ಬೆಂಗಳೂರು (ಜು. 7): ಕಳೆದೆರಡು ತಿಂಗಳಿನಿಂದ ಸಂಪೂರ್ಣ ಸ್ಥಬ್ಧಗೊಂಡಿದ್ದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಈಗ ಅನ್ ಲಾಕ್ ಆಗಿ ಪೂರ್ಣ ಪ್ರಮಾಣದಲ್ಲಿ ಓಡಾಟ ಶುರು ಮಾಡಿಕೊಂಡಿದೆ. ಆರಂಭದಲ್ಲಿ ರಾಜ್ಯದ ಒಳಗಷ್ಟೇ ಓಡಾಟ ಮಾಡಿಕೊಂಡಿದ್ದ ಸಾರಿಗೆ ಸೇವೆ ಬಸ್ಗಳು ಈಗ ಹಂತ ಹಂತವಾಗಿ ಅಂತರರಾಜ್ಯ ಸೇವೆಯನ್ನೂ ಪ್ರಾರಂಭಿಸುತ್ತಿದೆ. ಇದೀಗ ಕೇರಳ ರಾಜ್ಯಕ್ಕೆ ಸೇವೆ ಒದಗಿಸಲು ಕೆಎಸ್ ಆರ್ಟಿಸಿ ಸಾರಿಗೆ ಸೇವೆ ಶುರು ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ
ಕೇರಳದಿಂದ ಬರುವವರಿಗೆ ಷರತ್ತು ಬದ್ಧ ಪ್ರಯಾಣಕ್ಕೆ ಅನುಮತಿ.!!
ರಾಜ್ಯದಲ್ಲಿ ಸಂಪೂರ್ಣ ಅನ್ ಲಾಕ್ ಆಗಿರುವ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಕೇರಳಕ್ಕೆ ಸರ್ವೀಸ್ ಆರಂಭಿಸಲಿದೆ ಎಂದು ಅಧಿಕೃತ ಆದೇಶ ಹೊರಡಿಸಿದೆ. ಇದೇ ಜುಲೈ 12 ರಿಂದ ಕೇರಳ ಅಂತರರಾಜ್ಯ ಸೇವೆಯನ್ನು ಕರ್ನಾಟಕ ರಸ್ತೆ ಸಾರಿಗೆ ನಿಗಮ ಶುರು ಮಾಡಲಿದೆ. ಆದರೆ ಕೇರಳದಿಂದ ರಾಜ್ಯಕ್ಕೆ ಬರುವರಿಗೆ ಕೆಲವೊಂದು ಷರತ್ತು ವಿಧಿಸಲಾಗಿದೆ.
ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ 72 ಗಂಟೆ ಒಳಗಿನ ಕೊರೋನಾ ನೆಗೆಟಿವ್ ಪರೀಕ್ಷಾ ವರದಿ ಕಡ್ಡಾಯವಾಗಿರಬೇಕು. ಅಥವಾ, ಮೊದಲ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಪ್ರತಿ ದಿನ ಕೇರಳ ಕರ್ನಾಟಕ ಗಡಿ ಭಾಗದಲ್ಲಿ ಓಡಾಡುವ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರಿಗೆ 15 ದಿನಗಳಿಗೊಮ್ಮೆ RTPCR ಮಾಡಿಸಿದ ಪ್ರಮಾಣ ಪತ್ರ ನಿಗಮ ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದೆ ಇರುವ ಪ್ರಯಾಣಿಕರಿಗೆ ಬಸ್ ನಲ್ಲಿ ಇಲ್ಲ ಅವಕಾಶ ಇರುವುದಿಲ್ಲ. ಪ್ರಯಾಣಿಕರ ದಟ್ಟಣೆ ನೋಡಿಕೊಂಡು ಜುಲೈ 12 ರಿಂದ ಸೇವೆಯನ್ನು ರಾಜ್ಯ ಸಾರಿಗೆ ನಿಗಮ ಒದಗಿಸಲಿದೆ.
ಎಂದಿನಂತೆ ಕೆಎಸ್ಆರ್ಟಿಸಿ ಅಧಿಕೃತ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಓಪನ್.!!
ಎಂದಿನಂತೆ ಟಿಕೆಟ್ ಅನ್ನು ಸಾರಿಗೆ ಸೇವೆ ಅಧಿಕೃತ ವೆಬ್ ಸೈಟ್ ಹಾಗೂ ನಿಗಮದ ಟಿಕೆಟ್ ಕೌಂಟರ್ ಮತ್ತು ಖಾಸಗಿ ಟ್ರಾವೆಲ್ಸ್ ನಲ್ಲಿ ಕಾಯ್ದಿರಿಸಿಕೊಳ್ಳಬಹುದು. ಇದರ ಜೊತೆಯಲ್ಲೇ ಕರ್ನಾಟಕದ ಇತರೆ ಭಾಗಕ್ಕೂ ಇದೇ ಜುಲೈ 12ರಿಂದ ಸಂಚಾರ ಆರಂಭವಾಗಲಿದೆ. ಬೆಂಗಳುರೂ, ಮೈಸೂರು, ಮಂಗಳೂರು, ಪುತ್ತೂರು, ಸುಳ್ಯ, ಉಡುಪಿ, ಕುಂದಾಪುರ ಭಾಗಗಳಿಗೂ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಬಾರ್ ಓಪನ್ ಮಾಡ್ತೀರಾ ಆದರೆ, ಸ್ಕೂಲ್ ಯಾಕೆ ಇಲ್ಲ; ಕೂಡಲೇ ಶಾಲೆ ತೆರೆಯುವಂತೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಒತ್ತಾಯ
ಕೇರಳದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಿದ್ದ ಹಿನ್ನಲೆಯಲ್ಲಿ ಸಾರಿಗೆ ಸಂಸ್ಥೆ ಸೇವೆ ಆರಂಭದಲ್ಲೇ ಶುರು ಮಾಡಿರಲಿಲ್ಲ. ಈಗ ಕೇರಳದಲ್ಲೂ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದಂತೆ ರಾಜ್ಯ ಸಾರಿಗೆ ಸೇವೆ ಆರಂಭಿಸಿದೆ. ಮುಖ್ಯವಾಗಿ ಕೇರಳ ಕರ್ನಾಟಕ ಗಡಿ ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಇಲ್ಲದೆ ಸಾರ್ವಜನಿಕರು ಪರದಾಡಿ ಹೋಗಿದ್ದರು. ಇದೀಗ ಸೇವೆ ಆರಂಭವಾಗಿದ್ದು ಇನ್ಮುಂದೆ ಗಡಿ ಜಿಲ್ಲೆಗಳ ಜನರಿಗೆ ಇದು ಅನೂಕಲ ಮಾಡಿಕೊಡಲಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ