Agricultural Startup Workshop | ಬೆಂಗಳೂರು; ಸರ್ಕಾರದ ವತಿಯಿಂದ ನಾಳೆ ಕೃಷಿ ಸ್ಟಾರ್ಟಪ್ ಸಮ್ಮೇಳನ ನಡೆಯಲಿದೆ. ವಿಕಾಸಸೌಧದಲ್ಲಿ ಈ ಸಮ್ಮೇಳನ ನಡೆಯಲಿದೆ. ದೇಶದಲ್ಲಿ ಮೊದಲ ಬಾರಿಗೆ ಅಗ್ರಿ ಟೆಕ್ ಸಮ್ಮೇಳನ ನಡೆಯುತ್ತಿದೆ. ವರ್ಚುವಲ್ ಮೋಡ್ ಆನ್ಲೈನ್ ಮೂಲಕ ಸಮ್ಮೇಳನ ಆಯೋಜನೆ ಮಾಡಲಾಗಿದೆ. ರಾಜ್ಯ ಮತ್ತು ವಿವಿಧ ದೇಶದ 100ಕ್ಕೂ ಹೆಚ್ಚು ಕೃಷಿ ಸ್ಟಾರ್ಟಪ್ ಉದ್ದಿಮೆಗಳು, ಹೂಡಿಕೆದಾರರು ಆನ್ ಲೈನ್ನಲ್ಲಿ ಭಾಗಿಯಾಗಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಸಮ್ಮೇಳನದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿಸಿ ಪಾಟೀಲ್, ಸಮ್ಮೇಳನದಲ್ಲಿ ಸಾವಯವ, ಸಿರಿಧಾನ್ಯಗಳು, ಆಹಾರ ಸಂಸ್ಕರಣಾ ಉದ್ದಿಮೆಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. 2020ನೇ ಸಾಲಿನಲ್ಲಿ 4.5 ಬಿಲಿಯನ್ ಡಾಲರ್ ಮೊತ್ತದ ಮಾರುಕಟ್ಟೆ ಅಗ್ರಿಟೆಕ್ ಸ್ಟಾರ್ಟಪ್ ಗೆ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಇದನ್ನು ಓದಿ: ಪ್ರಧಾನಿ ಘೋಷಿಸಿದ 20 ಲಕ್ಷ ಕೋಟಿ ಯಾರ್ಯಾರಿಗೆ ಕೊಟ್ಟಿದ್ದೀರಾ ಅಂತ ಮಾಹಿತಿ ನೀಡಿ; ಡಿಕೆ ಶಿವಕುಮಾರ್
ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಕೃಷಿ ಉತ್ಪನ್ನಗಳ ರಫ್ತುಈ ಬಾರಿ ಹೆಚ್ಚಾಗಿದೆ. ಇದರಿಂದ ಹೆಚ್ಚು ಲಾಭ ಆಗಿದೆ. 25 ಸಾವಿರ ಕೋಟಿ ಮೊತ್ತದ ಕೃಷಿ ಉತ್ಪನ್ನ ಹೆಚ್ಚಳವಾಗಿದೆ. ಬೆಳೆ ಸಮೀಕ್ಷೆ ಉತ್ತಮವಾಗಿ ನಡೆದಿದೆ. ರೈತರ ಕಡೆಯಿಂದ ಈ ಸಮೀಕ್ಷೆ ಮಾಡಿಸಲಾಗುತ್ತಿದೆ. ಕಳೆದ 5 ದಿನಗಳಿಂದ 5.90 ಲಕ್ಷ ರೈತರು ಸಮೀಕ್ಷೆಯಲ್ಲಿ ಮಾಹಿತಿ ಅಪ್ ಲೋಡ್ ಮಾಡಿದ್ದಾರೆ. ಬೆಳೆ ಸಮೀಕ್ಷೆ ಈ ತಿಂಗಳ ಅಂತ್ಯದವರೆಗೆ ಮುಂದುವರೆಸುತ್ತೇವೆ. ಸಿಎಂ ಸೂಚನೆ ಮೇರೆಗೆ ಬೆಳೆ ಸಮೀಕ್ಷೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ವಿವರಿಸಿದರು.
ಕಳೆದ ವರ್ಷ 20ನೇ ಆಗಸ್ಟ್ನಲ್ಲಿ 620 ಮಿ.ಮೀ. ಮಳೆ ಆಗಿತ್ತು. ಈ ವರ್ಷ 685 ಮಿ.ಮೀ. ಮಳೆ ಆಗಿದೆ. ಈ ಬಾರಿ ಹೆಚ್ಚು ಮಳೆ ಆಗಿದೆ. ಕಳೆದ ವರ್ಷ 57,12 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆ ಆಗಿತ್ತು. ಈ ವರ್ಷ 68.26 ಲಕ್ಷ ಬಿತ್ತನೆ ಆಗಿದೆ. ಆಗಸ್ಟ್ 20 ರವರೆಗೆ 1,89,892 ಮೆಟ್ರಿಕ್ ಟನ್ ಯೂರಿಯಾ ಸರಬರಾಜು ಮಾಡಲಾಗಿದೆ. ಈ ಬಾರಿ ಹೆಚ್ಚು ಬಿತ್ತನೆ ಆಗಿದೆ. ಹೀಗಾಗಿ ಸ್ವಲ್ಪ ಸಮಸ್ಯೆ ಆಗಿರಬಹುದು. ಆದರೆ ಕೇಂದ್ರ ಸಚಿವ ಸದಾನಂದಗೌಡರು ಯಾವುದೇ ಆತಂಕ ಬೇಡ. ಎಷ್ಟು ಬೇಕಾದರೂ ಯೂರಿಯಾ ಕೊಡುತ್ತೇವೆ ಎಂಬ ಭರವಸೆ ಕೊಟ್ಟಿದ್ದಾರೆ. 51600 ಮೆಟ್ರಿಕ್ ಟನ್ ನಾಳೆ ಯೂರಿಯಾ ಬರುತ್ತಿದೆ. ಅದನ್ನು ಕೂಡ ಹಂಚಿಕೆ ಮಾಡುತ್ತೇವೆ. ರೈತರು ಆತಂಕಕ್ಕೆ ಒಳಗಾಗೋದು ಬೇಡ. ಎಷ್ಟು ಯೂರಿಯಾ ಬೇಕಾದರೂ ನಾವು ಪೂರೈಕೆ ಮಾಡುತ್ತೇವೆ. ಅಕ್ರಮವಾಗಿ ಯೂರಿಯಾ ಮಾರಾಟ ಮಾಡುತ್ತಿದ್ದ 40 ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಕೃಷಿ ಸಚಿವರು ರೈತರಿಗೆ ಭರವಸೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ