• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 'ಅವನೇ ಶ್ರೀಮನ್ನಾರಾಯಣ' ನೋಡಿ ಬರುವಾಗ ಸಿನಿಮೀಯ ರೀತಿಯಲ್ಲೇ ಕಳ್ಳರನ್ನು ಹಿಡಿದ ಸ್ಯಾಂಡಲ್​ವುಡ್ ನಟ

'ಅವನೇ ಶ್ರೀಮನ್ನಾರಾಯಣ' ನೋಡಿ ಬರುವಾಗ ಸಿನಿಮೀಯ ರೀತಿಯಲ್ಲೇ ಕಳ್ಳರನ್ನು ಹಿಡಿದ ಸ್ಯಾಂಡಲ್​ವುಡ್ ನಟ

ಪೊಲೀಸರ ಜೊತೆ ಕಳ್ಳರನ್ನು ಹಿಡಿದುಕೊಟ್ಟ ರಘು ಭಟ್

ಪೊಲೀಸರ ಜೊತೆ ಕಳ್ಳರನ್ನು ಹಿಡಿದುಕೊಟ್ಟ ರಘು ಭಟ್

Bengaluru Crime: ಗುರುವಾರ ರಾತ್ರಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಪ್ರೀಮಿಯರ್ ಶೋ ನೋಡಿಕೊಂಡು ಮನೆಗೆ ಹೋಗುವಾಗ ಸ್ಯಾಂಡಲ್​ವುಡ್ ನಟ ರಘು ಭಟ್ ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದಿದ್ದಾರೆ.

  • Share this:

ಬೆಂಗಳೂರು (ಡಿ. 31): ಸಿನಿಮಾ ನಟರೆಂದರೆ ತೆರೆಯ ಮೇಲೆ ಮಾತ್ರ ಹೀರೋಯಿಸಂ ತೋರಿಸುತ್ತಾರೆ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಸ್ಯಾಂಡಲ್​ವುಡ್​ ನಟರೊಬ್ಬರು ನಿನ್ನೆ ರಾತ್ರಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನೋಡಿ ಮನೆಗೆ ಹೋಗುವಾಗ ನಿಜವಾಗಿಯೂ ಹೀರೋಯಿಸಂ ತೋರಿಸಿ ಸಾಹಸ ಮೆರೆದಿದ್ದಾರೆ. 

ಚಿನ್ನಾಭರಣಗಳನ್ನು ಕದ್ದ ದರೋಡೆಕೋರರನ್ನು ಪೊಲೀಸ್ ಅಧಿಕಾರಿಯಾಗಿರುವ ನಾಯಕ ಯಾವ ರೀತಿ ಹಿಡಿಯುತ್ತಾನೆ ಎಂಬುದು ಇಂದು ತೆರೆ ಕಾಣಲಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಕತೆ. ಗುರುವಾರ ರಾತ್ರಿ ಈ ಸಿನಿಮಾದ ಪ್ರೀಮಿಯರ್ ಶೋ ಇತ್ತು. ಈ ಪ್ರೀಮಿಯರ್ ಶೋ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಸ್ಯಾಂಡಲ್​ವುಡ್ ನಟ ರಘು ಭಟ್ ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದಿದ್ದಾರೆ.

after watching Avane Srimannarayana Movie on Thursday Night Actor Raghu Bhat grabbed Robbers in Bangalore
ರಘು ಭಟ್ ಕೈಗೆ ಸಿಕ್ಕಿಬಿದ್ದ ಕಳ್ಳರಾದ ಅಬ್ದುಲ್ಲಾ ಮತ್ತು ಮೋಯಿನ್


ನಿನ್ನೆ ರಾತ್ರಿ ಸಿಗ್ಮಾ ಮಾಲ್​ನಲ್ಲಿ ಅವನೇ ಶ್ರೀಮನ್ನಾರಾಯಣ ಸಿನಿಮಾ ನೋಡಿಕೊಂಡು ಮನೆಗೆ ಹೋಗುವಾಗ ರಘು ಭಟ್ ದಂಪತಿ ಕಾರಿನ ಎದುರಿದ್ದ ಕಾರನ್ನು ಅಡ್ಡಗಟ್ಟಿದ ದರೋಡೆಕೋರರು ಅದರಲ್ಲಿದ್ದವರ ಚಿನ್ನ, ಹಣವನ್ನು ದೋಚಿ ಪರಾರಿಯಾಗಿದ್ದರು. ಅಬ್ದುಲ್ ಮತ್ತು ಮೋಯಿನ್ ಎಂಬ ಇಬ್ಬರು ದರೋಡೆಕೋರರು ಬೈಕ್ ಏರಿ ಪರಾರಿಯಾಗುತ್ತಿದ್ದಂತೆ ಅವರ ಬೆನ್ನತ್ತಿದ ರಘು ಭಟ್ ಸುಮಾರು 2 ಕಿ.ಮೀ. ಆ ಕಳ್ಳರ ಹಿಂದೆ ಹೋಗಿದ್ದಾರೆ.

ಶಿವರಾಜ್​ಕುಮಾರ್ ಜೊತೆ ನಟ ರಘು ಭಟ್


ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಿದ ಇಬ್ಬರ ಬೆನ್ನತ್ತಿದ ರಘು ಭಟ್​ನನ್ನು ನೋಡಿ ವೇಗವಾಗಿ ಬೈಕ್​ನಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ಕೆಳೆಗೆ ಬಿದ್ದಿದೆ. ಭಾರತಿನಗರದ ಸೇಂಟ್ ಜಾನ್ಸ್​ ಶ್ರೀ ಸರ್ಕಲ್ ಬಳಿ ಸಿಕ್ಕಿಬಿದ್ದ ಕಳ್ಳರನ್ನು ರಘು ಭಟ್ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆ ಇಬ್ಬರು ಕಳ್ಳರೀಗ ಹಲಸೂರು ಪೊಲೀಸರ ವಶದಲ್ಲಿದ್ದಾರೆ. ನಟ ರಘು ಭಟ್ 'ಅನ್ವೇಷಿ', 'ಎಂಎಂಸಿಎಚ್', 'ಲವ್ ಯೂ 2' ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು.

top videos
    First published: