ಬೆಳಗಾವಿ ಟಿಕೆಟ್​ಗಾಗಿ ರಮೇಶ್​ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್​ ನಡುವೆ ಮತ್ತೆ ಫೈಟ್​; ದೆಹಲಿಯಲ್ಲಿ ಹೈಕಮಾಂಡ್​ ಭೇಟಿಯಾದ ಉಭಯ ನಾಯಕರು

ಜಾರಕಿಹೊಳಿ ದಿಢೀರ್ ದೆಹಲಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಹಲವು ಅನುಮಾನ‌ಗಳು ಮೂಡಿವೆ. ಕಾಂಗ್ರೆಸ್​​ ಜೊತೆಗೆ ಮುನಿಸಿಕೊಂಡಿರುವ ರಮೇಶ್​​ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಮಂದಾಗಿದ್ದಾರೆ ಎನ್ನಲಾಗಿದೆ.

Latha CG | news18
Updated:March 28, 2019, 8:43 PM IST
ಬೆಳಗಾವಿ ಟಿಕೆಟ್​ಗಾಗಿ ರಮೇಶ್​ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್​ ನಡುವೆ ಮತ್ತೆ ಫೈಟ್​; ದೆಹಲಿಯಲ್ಲಿ ಹೈಕಮಾಂಡ್​ ಭೇಟಿಯಾದ ಉಭಯ ನಾಯಕರು
ರಮೇಶ್​ ಜಾರಕಿಹೊಳಿ-ಲಕ್ಷ್ಮೀ ಹೆಬ್ಬಾಳ್ಕರ್​​
Latha CG | news18
Updated: March 28, 2019, 8:43 PM IST
ನವದೆಹಲಿ,(ಮಾ.17): ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತ್ತೊಮ್ಮೆ ರಮೇಶ್​ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ನಡುವಿನ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಈ ಬಾರಿ ರಮೇಶ್​​ ಜಾರಕಿಹೊಳಿ ವರ್ಸಸ್​ ಲಕ್ಷ್ಮೀ ಹೆಬ್ಬಾಳ್ಕರ್​ ನಡುವೆ ಟಿಕೆಟ್​ ವಿಷಯವಾಗಿ ಜಟಾಪಟಿ ಶುರುವಾಗಿದೆ. ಹೀಗಾಗಿ ಬೆಳಗಾವಿ ಲೋಕಸಭಾ ಟಿಕೆಟ್​​ ಬಿಕ್ಕಟ್ಟು ರಾಜಧಾನಿ ದೆಹಲಿವರೆಗೂ ತಲುಪಿದೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​​​ ಸಹೋದರ ಚನ್ನರಾಜ್​ ಹಟ್ಟಿಹೊಳಿ ಅವರಿಗೆ ಟಿಕೆಟ್​​ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ದೆಹಲಿಗೆ ಹೋಗಿ ತಮ್ಮನಿಗೆ ಬೆಳಗಾವಿ ಟಿಕೆಟ್ ನೀಡುವಂತೆ ಲಾಬಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ರಮೇಶ್​​ ಜಾರಕಿಹೊಳಿ ಅವರು ಲಕ್ಷ್ಮೀ ಹೆಬ್ಬಾಳ್ಕರ್​​ ಸಹೋದರನಿಗೆ ಟಿಕೆಟ್​​ ತಪ್ಪಿಸಲು ಲಾಬಿ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ರಮೇಶ್​​ ಜಾರಕಿಹೊಳಿ ಹೈಕಮಾಂಡ್​​ ಮೂಲಕವೇ ಹೆಬ್ಬಾಳ್ಕರ್​​ ಸಹೋದರನಿಗೆ ಟಿಕೆಟ್​​ ತಪ್ಪಿಸಿ, ತಮ್ಮ ಕಡೆಯ ಅಭ್ಯರ್ಥಿಗೆ ಟಿಕೆಟ್​ ನೀಡುವಂತೆ ಒತ್ತಡ ಹಾಕಲು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ಜಾರಕಿಹೊಳಿ ತಮ್ಮ ಬೆಂಬಲಿಗರಾದ ಮಹೇಶ್​​ ಕುಮಟಳ್ಳಿ ಹಾಗೂ ನಾಗೇಶ್​​ ಜೊತೆ ದೆಹಲಿಗೆ ತೆರಳಿದ್ದಾರೆ. ಈ ಮೊದಲು ವಿವೇಕ್​ ರಾವ್​ ಪಾಟೀಲ್​ ಅವರಿಗೆ ಟಿಕೆಟ್ ನೀಡುವಂತೆ ರಮೇಶ್​ ಹೇಳಿದ್ದರು.

ಮಂಡ್ಯ ಕಾಂಗ್ರೆಸ್ಸಿಗರ ಗೌಪ್ಯ ಸಭೆ: ಯಾವುದಕ್ಕೂ ಹೆದರದೆ ಸುಮಲತಾಗೆ ಬೆಂಬಲ ನೀಡಲು ನಿರ್ಧಾರ!

ಜಾರಕಿಹೊಳಿ ದಿಢೀರ್ ದೆಹಲಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಹಲವು ಅನುಮಾನ‌ಗಳು ಮೂಡಿವೆ. ಕಾಂಗ್ರೆಸ್​​ ಜೊತೆಗೆ ಮುನಿಸಿಕೊಂಡಿರುವ ರಮೇಶ್​​ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಲು ಮಂದಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್​​ ಪಕ್ಷದಲ್ಲಿ ಮತ್ತೆ ಸಕ್ರಿಯರಾಗಲು ಜಾರಕಿಹೊಳಿ ನಿರಾಸಕ್ತಿ ತೋರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ದೆಹಲಿಗೆ ತೆರಳಿರುವ ರಮೇಶ್ ಜಾರಕಿಹೊಳಿ, ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ರಮೇಶ್​​ ಜಾರಕಿಹೊಳಿಗೆ  ಕಾಂಗ್ರೆಸ್​​ ಪಕ್ಷದಲ್ಲಿ ಮುಂದುವರೆಯುವಂತೆ ಬೆಂಬಲಿಗರು ಸಲಹೆ ನೀಡಿದ್ದರು. ಆದರೆ ಅವರ ಮಾತಿಗೆ ಬೆಲೆ ಕೊಡದ ಜಾರಕಿಹೊಳಿ ಬಿಜೆಪಿ ನಾಯಕರನ್ನು ಭೇಟಿ ಮಾಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಮೇಶ್​​ ಜಾರಕಿಹೊಳಿ ಇತ್ತೀಚೆಗೆ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಆಗ ಕುಮಾರಸ್ವಾಮಿ ಜಾರಕಿಹೊಳಿಗೆ ಸಚಿವ ಸ್ಥಾನದ ಆಫರ್​​ ಕೂಡ ನೀಡಿದ್ದರು.

First published:March 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ