Breaking News: ಮಕ್ಕಳನ್ನು ಶಾಲೆಗೆ ಸೇರಿಸುವ ವಯಸ್ಸಿನಲ್ಲಿ ಮಹತ್ತರ ಬದಲಾವಣೆ; ಸರ್ಕಾರದಿಂದ ಹೊಸ ರೂಲ್ಸ್​

1ನೇ ತರಗತಿಗೆ ಸೇರಿಸಲು ಮಕ್ಕಳಿಗೆ 6 ವರ್ಷ ತುಂಬಲೇಬೇಕು. ಈ ಹಿಂದೆ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು 5 ವರ್ಷ, 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮವಿತ್ತು. ಇದೀಗ ಆರ್‌ಟಿಇ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ಹೊಸ ವಯೋಮಿತಿಯನ್ನು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿ (ಜು.12): 1ನೇ ತರಗತಿ (1st Class) ಸೇರಲು ಮಕ್ಕಳಿಗೆ ವಯೋಮಿತಿ ನಿಗದಿ ವಿಚಾರದಲ್ಲಿ ಸರ್ಕಾರ ಹೊಸ ರೂಲ್ಸ್ (New Rules) ಜಾರಿಗೆ ತಂದಿದೆ. ರಾಜ್ಯ ಸರ್ಕಾರದಿಂದ (State Government) ಹೊಸ ವಯೋಮಿತಿ ನಿಗದಿಗೊಳಿಸಿ (Age Limitation) ಸರ್ಕಾರ ಆದೇಶ ಹೊರಡಿಸಿದೆ. 1ನೇ ತರಗತಿಗೆ ಸೇರಿಸಲು ಮಕ್ಕಳಿಗೆ 6 ವರ್ಷ ತುಂಬಲೇಬೇಕು. ಈ ಹಿಂದೆ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು 5 ವರ್ಷ, 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮವಿತ್ತು. ಇದೀಗ ಆರ್‌ಟಿಇ ಶಿಕ್ಷಣ ಕಾಯ್ದೆ (RTE Education Act), ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ಹೊಸ ವಯೋಮಿತಿಯನ್ನು ನಿಗದಿ ಮಾಡಿ ಸರ್ಕಾರ ಆದೇಶ (Order) ಹೊರಡಿಸಿದೆ.

ಮಕ್ಕಳಿಗೆ 6 ವರ್ಷ ತುಂಬಲೇಬೇಕು

ಪ್ರಾಥಮಿಕ ಶಾಲಾ ಮಕ್ಕಳ ದಾಖಲಾತಿಗೆ ವಯೋಮಿತಿ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ವಯೋಮಿತಿ ನಿಗದಿ ಮಾಡಲಾಗಿದೆ. ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ ಮಗುವಿನ ವಯಸ್ಸು 6 ವರ್ಷ ಪೂರ್ಣಗೊಂಡಿರಬೇಕು.

ಹೊಸ ವಯೋಮಿತಿ ನಿಗದಿ ಮಾಡಿ ಸುತ್ತೋಲೆ

ಜೂನ್ 1ಕ್ಕೆ 6 ವರ್ಷ ಪೂರ್ಣಗೊಂಡ ಮಗು ನೇರವಾಗಿ ಒಂದನೇ ತರಗತಿಗೆ ದಾಖಲಾತಿ ಮಾಡಲು ವಯೋಮಿತಿ ನಿಗದಿಯಾಗಿದೆ. ಶಾಲೆಗೆ ಮಗು ದಾಖಲಾತಿಯ ವಯೋಮಿತಿ ನಿಗದಿ ಮಾಡಿ ಆದೇಶ. ಈ ಹಿಂದೆ 5 ವರ್ಷ 5 ತಿಂಗಳು ಆದರೆ ಸಾಕು ಎಂಬ ನಿಯಮವಿತ್ತು. ಇದೀಗ ಅದನ್ನು ಪರಿಷ್ಕರಣೆ ಮಾಡಿ ಹೊಸ ವಯೋಮಿತಿ ನಿಗದಿ ಮಾಡಿ ಸುತ್ತೋಲೆ.

ಇದನ್ನೂ ಓದಿ: Pramoda Devi Wadiyar: ಬೇಬಿ ಬೆಟ್ಟ ವಿವಾದ, ಸರ್ಕಾರದ ವಿರುದ್ಧ 'ರಾಜಮಾತೆ' ಗರಂ; ಯಾಕಿಷ್ಟು ಹಿಂಸೆ ಕೊಡುತ್ತಿದ್ದೀರಾ?

ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ 

ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಧ್ಯಾಹ್ನದ ಮೆನುವಿನಲ್ಲಿ ಮೊಟ್ಟೆಗಳನ್ನು ಸೇರಿಸುವ ಕುರಿತು ಈ ವರ್ಷದ ಜೂನ್‌ನಲ್ಲಿ ಸಾರ್ವಜನಿಕ ಸೂಚನಾ ಇಲಾಖೆಯು ಸರ್ಕಾರಕ್ಕೆ ಕ್ಯಾಬಿನೆಟ್ ಟಿಪ್ಪಣಿಯನ್ನು ಕಳುಹಿಸಿದೆ. ಜುಲೈ 13ರಂದು ಹಣಕಾಸು ಇಲಾಖೆಯ ಅನುಮತಿ ಬಂದಿದ್ದು, ಈಗ ಪ್ರಸ್ತಾವನೆಯು ಸಂಪುಟದಿಂದ ಅನುಮತಿಗಾಗಿ ಕಾಯುತ್ತಿದೆ. ಹಿಂದಿನ ವರ್ಷ ಪಡೆದ 8 ಜಿಲ್ಲೆಗಳಲ್ಲಿ ಮಧ್ಯಾಹ್ನದ ಊಟ ಮೆನುವಿನಲ್ಲಿ ಮೊಟ್ಟೆಗಳನ್ನು (ಅಥವಾ ಬಾಳೆ ಹಣ್ಣು) ಮರು-ಪರಿಚಯಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಾವು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ದಿನಗಳನ್ನು ಹೆಚ್ಚಿಸುವ ಮತ್ತು ರಾಜ್ಯದ ಉಳಿದ ಭಾಗಗಳಿಗೂ ವಿಸ್ತರಿಸಬಹುದು.

ಇದನ್ನೂ ಓದಿ: Congress Leaders: ಇದು ಬಿಜೆಪಿ ಭ್ರಷ್ಟೋತ್ಸವ, ಈ ಸರ್ಕಾರ ಅಭಿವೃದ್ಧಿ ಶೂನ್ಯ ಸರ್ಕಾರ

ಮೊಟ್ಟೆ ಕೈ ಬಿಡುವುದು ಅವೈಜ್ಞಾನಿಕ ಕರ್ನಾಟಕದ ಆಲ್ ಇಂಡಿಯಾ ಡೆಮಾಕ್ರಟಿಕ್ ಆರ್ಗನೈಸೇಶನ್ ಕಾರ್ಯದರ್ಶಿ ಅಜಯ್ ಕಾಮತ್ ಅವರು ಹೇಳುವಂತೆ ವೈಜ್ಞಾನಿಕ ಅಧ್ಯಯನಗಳು ಮೊಟ್ಟೆ ಮತ್ತು ಮಾಂಸವು ಆಹಾರದಲ್ಲಿನ ಪ್ರೋಟೀನ್‌ಗೆ ಪೂರಕವಾಗಿದೆ ಎಂದು ಸಾಬೀತು ಪಡಿಸಿದೆ ಮತ್ತು ಐತಿಹಾಸಿಕವಾಗಿ ಮಾನವ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡಿದೆ. ಮಧ್ಯಾಹ್ನದ ಊಟದಿಂದ ಮೊಟ್ಟೆ ತೆಗೆಯುವ ಪ್ರಸ್ತಾವನೆ ಅವೈಜ್ಞಾನಿಕವಾಗಿದೆ.

15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 7 ಸಾವಿರ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಶಿಥಿಲಗೊಂಡಿರುವ ಕೊಠಡಿಗಳನ್ನು ಆದ್ಯತೆ ಮೇರೆಗೆ ರಿಪೇರಿ, ಮರು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ. ನೇಮಕಾತಿ ಪರೀಕ್ಷೆ ಮುಗಿದು, ಈಗಾಗಲೇ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಸೇವೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಶಾಲೆ ಆರಂಭದ ದಿನಗಳಲ್ಲೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಹೀಗಾಗಿ, ಈ ವರ್ಷ ಶಿಕ್ಷಕರ ಕೊರತೆ ಎದುರಾಗುವುದಿಲ್ಲ' ಎಂದು ಸಚಿವರು ಹೇಳಿದರು.
Published by:Pavana HS
First published: