• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Mandya Politics: ಸೋಲಿನ ಬಳಿಕ ಆಪ್ತನ ಮೂಲಕ BJP ತೊರೆಯುವ ಸುಳಿವು ನೀಡಿದ್ರಾ ಮಾಜಿ ಸಚಿವ?

Mandya Politics: ಸೋಲಿನ ಬಳಿಕ ಆಪ್ತನ ಮೂಲಕ BJP ತೊರೆಯುವ ಸುಳಿವು ನೀಡಿದ್ರಾ ಮಾಜಿ ಸಚಿವ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Former Minister: ಶೀಳನೆರೆ ಅಂಬರೀಶ್ ಶೀಘ್ರದಲ್ಲಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಶೀಳನೆರೆ ಅಂಬರೀಶ್ ಬೆನ್ನಲ್ಲೇ ನಾರಾಯಣಗೌಡರು ಕಾಂಗ್ರೆಸ್ ಸೇರ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  • Share this:

ಮಂಡ್ಯ: ವಿಧಾನಸಭೆ ಚುನಾವಣೆಗೂ (Karnataka Election 2023) ಮೊದಲೇ ಮಾಜಿ ಸಚಿವ ನಾರಾಯಣಗೌಡ (Former Minister Narayanagowda) ಕಾಂಗ್ರೆಸ್ ಸೇರ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಕಾಂಗ್ರೆಸ್ (Congress) ಸೇರ್ಪಡೆಯಾಗಲ್ಲ ಎಂದು ಹೇಳಿದ ನಾರಾಯಣಗೌಡರು ಎರಡನೇ ಬಾರಿ ಬಿಜೆಪಿಯಿಂದ (BJP) ಸ್ಪರ್ಧೆ ಮಾಡಿ ಸೋತಿದ್ದಾರೆ. ಉಪ ಚುನಾವಣೆಯಲ್ಲಿ ಜೆಡಿಎಸ್ (JDS) ತೊರೆದು ಬಿಜೆಪಿ ಸೇರ್ಪಡೆಯಾಗಿ ಕಮಲದ ಗುರುತಿನಿಂದ ಸ್ಪರ್ಧಿಸಿ ಗೆದ್ದಿದ್ದರು. ಇದೀಗ ಮತ್ತೊಮ್ಮೆ ನಾರಾಯಣಗೌಡರು ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತುಗಳು ಮಂಡ್ಯ ರಾಜಕಾರಣದಲ್ಲಿ (Mnadya Politics) ಕೇಳಿ ಬರುತ್ತಿದೆ. ಈ ಮಾತುಗಳಿಗೆ ಕಾರಣ ನಾರಾಯಣಗೌಡರ ಆಪ್ತ ಶೀಳನೆರೆ ಅಂಬರೀಶ್ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿರೋದು.


ಶೀಳನೆರೆ ಅಂಬರೀಶ್ ಅವರು ಕೆಆರ್ ಪೇಟೆ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ನೂತನ ಶಾಸಕ ಚಲುವರಾಯಸ್ವಾಮಿ ಅವರನ್ನು ಭೇಟಿ ಮಾಡಿರುವ ಶೀಳನೆರೆ ಅಂಬರೀಶ್ ಶುಭಾಶಯ ತಿಳಿಸಿದ್ದಾರೆ. ಕಾಂಗ್ರೆಸ್ ಮುಖಂಡರ ಜೊತೆ ಶೀಳನೆರೆ ಅಂಬರೀಶ್ ಕಾಣಿಸಿಕೊಂಡಿರೋದು ಹಲವು ಚರ್ಚೆಗಳಿಗೆ ಕಾರಣವಾಗಿದೆ.


ಶೀಳನೆರೆ ಅಂಬರೀಶ್ ಶೀಘ್ರದಲ್ಲಿಯೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಶೀಳನೆರೆ ಅಂಬರೀಶ್ ಬೆನ್ನಲ್ಲೇ ನಾರಾಯಣಗೌಡರು ಕಾಂಗ್ರೆಸ್ ಸೇರ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.


mandya politics, narayan gowda politics, operation congress, former minister narayan gowda, kannada news, karnataka news, ನಾರಾಯಣಗೌಡ ಸೋಲು, ಮಂಡ್ಯ ರಾಜಕೀಯ
ನಾರಾಯಣ ಗೌಡ, ಮಾಜಿ ಸಚಿವ


ಸಿಎಂ ಆಯ್ಕೆಗೆ ಟ್ವಿಸ್ಟ್ ನೀಡಿದ ಡಿಕೆಶಿ


ಇನ್ನು ಸಿಎಂ ಆಯ್ಕೆಯ ಪ್ರಕ್ರಿಯೆಗೆ ಡಿಕೆ ಶಿವಕುಮಾರ್ ಟ್ವಿಸ್ಟ್ ನೀಡಿದ್ದಾರೆ. ಸಿದ್ದರಾಮಯ್ಯ ಹೆಸರು ಅಂತಿಮವಾಗಿಲ್ಲ. ಎಲ್ಲಾ ಕಡೆಯೂ ರೂಮರ್ಸ್​ ಹಬ್ಬಿಸಲಾಗಿದೆ ಎಂದು ಹೇಳುವ ಮೂಲಕ ತಾವು ಕಣದಿಂದ ಹಿಂದೆ ಸರಿದಿಲ್ಲ ಎಂಬ ಸಂದೇಶವನ್ನು ಡಿಕೆ ಶಿವಕುಮಾರ್ ರವಾನಿಸಿದ್ದಾರೆ.
ಇದನ್ನೂ ಓದಿ: Karnataka Next CM: ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ಕೂಲಿ ಕೊಡಿ ಎಂದು ಕೇಳಿದ ಡಿಕೆ ಸುರೇಶ್


ಎಲ್ಲ ಕಡೆ ಗಾಸಿಪ್ ಹಬ್ಬಿದೆ. ಜನರು, ಮಾಧ್ಯಮಗಳು ಗಾಸಿಪ್ ಹಬ್ಬಿಸಿದ್ದಾರೆ. ಬೇರೆ ಪಕ್ಷಗಳು ಕೂಡ ಗಾಸಿಪ್​​​ ಹಬ್ಬಿಸಿವೆ. ಇವೆಲ್ಲಾ ಗಾಸಿಪ್​​ಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಇನ್ನೂ ಮುಖ್ಯಮಂತ್ರಿ ಆಯ್ಕೆಯಾಗಿಲ್ಲ ಎಂದಿದ್ದಾರೆ ಡಿಕೆ ಶಿವಕುಮಾರ್.

top videos
    First published: