• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಳೆ ಪರಿಹಾರ ಚೆಕ್ ನಲ್ಲೂ ದಲ್ಲಾಳಿಗಳ ಕಮಾಲ್; ಪ್ರತಿ ಚೆಕ್ ಗೆ 500-1000 ರೂ ಕಮಿಷನ್

ಮಳೆ ಪರಿಹಾರ ಚೆಕ್ ನಲ್ಲೂ ದಲ್ಲಾಳಿಗಳ ಕಮಾಲ್; ಪ್ರತಿ ಚೆಕ್ ಗೆ 500-1000 ರೂ ಕಮಿಷನ್

ಚೆಕ್​ ವಿತರಿಸಿದ ಆರ್​ ಅಶೋಕ್​

ಚೆಕ್​ ವಿತರಿಸಿದ ಆರ್​ ಅಶೋಕ್​

ಸರ್ಕಾರ ಚೆಕ್ ನೀಡಿದ ಬೆನ್ನಲ್ಲೇ ಸ್ಥಳೀಯರ ಹಿಂದೆ ಬಿದ್ದ ದಲ್ಲಾಳಿಗಳು ಸಂತ್ರಸ್ಥರಿಗೆ ನೀಡಿದ ಚೆಕ್ ಪಡೆದಿದ್ದಾರೆ‌.‌ ಅವರಿಂದ ದಲ್ಲಾಳಿಗಳು ಕಮಿಷನ್ ರೂಪದಲ್ಲಿ ಪ್ರತಿ ಚೆಕ್ ಗೆ 500 ರಿಂದ 1000 ರೂಪಾಯಿ ಪಡೆದಿದ್ದಾರೆ.

  • Share this:

ಬೆಂಗಳೂರು(ಅಕ್ಟೋಬರ್​. 26): ರೈತರ ವಿಚಾರದಲ್ಲಿ ಮಾತ್ರ ದಲ್ಲಾಳಿಗಳ ತಮ್ಮ ಬುದ್ದಿ ತೋರಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ಮಳೆ ಪರಿಹಾರ ಚೆಕ್ ವಿಚಾರದಲ್ಲಿಯೂ ದಲ್ಲಾಳಿಗಳ ಕಮಾಲ್ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾದವರಿಗೆ ನೀಡಿದ ಪರಿಹಾರ ಚೆಕ್ ಗಳನ್ನು ಕಲೆಕ್ಷನ್ ಮಾಡಿ ನಿರಾಶ್ರಿತರಿಂದಲೇ ಕಮಿಷನ್ ಹೊಡೆದಿದ್ದಾರೆ. ಬೆಂಗಳೂರಿನಲ್ಲಿ ಸುರಿದ ಮಹಾಮಳೆಗೆ ಹೊಸಕೆರೆಹಳ್ಳಿ ಮುಳುಗಿ ಹೋಗಿತ್ತು. ಐನೂರಕ್ಕೂ ಹೆಚ್ಚು ಮನೆಯೊಳಗೆ ಮಳೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು. ಮನೆಯ ವಸ್ತು, ದವಸ ಧಾನ್ಯ ನೀರುಪಾಲಾಗಿದ್ದರು. ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹದ ಪರಿಸ್ಥಿತಿ ನೋಡಲು ಖುದ್ದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ಮಾಡಿ, ಪರಿಶೀಲಿಸಿ ಪ್ರತಿ ಮನೆಗೆ 25 ಸಾವಿರ ರೂಪಾಯಿ ಪರಿಹಾರ ಚೆಕ್ ಘೋಷಿಸಿದ್ದರು‌. ಅದರಂತೆ ಚೆಕ್ ಕೂಡ ವಿತರಣೆಯಾಗಿದೆ. ರೈತರ ದವಸ ಧಾನ್ಯ ವಹಿವಾಟು ವಿಚಾರದಲ್ಲಿ ಸದಾ ಮೋಸ ಮಾಡುವ ದಲ್ಲಾಳಿಗಳು ಇದೀಗ ಸರ್ಕಾರ ವಿತರಣೆ ಮಾಡಿರುವ ಮಳೆ ಪರಿಹಾರ ಚೆಕ್ ನಲ್ಲಿಯೂ ತಮ್ಮ ಕೈಚಳಕ ತೋರಿಸಿದ್ದಾರೆ‌.


ದಸರಾ ಹಬ್ಬದ ಸಾಲು ಸಾಲು ರಜೆಗಳೇ ದಲ್ಲಾಳಿಗಳಿಗೆ ವರವಾಗಿದ್ದು, ಸರ್ಕಾರದ ನೀಡಿದ 25 ಸಾವಿರ ರೂಪಾಯಿ ಚೆಕ್ ಪಡೆದು ತಮ್ಮ ಕಮಿಷನ್ 500-1000 ಪಡೆದು ಉಳಿದ ಪರಿಹಾರ ಹಣ ನೇರವಾಗಿ ನೀಡಿದ್ದಾರೆ‌. ಬೆಂಗಳೂರಿನ ಮಳೆಗೆ ಅತಿ ಹೆಚ್ಚು ಹಾನಿಯಾದ ಹೊಸಕೆರೆಹಳ್ಳಿಯಲ್ಲಿ ಸರ್ಕಾರ ನೀಡಿದ ಮಳೆ ಪರಿಹಾರ ಚೆಕ್ಕಿಗೆ ದಲ್ಲಾಳಿಗಳ ಕಾಟ ಶುರುವಾಗಿದೆ.‌


ಸರ್ಕಾರ ಚೆಕ್ ನೀಡಿದ ಬೆನ್ನಲ್ಲೇ ಸ್ಥಳೀಯರ ಹಿಂದೆ ಬಿದ್ದ ದಲ್ಲಾಳಿಗಳು ಸಂತ್ರಸ್ಥರಿಗೆ ನೀಡಿದ ಚೆಕ್ ಪಡೆದಿದ್ದಾರೆ‌.‌ ಅವರಿಂದ ದಲ್ಲಾಳಿಗಳು ಕಮಿಷನ್ ರೂಪದಲ್ಲಿ ಪ್ರತಿ ಚೆಕ್ ಗೆ 500 ರಿಂದ 1000 ರೂಪಾಯಿ ಪಡೆದಿದ್ದಾರೆ. ಬ್ಯಾಂಕ್ ಅಕೌಂಟ್ ಇಲ್ಲದೆ ಇರುವವರು, ಬ್ಯಾಂಕಿಗೆ ಹಾಕುವ ಬದಲು, ದಲ್ಲಾಳಿಗಳ ಮೊರೆ ಹೋಗಿದ್ದಾರೆ.


ಇದನ್ನೂ ಓದಿ : ಕಾಂಗ್ರೆಸ್‌ಗೆ ಸಂವಿಧಾನದ ಮೂಲ ಆಶಯಗಳ ಮೇಲೆ ನಂಬಿಕೆಯಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ


ಬ್ಯಾಂಕ್ ರಜೆ ಹಿನ್ನೆಲೆ ತುರ್ತು ಹಣಕ್ಕಾಗಿ ದಲ್ಲಾಳಿಗಳ ಆಮಿಷಕ್ಕೆ ಮೊರೆ ಹೋಗಿದ್ದಾರೆ. ಮೇಲಾಗಿ ರಜೆ ಮುಗಿದ ಬಳಿಕ ಚೆಕ್ ಬೌನ್ಸ್ ಆಗುವ ಭಯವೂ ಸಂತ್ರಸ್ಥರನ್ನು ಕಾಡುತ್ತಿದೆ. ಸ್ಥಳೀಯರ ಮಾಹಿತಿ ಪ್ರಕಾರ 200ಕ್ಕೂ ಹೆಚ್ಚು ಚೆಕ್ ಹೀಗೆ ಕಮಿಷನ್‌ ಪಡೆದು ಚೆಕ್ ಸ್ವೀಕರಿಸಿದ್ದಾರೆ.


ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಹೊಸಕೆರೆ ಹಳ್ಳಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ಇದಕ್ಕೆ ಸರ್ಕಾರ ಪರಿಹಾರ ವಿಚಾರದಲ್ಲಿ ಕೂಡಲೇ ಸ್ಪಂದಿಸಿದೆ. ಆದರೆ ಇದರಲ್ಲೂ ದಲ್ಲಾಳಿಗಳು ಸಂತ್ರಸ್ಥರ ಹಣ ಬಿಡದೆ ಕಮಿಷನ್ ಪಡೆಯುವುದ ಮಾತ್ರ ಬಿಡಲಿಲ್ಲ ಎನ್ನುವುದು ವಿಪರ್ಯಾಸ.

Published by:G Hareeshkumar
First published: