ಕೊಡಗಿನಲ್ಲಿ ವ್ಯಾಪಕ ಮಳೆ; ಕೆಆರ್​ಎಸ್​ ಜಲಾನಯನ ಪ್ರದೇಶದಲ್ಲಿ ಮತ್ತೆ ಪ್ರವಾಹ ಭೀತಿ; ನದಿ ಸಮೀಪ ಸುಳಿಯದಂತೆ ಜನರಿಗೆ ಎಚ್ಚರಿಕೆ

ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮಂಗಳವಾರ ಸಂಜೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯ ಕೆಳಭಾಗದ ಕಾವೇರಿ‌ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಜನ ಜಾನುವಾರುಗಳು ನದಿ ದಂಡೆಯ ಬಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.

HR Ramesh | news18-kannada
Updated:October 16, 2019, 7:28 AM IST
ಕೊಡಗಿನಲ್ಲಿ ವ್ಯಾಪಕ ಮಳೆ; ಕೆಆರ್​ಎಸ್​ ಜಲಾನಯನ ಪ್ರದೇಶದಲ್ಲಿ ಮತ್ತೆ ಪ್ರವಾಹ ಭೀತಿ; ನದಿ ಸಮೀಪ ಸುಳಿಯದಂತೆ ಜನರಿಗೆ ಎಚ್ಚರಿಕೆ
ಕೆಆರ್​ಎಸ್​ ಡ್ಯಾಂ
HR Ramesh | news18-kannada
Updated: October 16, 2019, 7:28 AM IST
ಮಂಡ್ಯ: ಸಕ್ಕರೆ ನಾಡು ಮಂಡ್ಯದ ಜೀವನಾಡಿ ಕೆಆರ್​ಎಸ್​ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. ಕೊಡಗಿನಲ್ಲಿ ಮತ್ತೆ ಜೋರು ಮಳೆಯಾಗುತ್ತಿದ್ದು,  ಜಲಾಶಯಕ್ಕೆ ಹೆಚ್ಚಿನ‌ ಪ್ರಮಾಣದ ಒಳಹರಿವು ಹರಿದು ಬರುವ ಸಾಧ್ಯತೆ ಇದೆ. ಇದರಿಂದಾಗಿ ಮತ್ತೆ ಕಾವೇರಿ ಜಲಾನಯನ ಪ್ರದೇಶಗಳು ಸೇರಿದಂತೆ ಕೆಆರ್​ಎಸ್ ಜಲಾನಯನ ಪ್ರದೇಶಗಳ ಜನರಿಗೆ ಪ್ರವಾಹ ಭೀತಿ ಎದುರಾಗಿದೆ.

ಕೆಆರ್​ಎಸ್​ ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. ಆಗಸ್ಟ್​ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಿನ ಪ್ರಮಾಣದ ಒಳಹರಿವು ಜಲಾಶಯಕ್ಕೆ ಹರಿದು ಬಂದಿದ್ದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಆ ವೇಳೆ ಜಲಾಶಯದಿಂದ ಸುಮಾರು 1.50 ಲಕ್ಷ ಕ್ಯೂಸೆಕ್​ ನೀರನ್ನು ನದಿಗೆ ಹರಿಯಬಿಡಲಾಗಿತ್ತು. ಇದರಿಂದ ಜಲಾಶಯದ ಕೆಳಭಾಗದಲ್ಲಿ ಪ್ರವಾಹ ಉಂಟಾಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಇದೀಗ ಕೆ.ಆರ್.ಎಸ್. ಜಲಾಶಯದ ಮೇಲ್ಭಾಗದಲ್ಲಿ ಮತ್ತೆ ವ್ಯಾಪಕ ಮಳೆಯಾಗುತ್ತಿದ್ದು, ಕೆಆರ್​ಎಸ್​ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಇದರಿಂದ ಮತ್ತೆ ಇದೀಗ ಜಲಾಶಯದ ಕೆಳಭಾಗದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಕೊಡಗಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಮಂಗಳವಾರ ಸಂಜೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಲಾಶಯ ಕೆಳಭಾಗದ ಕಾವೇರಿ‌ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಜನ ಜಾನುವಾರುಗಳು ನದಿ ದಂಡೆಯ ಬಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಜಲಾಶಯದಿಂದ ಸುಮಾರು 10 ಸಾವಿರದಿಂದ 30 ಸಾವಿರದವರೆಗೆ ನೀರನ್ನು ಹರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಈಗಾಗಲೇ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಕಾರಣ ಹೆಚ್ಚಿನ‌ ಪ್ರಮಾಣದ ನೀರು ಹರಿದು ಬಂದರೆ ಅಷ್ಟು ಪ್ರಮಾಣದ ನೀರನ್ನು ಹೊರಬಿಡಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಸಹಜವಾಗಿ ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿಯ ಆತಂಕ ಎದುರಾಗಿದೆ. ಸದ್ಯ ನದಿ ದಂಡೆಯಲ್ಲಿರುವ ಪ್ರಸಿದ್ದ ರಂಗನತಿಟ್ಟು ಪಕ್ಷಿಧಾಮ ಪ್ರವಾಹಕ್ಕೆ ತುತ್ತಾಗಲಿದ್ದು ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರ ಪ್ರವೇಶ ಮತ್ತು ಬೋಟಿಂಗ್​ ಅನ್ನು ನಿಷೇಧಿಸಲಾಗಿದೆ.

ಇದನ್ನು ಓದಿ: ಕೆ.ಆರ್​.ಎಸ್ ಜಲಾಶಯ​ ಭರ್ತಿ, 2ಲಕ್ಷ ಕ್ಯೂಸೆಕ್​ ನೀರು ಬಿಡುವ ಸಾಧ್ಯತೆ; ಪ್ರವಾಹ ಭೀತಿಯಲ್ಲಿ ಜನರು

  • ವರದಿ: ರಾಘವೇಂದ್ರ ಗಂಜಾಮ್ 


Loading...

First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...