ಎಚ್ಡಿಕೆ ಸತ್ಯ ಹರಿಶ್ಚಂದ್ರನ 2ನೆ ಕುಡಿ, ಇಂಥ ಪ್ರಾಮಾಣಿಕರನ್ನು ನಾನು ನೋಡಿಯೇ ಇಲ್ಲ!; ಸಚಿವ ಬಿಸಿ ಪಾಟೀಲ್ ವ್ಯಂಗ್ಯ

ಕುಮಾರಸ್ವಾಮಿ ಹಿರೇಕೆರೂರಿಗೆ ಬಂದಾಗ ನಾನೆ ಮಾಲೆ ತಗೊಂಡು ಹೋಗಿ ಹಾಕಿ, ಸ್ವಾಗತ ಮಾಡಿ ಮನೆಗೆ ಕರ್ಕೊಂಡು ಹೋಗಿ ಟೀ ಕುಡಿಸಿ ಕಳಿಸ್ತಿದ್ದೆ. ನೀವೆಲ್ಲ ಅದಕ್ಕೆ ಬೇರೆ ಅರ್ಥ ಕಲ್ಪಿಸ್ತೀರಿ ಅಂತಾ ಅದನ್ನ ಮಾಡಲಿಲ್ಲ ಎಂದರು.

ಬಿ.ಸಿ. ಪಾಟೀಲ್.

ಬಿ.ಸಿ. ಪಾಟೀಲ್.

 • Share this:
  ಹಾವೇರಿ: ಎಚ್​ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಮುಖ್ಯಮಂತ್ರಿ ಸ್ಥಾನ ಹೋದ ನಂತರ ಮೀನನ್ನು ನೀರಿನಿಂದ ಹೊರಗೆ ಹಾಕಿದಂತಾಗಿದೆ. ಅವರು ದುರಹಂಕಾರದಿಂದ, ಸ್ವೇಚ್ಛಾಚಾರದಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಬೇರೆ ಯಾರೂ ಅವರ ಮುಖ್ಯಮಂತ್ರಿ ಸ್ಥಾನ ಕಳೆದಿಲ್ಲ. ಅವರಲ್ಲಿರುವ ಸ್ವಾರ್ಥ ಭಾವನೆ, ಎರಡು ಜಿಲ್ಲೆಗೆ ಸೀಮಿತವಾಗಿ ರಾಜ್ಯದ ಆಡಳಿತ ಇತ್ತು. ಹೀಗಾಗಿ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತಾ ಕೆಳಗಿಳಿಸಿದ್ದೇವೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ (BC Patil) ಅವರು ಎಚ್​ಡಿಕೆ ವಿರುದ್ಧ ಕಿಡಿಕಾರಿದರು.

  ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಐತಿಹಾಸಿಕ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಹಿರೇಕೆರೂರಲ್ಲಿ ಅಭಿವೃದ್ಧಿ ನೋಡಬೇಕು ಅಂದ್ರೆ ನಮಗೆ ಕುಮಾರಸ್ವಾಮಿ ಅವರ ಪ್ರಮಾಣಪತ್ರ ಬೇಕಿಲ್ಲ. ನಮಗೆ ಜನತೆ ಪ್ರಮಾಣಪತ್ರ ಕೊಟ್ಟಿದ್ದಾರೆ. ಅವರು ಕೊಟ್ಟಿದ್ದಲ್ಲ. ಅವರ ತಂದೆಯ ಕಾಲದಲ್ಲಿ ಕೊಟ್ಟಿದ್ದು. ಅದರಿಂದಲೆ ಇನ್ನೂ ಅಭಿವೃದ್ಧಿ ನಡಿತಿದೆ. ದೇವೇಗೌಡರ ಕಾಲದಲ್ಲಿ ಕೊಟ್ಟಿದ್ದರಲ್ಲೇ ನಾವಿನ್ನೂ ಅಭಿವೃದ್ಧಿ ಮಾಡ್ತಿದ್ದೇವೆ ಅಂತಾ ಕುಮಾರಸ್ವಾಮಿಗೆ ಲೇವಡಿ ಮಾಡಿದರು.

  ಎಚ್.ಡಿ. ಕುಮಾರಸ್ವಾಮಿ ಮಹಾನ್ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೆ ಕುಡಿ. ಪ್ರಾಮಾಣಿಕತೆಗೆ ಹೆಸರಾದವರು ಅಂದ್ರೆ ಕುಮಾರಸ್ವಾಮಿ. ಕುಮಾರಸ್ವಾಮಿ ನಾಮಿನೇಶನ್ ಕೊಟ್ಟ ಮೇಲೆ ಕ್ಷೇತ್ರಕ್ಕೆ ಹೋಗೋದಿಲ್ಲ. ಜನರು ಅವರನ್ನ ಆಯ್ಕೆ ಮಾಡ್ತಾರೆ. ಅವರು ಯಾವುದೇ ಒಂದು ಪೈಸೆ ಖರ್ಚು ಮಾಡೋದಿಲ್ಲ. ಅವರಂಥಾ ಪ್ರಾಮಾಣಿಕ ವ್ಯಕ್ತಿಯನ್ನ ನಾನು ಇದುವರೆಗೆ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.

  ಅಧಿಕಾರ ಯಾರ ಮನೆಯೂ ಸ್ವತ್ತಲ್ಲ. ಅಧಿಕಾರ ನಮ್ಮ ಮನೆ ಸ್ವತ್ತು ಅಂತಾ ಯಾವ ಮೂರ್ಖನೂ ಹೇಳಲ್ಲ. ಯಾವ ಜನ ಯಾವ ಸರ್ಕಾರದ ಮೇಲೆ ಆಶೀರ್ವಾದ ಮಾಡ್ತಾರೆ, ಅಲ್ಲಿಯವರೆಗೂ ಆ ಸರ್ಕಾರ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರೀತಿ ಯಾವ ಸರ್ಕಾರದ ಮೇಲಿರುತ್ತೆ ಅಲ್ಲಿಯವರೆಗೂ ಆ ಸರ್ಕಾರ ಇರುತ್ತದೆ. ಅಧಿಕಾರ ಯಾವತ್ತೂ ಶಾಶ್ವತವಲ್ಲ. ಕುಮಾರಸ್ವಾಮಿ ಅಧಿಕಾರ ಶಾಶ್ವತ ಅಂತಾ ತಿಳ್ಕೊಂಡಿರಬೇಕು. ಆದರೆ ಹಾಗಾಗಿಲ್ಲ. ಕುಮಾರಸ್ವಾಮಿ ಹಿರೇಕೆರೂರಿಗೆ ಬಂದಾಗ ನಾನೆ ಮಾಲೆ ತಗೊಂಡು ಹೋಗಿ ಹಾಕಿ, ಸ್ವಾಗತ ಮಾಡಿ ಮನೆಗೆ ಕರ್ಕೊಂಡು ಹೋಗಿ ಟೀ ಕುಡಿಸಿ ಕಳಿಸ್ತಿದ್ದೆ. ನೀವೆಲ್ಲ ಅದಕ್ಕೆ ಬೇರೆ ಅರ್ಥ ಕಲ್ಪಿಸ್ತೀರಿ ಅಂತಾ ಅದನ್ನ ಮಾಡಲಿಲ್ಲ ಎಂದರು.

  ಇದನ್ನು ಓದಿ: CM Basavaraja Bommai: ನಗರದಲ್ಲಿ ಹೆಚ್ಚಿದ ಸಿಎಂ ಬೊಮ್ಮಾಯಿ ಓಡಾಟ; ಭದ್ರತೆ ಒದಗಿಸಲು ಹೈರಾಣಾದ ಪೊಲೀಸರು!

  ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದ ಸುಗನಳ್ಳಿ ಗ್ರಾಮದಲ್ಲಿ ಕೆರೆ ತುಂಬಿಸುವ ಕಾಮಗಾರಿ ಭೂಮಿ ಪೂಜೆಗೆ ಎಚ್​ಡಿ ಕುಮಾರಸ್ವಾಮಿ ಅವರು ನೆನ್ನೆ ಜಿಲ್ಲೆಗೆ ಆಗಮಿಸಿದ್ದರು. ಆದರೆ ಕುಮಾರಸ್ವಾಮಿಯವರು ಭೂಮಿ ಪೂಜೆಕಾರ್ಯ ನೆರವೇರಿಸಲು ಆಗಲಿಲ್ಲ. ಯಾಕೆಂದರೆ ಕೆರೆ ಕಾಮಗಾರಿಯ ಭೂಮಿ ಪೂಜೆಗೆ ಆಹ್ವಾನ ಮಾಡಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಇಬ್ಬರೂ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಬರಲಿಲ್ಲ. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಇರದೇ ಕುಮಾರಸ್ವಾಮಿಗೆ ಭೂಮಿ ಪೂಜೆ ನೆರವೇರಿಸುವಂತಿರಲಿಲ್ಲ. ಹೀಗಾಗಿ, ಕುಮಾರಸ್ವಾಮಿ ಭೂಮಿ ಪೂಜೆ ಮಾಡಲಿಲ್ಲ. ಆದರೆ, ಸಚಿವ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜನರ ಅನುಕಂಪ ಗಿಟ್ಟಿಸುವ ಪ್ರಯತ್ನವಂತೂ ಮಾಡಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: