• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ, ಏನು ಹೇಳ್ತಾರೋ ಅದು ಉಲ್ಟಾ ಆಗುತ್ತೆ - ಸಿ.ಟಿ. ರವಿ

ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ, ಏನು ಹೇಳ್ತಾರೋ ಅದು ಉಲ್ಟಾ ಆಗುತ್ತೆ - ಸಿ.ಟಿ. ರವಿ

ಸಿ.ಟಿ.ರವಿ

ಸಿ.ಟಿ.ರವಿ

ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ರು. ಆದ್ರೆ ಮೋದಿ 2 ಸಲ ಪ್ರಧಾನಿಯಾದರು. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತೆ.

  • Share this:

ಚಿಕ್ಕಮಗಳೂರು: ಸಿದ್ದರಾಮಯ್ಯ ಹೇಳಿದ್ದು ಉಲ್ಟಾ ಆಗುತ್ತೆ, ಅವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಸಿದ್ದರಾಮಯ್ಯನವರು ಕಾಲಜ್ಞಾನಿನಾ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು. ಬಿಜೆಪಿ ಉಳಿಯಲ್ಲ ಅಂದಿದ್ದರು, ಈ ಅವಧಿ ಮುಗಿಸಿ ಮತ್ತೆ ಮುಂದಿನ 5 ವರ್ಷಕ್ಕೂ ಬರುತ್ತೆ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಅಂತಾ ಸಿದ್ದರಾಮಯ್ಯ ಹೇಳಿದ್ರು. ಆದ್ರೆ ಮೋದಿ 2 ಸಲ ಪ್ರಧಾನಿಯಾದರು. ಸಿದ್ದರಾಮಯ್ಯ ಏನು ಹೇಳುತ್ತಾರೋ ಅದು ಉಲ್ಟಾ ಆಗುತ್ತೆ. 2018ರಲ್ಲಿ ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ ಅಂತಾಲೂ ಹೇಳಿದ್ರು.. ಬಂದ್ರಾ..? ಅಂತಾ ಸಿ.ಟಿ ರವಿ ಪ್ರಶ್ನೆ ಮಾಡಿದ್ದಾರೆ.


ಸಿದ್ದರಾಮಯ್ಯ ಕಾಲಜ್ಞಾನಿಯಲ್ಲ, ಅವರು ಹೇಳಿದ್ದು ತದ್ವಿರುದ್ದವಾಗಿ ನಡೆಯುತ್ತೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದ್ರೆ ನೂರಕ್ಕೆ ನೂರಕ್ಕೆ ನೂರು ಕಾಂಗ್ರೆಸ್ ಬರಲ್ಲ. ಬಿಜೆಪಿ ಉಳಿಯಲ್ಲ ಅಂದ್ರೆ ಈ ಅವಧಿ ಮುಗಿಸಿ ಮತ್ತೆ ಮುಂದಿನ 5 ವರ್ಷಕ್ಕೂ ಬರುತ್ತೆ. ಸಿದ್ದರಾಮಯ್ಯನವರ ಬಾಯಲ್ಲಿ ಉಲ್ಟಾ ಮಚ್ಚೆ ಇದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂದರೆ ನೂರಕ್ಕೆ ನೂರು ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಿಜೆಪಿ ಉಳಿಯಲ್ಲ ಎಂದು ಹೇಳಿದರೆ ಮತ್ತೆ ಐದು ವರ್ಷ ಬಿಜೆಪಿ ಅಧಿಕಾರವನ್ನು ಹಿಡಿಯುತ್ತದೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.


ಇದನ್ನೂ ಓದಿ: ನಿಮ್ಮ ಬಗ್ಗೆ ನಾನು ತಪ್ಪು ತಿಳ್ಕೊಂಡಿಲ್ಲ ಸರ್.. ಮನೆಗೆ ಬಂದ ಸಿದ್ದರಾಮಯ್ಯ ಬಳಿ ನೋವು ತೋಡಿಕೊಂಡ ಜಮೀರ್


ಕೆಲವರ ಬಾಯಲ್ಲಿ ಮಚ್ಚೆ ಇರುತ್ತದೆ ಅವರು ಹೇಳಿದ್ದು ನಡೆಯುತ್ತದೆ ಆದರೆ ಸಿದ್ದರಾಮಯ್ಯ ಅವರ ನಾಲಗೆಯಲ್ಲಿ ಉಲ್ಟಾ ಮಚ್ಚೆ ಇರಬೇಕು ಹಾಗಾಗಿ ಅವರು ಹೇಳಿದ್ದೆಲ್ಲ ಉಲ್ಟಾ ಆಗುತ್ತದೆ ಎಂದು ಹೇಳಿದರು. ಹಾಲಿ ಪ್ರಧಾನಿಗಳನ್ನು ನರ ಹಂತಕ ಎಂದು ಕರೆದರೋ ಅವರು ನನಗೆ ಸಂಸ್ಕೃತಿಯ ಪಾಠ ಹೇಳುವ ಕೆಲಸ ಮಾಡುತ್ತಿದ್ದಾರೆ.ಯಾರು ಪ್ರಜಾಪ್ರಭುತ್ವದ ಕತ್ತು ಹಿಸುಕಿ ತುರ್ತುಪರಿಸ್ಥಿತಿ ಹೇರಿದರೋ, ಅವರು ಪ್ರಜಾಪ್ರಭುತ್ವದ ಬಗ್ಗೆ ನಮಗೆ ಪಾಠ ಹೇಳುತ್ತಿದ್ದಾರೆ. ಯಾರು ಅಂಬೇಡ್ಕರ್ ಅವರನ್ನು ಎರಡು ಚುನಾವಣೆಯಲ್ಲಿ ಸೋಲಿಸಿದರೋ ಅವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.


ಇನ್ನು ಕಳೆದ ವರ್ಷ ಸಚಿವರಾಗಿದ್ರಿ ಇವಾಗ ಸಚಿವರಾಗಿಲ್ಲ ಅಂತಾ ಬೇಜಾರ್ ಆಗಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆ ಗೆ ಉತ್ತರಿಸದ ಅವರು ನಾನು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯ ನಾಗಿದ್ದೇನೆ. ನನಗೆ ಕೆಂಪುಕೋಟೆಯಲ್ಲಿ ನನಗೆ ಪಾಸ್ ಸಿಕ್ಕಿತ್ತು ಆದ್ರೆ ನಾನು ನನ್ನೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕೆಂದು ಚಿಕ್ಕಮಗಳೂರಿಗೆ ಬಂದಿದ್ದೇನೆ ಎಂದರು.


 ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

Published by:Kavya V
First published: