ಕಾರ್ಯಕ್ರಮ ರದ್ದು ಮಾಡುವ ಪ್ರಶ್ನೆಯೇ ಇಲ್ಲ, ಸಿಎಂಗೆ ಮತ್ತೆ ಪತ್ರ ಬರೆಯುತ್ತೇನೆ; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ 

ಡಿ ಕೆ ಶಿವಕುಮಾರ್ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಎಂಎಲ್​ಸಿ ಚುನಾವಣೆ ಆದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಕೊರೋನಾ ವಿಚಾರದಲ್ಲಿ ಸರ್ಕಾರ ನೀಡಿರೋದು ತಲುಪಿದೆಯೋ ಇಲ್ಲವೋ, ನಾವು ಏನು ಕೆಲಸ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳುತ್ತೇನೆ. ಜನಗಳ ದನಿಯಾಗಿ ಕೆಲಸ ಮಾಡುತ್ತೇವೆ ಎಂದರು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

 • Share this:
  ಬೆಂಗಳೂರು: ಮೇ 12ರಂದು ಸೋನಿಯಾ ಗಾಂಧಿಯವರು ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ನೇಮಕ ಮಾಡಿದ ನಂತರ ಪರಿಸ್ಥಿತಿ ಅರಿತು ಕೆಲಸ ಮಾಡ್ತಾ ಇದಿನಿ. ಯಾರೇ ಅಧ್ಯಕ್ಷರಾದರೂ ಸಾಂಪ್ರದಾಯಿಕ ಕಾರ್ಯಕ್ರಮ ಮಾಡೋದು ಪದ್ದತಿ. ಅಧ್ಯಕ್ಷ ಸ್ಥಾನ ನೇಮಕ ಮಾಡಿದ ಬಳಿಕ ನನ್ನ ಕೆಲಸ ಮಾಡುತ್ತಾ ಇದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಹಿರಿಯರ ಆಶೀರ್ವಾದ ಹಾಗೂ ಹಿಂದಿನ ಅಧ್ಯಕ್ಷರಿಗೆ ಗೌರವ ಸಲ್ಲಿಸಿ ಧ್ವಜ ಹಸ್ತಾಂತರ ಮಾಡೋದು ಸಂಪ್ರದಾಯ.  ಆ ಕ್ಷಣಕ್ಕೆ ಅನೇಕ ಅಡ್ಡಿಗಳು ಬರ್ತಾ ಇದೆ. ಕೋವಿಡ್ ಕಾರಣದಿಂದ ಮೂರು ಬಾರಿ ಮುಹೂರ್ತ ನಿಗದಿ ಆಗಿತ್ತು. ಮುಖ್ಯಮಂತ್ರಿಗಳಿಗೆ ನಾನೇ ಕರೆ ಮಾಡಿದ್ದೆ. ನಮ್ಮ ಚೀಫ್ ವಿಪ್ ನಾರಾಯಣ ಸ್ವಾಮಿ ಅವರನ್ನು ಕೂಡ ಕಳುಹಿಸಿ ಅನುಮತಿ ಕೇಳಿದ್ದೆ. ಸಿಎಂ ಅವರ ಮೌಖಿಕ ಆದೇಶದ ಮೇರೆಗೆ ಭಾನುವಾರ ಕಾರ್ಯಕ್ರಮ ಮಾಡಲು ನಿರ್ಧರಿಸಿದ್ದೆವು. ಆದರೆ ಭಾನುವಾರವೇ ರಾಜ್ಯದಲ್ಲಿ ವಿಶೇಷವಾಗಿ ಕರ್ಫ್ಯೂ ಘೋಷಣೆ ಮಾಡಿದರು ಎಂದರು ಹೇಳಿದರು.

  ಸುಮಾರು 7 ಸಾವಿರ ಸ್ಥಳಗಳಲ್ಲಿ ಕಾರ್ಯಕ್ರಮ ನೇರಪ್ರಸಾರ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅನೇಕ ಕಡೆ ಟಿವಿ ಹಾಕಿ ರೆಡಿ ಆಗಿದ್ದೆವು. ಅವರ ಮೌಖಿಕ ಅನುಮತಿ ಮೇರೆಗೆ ನಾವು ಕಾರ್ಯಕ್ರಮ ನಿಗದಿಯಾಗಿತ್ತು. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜಕೀಯ ಕಾರ್ಯಕ್ರಮ‌ ಮಾಡಲು ಅವಕಾಶ ಇಲ್ಲ ಅಂತಾ ಅಧಿಕಾರಿಗಳ ಮೂಲಕ ಹೇಳಿದ್ದಾರೆ. ನಾನು ಯಾವ ರೀತಿ ಕೆಲಸ ಮಾಡ್ತಾ ಇದ್ದೇವೆ ಅನ್ನೋದನ್ನ ಹೇಳಿದ್ದೆ.  ಸರ್ಕಾರಕ್ಕೆ ಕನ್ನಡದ ಜೊತೆ ಇಂಗ್ಲಿಷ್ ನಲ್ಲೂ ಪತ್ರ ಬರೆದಿದ್ದೆ. ಇಲ್ಲೇ ಕಾಂಗ್ರೆಸ್ ಕಚೇರಿ ಎದುರೇ ನಮ್ಮ ಕೆಲ ಹಿರಿಯ ನಾಯಕರ ಜೊತೆ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೆ.  ಕೇವಲ 150 ಜನಕ್ಕೆ ಮಾತ್ರ ಅನುಮತಿ ಕೇಳಿದ್ದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮಾಡ್ತಿನಿ ಅಂತಾ ಹೇಳಿದ್ದೆವು. ಯಡಿಯೂರಪ್ಪನವರು ನುಡಿದಂತೆ ನಡೆಯುತ್ತಾರೆ, ಸಣ್ಣ ರಾಜಕಾರಣ ಮಾಡೋಲ್ಲ ಅಂತಾ ತಿಳಿದುಕೊಂಡಿದ್ದೆ. ಕೆಲವರು ಯಾರ್ ಯಾರ್ ಹೋದಾಗ ಏನೇನಾಯ್ತು, ಕಾರ್ಯಕ್ರಮ ಆಯ್ತು ಅಂತಾ ಗೊತ್ತಿದೆ. ನಮ್ಮ ಅಣ್ಣಂದಿರು ಅವರು ಎಂದು ಶ್ರೀರಾಮುಲುಗೆ ಪರೋಕ್ಷವಾಗಿ ಟಾಂಗ್ ನೀಡಿದರು.

  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಒಂದು ದಿನ ದಾಖಲೆ ಆಗುವಂತಹದ್ದು. ನಾವು ವಿಧಾನ ಸೌಧದಲ್ಲಿ ಸಿಎಲ್​ಪಿ ಮೀಟಿಂಗ್ ಮಾಡ್ತೀವಿ ಅಂದ್ರು ಅನುಮತಿ ಕೊಟ್ಟಿಲ್ಲ. ನಾವು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಬೇಕಾಯ್ತು. ಮದುವೆಗೆ ಕೇವಲ 50 ಜನ, ಅಂತ್ಯ ಸಂಸ್ಕಾರಕ್ಕೆ ಕೇವಲ 20 ಜನಕ್ಕೆ ಅನುಮತಿ ಕೊಡ್ತೀವಿ ಅಂತಾರೆ. ನಾವು ಕಾರ್ಯಕ್ರಮ ರದ್ದು ಮಾಡೋ ಪ್ರಶ್ನೆಯೇ ಇಲ್ಲ. ಸಿಎಂಗೆ ಮತ್ತೆ ಪತ್ರ ಬರೆಯುತ್ತೇನೆ. ಇದು ಸರಿಯೋ ತಪ್ಪೋ ಅನ್ನೋದನ್ನು ಹೇಳುವ ಬದಲು ನೀವು ಮಾಧ್ಯಮದವರು ಹೇಳಬೇಕು. ನಿಮ್ಮನ್ನ ಸಿಎಂ ಮನೆಯಿಂದ ರಸ್ತೆಗೆ ಹಾಕಿದರು, ಅಸೆಂಬ್ಲಿಯಿಂದ ಹೊರ ಹಾಕಿದರೂ ನೀವು ಮಾತಾಡಿಲ್ಲ. ನೀವು ಸಂವಿಧಾನದ ಅಂಗ ಎಂದು ಮಾಧ್ಯಮದವರಿಗೆ ಚಾಟಿ ಬೀಸಿದರು.

  ಇದನ್ನು ಓದಿ: ಕಾನೂನು ಪ್ರಕಾರ ಹೇಗೆ ಕಾರ್ಯಕ್ರಮ ಮಾಡಬೇಕೋ ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಸಮಾರಂಭ ಮಾಡುತ್ತೇವೆ; ಸಿದ್ದರಾಮಯ್ಯ

  ಡಿ ಕೆ ಶಿವಕುಮಾರ್ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಎಂಎಲ್​ಸಿ ಚುನಾವಣೆ ಆದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಕೊರೋನಾ ವಿಚಾರದಲ್ಲಿ ಸರ್ಕಾರ ನೀಡಿರೋದು ತಲುಪಿದೆಯೋ ಇಲ್ಲವೋ, ನಾವು ಏನು ಕೆಲಸ ಮಾಡಬೇಕು ಅನ್ನೋದನ್ನು ತಿಳಿದುಕೊಳ್ಳುತ್ತೇನೆ. ಜನಗಳ ದನಿಯಾಗಿ ಕೆಲಸ ಮಾಡುತ್ತೇವೆ ಎಂದರು.

  ನನ್ನ ಬಿಜೆಪಿ ಸ್ನೇಹಿತರಿಗೆ ಹೇಳಲು ಬಯಸುತ್ತೇನೆ. ನಾವು ವಂದೇ ಮಾತರಂ ಅಂತಾ ಹಾಡಲು ಹೊರಟಿದ್ವಿ. ಸಂವಿಧಾನ ಓದಲು ಹೊರಟಿದ್ವಿ. ನೀವು ಅನುಮತಿ ಕೊಟ್ಟಾಗಲೇ ನಾವು ಮಾತಾಡ್ತಿನಿ. ಪ್ರತಿ ದಿನವು ಶುಭ ದಿನವೇ. ಶುಭ ದಿನ ಶುಭ ಘಳಿಗೆಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ಮತ್ತೆ ಪತ್ರ ಬರೆಯುತ್ತೇನೆ. ನೀವು ಯಾವಾಗ ಅನುಮತಿ ಕೊಡ್ತಿರೋ ಆ ದಿನವೇ ಕಾರ್ಯಕ್ರಮ ಮಾಡ್ತಿನಿ ಎಂದು ಹೇಳಿದರು.
  First published: