Agriculture: ಜೋಯಿಡಾದ ಸರಕಾರಿ ಶಾಲೆಯಲ್ಲಿ ಕೃಷಿ ಪಾಠ; ಗಿಡ ನೆಡ್ತಾರೆ, ಬೆಳೆಯನ್ನೂ ತೆಗೀತಾರೆ ಈ ಮಕ್ಕಳು!

ಈ ಶಾಲೆಯಲ್ಲಿ ಒಂದೂವರೆ ಎಕರೆ ಜಾಗ ಸಹ ಇರುವುದರಿಂದ 14 ವರ್ಷದಲ್ಲಿ ಈ ಶಾಲೆಗೆ ಬಂದು ಹೋದ ವಿದ್ಯಾರ್ಥಿಗಳು ನೆಟ್ಟ ಮಾವು, ಹಲಸು, ತೆಂಗಿನ ಮರಗಳು ಇಂದು ಫಲ ನೀಡುತ್ತಿದೆ. ಇನ್ನು ಈ ಶಾಲೆಯಲ್ಲಿ ಜೇನುಸಾಕಾಣಿಕೆ , ಗೆಡ್ಡೆ ಗೆಣಸು, ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತಿದ್ದು ಮಕ್ಕಳೇ ಗಿಡವನ್ನು ನೆಟ್ಟು ಫಸಲು ನೀಡುವವರೆಗೆ ಪೋಷಣೆ ಮಾಡಿದ್ದಾರೆ.

ಮಕ್ಕಳಿಗೆ ಕೃಷಿ ಪಾಠ

ಮಕ್ಕಳಿಗೆ ಕೃಷಿ ಪಾಠ

  • Share this:
ಉತ್ತರ ಕನ್ನಡ: ಶಾಲೆಗಳ ಮಕ್ಕಳಿಗೆ (School) ಎಂತಹ ಪಠ್ಯ (Bokks) ನೀಡಬೇಕು ಎಂಬ ಬಗ್ಗೆ ಪರ ವಿರೋಧಗಳು ನಡೆಯುತ್ತಲೇ ಇದೆ. ಆದ್ರೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಜೋಯಿಡಾದ (Joida) ಸರ್ಕಾರಿ ಶಾಲೆಯೊಂದರಲ್ಲಿ (Government School) ಇದರ ಬಗ್ಗೆ ಜಾಸ್ತಿ ತಲೆ‌ಕೆಡಿಸಿಕೊಳ್ಳದೆ ಮಕ್ಕಳಿಗೆ ಕೃಷಿ ಪಾಠ (Agriculture Lesson) ಹೇಳಿ ಕೊಡಲಾಗುತ್ತಿದೆ. ಮಕ್ಕಳ ಮೂಲಕವೇ ಕೃಷಿ ಮಾಡಿಸುವ ಮೂಲಕ ಕೃಷಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ, ಜತೆಗೆ ಬೆಳೆಯುವ ಸಿರಿ ಮೊಳಕೆಯಲ್ಲೆ ಎಂಬಂತೆ ಉತ್ತಮ ಪಾಠ ಮಾಡಲಾಗುತ್ತಿದೆ. ಇಲ್ಲಿ ಶಾಲೆಯ ಮಕ್ಕಳಿಗೆ ಪಠ್ಯದ ಜೊತೆ ಕೃಷಿಯ ಬಗ್ಗೆ ಪಾಠ ಹೇಳಿಕೊಡಲಾಗುತ್ತಿದೆ. ಇಲ್ಲಿ ಹಸಿರು ತೋಟ ಮಕ್ಕಳಿಂದಲೇ ಬೆಳೆದು ನಿಂತಿದೆ. ಚಿಕ್ಕ ಮಕ್ಕಳಿಗೆ ಪ್ರತಿದಿನ ತೋಟಗಾರಿಕೆ, ಜೇನು ಸಾಕಾಣಿಕೆ, ಕೃಷಿ ಬಗ್ಗೆ ಪಾಠ ಹೇಳಿ ಕೊಡಲಾಗುತ್ತದೆ.

ಸರ್ಕಾರಿ ಶಾಲೆಯಲ್ಲಿ ಕೃಷಿ ಪಾಠ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕುಂಬಾರವಾಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಡೇರಿಯಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಪಾಠ ಹೇಳಿಕೊಡಲಾಗುತ್ತಿದೆ. ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಈ ಶಾಲೆಗೆ ಒಂದನೇ ತರಗತಿಗೆ ಪ್ರವೇಶ ಪಡೆಯುವ ಹಾಗೂ ಐದನೇ ತರಗತಿ ಮುಗಿಸಿ ಹೋಗುವ ಯಾವುದೇ ಮಗುವಿರಲಿ ಮೊದಲು ಈ ಶಾಲೆಯಲ್ಲಿ ಯಾವುದಾದರು ಒಂದು ಗಿಡವನ್ನು ನೆಟ್ಟು ಪೋಷಣೆ ಮಾಡಬೇಕು.

ಒಂದೂವರೆ ಎಕರೆ ಜಾಗದಲ್ಲಿ ಕೃಷಿ

ಈ ಶಾಲೆಯಲ್ಲಿ ಒಂದೂವರೆ ಎಕರೆ ಜಾಗ ಸಹ ಇರುವುದರಿಂದ 14 ವರ್ಷದಲ್ಲಿ ಈ ಶಾಲೆಗೆ ಬಂದು ಹೋದ ವಿದ್ಯಾರ್ಥಿಗಳು ನೆಟ್ಟ ಮಾವು, ಹಲಸು, ತೆಂಗಿನ ಮರಗಳು ಇಂದು ಫಲ ನೀಡುತ್ತಿದೆ. ಇನ್ನು ಈ ಶಾಲೆಯಲ್ಲಿ ಜೇನುಸಾಕಾಣಿಕೆ , ಗೆಡ್ಡೆ ಗೆಣಸು, ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತಿದ್ದು ಮಕ್ಕಳೇ ಗಿಡವನ್ನು ನೆಟ್ಟು ಫಸಲು ನೀಡುವವರೆಗೆ ಪೋಷಣೆ ಮಾಡಿದ್ದಾರೆ. ಶಿಕ್ಷಕರು ಹಾಗೂ ಪೋಷಕರು ಹೇಗೆ ಆರೈಕೆ ಮಾಡಬೇಕು ಎಂಬುದನ್ನು ತೋರಿಸಿಕೊಡುತ್ತಾರೆ.

ಇದನ್ನೂ ಓದಿ: Success Story: ಕಷ್ಟಗಳನ್ನೇ ಎದುರಿಸಿ ಸ್ವಂತ ಬ್ರಾಂಡ್ ಕಟ್ಟಿದ ಕರ್ನಾಟಕದ ಮಹಿಳೆ!

ಮಳೆಗಾಲದಲ್ಲಿ ಉಳುಮೆ ಮಾಡ್ತಾರೆ ಮಕ್ಕಳು

ಪ್ರತಿ ವರ್ಷ ಮಳೆಗಾಲದಲ್ಲಿ ಶಾಲೆಯ ಪಕ್ಕದಲ್ಲಿ ಇರುವ ಗದ್ದೆಯಲ್ಲಿ ಉಳಿಮೆ ಮಾಡುತ್ತಾರೆ. ಜೊತೆಗೆ ಕಬ್ಬನ್ನು ಸಹ ಬೆಳೆದು ಬೆಲ್ಲ ಮಾಡುವ ಕೌಶಲ್ಯವನ್ನು ಸಹ ಇಲ್ಲಿನ ಮಕ್ಕಳಿಗೆ ಹೇಳಿಕೊಡಲಾಗುತಿದ್ದು, ಚಿಕ್ಕ ವಯಸ್ಸಿನಲ್ಲೇ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಲಾಗುತ್ತಿದೆ.

ಪೋಷಕರ ಸಹಾಯದಿಂದ ಕೃಷಿ ಕಾರ್ಯ

ಕಳೆದ 14 ವರ್ಷದ ಹಿಂದೆ ಈ ಶಾಲೆಯಲ್ಲಿ ಶಿಕ್ಷಕರಾಗಿ ಆಗಮಿಸಿದ್ದ ಲೀಲಾದರ್ ಮೊಗೇರ್ ರವರು ಮಕ್ಕಳಿಗೆ ಕೃಷಿ ಬಗ್ಗೆ ಪಾಠ ಮಾಡುವ ಹಾಗೂ ಶಾಲೆಯಲ್ಲಿ ಮಕ್ಕಳಿಂದಲೇ ತೋಟ ನಿರ್ಮಿಸುವ ಕಾರ್ಯವನ್ನು ಮೊದಲು ಪ್ರಾರಂಭಿಸಿದರು. ಅವರ ವರ್ಗಾವಣೆಗೊಂಡು ಇದೀಗ ಮೂರು ವರ್ಷಗಳಾಗಿವೆ. ಇವರ ನಂತರ ಈ ಶಾಲೆಗೆ ಕಾಯಂ ಶಿಕ್ಷಕರಿಲ್ಲದೇ ಓರ್ವ ಅಥಿತಿ ಉಪನ್ಯಾಸಕರಿಂದ ಈ ಶಾಲೆ ನಡೆಯುತ್ತಿದೆ. ಆದರೂ ಪೋಷಕರ ಸಹಕಾರದಿಂದ ಈಗಲೂ ಸಹ ಮಕ್ಕಳಿಗೆ ಕೃಷಿ ಪಾಠ ಮಾಡಲಾಗುತ್ತದೆ.

ಬಿಸಿಯೂಟಕ್ಕೆ ಇಲ್ಲಿಯ ತರಕಾರಿ ಬಳಕೆ

ಇನ್ನು ಮಕ್ಕಳೇ ಬೆಳೆದ ಬೆಳೆಗಳನ್ನು ಬಿಸಿಯೂಟಕ್ಕೆ ಬಳಸಲಾಗುತ್ತದೆ. ಹಣ್ಣು ಹೆಚ್ಚು ಬೆಳೆ ಬಂದರೆ ಮಕ್ಕಳಿಗೆ ಹಂಚಿ ಉಳಿದುದನ್ನು ಮಾರಾಟ ಮಾಡಿ ಬಂದ ಹಣವನ್ನು ಮಕ್ಕಳಿಗಾಗಿ ಬಳಸಲಾಗುತ್ತಿದೆ.ಇನ್ನು ಈ ಶಾಲೆಗೆ ಹಸಿರು ಶಾಲೆ ಎಂಬ ರಾಜ್ಯ ಪ್ರಶಸ್ತಿ ಸಹ ದೊರೆತಿದ್ದು ಮಾದರಿ ಎನಿಸಿದೆ.

ಇದನ್ನೂ ಓದಿ: Jackfruit Auction: ಹಣಕಾಸು ಸಮಸ್ಯೆ ಪರಿಹಾರಕ್ಕೆ ಕ್ಯಾಂಪಸ್​ನ ಹಲಸು ಫಸಲು ಹರಾಜು!

ಶಾಲೆ ಎಂದಾಕ್ಷಣ ಶಿಕ್ಷಕರು ಹೇಳಿಕೊಡುವ ಪಾಠಕ್ಕೆ ಮಾತ್ರ ಸೀಮಿತವಾಗಿರುವ ಇಂದಿನ ದಿನದಲ್ಲಿ ಮಕ್ಕಳಿಗೆ ಕೃಷಿ ಹಾಗೂ ಪರಿಸರದ ಬಗ್ಗೆ ಪಾಠ ಮಾಡುವ ಜೊತೆ ಪ್ರಾಯೋಗಿಕವಾಗಿ ಸಹ ಮಕ್ಕಳನ್ನು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಮಾಡುತ್ತಿರುವ ಈ ಶಾಲೆ ನಿಜವಾಗಿಯೂ ರಾಜ್ಯದಲ್ಲೇ ಮಾದರಿಯಾಗಿದೆ.
Published by:Annappa Achari
First published: