ಹಕ್ಕ-ಬುಕ್ಕರ ಗುರಿ ಕೇವಲ ಮುಸ್ಲಿಮರಲ್ಲ, ಹಿಂದೂಗಳು ಇದ್ದಾರೆ; ಸಿಎಎ ವಿರುದ್ಧ ಎಚ್​ಡಿಕೆ ಮತ್ತೆ ಗರಂ

ಸಾಲ ಮನ್ನಾ ಮಾಡಿದ್ದೇನೆ, ಆದ್ರೆ ಜನರು ಕೈ ಹಿಡಿದಿಲ್ಲ. ನಾನು ಬಂದಾಗ ನಮ್ಮದು ಸಾಲ ಮನ್ನಾ ಆಗಿದೆ, ಈ ಸಲ ಕೈ ಹಿಡಿತೀವಿ ಅಂದ್ರು. ಆದರೆ ಈ ರೀತಿ ಮಾಡಿರೋದನ್ನು ಬಸವಣ್ಣ ಮೆಚ್ಚುತ್ತಾನಾ? ಇದೆಲ್ಲವನ್ನೂ ಹೇಳೋಣ, ಮತ್ತೆ ಹೋರಾಡೋಕೆ ನಾನು ಸಿದ್ದ ಇದ್ದೇನೆ. ರಾಜಕೀಯದಿಂದ ದೂರ ಉಳಿಯಲ್ಲ. ಹೋರಾಟ ಮಾಡೋಣ ಎಂದು ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ.

  • Share this:
ಬೆಂಗಳೂರು: ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ದೇಶದಲ್ಲಿ ಹೋರಾಟ ನಡೆಯುತ್ತಿದೆ. ದೇಶ ಮತ್ತು ರಾಜ್ಯದಲ್ಲಿ ಇವತ್ತು ಹಲವು ರೀತಿಯ ಸಮಸ್ಯೆ ಕಾಣುತ್ತಿದ್ದೇವೆ.  ಇಂದಿನ ಸಮಾವೇಶದಲ್ಲಿ ಪಕ್ಷ 3 ನಿರ್ಣಯಗಳನ್ನು ತೆಗೆದುಕೊಂಡಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಎಚ್​ಡಿಕೆ ಅವರು, ನಮ್ಮ ಪಕ್ಷದ ಕಾರ್ಯಕರ್ತರ ಎದೆಗುಂದಬೇಕಾಗಿಲ್ಲ. ಹಿಂದೆ 1987ರಲ್ಲಿ ದೇವೇಗೌಡರು ಕನಕಪುರ ಮತ್ತು ಹೊಳೆನರಸೀಪುರ ಎರಡು ಕಡೆ ಸೋತ್ತಿದ್ರು. 2004 ರಲ್ಲಿ ಪಕ್ಷ ಸುಮಾರು 70 ಸ್ಥಾನ ಗೆದಿದೆ. ಹಾಗಾಗಿ ಪಕ್ಷ ಕಟ್ಟಿ. ನಿಮ್ಮ ಜೊತೆಗೆ ನಾವು ಇದ್ದೇವೆ. ನಮ್ಮ ಜೊತೆಗೆ ನೀವು ಬನ್ನಿ.  ಅಂದು ನಮ್ಮ ಪಕ್ಷಕ್ಕೆ ಬಂದಿದ್ದು ಕೇವಲ ಎರಡು ಸೀಟುಗಳು. ಆದರೆ ದೇವೇಗೌಡರು ತಮ್ಮ ನಿರಂತರ ಹೋರಾಟದಿಂದ ಪಕ್ಷವನ್ನು ಅಧಿಕಾರಕ್ಕೆ ತಂದರು. ರಾಜ್ಯದ ಮುಖ್ಯಮಂತ್ರಿಯಾಗಿ ದೇಶದ ಪ್ರಧಾನಿಯಾಗಿರುವ ಉದಾಹರಣೆ ನಮ್ಮ ಮುಂದೆ ಇದೆ ಎಂದು ಹೇಳುವ ಮೂಲಕ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದರು.

ನೆಹರು ಅವರ ಬಗ್ಗೆ ಅಮಿತ್ ಶಾ ಚರ್ಚೆ ಮಾಡುತ್ತಿದ್ದಾರೆ. ಸ್ವತಂತ್ರ್ಯ ಪೂರ್ವ ಮತ್ತು ನಂತರ ತೆಗೆದುಕೊಂಡ ನಿರ್ಣಯ ಕೇವಲ ನೆಹರು ಅವರ ನಿರ್ಣಯ ಅಲ್ಲ. ನೆಹರು ಆಡಳಿತ ಮಾಡುತ್ತಿದ್ದಾಗ ಅಮಿತ್ ಶಾ ಹುಟ್ಟೆ ಇರಲಿಲ್ಲ. ನೆಹರು ಸತ್ತ ಬಳಿಕ ಅಮಿತ್ ಶಾ ಹುಟ್ಟಿರುವುದು. ಅಮಿತ್ ಶಾ ನಮ್ಮ ರಾಜ್ಯಕ್ಕೆ ಬಂದಾಗ ನೆರೆ ಬಗ್ಗೆ ಮಾತನಾಡಲಿಲ್ಲ. ನಿರುದ್ಯೋಗ ಹಾಗೂ ರೈತರ ಸಮಸ್ಯೆ ಬಗ್ಗೆ ಏನನ್ನು ಮಾತನಾಡಲಿಲ್ಲ.  ಎಂದು ಅಮಿತ್ ಶಾ ವಿರುದ್ಧ ಎಚ್​ಡಿಕೆ ಹರಿಹಾಯ್ದರು.

ನಮ್ಮ ತಂದೆ ಪ್ರಧಾನಿ ಆದ ಸಂದರ್ಭದಲ್ಲಿ ಆಗಲಿ, ನಾನು ಈ ಬಾರಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಆಗಲಿ, ಕಾಂಗ್ರೆಸ್ ಬಳಿ ನಾವು ಹೊಗಿರಲಿಲ್ಲ. ಅವರೆ ನಮ್ಮ ಮನೆ ಬಳಿ ಬಂದು ಅಧಿಕಾರ ನೀಡಿದರು. ಯಡಿಯೂರಪ್ಪ ಅವರನ್ನು ಮಂತ್ರಿ ಮಾಡಲು ಶೋಭಾ ಕರಂದ್ಲಾಜೆ ನನ್ನ ಬಳಿ ಬಂದಿದ್ರು. ನಾನು ಅಂದು ಯಡಿಯೂರಪ್ಪ ಅವರಿಗೆ ನಮ್ಮ ಪಕ್ಷಕ್ಕೆ ಕರೆದುಕೊಂಡಿದ್ದರೆ ಇಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ನಾನು ಬಲಿಕೊಡುವುದಿಲ್ಲ. ನಮ್ಮ ತಂದೆಯವರು ರಾಜಕೀಯಕ್ಕೆ ಬಂದ ದಿನದಿಂದ ಇವತ್ತಿನವರೆಗೂ ಅಧಿಕಾರಕ್ಕಾಗಿ ನಮ್ಮ ಕುಟುಂಬದವರು ಬೇರೆ ಪಕ್ಷದವರ ಮನೆ ಬಾಗಿಲಿಗೆ ಹೊಗಿಲ್ಲ ಎಂದು ಹೇಳಿದರು.

ಕಾರ್ಖಾಯನೆ ಮಾಲೀಕರು ರೈತರು ಬೆಳೆದ ಕಬ್ಬು ಕಟಾವು ಮಾಡುತ್ತಿಲ್ಲ. ಅನೇಕ ಕಬ್ಬು ಬೆಳೆಗಾರರು ಆತಂಕದಲ್ಲಿದ್ದಾರೆ.  ಯಡಿಯೂರಪ್ಪನವರೇ ಸಾಲ ಮನ್ನಾ ಅಂತೂ ಮಾಡಲಿಲ್ಲ. ಆದರೆ ನಿಮ್ಮ ಯೋಗ್ಯತೆಗೆ ಸಾಲ ವಸೂಲಿ ಮಾಡುವಂತೆ ಆದೇಶ ಬೇರೆ ಮಾಡ್ತಿರಾ? ಸಿಎಎ ಹಾಗೂ ಎನ್.ಆರ್.ಸಿ ಕಾಯ್ದೆಯ ಪರಿಣಾಮ ಬಾಂಗ್ಲಾದೇಶದ ವಾಸಿಗಳನ್ನು ಹೊರದಬ್ಬುತ್ತೇವೆ ಅಂತಾ ಹೇಳಿ, ಕೆ.ಆರ್.ಪುರಂ ಸೇರಿದಂತೆ ಬೆಂಗಳೂರಿನ ಅನೇಕ ಭಾಗದ ಗುಡಿಸಲನ್ನೂ ಧ್ವಂಸಗೊಳಿಸಿರುವ ಪರಿಣಾಮ ಇಂದು ಎರಡು ಹೊತ್ತು ಊಟಕ್ಕೆ ಗತಿ ಇಲ್ಲದಂತೆ ಆ ಕುಟುಂಬಗಳು ಬೀದಿಗೆ ಬಿದ್ದಿವೆ. ನಮ್ಮ ಪಕ್ಷದ ಕಾರ್ಯರ್ತರು ಮುಖಂಡರಲ್ಲಿ ಮನವಿ ಮಾಡ್ತಿನಿ. ಹೋಗಿ ಬೀದಿಗೆ ಬಿದ್ದಿರುವ ಕುಟುಂಬಗಳ ಪರವಾಗಿ ಹೋರಾಟ ಮಾಡಿ. ಪ್ರತಿಭಟನೆ ಮಾಡಿ. ಈ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಅಷ್ಟೇ ಅಲ್ಲ. ಹಿಂದು ಧರ್ಮದವರಿಗೂ ಸಮಸ್ಯೆ ಆಗಲಿದೆ. ಹಕ್ಕಬುಕ್ಕರ ಟಾರ್ಗೆಟ್ ಕೇವಲ ಮುಸ್ಲಿಮರಲ್ಲ. ಹಿಂದೂಗಳು ಇದ್ದಾರೆ ಎಂದು ಮೋದಿ - ಶಾರನ್ನು ಹಕ್ಕ ಬಕ್ಕ ಎಂದು ಜರಿದರು.

ಇದನ್ನು ಓದಿ: ಬಳ್ಳಾರಿಯ ವಿಮ್ಸ್ ನಲ್ಲಿ ಅಮಾನವೀಯ ಘಟನೆ; ವೀಲ್ ಚೇರ್ ನೀಡದ್ದಕ್ಕೆ ಮಗಳನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ

ಮುಂದಿನ ಚುನಾವಣೆ ಯಾವಾಗ ಬೇಕಾದರೂ ಆಗಲಿ. ನಿಮ್ಮ ಜೊತೆ ಹಳ್ಳಿ ಹಳ್ಳಿಗೆ ಬರೋದಕ್ಕೆ ನಾನು ರೆಡಿ ಇದ್ದೇನೆ. ಲಿಂಗಾಯತರ ಸಮಾಜ ನನ್ನನ್ನ ಕೈಬಿಡ್ತೀರಾ ಎಂದು ಕೇಳ್ತೀರಾ ಯಡಿಯೂರಪ್ಪನವರೇ. ನಿಮ್ಮ ಯೋಗ್ಯತೆಗೆ ರೈತರ ಸಾಲ ವಾಪಸ್ ತಗೊಳಿ ಅಂತಾ ಆದೇಶ ಹೊರಡಿಸುತ್ತಿರಾ. ಇವತ್ತು ಹಳ್ಳಿ ಹಳ್ಳಿಗೆ ಹೋಗಿ ಕೇಳಿ, ನಿಮ್ಮ ಬಗ್ಗೆ ಏನ್ ಹೇಳ್ತಾರೆ ಕೇಳಿ ನೋಡಿ. ಸಾಲ ಮನ್ನಾ ಮಾಡಿದ್ದೇನೆ, ಆದ್ರೆ ಜನರು ಕೈ ಹಿಡಿದಿಲ್ಲ. ನಾನು ಬಂದಾಗ ನಮ್ಮದು ಸಾಲ ಮನ್ನಾ ಆಗಿದೆ, ಈ ಸಲ ಕೈ ಹಿಡಿತೀವಿ ಅಂದ್ರು. ಆದರೆ ಈ ರೀತಿ ಮಾಡಿರೋದನ್ನು ಬಸವಣ್ಣ ಮೆಚ್ಚುತ್ತಾನಾ? ಇದೆಲ್ಲವನ್ನೂ ಹೇಳೋಣ, ಮತ್ತೆ ಹೋರಾಡೋಕೆ ನಾನು ಸಿದ್ದ ಇದ್ದೇನೆ. ರಾಜಕೀಯದಿಂದ ದೂರ ಉಳಿಯಲ್ಲ. ಹೋರಾಟ ಮಾಡೋಣ. ಪಕ್ಷದಲ್ಲಿ ಉಂಡು, ತಿಂದು ಹೋದವರು ಪಕ್ಷದ ಬಗ್ಗೆ ಲಘುವಾಗಿ‌ ಮಾತನಾಡಬೇಡಿ ಎಂದು ಹೇಳಿದರು.
First published: