Pramod Mutalik: ಬಿಜೆಪಿ ಬಡ್ಡಿ ಮಕ್ಕಳಿಗೆ ದುಡ್ಡಿನದ್ದೇ ಚಿಂತೆ; ಮಠಾಧೀಶರನ್ನ ಭಿಕ್ಷುಕರು ಎಂದ ಮುತಾಲಿಕ್

ಅಧಿಕಾರಕ್ಕೆ ಬಂದ ಬಳಿಕ ದುಡ್ಡು ನೋಡಿ ಬಿಜೆಪಿ ಅವರಿಗೆ ಕಣ್ಣು ಮಂಜಾಗಿದೆ. ಹೀಗಾಗಿ ಬಿಜೆಪಿ ನಾಯಕರಿಗೆ ಹಿಂದುತ್ವ, ಗೋಮಾತೆ, ಮತಾಂತರದ ವಿಚಾರಗಳು ಅವರಿಗೆ ಕಾಣಿಸ್ತಿಲ್ಲ. ಬರೀ 2 ಸಾವಿರದ ದುಡ್ಡಿನ ನೋಟುಗಳೇ ಕಾಣಿಸ್ತಿದೆ ಎಂದು ಪ್ರಮೋದ್​ ಮುತಾಲಿಕ್​ ವಾಗ್ದಾಳಿ ನಡೆಸಿದ್ದಾರೆ.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಮಂಡ್ಯ (ಮೇ 8): ಬಿಜೆಪಿ ಸರ್ಕಾರದ (BJP Government) ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ (Pramod Mutalik) ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಮಾತಾಡಿದ ಅವ್ರು ಬಿಜೆಪಿ ನಾಯಕರ (BJP Leaders) ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಡ್ಡಿ ಮಕ್ಕಳಿಗೆ ದುಡ್ಡಿನದ್ದೇ ಚಿಂತೆಯಾಗಿದ್ದು, ಬಿಜೆಪಿ ಸರ್ಕಾರ ಇದ್ದಾಗಲೂ ಹಿಂದೂ ಕಾರ್ಯಕರ್ತರ (Hindu activists) ಮೇಲೆ ನಿರಂತರ ಕೇಸ್ ಹಾಕ್ತಿದ್ದಾರೆ. ಬಿಜೆಪಿ ನಾಯಕರು ತಿಂದು ತಿಂದು ತೇಲಾಡ್ತಿದ್ದಾರೆ ಎಂದು ಕಿಡಿಕಾರಿದ್ರು.  ಬಿಜೆಪಿಯವರನ್ನ ನಾವು ಆಯ್ಕೆ ಮಾಡಿಕೊಟ್ಟಿರೋದು. ಇವತ್ತು ದೇಶ, ಧರ್ಮ ಅನ್ನೋದನ್ನ ಮರೆತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ದುಡ್ಡು ನೋಡಿ ಬಿಜೆಪಿ ಅವರಿಗೆ ಕಣ್ಣು ಮಂಜಾಗಿದೆ. ಹೀಗಾಗಿ ಬಿಜೆಪಿ ನಾಯಕರಿಗೆ ಹಿಂದುತ್ವ, ಗೋಮಾತೆ, ಮತಾಂತರದ ವಿಚಾರಗಳು ಅವರಿಗೆ ಕಾಣಿಸ್ತಿಲ್ಲ. ಬರೀ 2 ಸಾವಿರದ ದುಡ್ಡಿನ ನೋಟುಗಳೇ ಕಾಣಿಸ್ತಿದೆ ಎಂದು ಪ್ರಮೋದ್​ ಮುತಾಲಿಕ್​ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಭಜರಂಗ ಸೇನೆಯ ಕಾರ್ಯಕರ್ತರ ಅಭ್ಯಾಸ ವರ್ಗದಲ್ಲಿ ಮಾತಾಡಿದ ಅವ್ರು, ಇವತ್ತು ದೇಶ, ಧರ್ಮ ಅನ್ನೋದನ್ನ ಮರೆತಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ದುಡ್ಡು ನೋಡಿ ಬಿಜೆಪಿ ಅವರಿಗೆ ಕಣ್ಣು ಮಂಜಾಗಿದೆ. ಹೀಗಾಗಿ ಬಿಜೆಪಿ ನಾಯಕರಿಗೆ ಹಿಂದುತ್ವ, ಗೋಮಾತೆ, ಮತಾಂತರದ ವಿಚಾರಗಳು ಅವರಿಗೆ ಕಾಣಿಸ್ತಿಲ್ಲ. ಬರೀ 2 ಸಾವಿರದ ದುಡ್ಡಿನ ನೋಟುಗಳೇ ಕಾಣಿಸ್ತಿದೆ. ಹಣ ಕೊಳ್ಳೆ ಹೊಡೆಯುತ್ತಿರೋ ಅವರಿಗೆ ಇದೀಗ ಇರೋ ದುಡ್ಡನ್ನ ಎಲ್ಲಿಡೋದು ಅನ್ನೋದೇ ಚಿಂತೆಯಾಗಿದೆ.

ಇವ್ರಿಗೆ ಬರೀ ದುಡ್ಡಿನದ್ದೇ ಚಿಂತೆ

MLA, MP ಗೆಲ್ಲೋದೇಗೆ, ಮಂತ್ರಿ ಆಗೋದು ಹೇಗೆ ಅನ್ನೋದೇ ಚಿಂತೆ ಅವ್ರಿಗಿರೋ ದೊಡ್ಡ ಚಿಂತೆಯಾಗಿದೆ. ಬಿಜೆಪಿಯ ಬಡ್ಡಿ ಮಕ್ಕಳಿಗೆ ಅದೇ ಚಿಂತೆಯಾಗಿದ್ದು, ಹಿಂದೂ ಕಾರ್ಯಕರ್ತರು ನಿಮಗೆ ನೆನಪಾಗ್ತಿಲ್ವಾ ಬೋ.. ಮಕ್ಕಳ್ರಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೀವು ನೀಚ, ನಿರ್ಲಜ್ಜರು ದ್ರೋಹಿಗಳಿದ್ದೀರಿ, ದೇಶ, ಧರ್ಮಕ್ಕೋಷ್ಕರ ನಿಮ್ಮನ್ನ ಆರಿಸಿ ಕಳಿಸಿದ್ದು, ಅಧಿಕಾರ ಬಂದ ಮೇಲೆ ಬೆವರು ರಕ್ತ ಸುರಿಸಿದ ಕಾರ್ಯಕರ್ತರು ನಿಮಗೆ ನೆನಪಾಗೋದಿಲ್ವಾ? ಬಿಜೆಪಿ ನಾಯಕರು ದೊಡ್ಡ ದ್ರೋಹಿಗಳು ಎಂದು ಪ್ರಮೋದ್​ ಮುತಾಲಿಕ್​ ಕಿಡಿಕಾರಿದ್ದಾರೆ.

ಇದನ್ನೂ ಓದಿ: PSI Recruitment Scam: ಹಾಸನದಲ್ಲಿ ತಂದೆ-ಮಗ ಸೇರಿ ಮೂವರ ಬಂಧನ; ಒಂದೇ ಕುಟುಂಬದ ಮೂವರು ಪೊಲೀಸ್ ಅಧಿಕಾರಿಗಳ ವಿಚಾರಣೆ

ರಾಜಕಾರಣಿಗಳ ಬಳಿ ಭಿಕ್ಷೆ ಬೇಡುವ ಸ್ವಾಮೀಜಿಗಳು

ಸ್ವಾಮೀಜಿಗಳ ಬಗ್ಗೆಯೂ ಮಾತಾಡಿದ ಪ್ರಮೋದ್ ಮುತಾಲಿಕ್​, ತಮ್ಮ ಜನಾಂಗಗಳಿಗೆ ಮೀಸಲಾತಿ ಕೇಳುವ, ರಾಜಕಾರಣಿಗಳ ಬಳಿ ಭಿಕ್ಷೆ ಬೇಡುವ ಸ್ವಾಮೀಜಿಗಳಿಂದ ದೇಶಕ್ಕೆ ಗಂಡಾಂತರ ಉಂಟಾಗಿದೆ ಎಂದ್ರು. ಮಠಾಧೀಶರು ಜಾತಿಗೆ ಸೀಮಿತವಾಗಿರೋದ್ರಿಂದ ಆಘಾತ, ತೊಂದರೆ ಆಗಿದೆ. ಒಂದು ಕಡೆ ನಾವು ಹಿಂದೂ ಹಿಂದೂ ಅಂತಾ ಹಿಂದೂ ಸಮಾಜ ಸೇರಿಸ್ತಿದ್ದೇವೆ.

ಸ್ವಾಮೀಜಿಗಳಿಂದ ದೇಶಕ್ಕೆ ಗಂಡಾಂತರ

ಇನ್ನೊಂದು ಕಡೆ ಜಾತಿಯ ಸ್ವಾಮೀಜಿಗಳು ಜಾತಿ ಸಮಾವೇಶ ಮಾಡೋದು, ಮೀಸಲಾತಿ ಕೇಳೋದು, ರಾಜಕಾರಣಿಗಳ ಬಳಿ ಹೋಗಿ ಭಿಕ್ಷೆ ಬೇಡೋದು ಮಾಡ್ತಿದ್ದಾರೆ. ಇದು ಬಹಳ ಅಸಹ್ಯವಾದ ಪ್ರಕ್ರಿಯೆ ಪ್ರಾರಂಭವಾಗಿದೆ. ಇದ್ರಿಂದ ದೇಶಕ್ಕೆ ಆಘಾತ, ತೊಂದರೆ, ಗಂಡಾಂತರ ಉಂಟಾಗುತ್ತೆ. ಖಾವಿಧಾರಿ ಸ್ವಾಮೀಜಿಗಳು ಕೆಲಸ ಮಾಡಬೇಕಾದ ಉದ್ದೇಶ ಬಿಟ್ಟು ಉಳಿದೆಲ್ಲವನ್ನೂ ಮಾಡ್ತಿದ್ದಾರೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳ ಮೂಲಕ ಲೂಟಿ ಒಡೆಯುತ್ತಿದ್ದಾರೆ. ಅವರಿಗೆ ಕಾಲೇಜುಗಳ ಮೂಲಕ ಹಣ ಸಿಕ್ತಿದೆ. ಸರ್ಕಾರ ಬಂದ ರಾಜಕಾರಣಿಗಳ ಕಡೆ ಈ ಸ್ವಾಮೀಜಿಗಳು ಇರ್ತಾರೆ ಎಂದ್ರು.

ಇದನ್ನೂ ಓದಿ:  BasanaGowda Patil Yatnal: ಸಿಎಂ ಸ್ಥಾನಕ್ಕೆ 2500 ಕೋಟಿ ಹೇಳಿಕೆ; ಯು ಟರ್ನ್ ಹೊಡೆದ ಶಾಸಕ ಯತ್ನಾಳ್, ಈಗ ಹೇಳಿದ್ದೇನು?

ಯಾರೂ ಅವರ ವಿರುದ್ಧ ಮಾತಾಡುವಂಗಿಲ್ಲ. ಇದು ಬಹಳ ಆಘಾತಕಾರಿ. ಆದರೂ ಇದನ್ನ ಸ್ವಾಮೀಜಿಗಳಿಗೆ ಹೇಳುವಂತಹ ಶಕ್ತಿ, ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇದೆಲ್ಲವೂ ಸಂಘಟನೆ ಮೂಲಕವೇ ಸಾಧ್ಯ. ಸಂಘಟನೆ ಮೂಲಕವೇ ಅವರನ್ನೂ, ರಾಜಕಾರಣಿಗಳನ್ನ, ಸಮಾಜವನ್ನ ತಿದ್ದಬೇಕಿದೆ ಹಾಗಾಗಿ, ಸಂಘಟನೆಯೇ ನಮ್ಮ ದೊಡ್ಡ ಶಕ್ತಿ, ಸಂಘಟನೆಯೇ ನಮ್ಮ ಹೊಣೆ ಎಂದು ಮುತಾಲಿಕ್​ ಹೇಳಿದ್ದಾರೆ.
Published by:Pavana HS
First published: