Agniveers In Karnataka Police: ಅಗ್ನಿಪಥ್​ ಯೋಜನೆಯ ಅಗ್ನಿವೀರರಿಗೆ ಪೊಲೀಸ್ ನೇಮಕಾತಿಯಲ್ಲಿ ಆದ್ಯತೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಅಗ್ನಿಪಥ್ ಸಶಸ್ತ್ರ ಪಡೆಗಳ ನೇಮಕಾತಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಹೆಚ್ಚುತ್ತಿರುವ ಮಧ್ಯೆಯೇ ಕರ್ನಾಟಕ ಪೊಲೀಸ್ ಸಿಬ್ಬಂದಿ ನೇಮಕಾತಿಯಲ್ಲಿ ‘ಅಗ್ನಿಪಥ್’ ಯೋಜನೆಯಡಿ ನೇಮಕಗೊಂಡ ಸೈನಿಕರಿಗೆ ಆದ್ಯತೆ ನೀಡಲಿದೆ

ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

 • Share this:
  ಬೆಂಗಳೂರು: ಭಾರತ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ್’ ಸೇನಾ ನೇಮಕಾತಿ (Agnipath Army Recruitment) ಯೋಜನೆಯ ವಿರುದ್ಧ ಪ್ರತಿಭಟನೆ ಹೆಚ್ಚುತ್ತಿದೆ. ಈ ಬೆನ್ನಲ್ಲೇ ಕರ್ನಾಟಕದ ಪೊಲೀಸ್ ಸಿಬ್ಬಂದಿ ನೇಮಕಾತಿಯಲ್ಲಿ (Karnataka Police  Recruitment) ಅಗ್ನಿಪಥ್ ಯೋಜನೆಯ ಅಗ್ನಿವೀರ್ ಸೈನಿಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಶುಕ್ರವಾರ ಹೇಳಿದ್ದಾರೆ. ಅಗ್ನಿಪಥ್ ಸಶಸ್ತ್ರ ಪಡೆಗಳ ನೇಮಕಾತಿ ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ಹೆಚ್ಚುತ್ತಿರುವ ಮಧ್ಯೆಯೇ ಕರ್ನಾಟಕ ಪೊಲೀಸ್ ಸಿಬ್ಬಂದಿ ನೇಮಕಾತಿಯಲ್ಲಿ ‘ಅಗ್ನಿಪಥ್’ ಯೋಜನೆಯಡಿ ನೇಮಕಗೊಂಡ ಸೈನಿಕರಿಗೆ ಆದ್ಯತೆ (Agniveers In Karnataka Police) ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

  ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅಗ್ನಿಪಥ್ ಯೋಜನೆ ವಿರುದ್ಧದ ಹಿಂಸಾತ್ಮಕ ಪ್ರತಿಭಟನೆಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರವಾಗಿ ಖಂಡಿಸಿದ್ದಾರೆ.

  ಇದು ತುಂಬಾ ಒಳ್ಳೆಯ ಯೋಜನೆ
  ಅಗ್ನಿಪಥ ಯೋಜನೆಯನ್ನು ವಿರೋಧಿಸುತ್ತಿರುವ ಜನರನ್ನು ಟೀಕಿಸಿದ ಕರ್ನಾಟಕದ ಗೃಹ ಸಚಿವರು, ಸಮಾಜದ ಕೆಲವು ವರ್ಗಗಳು ಯಾವುದೇ ಪರಿವರ್ತನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. "ಅಗ್ನಿಪಥ್ ಕೇಂದ್ರವು ಕೇವಲ ಘೋಷಿಸಿದ ಹೊಸ ಯೋಜನೆಯಾಗಿದೆ. ಇದು ಇನ್ನೂ ಜಾರಿಗೆ ಬಂದಿಲ್ಲ. ಇದು ತುಂಬಾ ಒಳ್ಳೆಯ ಯೋಜನೆ" ಎಂದು ಅವರು ಒತ್ತಿ ಹೇಳಿದರು.

  ನಾಲ್ಕು ವರ್ಷ ತರಬೇತಿ ಜೊತೆ ಒಂದಷ್ಟು ಸೌಲಭ್ಯ
  ಅಗ್ನಿಪಥ್ ತುಂಬಾ ಒಳ್ಳೆ ಯೋಜನೆ ಆಗಿದೆ. ಇಸ್ರೇಲ್ ಅಂತ ದೇಶಗಳಲ್ಲಿ ಯುವಕರು ಕಡ್ಡಾಯವಾಗಿ ಮಿಲಿಟರಿ ತರಬೇತಿ ಪಡೆದಿರಬೇಕು. ನಮ್ಮ ದೇಶದಲ್ಲಿ ನಾಲ್ಕು ವರ್ಷ ತರಬೇತಿ ಜೊತೆ ಒಂದಷ್ಟು ಸೌಲಭ್ಯ ಕೊಡಲಾಗುತ್ತದೆ. ಇದರಿಂದ ಶೇ 25 ರಷ್ಟು ಜನರನ್ನ ಸೇನೆಗೆ ಮತ್ತು ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

  ಇದನ್ನೂ ಓದಿ:Agnipath Protest: ಅಗ್ನಿಪಥ್ ವಿರೋಧಿಸಿ 2 ರೈಲುಗಳಿಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು

  ಇವತ್ತು ನಿರುದ್ಯೋಗ ತಾಂಡವ ಆಡುತ್ತಿದೆ. ಲಕ್ಷಗಟ್ಟಲೇ ಯುವಕರಿಗೆ ಉದ್ಯೋಗ ಸಿಗುತ್ತದೆ. ಮುಂದಿನ ಭವಿಷ್ಯ ಇವತ್ತೆ ಹೇಳೋಕೆ ಆಗುತ್ತಾ? ಯಾವ ಆಧಾರದ ಮೇಲೆ ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ವರ್ಗ ಈ ಕೆಲಸ ಮಾಡ್ತಾ ಇದೆ ಅದರ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.

  ಇದನ್ನೂ ಓದಿ: Araga Jnanendra: ಬೆಂಗಳೂರಿನಲ್ಲಿ ಉಗ್ರಗಾಮಿ ಚಟುವಟಿಕೆ ನಡೆಯುತ್ತಿದೆ; ಇದನ್ನು ಮಟ್ಟ ಹಾಕೋ ಕೆಲಸವೂ ನಡೀತಿದೆ

  ಮಾಸ್ಕ್ ಹಾಕೊಂಡು ಪ್ರತಿಭಟನೆ
  ಕೇಂದ್ರ ಸರ್ಕಾರ ಯಾರನ್ನೂ ನಿರುದ್ಯೋಗಿ ಆಗಿರಲು ಇಷ್ಟ ಪಡಲ್ಲ. ಇದರ ಹಿಂದೆ ಯಾವ ಶಕ್ತಿ ಇದೆ ಅಂತ ನೋಡುತ್ತಿದ್ದೇವೆ. ಕೇಂದ್ರ ಸರ್ಕಾರದ ಮೇಲೆ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದ್ದು, ಮಾಸ್ಕ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

  3ನೇ ದಿನದ ಪ್ರತಿಭಟನೆಯಲ್ಲಿ 'ಅಗ್ನಿ'ಗೆ ಆಹುತಿಯಾದ ರೈಲು, ತೆಲಂಗಾಣದಲ್ಲಿ ಓರ್ವ ಬಲಿ
  ಭಾರತೀಯ ಸೇನೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ‘ಅಗ್ನಿ ಪಥ್’ ಎಂಬ ಯೋಜನೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ–ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿ ‘ಅಗ್ನಿಪಥ್’ ಯೋಜನೆ ಜಾರಿಯಾಗಿದೆ. ಆದರೆ ಯೋಜನೆಗೆ ಆರಂಭದಲ್ಲಿಯೇ ಭಾರೀ ವಿರೋಧ ಎದುರಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ,  ರಾಜಸ್ಥಾನ, ಜಾರ್ಖಂಡ್  ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಪ್ರತಿಭಟನೆಯು ಉಗ್ರ ರೂಪ ತಳೆಯುತ್ತಿದೆ. ಇಂದು ಹಲವೆಡೆ ರೈಲಿಗೆ ಬೆಂಕಿ ಹಚ್ಚಲಾಗಿದೆ. ಇನ್ನು ತೆಲಂಗಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾಗಿ ವರದಿಯಾಗಿದೆ.

  ತೆಲಂಗಾಣದಲ್ಲಿ ಪ್ರತಿಭಟನೆಗೆ ಓರ್ವ ಬಲಿ
  ಅಗ್ನಿಪಥ್ ಯೋಜನೆ ವಿರೋಧಿಸಿ ತೆಲಂಗಾಣದಲ್ಲೂ ಪ್ರತಿಭಟನೆ ಜೋರಾಗಿದೆ. ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಆಕ್ರೋಶಗೊಂಡ ಗುಂಪನ್ನು ಚದುರಿಸಲು ಪೊಲೀಸರು ವೈಮಾನಿಕ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿಭಟನೆಗಳು ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕಾರಣವಾಗಿದೆ. ಉದ್ರಕ್ತರ ಗುಂಪು ಬೆಂಕಿ ಹಚ್ಚುವ ಹಂತಕ್ಕೂ ತಲುಪಿವೆ. ಈ ವೇಳೆ ಓರ್ವ ಮೃತಪಟ್ಟಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.
  Published by:guruganesh bhat
  First published: