ಬೆಳಗಾವಿಯಲ್ಲಿ ಮತ್ತೆ ಆರಂಭವಾಗುತ್ತಾ ಹೆಬ್ಬಾಳ್ಕರ್​ VS ಜಾರಕಿಹೊಳಿ ಕದನ?

news18
Updated:October 15, 2018, 9:17 AM IST
ಬೆಳಗಾವಿಯಲ್ಲಿ ಮತ್ತೆ ಆರಂಭವಾಗುತ್ತಾ ಹೆಬ್ಬಾಳ್ಕರ್​ VS ಜಾರಕಿಹೊಳಿ ಕದನ?
ಲಕ್ಷ್ಮೀ ಹೆಬ್ಬಾಳ್ಕರ್- ರಮೇಶ್ ಜಾರಕಿಹೊಳಿ
  • News18
  • Last Updated: October 15, 2018, 9:17 AM IST
  • Share this:
ಚಂದ್ರಕಾಂತ್​ ಸುಗಂಧಿ, ನ್ಯೂಸ್ 18 ಕನ್ನಡ

ಬೆಳಗಾವಿ(ಅ.15): ಗಡಿನಾಡಲ್ಲಿ ಮತ್ತೆ ರಾಜಕೀಯ ಹೈಡ್ರಾಮಾ ಆರಂಭವಾಗುತ್ತಾ? ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಸಹೋದರರ ನಡುವೆ ಮತ್ತೊಂದು ಕದನ ಏರ್ಪಡುತ್ತಾ? ಈ ಕುತೂಹಲಕ್ಕೆ ಕಾರಣವಾಗಿರುವುದು ಇಂದು ನಡೆಯುವ ಬೆಳಗಾವಿ ಎಪಿಎಂಸಿ ಚುನಾವಣೆ. ಪಿಎಲ್​ಡಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳರ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದ್ರೆ ಎಪಿಎಂಸಿ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ತಟಸ್ಥರಾಗಿದ್ದಾರೆ.

ಬೆಳಗಾವಿ ಪಿಎಲ್​ಡಿ ಬ್ಯಾಂಕ್ ಚುನಾವಣೆ ರಾಜ್ಯದಲ್ಲಿ ಭಾರೀ ಸದ್ದು ಮಾಡಿತ್ತು. ಜಾರಕಿಹೊಳಿ ಬ್ರದರ್ಸ್​ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್​ ಮಧ್ಯೆಯ ಕದನ ಮೈತ್ರಿ ಸರ್ಕಾರವನ್ನೇ ಅಲುಗಾಡಿಸಿತ್ತು. ಈಗ ಅಂತಹುದೇ ಮತ್ತೊಂದು ಸನ್ನಿವೇಶ ಬೆಳಗಾವಿಯಲ್ಲಿ ನಿರ್ಮಾಣವಾಗಿದೆ. ಆದರೆ ಈ ಬಾರಿಯ ಕದನದಲ್ಲಿ ಜಾರಕಿಹೊಳಿ ಸಹೋದರರು ಬಹಳಷ್ಟು​ ಸಕ್ರಿಯರಾಗಿದ್ದು, ಲಕ್ಷ್ಮಿ ಹೆಬ್ಬಾಳ್ಕರ್​ ಮಾತ್ರ ಮೌನದಿಂದಿದ್ದಾರೆ.

ಬೆಳಗಾವಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ 14 ಮಂದಿ ಚುನಾಯಿತ ಸದಸ್ಯರು ಹಾಗೂ ಮೂವರು ನಾಮ ನಿರ್ದೇಶಿತ ಸದಸ್ಯರು ಪಾಲ್ಗೊಳ್ಳಲಿದ್ದಾರೆ.. ಈಗಾಗ್ಲೇ ನಾಮ ನಿರ್ದೇಶನ ಸದಸ್ಯರ ಆಯ್ಕೆಯಲ್ಲಿ ಸತೀಶ್​ ಜಾರಕಿಹೊಳಿ ಮೇಲುಗೈ ಸಾಧಿಸಿದ್ದಾರೆ. ಜಾರಕಿಹೊಳಿ ಇಬ್ಬರ ಬೆಂಬಲಿಗರನ್ನು ಸರ್ಕಾರ ನಾಮ ನಿರ್ದೇಶನ ಮಾಡಿ ಆದೇಶ ನೀಡಿದೆ. ಆದರೆ ಈ ಬಗ್ಗೆ ಮಾತನಾಡಿದ ಶಾಸಕ ಸತೀಶ್​ ಜಾರಕಿಹೊಳಿ, ಈ ಚುನಾವಣೆಯಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಪಿಎಲ್​ಡಿ ಬ್ಯಾಂಕ್​ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸಿದ ಲಕ್ಷ್ಮಿ ಹೆಬ್ಬಾಳ್ಕರ್​, ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಮಧ್ಯೆ ಲಕ್ಷ್ಮಿ ಹೆಬ್ಬಾಳ್ಕರ್​ ಪರಮಾಪ್ತ ಮಾಜಿ ಬುಡಾ ಅಧ್ಯಕ್ಷ ಯುವರಾಜ್ ಕದಂ ರಮೇಶ ಜಾರಕಿಹೊಳಿ ಜತೆಗೆ ಕಾಣಿಸಿಕೊಂಡಿದ್ದಾರೆ. ಇದು ಹೆಬ್ಬಾಳ್ಕರ್ ಬಣಕ್ಕೆ ತೀವ್ರ ಹಿನ್ನೆಡೆ ಉಂಟು ಮಾಡಿದೆ. ಇನ್ನು ಇಂದು ಚುನಾವಣೆ ನಡೆಯುತ್ತೋ ಅಥವಾ ಅವಿರೋಧವಾಗಿ ಆಯ್ಕೆಯಾಗುತ್ತಾರೋ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
First published:October 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading