ರಿ ಆಗುಂಬೆ ಘಾಟ್​ನ 7ನೇ ತಿರುವಿನ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದರು. ಆಗ ಮಗು ಕೂಡ ಕಾರಿನಿಂದ ಇಳಿದಿದ್ದನ್ನು ಗಮನಿಸದೆ ಎಲ್ಲರೂ ಕಾರು ಹತ್ತಿ ಹೊರಟುಹೋಗಿದ್ದಾರೆ. ಸ್ವಲ್ಪ ದೂರ ಹೋದ ನಂತರ ಮಗಳು ಅನ್ವಿ ತಮ್ಮ ಜೊತೆ ಇಲ್ಲದ್ದನ್ನು ಗಮನಿಸಿದ ತಾಯಿ ವಾಪಾಸ್​ ಬಂದು ಘಾಟ್​ನಲ್ಲಿ ಮಗುವನ್ನು ಹುಡುಕಲು ವಾಪಾಸ್ ಬಂದಿದ್ದಾರೆ. ಆಗ ಆಗುಂಬೆ ಫಾರೆಸ್ಟ್ ಗೇಟ್​ನಲ್ಲಿ ಮಗು ಪೊಲೀಸ್ ಠಾಣೆಯಲ್ಲಿ ಇರುವ ವಿಷಯ ಗೊತ್ತಾಗಿದೆ. ವಿಷಯ ತಿಳಿದ ಪೋಷಕರು ಠಾಣೆಗೆ ತೆರಳಿದ್ದಾರೆ. ಪೊಲೀಸರು ತಂದೆತಾಯಿಯರಿಗೆ ಎಚ್ಚರಿಕೆ ನೀಡಿ ಮಗುವನ್ನು ಪೋಷಕರಿಗೆ ಒಪ್ಪಿಸಿದ್ದಾರೆ.


ಇದನ್ನೂ ಓದಿ: ಟಿಕ್​ಟಾಕ್​ ಕಾರಣಕ್ಕೆ ಹೆಂಡತಿಗೆ ಚಾಕುವಿನಿಂದ ಇರಿದ ಗಂಡ; ಮೈಸೂರಿನಲ್ಲೊಂದು ವಿಚಿತ್ರ ಪ್ರಕರಣ


ಕೇರಳದ ಘಟನೆ ಮರುಕಳಿಸಿತು:


ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಕೇರಳದಲ್ಲೂ ಇಂಥದ್ದೇ ಘಟನೆಯೊಂದು ನಡೆದಿತ್ತು. ಕೇರಳದ ಇಡುಕ್ಕಿ ಜಿಲ್ಲೆಯ ರಾಜಮಾಲ ಅರಣ್ಯದಲ್ಲಿ ರಾತ್ರಿ ವೇಳೆ ಸಾಗುತ್ತಿದ್ದ ಜೀಪ್​ನಿಂದ ಆಕಸ್ಮಿಕವಾಗಿ 1 ವರ್ಷದ ಮಗು ಕೆಳಗೆ ಬಿದ್ದಿತ್ತು. ರಸ್ತೆಗೆ ಬಿದ್ದ ಮಗು ತೆವಳಿಕೊಂಡು ಬದಿಯಲ್ಲಿ ಕುಳಿತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ಮಗುವನ್ನು ಸ್ಥಳೀಯರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದರು.


1 ವರ್ಷದ ಹೆಣ್ಣು ಮಗುವಿನ ಪೋಷಕರು ಪಳನಿ ಯಾತ್ರೆ ಮುಗಿಸಿ ಇಡುಕ್ಕಿಯ ಕಂಬಿಳಿಕಾಂಡಮ್ ಎಂಬಲ್ಲಿರುವ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ರಾತ್ರಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದಾಗ ಈ ಮಗು ಆಕಸ್ಮಿಕವಾಗಿ ವಾಹನದಿಂದ ಕೆಳಗೆ ಬಿದ್ದಿತ್ತು. 50 ಕಿ.ಮೀ ದೂರ ಹೋದ ನಂತರ ಎಚ್ಚರಗೊಂಡ ಪೋಷಕರಿಗೆ ತಮ್ಮ ಮಗು ಕಾಣೆಯಾಗಿರುವುದು ಗೊತ್ತಾಗಿತ್ತು.ಟಾರ್ ರಸ್ತೆಯ ಮೇಲೆ ರಭಸವಾಗಿ ಬಿದ್ದಿದ್ದರಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅರಣ್ಯ ಇಲಾಖೆಯ ಚೆಕ್​ಪೋಸ್ಟ್ ಸಮೀಪ ಘಟನೆ ನಡೆದಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ್ದರು.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು