News18 India World Cup 2019

ಆಪರೇಷನ್​​​ ಕಮಲ: ಸಮ್ಮಿಶ್ರ ಸರ್ಕಾರ ಅಸ್ಥಿರಕ್ಕೆ ಯತ್ನ, ಅತೃಪ್ತರ ಸೆಳೆಯಲು ಮತ್ತೆ ಬಿಎಸ್​ವೈ ಪಡೆ ಸಜ್ಜು..

ಸದ್ದಿಲ್ಲದೇ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಬೀಳಿಸಲು ಮುಂದಾಗಿರುವ ಬಿಜೆಪಿ, ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಅತೃಪ್ತ ಶಾಸಕರನ್ನು ಸೆಳೆಯುವ ಕಾರ್ಯಾಚರಣೆಗೆ ಕೈ ಹಾಕಲಿದೆ.

Ganesh Nachikethu
Updated:October 12, 2018, 1:59 PM IST
ಆಪರೇಷನ್​​​ ಕಮಲ: ಸಮ್ಮಿಶ್ರ ಸರ್ಕಾರ ಅಸ್ಥಿರಕ್ಕೆ ಯತ್ನ, ಅತೃಪ್ತರ ಸೆಳೆಯಲು ಮತ್ತೆ ಬಿಎಸ್​ವೈ ಪಡೆ ಸಜ್ಜು..
ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿಎಸ್​​ ಯಡಿಯೂರಪ್ಪ
Ganesh Nachikethu
Updated: October 12, 2018, 1:59 PM IST
ನ್ಯೂಸ್​​-18 ಕನ್ನಡ

ಬೆಂಗಳೂರು(ಅ.12): ಒಂದು ಬಾರಿ ಜೆಡಿಎಸ್​​-ಕಾಂಗ್ರೆಸ್​​ ಮೈತ್ರಿ ಸರ್ಕಾರವನ್ನ ಅಸ್ಥಿರಗೊಳಿಸಲು ಯತ್ನಿಸಿ ಮುಖಭಂಗಕ್ಕೊಳಗಾಗಿದ್ದ ಬಿಜೆಪಿ ಪಕ್ಷ ಮತ್ತೊಮ್ಮೆ ಆಪರೇಷನ್​​ ಕಮಲಕ್ಕೆ ಮುಂದಾಗಿದೆ. ಲೋಕಸಭಾ/ರಾಜ್ಯಸಭಾ ಉಪಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್​​, ಜೆಡಿಎಸ್​​ನಲ್ಲಿರುವ ಅತೃಪ್ತ ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ಸಮ್ಮಿಶ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಇತ್ತೀಚೆಗಿನ ಬಿಬಿಎಂಪಿ ಮೇಯರ್​​ ಚುನಾವಣೆಯಲ್ಲಿಯೂ ಅಧಿಕಾರ ಹಿಡಿಯಲು ಮಾಜಿ ಡಿಸಿಎಂ ಆರ್​​. ಅಶೋಕ್​​ ಅವರ ನೇತೃತ್ವದಲ್ಲಿ ಆಪರೇಷನ್​​ ಕಮಲಕ್ಕೆ ಮುಂದಾಗಿ ವಿಫಲವಾಗಿದ್ದರು. ಈ ಸಲ ಯಾವುದೇ ಕಾರಣಕ್ಕೂ ಆಪರೇಷನ್ ವಿಫಲವಾಗದಂತೆ ಅತ್ಯಂತ ಎಚ್ಚೆತ್ತುಕೊಂಡಿರುವ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೂರು ತಂಡಗಳನ್ನು ರಚಿಸಿದ್ಧಾರೆ.

ಸದ್ದಿಲ್ಲದೇ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಬೀಳಿಸಲು ಮುಂದಾಗಿರುವ ಬಿಜೆಪಿ ನಾಯಕರು, ಉಪಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಅತೃಪ್ತ ಶಾಸಕರನ್ನು ಸೆಳೆಯುವ ಕಾರ್ಯಾಚರಣೆಗೆ ಕೈ ಹಾಕಲಿದ್ದಾರೆ. ಆಪರೇಷಲ್​​ ಕಮಲದ ಭಾಗವಾಗಿಯೇ ರಾಮನಗರದಲ್ಲಿ ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪನವರ ಮಗ ಚಂದ್ರಶೇಖರ್, ಮಂಡ್ಯದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಡಾ.ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ಧಾರೆ.

ಕಳೆದ ಬಾರಿ ವಿಧಾನಸಭಾ ಚುನಾವಣೆಯ ಅತಂತ್ರ ಫಲಿತಾಂಶದ ಬಳಿಕ ಬಿಜೆಯಲ್ಲಿ ಆಪರೇಷನ್​ ಕಮಲಕ್ಕಾಗಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಮಾಜಿ ಸಂಸದ, ಶಾಸಕ ಶ್ರೀರಾಮುಲು ನೇತೃತ್ವದ ತಂಡ ಗೌಪ್ಯವಾಗಿ ಕಾಂಗ್ರೆಸ್​​-ಜೆಡಿಎಸ್​​ ಶಾಸಕರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಮಾಡಿತು. ಆದರೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಪ್ರವೇಶಿಸಿದ ಬಳಿಕ ಆಪರೇಷನ್​​ ಕಮಲಕ್ಕೆ ಹಿನ್ನಡೆಯಾಗಿತ್ತು.

ಮೂರು ತಂಡಗಳ ರಚನೆ:
Loading...

ಹಳೆ ಮೈಸೂರು ಭಾಗದ ಶಾಸಕರನ್ನು ಪಕ್ಷಕ್ಕೆ ಕರೆತರುವ ಹೊಣೆಗಾರಿಕೆ ಶಾಸಕ ಆರ್.ಅಶೋಕ್ ಹಾಗೂ ಸಿ.ಪಿ.ಯೋಗೇಶ್ವರ್ ಹೆಗಲಿಗೆ ನೀಡಲಾಗಿದೆ. ಮುಂಬೈ ಕರ್ನಾಟಕ ಭಾಗದ ಶಾಸಕರ ಆಪರೇಷನ್​​ ಕೆಲಸ ಪ್ರಭಾಕರ್ ಕೋರೆ ಹಾಗೂ ಶಾಸಕ ಉಮೇಶ್ ಕತ್ತಿಗೆ ವಹಿಸಲಾಗಿದೆ. ಅಲ್ಲದೇ ಹೈದರಾಬಾದ್ ಕರ್ನಾಟಕ ಭಾಗದ ಶಾಸಕರನ್ನು ಸೆಳೆಯುವ ಜವಾಬ್ದಾರಿಯನ್ನು ಎಂದಿನಂತೆ ಶಾಸಕ ಶ್ರೀರಾಮುಲು ಅವರಿಗೆ ವಹಿಸಲಾಗಿದೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ಬಿಜೆಪಿಗೆ ಅನಾದಿ ಕಾಲದಿಂದಲೂ ಲಿಂಗಾತ ಸಮುದಾಯವೇ ಬೆಂಬಲವಾಗಿ ನಿಂತಿದೆ. ಹೀಗಾಗಿ ಕೆಲವು ಲಿಂಗಾಯಿತ ಸಮುದಾಯದ ಶಾಸಕರನ್ನು ಯಡಿಯೂರಪ್ಪನವರೇ ಖುದ್ದು ಪಕ್ಷಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್​​-ಜೆಡಿಎಸ್​​ ಕೆಲ ಶಾಸಕರು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ಧಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಮೂರು ಲೋಕಸಭಾ/ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಾಗುತ್ತಿದೆ. ಈಗಾಗಲೇ ಮಂಡ್ಯ, ರಾಮನಗರದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರಕ್ಕೆ ಕಾಂಗ್ರೆಸ್​​ನಲ್ಲಿ ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಈ ಲಾಭವನ್ನು ಬಳಸಿಕೊಳ್ಳಲು ಮುಂದಾಗಿರುವ ಬಿಜೆಪಿ ನಾಯಕರು ಅತೃಪ್ತರಿಗೆ ಗಾಳ ಹಾಕುತ್ತಿದ್ಧಾರೆ.

ಸಕ್ಸಸ್​​ ಆಗಲಿದೆಯಾ ಆಪರೇಷನ್​​:

ಉಪಚುನಾವಣೆ ಫಲಿತಾಂಶದ ನಂತರದಲ್ಲಿ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟು ವಿಸ್ತರಣೆ ಆಗಲಿದೆ. ಕಾಂಗ್ರೆಸ್​​ ಪಾಲಿನ ಆರು, ಜೆಡಿಎಸ್​​ ಸೇರಿದ ಒಂದು ಮಂತ್ರಿ ಸ್ಥಾನಕ್ಕಾಗಿ ಶಾಸಕರ ಲಾಬಿ ಭಾರೀ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ಅರಣ್ಯ ಸಚಿವ ಶಂಕರ್​ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆಯಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನಲ್ಲೆಯಲ್ಲಿ ಶಂಕರ್​​ ಸೇರಿದಂತೆ ಸಚಿವ ಸ್ಥಾನದಿಂದ ವಂಚಿತರಾಗುವ ಅತೃಪ್ತರನ್ನು ಸೆಳೆಯುವುದೇ ಬಿಜೆಪಿ ಆಪರೇಷನ್​​ ಕಮಲದ ಹಿಂದಿನ ಅಸಲಿ ತಂತ್ರ ಎನ್ನುತ್ತಾರೆ ರಾಜಕೀಯ ತಜ್ಞರು.
---------
ನಾವು ಬಂದಿರೋದು ರಾಜಕಾರಣ ಮಾಡಲಿಕ್ಕೆ, ಸಮಾಜ ಸೇವೆಗಲ್ಲ: ಅನಂತ್​​ಕುಮಾರ್ ಹೆಗಡೆ
First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...