HOME » NEWS » State » AFTER SIGANDUR CHOWDESHWARI TEMPLE MADHURE SHANI MAHATMA TEMPLE CONTROVERSY DETAILS SCT NKCKB

ಸಿಗಂದೂರು ಚೌಡೇಶ್ವರಿ ದೇಗುಲದ ಬಳಿಕ ಈಗ ಮಧುರೆ ಶನಿ ಮಹಾತ್ಮ ದೇವಸ್ಥಾನ ವಿವಾದ!

ಕಳೆದ ವಾರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿವಾದ ಇಡೀ ರಾಜ್ಯದ ಗಮನ ಸೆಳೆದಿತ್ತು. ಇದೀಗ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದ ಚಿಕ್ಕ ಮಧುರೆ ಶನಿ ಮಹಾತ್ಮ ದೇವಸ್ಥಾನದ ವಿವಾದ ಮುನ್ನೆಲೆಗೆ ಬರುತ್ತಿದೆ.

news18-kannada
Updated:October 26, 2020, 10:02 AM IST
ಸಿಗಂದೂರು ಚೌಡೇಶ್ವರಿ ದೇಗುಲದ ಬಳಿಕ ಈಗ ಮಧುರೆ ಶನಿ ಮಹಾತ್ಮ ದೇವಸ್ಥಾನ ವಿವಾದ!
ಚಿಕ್ಕ ಮಧುರೆ ಶನಿ ಮಹಾತ್ಮ ದೇವಸ್ಥಾನದ ಬಳಿ ನಡೆದ ಗಲಾಟೆ
  • Share this:
 ದೊಡ್ಡಬಳ್ಳಾಪುರ (ಅ. 26): ಇತ್ತೀಚೆಗೆ  ದೇವಾಲಯಕ್ಕೂ ವಿವಾದಕ್ಕೂ  ಬಿಡಿಸಲಾರದ  ನಂಟು ಶುರುವಾಗಿದೆ. ಕಳೆದ ವಾರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿವಾದ ಇಡೀ ರಾಜ್ಯದ ಗಮನ ಸೆಳೆದಿತ್ತು. ಇದೀಗ ಮಧುರೆ ಶನಿ ಮಹಾತ್ಮ ದೇವಸ್ಥಾನದ ವಿವಾದ ಮುನ್ನೆಲೆಗೆ ಬರುತ್ತಿದೆ. ದೇವಸ್ಥಾನದ  ಆಡಳಿತ ಮಂಡಳಿಯ ಅಧ್ಯಕ್ಷ  ವ್ಯಾಪಾರಿಯ  ಮೇಲೆ ಹಲ್ಲೆ ನಡೆಸಿರುವುದು ವಿವಾದದ  ಸ್ವರೂಪ ಪಡೆದುಕೊಳ್ಳುತ್ತಿದೆ. ಆಯುಧ ಪೂಜೆ ದಿನವೇ  ಕನಸವಾಡಿ ಶನಿಮಹಾತ್ಮ  ದೇವಸ್ಥಾನದಲ್ಲಿ ಗಲಾಟೆ, ದೇವಸ್ಥಾನ  ಆಡಳಿತ ಮಂಡಳಿ ಅಧ್ಯಕ್ಷನಿಂದ  ಕಡಲೇಪುರಿ ವ್ಯಾಪಾರಿಯ ಮೇಲೆ ಹಲ್ಲೆ ಮಾಡಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಅಧ್ಯಕ್ಷರ ವಿರುದ್ದ ಕ್ರಮ‌ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದ ಶನಿ ಮಹಾತ್ಮ ದೇವಸ್ಥಾನದ  ಅಂಗಡಿಯ ಮುಂದೆ ಮಂಜುಳಾ ಎಂಬುವವರು ಕಡಲೇಪುರಿ ಅಂಗಡಿ  ಇಟ್ಟುಕೊಂಡಿದ್ದರು.  ಶನಿ ಮಹಾತ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್  ಆಡಳಿತ ಮಂಡಳಿಯಿಂದ ಪ್ರಸಾದ ನಿಲಯದ ಗೇಟ್ ಮುಂಭಾಗದಲ್ಲಿ ಕಡಲೇಪುರಿ ಅಂಗಡಿ ಇಟ್ಟಿದ್ದಾರೆ. ಆಡಳಿತ  ಮಂಡಳಿಯ ಸನಿಹದಲ್ಲಿ ಮಂಜುಳಾ ಅವರ ಕಡಲೇಪುರಿ  ಅಂಗಡಿ ಇದ್ದು, ಮಂಜುಳಾ ಕಡಲೇಪುರಿಯಿಂದ ಆಡಳಿತ  ಮಂಡಳಿ  ಕಡಲೇಪುರಿ ಅಂಗಡಿಯಲ್ಲಿ ವ್ಯಾಪಾರವಾಗುತ್ತಿಲ್ಲವೆಂದು ಅಧ್ಯಕ್ಷ  ಪ್ರಕಾಶ್ ಅವರಿಗೆ ರಸ್ತೆ  ಬದಿಯ ಕಡಲೇಪುರಿ  ವ್ಯಾಪಾರಿ ಮಂಜುಳಾ ಮೇಲೆ ಅಸಮಾಧಾನ  ಇತ್ತು.

ಇದೇ ವಿಚಾರಕ್ಕೆ ದಿನಾಂಕ ಅ. 24ರಂದು ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ದೇವಸ್ಥಾನಕ್ಕೆ  ಬರುವ ಭಕ್ತರನ್ನು ಬಲವಂತದಿಂದ ಕೈ ಹಿಡಿದು ಕಡಲೇಪುರಿ  ಖರೀದಿಸುವಂತೆ ಮಂಜುಳಾ ಒತ್ತಾಯಿಸುತ್ತಾರೆ ಎಂದು ಎಂದು ಗಲಾಟೆ ತೆಗೆದ ಅಧ್ಯಕ್ಷ,  ಅಂಗಡಿಯ ಮುಂದೆ ಹೋಗಿ ಗಲಾಟೆ ಮಾಡಿದ್ದಾರೆ. ಅವಾಚ್ಯ  ಶಬ್ದಗಳಿಂದ ಮಂಜುಳಾ ಅವರನ್ನು ನಿಂದಿಸಿದ್ದಾರೆ.  ಮಂಜುಳಾ ಅವರ ಪತಿ ಮುನಿಯಪ್ಪ ಅಡ್ಡ ಬಂದಾಗ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಇದನ್ನೂ ಓದಿ: ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಮುಗಿಯದ ಆಂತರಿಕ ಕಲಹ; ಅಷ್ಟಕ್ಕೂ ಏನಿದು ಪ್ರಕರಣ?

ಮುನಿಯಪ್ಪನವರ  ತಲೆಗೆ  ಗಾಯವಾಗಿದ್ದು  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆ  ಪ್ರಕರಣಕ್ಕೆ  ಸಂಬಂಧಿಸಿದಂತೆ  ದೇವಸ್ಥಾನದ  ಅಧ್ಯಕ್ಷ  ಪ್ರಕಾಶ್  ವಿರುದ್ಧ  ದೊಡ್ಡಬೆಳವಂಗಲ  ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಆಯುಧಪೂಜೆ ದಿನವೇ ದೇವಸ್ಥಾನದ ವಿರುದ್ಧ  ಪ್ರತಿಭಟನೆ ಸಿದ್ದರಾದ  ಕಡಲೇಪುರಿ  ವ್ಯಾಪರಿಗಳನ್ನ ದೊಡ್ಡಬೆಳವಂಗಲ ಪೊಲೀಸರು ಪ್ರತಿಭಟನೆ ಮಾಡದಂತೆ ಮನವೋಲೈಕೆ ಮಾಡಿದ್ದು, ಹಲ್ಲೆ ಮಾಡಿದವರ ವಿರುದ್ದ ಶೀಘ್ರವಾಗಿ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಿದರು. ಮಧುರೆ ಶನಿಮಹಾತ್ಮ  ದೇವಸ್ಥಾನಕ್ಕೆ  ಬರುವ ಭಕ್ತರನ್ನು ನಂಬಿ  50ಕ್ಕೂ ಹೆಚ್ಚು ಕಡಲೇಪುರಿ  ಮತ್ತು ತೆಂಗಿನಕಾಯಿ ಅಂಗಡಿಗಳನ್ನು ಇಟ್ಟು 50 ವರ್ಷದಿಂದ ಜೀವನ ನಡೆಸುತ್ತಿದ್ದಾರೆ.

ನೆಲಮಂಗಲದಿಂದ ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆ  ಮಧುರೆ ಶನಿಮಹಾತ್ಮ ದೇವಸ್ಥಾನದ ಮುಂಭಾಗವೇ ಹಾದು ಹೋಗಲಿದೆ. ರಸ್ತೆ  ಅಗಲೀಕರಣದಿಂದ ಕಡಲೇಪುರಿ ಮತ್ತು ತೆಂಗಿನಕಾಯಿ  ಕಾಯಿ ಅಂಗಡಿಗಳು ಎತ್ತಂಗಡಿಯಾಗಲಿದೆ ಎಂಬ ಭಯ ವ್ಯಾಪಾರಿಗಳನ್ನು ಕಾಡುತ್ತಿದೆ.  ಇದೇ ಸಮಯದಲ್ಲಿ  ದೇವಸ್ಥಾನದ  ಆಡಳಿತ  ಮಂಡಳಿ ಸಹ ದೇವಸ್ಥಾನದ ಮುಂಭಾಗದಲ್ಲಿನ ಅಂಗಡಿ ತೆರವುಗೊಳಿಸಲು ಒತ್ತಾಯ ಮಾಡುತ್ತಿದೆ. ಇದರಿಂದ  ಆಕ್ರೋಶಗೊಂಡ ವ್ಯಾಪಾರಿಗಳು ದೇವಸ್ಥಾನದ  ಅಧ್ಯಕ್ಷ ಪ್ರಕಾಶ್ ವಿರುದ್ಧ ಆಕ್ರೋಶ  ವ್ಯಕ್ತಪಡಿಸಿದರು.
ರಸ್ತೆ ಮಧ್ಯೆ ಸಾಕಷ್ಟು  ಜನ ಸೇರಿದ್ದರಿಂದ  ಕೆಲಕಾಲ ವಾಹನ ಸಂಚಾರಕ್ಕೆ  ತೊಂದರೆ ಸಹ ಆಗದೆ.  ಸರ್ಕಾರಿ ಗುಂಡುತೋಪು ಜಾಗದಲ್ಲಿ ದೇವಸ್ಥಾನ. ಶನಿಮಹಾತ್ಮ  ದೇವಸ್ಥಾನ ಸರ್ಕಾರಿ ಗುಂಡುತೋಪು  ಜಾಗದಲ್ಲಿದೆ. ಸಾರ್ವಜನಿಕ  ಸ್ವತ್ತನ್ನು ಬಳಸಿಕೊಂಡು  ದೇವಸ್ಥಾನ ಮಾಡಿಕೊಂಡಿದ್ದಾರೆ ಈ ಮೂಲಕ ಲಾಭ ಮಾಡುತ್ತಿದ್ದಾರೆ. ಆದರೆ ಇದೇ ಜಾಗದಲ್ಲಿ ಬಡವರು ವ್ಯಾಪಾರ ಮಾಡಲು ದೇವಸ್ಥಾನದ  ಆಡಳಿತ ಮಂಡಳಿ  ಬಿಡುತ್ತಿಲ್ಲ ಎಂದು ಜಿಲ್ಲಾ ಪಂಚಾಯತ್  ಸದಸ್ಯ ಚುಂಚೇಗೌಡ ಆರೋಪ ಮಾಡಿದ್ದು, ಹಲ್ಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ  ಪ್ರಕರಣ  ದಾಖಲಾಗಿದ್ದರೂ  ಪ್ರಕಾಶ್ ಅವರನ್ನು ಬಂಧಿಸಿಲ್ಲ. ಕೂಡಲೇ ಅವರನ್ನು ಬಂಧಿಸಬೇಕು ಎಂಬುದು ವ್ಯಾಪಾರಿಗಳ  ಒತ್ತಾಯವಾಗಿದೆ.  ನಾಳೆ ದೇವಸ್ಥಾನದ  ಅಧ್ಯಕ್ಷ ರ ಬಂಧನವಾಗದಿದ್ದಲ್ಲಿ ಪ್ರತಿಭಟನೆ  ನಡೆಸುವುದಾಗಿ ವ್ಯಾಪಾರಿಗಳು ಎಚ್ಚರಿಕೆ  ನೀಡಿದ್ದಾರೆ.
Published by: Sushma Chakre
First published: October 26, 2020, 10:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories