Seema.RSeema.R
|
news18-kannada Updated:February 27, 2020, 1:42 PM IST
ಸಚಿವ ವಿ. ಸೋಮಣ್ಣ
ಕೊಪ್ಪಳ(ಫೆ. 27): ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರನ್ನು ವಸತಿ ಸಚಿವ ವಿ ಸೋಮಣ್ಣ ಸಮರ್ಥಿಸಿಕೊಂಡಿದ್ಧಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೊರೆಸ್ವಾಮಿ ವಿರುದ್ಧವೇ ಟೀಕೆ ಮಾಡಿದ್ಧಾರೆ.
ದೊರೆಸ್ವಾಮಿಯವರ ಬಗ್ಗೆ ಗೌರವವಿದೆ. ನಮ್ಮೂರಿನವರು ಮಾತ್ರವಲ್ಲದೇ ನನ್ನ ಕುಟುಂಬಕ್ಕೆ ಹತ್ತಿರವಾದವರು ಅವರು. ಹಿರಿಯರಾದ ಅವರು ಘನತೆಯಿಂದ ಮಾತನಾಡಬೇಕು. ಅವರು ಯೋಚಿಸಿ ಮಾತನಾಡಿರದಿದ್ದರೆ, ಯತ್ನಾಳ್ ಆ ರೀತಿ ಹೇಳಿಕೆ ನೀಡುತ್ತಿರಲಿಲ್ಲ. ಅವರು ಮಾತನಾಡುವಾಗ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ವಿ. ಸೋಮಣ್ಣ ಕಿವಿಮಾತು ಹೇಳಿದರು.
ಯತ್ನಾಳ್ ಭಾವನಾತ್ಮಕವಾಗಿ ಮಾತನಾಡಿರಬಹುದು. ಆದರೆ, ಅವರು ತಪ್ಪು ಮಾತನಾಡಿದ್ದಾರೆ ಎಂದು ನನಗೆ ಎನ್ನಿಸುವುದಿಲ್ಲ ಎಂದು ತಮ್ಮ ಪಕ್ಷದ ಹಿರಿಯ ಶಾಸಕರ ಹೇಳಿಕೆಯನ್ನು ಸೋಮಣ್ಣ ಸಮರ್ಥಿಸಿಕೊಂಡರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಅವರು, ಮಾಜಿ ಆದ ಮೇಲೆ ಸಿದ್ದರಾಮಯ್ಯ ಸರಿಯಾಗಿ ಮಾತನಾಡುತ್ತಿಲ್ಲ. ಪ್ರತಿ ಮಾತಿಗೂ ಪ್ರತಿಭಟನೆಗೆ ಕರೆ ನೀಡುತ್ತಾರೆ. ಹಲವು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಈ ರೀತಿ ಮಾತನಾಡುವವರನ್ನು ನೋಡಿಲ್ಲ ಎಂದು ಹೀಗಳೆದರು.
ಇದನ್ನು ಓದಿ: ದೊರೆಸ್ವಾಮಿಯವರು ಪಕ್ಷಾತೀತರಾಗಿ ನಡೆದುಕೊಳ್ಳಬೇಕು; ಯತ್ನಾಳ್ ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ
ಇದಕ್ಕೂ ಮುನ್ನ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆಎಸ್ ಈಶ್ವರಪ್ಪ ಕೂಡ ಯತ್ನಾಳ್ ಅವರ ಹೇಳಿಕೆ ಸಮರ್ಥಿಸಿಕೊಂಡಿದ್ದರು. ದೊರೆಸ್ವಾಮಿ ಅವರು ಪಕ್ಷಾತೀತವಾಗಿ ಮಾತನಾಡಬೇಕು ಎಂದು ತಿಳಿಹೇಳಿದ್ದರು.
First published:
February 27, 2020, 1:42 PM IST