RSS ಕೆಲಸ ಸಮಾಜ ಸೇವೆಯೋ? ರಾಜಕೀಯವೋ? ಹಣ ಮಾಡುವುದೋ?; JDS ಪ್ರಶ್ನೆ

ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿ ಅವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಜೆಡಿಎಸ್ ಆರ್​ಎಸ್​ಎಸ್​ ಹಾಗೂ ಬಿಜೆಪಿ ನಾಯಕರಿಗೆ ಕುಟುಕಿದೆ.

ಎಚ್​ಡಿಕೆ ಮತ್ತು ಬಿಜೆಪಿ ನಾಯಕರು.

ಎಚ್​ಡಿಕೆ ಮತ್ತು ಬಿಜೆಪಿ ನಾಯಕರು.

  • Share this:
ಬೆಂಗಳೂರು: ಆರ್​ಎಸ್​ಎಸ್ (RSS)​ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former CM HD Kumaraswamy) ಅವರು ಟೀಕಿಸಿ, ಕೆಲವು ಪ್ರಶ್ನೆಗಳನ್ನು ಎತ್ತಿದ್ದರು. ಇದೀಗ ಮುಂದುವರೆದ ಭಾಗವಾಗಿ ಜೆಡಿಎಸ್ (JDS) ಆರ್​ಎಸ್​ಎಸ್​ ಬಗ್ಗೆ ಹೆಚ್ಡಿಕೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವ ಎದೆಗಾರಿಕೆ ಏಕೆ ತೋರಲಿಲ್ಲ ಎಂದು ಕೇಳಿದೆ. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆರ್.ಎಸ್.ಎಸ್ ಬಗ್ಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಅವು ಸತ್ಯವೂ, ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು. ಇವುಗಳಲ್ಲಿ ಐಎಎಸ್ ಅಧಿಕಾರಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಿ ಕಳಿಸಿದೆ ಎನ್ನುವುದೂ ಒಂದು ಅಂಶ ಎಂದು ಜೆಡಿಎಸ್​ ಟ್ವೀಟ್​ ಮೂಲಕ  ಹೇಳಿದೆ.

ಆರ್.ಎಸ್.ಎಸ್ ಎನ್ನುವುದು ಅಧಿಕೃತ ಸಂಸ್ಥೆಯೇ? ಅದು ಎಲ್ಲಿ? ಯಾವಾಗ ನೋಂದಣಿ ಆಗಿದೆ? ಅದರ ಅಧಿಕೃತ ಕಚೇರಿ ಎಲ್ಲಿದೆ? ಅದರ ಕೆಲಸ ಸಮಾಜ ಸೇವೆಯೋ ಅಥವಾ ರಾಜಕೀಯವೋ? ಅಥವಾ ಹಣ ಮಾಡುವುದೋ? ಎಂದು ಜೆಡಿಎಸ್​ ನೇರವಾಗಿ ಪ್ರಶ್ನೆ ಮಾಡಿದೆ.

ಗುರುದಕ್ಷಣೆ ಸೇರಿದಂತೆ ದೇಶ- ವಿದೇಶಗಳಿಂದ ಕೋಟ್ಯಂತರ ರೂಪಾಯಿ ದೇಣಿಗೆ ಆರ್​ಎಸ್​ಎಸ್​ ಸಂಸ್ಥೆಗೆ ಬರುತ್ತಿದೆ. ಅದಕ್ಕೆ ಸಂಘ ಲೆಕ್ಕ ಕೊಟ್ಟಿದಿಯಾ? ತನ್ನ ವಹಿವಾಟಿನ ಬಗ್ಗೆ ಬ್ಯಾಲನ್ಸ್ ಶೀಟ್ ಇಟ್ಟುಕೊಂಡಿದೆಯಾ? ಅದನ್ನು ಪರಿಶೀಲನೆ ಮಾಡಿದ ಲೆಕ್ಕ ಪರಿಶೋಧಕರು ಯಾರು? ಶಾಲೆಗಳಲ್ಲಿ ಬಾಲ ಸ್ವಯಂ ಸೇವಕರ ಬ್ರೈನ್ ವಾಶ್ ಮಾಡುತ್ತಿರುವುದು ಸುಳ್ಳೇ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.



ಶಿಕ್ಷಣ ಕೊಡುವ ನೆಪದಲ್ಲಿ ಮತಾಂಧತೆಯ ವಿಷಪ್ರಾಶನ ಮಾಡುತ್ತಿರುವುದು ಪೊಳ್ಳಾ?
ಸಂಘದ ಶಾಖೆಗಳಲ್ಲಿ ತ್ರಿಶೂಲ, ಖಡ್ಗದಂಥ ಆಯುಧಗಳನ್ನು ಇಡುವುದು ಅಕ್ರಮ. ಇದಕ್ಕೆ ಪರವಾನಗಿ ಪಡೆಯಲಾಗಿದೆಯಾ? ಇಂಥ ಹಲವು ಪ್ರಶ್ನೆಗಳನ್ನು ಕುಮಾರಸ್ವಾಮಿ ಅವರು ಕೇಳಿದ್ದರು. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಎದೆಗಾರಿಕೆಯನ್ನು ಬಿಜೆಪಿ ತೋರಲಿಲ್ಲ, ಯಾಕೆ? ಪಟ್ಟಿ ಮಾಡಿ ಕುಮಾರಸ್ವಾಮಿ ಅವರನ್ನು ಕೆಣಕಿರುವ ಬಿಜೆಪಿ, ಸಂಘದ ಕಾನೂನು- ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಯಾಕೆ ಮೌನ ವಹಿಸಿದೆ? ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಹಾಗಾದರೆ, ಆರ್ ಎಸ್ ಎಸ್ ಅನ್ನು ಏನೆಂದು ಕರೆಯಬೇಕು? ಎಂದು ಕಟುವಾಗಿ ಹೇಳಿದೆ.

ಮಾಜಿ ಮುಖ್ಯಮಂತ್ರಿಗಳು ಎತ್ತಿದ್ದು ವೈಯಕ್ತಿಕ ವಿಷಯಗಳನ್ನೆಲ್ಲ, ಆದರೆ ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ. ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿ ಅವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಜೆಡಿಎಸ್ ಆರ್​ಎಸ್​ಎಸ್​ ಹಾಗೂ ಬಿಜೆಪಿ ನಾಯಕರಿಗೆ ಕುಟುಕಿದೆ.

ಇದನ್ನು ಓದಿ: K Sudhakar: ನೂರು ಜನ ಅಡ್ಡ ಬಂದರೂ ಕೋಮುಲ್ ವಿಭಜಿಸುವುದು ಖಚಿತ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಇದೇ ವಿಷಯವಾಗಿ ಎರಡು ದಿನಗಳ ಹಿಂದೆ ಕೂಡ ಟ್ವೀಟ್ ಮಾಡಿದ್ದ ಜೆಡಿಎಸ್,  "ಸ್ವಯಂ ಘೋಷಿತ ಸೇವಾ ಸಂಸ್ಥೆ ಅರ್ ಎಸ್ ಎಸ್ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರ ಹೇಳುವ ಬದಲು ಸತ್ಯವ್ನನು ದಾಟಿಸುವ ಹುನ್ನಾರದೊಂದಿಗೆ ಬಿಜೆಪಿಯು ದಾಸರ ಪದಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದೆ. ಸಮಾಜದ ಉದ್ಧಾರಕ್ಕಾಗಿ ದಾಸಶ್ರೇಷ್ಠರು ಬರೆದ ಕೃತಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹೀನ ಕೆಲಸವನ್ನು ಬಿಜೆಪಿ ಮಾಡುತ್ತಿದೆ. "ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎನ್ನುವುದು ಬಿಜೆಪಿಯ ಎಲುಬಿಲ್ಲದ ನಾಲಿಗೆಯ ಸಂಸ್ಕಾರವನ್ನು ಸಾರುತ್ತಿದೆ" ಎಂದು ಕಿಡಿಕಾರಿತ್ತಯ.
Published by:HR Ramesh
First published: