• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Earthquake: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪದ ಅನುಭವ; ತುಮಕೂರಿನಲ್ಲಿ ತಿಮಿಂಗಲ ವಾಂತಿ ದಂಧೆ

Earthquake: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪದ ಅನುಭವ; ತುಮಕೂರಿನಲ್ಲಿ ತಿಮಿಂಗಲ ವಾಂತಿ ದಂಧೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶುಕ್ರವಾರ ರಾತ್ರಿ 10.32ರ ಸುಮಾರಿಗೆ ಭಯಾನಕ ಕಂಪನದ (Earthquake Feel) ಅನುಭವವಾಗಿದೆ. ಸ್ಫೋಟದ ರೀತಿಯಲ್ಲಿ ಜೋರಾದ ಶಬ್ಧದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ.

  • News18 Kannada
  • 3-MIN READ
  • Last Updated :
  • Bijapur, India
  • Share this:

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಭೂಕಂಪನದ (Earthquake) ಅನುಭವವಾಗಿದೆ. ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ವಿಜಯಪುರ ಜಿಲ್ಲೆಯ (Vijayapura District) ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಶುಕ್ರವಾರ ರಾತ್ರಿ 10.32ರ ಸುಮಾರಿಗೆ ಭಯಾನಕ ಕಂಪನದ (Earthquake Feel) ಅನುಭವವಾಗಿದೆ. ಸ್ಫೋಟದ ರೀತಿಯಲ್ಲಿ ಜೋರಾದ ಶಬ್ಧದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭಯಾನಕ ಸದ್ದಿಗೆ ಹೆದರಿ ಹೊರಗೆ ಜನರು (People) ಮನೆ ಬಿಟ್ಟು ಓಡಿ ಬಂದಿದ್ದಾರೆ. ಈ ಹಿಂದಿನಿಗಿಂತಲೂ ಅತೀ ಭಯಾನಕವಾಗಿ ಸ್ಫೋಟದ ರೀತಿಯ ಸದ್ದು (Big Sound) ಹಾಗೂ ಕಂಪನ ಅನುಭವವಾಗಿದೆ.


ಫೆಬ್ರವರಿ 2ರಂದು ಸಹ ಆಗಿತ್ತು ಭೂಕಂಪದ ಅನುಭವ


ತಿಕೋಟಾ (Tikota, Vijayapura) ತಾಲೂಕಿನ ಮಹಾರಾಷ್ಟ್ರದ ಗಡಿ ಭಾಗದ ಗ್ರಾಮಗಳಲ್ಲಿ ಭೂಕಂಪನದ ಅನುಭವ ಉಂಟಾಗಿದೆ ಎಂದು ಜನರು ಹೇಳಿದ್ದರು.


ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ. ಟಕ್ಕಳಕಿ, ಸಿದ್ದಾಪುರ ಕೆ. ಗ್ರಾಮದಲ್ಲಿ ಭೂಮಿ ಕಂಪಿಸಿತ್ತು. ಕರ್ನಾಟಕದ ಗಡಿ ಹಾಗೂ ಮಹಾರಾಷ್ಟ್ರದ ಬಿವರಗಿ, ಮೊರಬಗಿ ಗ್ರಾಮದ ಸುತ್ತಮುತ್ತ ಸಹ ಭೂಮಿ ಕಂಪಿಸಿದ ಅನುಭವ ಆಗಿತ್ತು.


ಫೆ.2ರ ರಾತ್ರಿ 10.05 ಮತ್ತು ಫೆ.3ರ ಬೆಳಗಿನ ಜಾವ 1.47ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ತೀವ್ರತೆ ದಾಖಲಾಗಿತ್ತು. ಭೂಕಂಪನದ ಕೇಂದ್ರವನ್ನು ಮಹಾರಾಷ್ಟ್ರದ ಸಾಂಗ್ಲಿ (Sangli, Maharashtra) ಜಿಲ್ಲೆಯ ಬಿವರಗಿ ಗ್ರಾಮದಲ್ಲಿ ಗುರುತಿಸಲಾಗಿತ್ತು.


ಕಳೆದ ಎರಡು ವರ್ಷಗಳಿಂದ ಭೂಕಂಪನದ ಅನುಭವ


ಕಳೆದ ಎರಡು ವರ್ಷಗಳಿಂದ ವಿಜಯಪುರ ಜಿಲ್ಲೆಯ ಗಡಿ ಭಾಗಗಳಲ್ಲಿ ಭೂಕಂಪನದ ಅನುಭವ ಉಂಟಾಗುತ್ತಿದೆ. ಇತ್ತ ಜಿಲ್ಲೆಯ ಮಸೂತಿ ಮತ್ತು ಮಲಘಾಣ ಗ್ರಾಮಗಳಲ್ಲಿ ಆಗಾಗ ಭೂಮಿ ಕಂಪಿಸಿದಂತೆ ಆಗುತ್ತದೆ ಎಂದು ಜನರು ಹೇಳುತ್ತಾರೆ.




ಹಾವೇರಿ: ಫಸಲಿನ ರಾಶಿಗಳು ಧಗಧಗ


ವಿದ್ಯುತ್ ತಂತಿ ಕತ್ತರಿಸಿ ಬಿದ್ದು ಮೆಕ್ಕೆಜೋಳ,  ಭತ್ತದ ರಾಶಿ ಸುಟ್ಟು ಭಸ್ಮವಾಗಿರುವ ಘಟನೆ ಹಾವೇರಿಯ ಶಿಗ್ಗಾಂವಿ (Shiggaon, Haveri) ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ.


ವಿದ್ಯುತ್ ತಂತಿ ತುಂಡಾಗಿ ಬಿದ್ದು, ಫಸಲಿನ ರಾಶಿಗಳು ಧಗಧಗನೆ ಹೊತ್ತಿ ಉರಿದಿದೆ. 400 ಕ್ವಿಂಟಾಲ್ ಮೆಕ್ಕೆಜೋಳ, 20 ಕ್ವಿಂಟಾಲ್ ಸಾವಿ ರಾಶಿ, 10 ಕ್ವಿಂಟಾಲ್ ಭತ್ತದ ರಾಶಿ ಸುಟ್ಟ ಭಸ್ಮವಾಗಿದೆ.


ರಮೇಶ್ ಧರ್ಮಣ್ಣನವರ್, ಪವಿತ್ರಾ, ಮಂಜುನಾಥ್ ಎಂಬವರಿಗೆ ಸೇರಿದ ರಾಶಿಗಳು ಸುಟ್ಟು ಕರಕಲಾಗಿದೆ. ದುರಂತದಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಮೌಲ್ಯದ ಫಸಲು ಬೆಂಕಿಗಾಹುತಿಯಾಗಿದೆ.


ಇದನ್ನೂ ಓದಿ: BS Yediyurappa: 'ಬದುಕಿನ ಕೊನೆಯುಸಿರು ಇರುವವರೆಗೂ'; ನನ್ನ ಕೊನೆಯ ಸದನ ಎಂದು ಭಾವುಕರಾದ ಮಾಜಿ ಸಿಎಂ ಬಿಎಸ್​ವೈ


ತುಮಕೂರು: ತಿಮಿಂಗಲ ವಾಂತಿ ದಂಧೆ


ತುಮಕೂರಿನ ತಿಪಟೂರು ಪಟ್ಟಣದಲ್ಲಿ ತಿಮಿಂಗಿಲ ವಾಂತಿ ದಂಧೆ ಪತ್ತೆಯಾಗಿದೆ. ದಂಧೆಯಲ್ಲಿ ಭಾಗಿಯಾಗಿದ್ದ ತಿಪಟೂರಿನ ವಿರುಪಾಕ್ಷಿ ಗೌಡ ಅಲಿಯಾಸ್ ಪಕ್ಷಿಗೌಡನ್ನ ಪೊಲೀಸರು ಬಂಧಿಸಿದ್ದಾರೆ.


ತಿಪಟೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ 15 ಲಕ್ಷ ಬೆಲೆಬಾಳುವ ಮಾಲು ಸಮೇತ ಸಿಕ್ಕಿಬಿದ್ದಿದ್ದಾನೆ. ಇನ್ನು ಮಾಲು ಕೊಂಡುಕೊಳ್ಳೋ ವೇಷದಲ್ಲಿ ಬಂದಿದ್ದ ಕೇರಳ ಪೊಲೀಸರು ಆತನನ್ನ ಅರೆಸ್ಟ್​ ಮಾಡಿದ್ದಾರೆ.


ಯಾದಗಿರಿ: 5 ಲಕ್ಷ ರೂ. ಪರಿಹಾರ


ಯಾದಗಿರಿಯ ಅನಪುರದಲ್ಲಿ ಕಲುಷಿತ ನೀರು ಸೇವಿಸಿ ಮೂವರ ಸಾವು ಪ್ರಕರಣಕ್ಕೆ ಸಂಬಂಧ ಮೃತರ ಕುಟಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ.


ಕಲುಷಿತ ನೀರು ಸೇವಿಸಿ ಸಾವಿತ್ರಮ್ಮ, ಸಾಯಮ್ಮ, ನರಸಮ್ಮ ಎಂಬವರು ಮೃತಪಟ್ಟಿದ್ರು.. ಈ ಹಿನ್ನೆಲೆ ಸರ್ಕಾರಕ್ಕೆ 25 ಲಕ್ಷ ಪರಿಹಾರ ನೀಡುವಂತೆ ಶಾಸಕ ನಾಗನಗೌಡ ಕಂದಕೂರು ಅಧಿವೇಶನದಲ್ಲಿ ಆಗ್ರಹಿಸಿದ್ದರು. ಆದ್ರೆ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿದೆ.

Published by:Mahmadrafik K
First published: