ನಿನ್ನೆ ಸಿದ್ಧಿವಿನಾಯಕ ಇಂದು ಶಿರಡಿ ಸಾಯಿಬಾಬಾ; ದೈವ ದರ್ಶನದಲ್ಲಿ ಬ್ಯುಸಿಯಾದ ಅತೃಪ್ತ ಶಾಸಕರು

ಸುಪ್ರೀಂ ಕೋರ್ಟ್ ಸೂಚನೆಯಂತೆ ಗುರುವಾರ ಬೆಂಗಳೂರಿಗೆ ಆಗಮಿಸಿದ್ದ ರೆಬೆಲ್ ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ಖುದ್ದು ಹಸ್ತಾಕ್ಷರದಲ್ಲಿ ಬರೆಯಲಾಗಿದ್ದ ರಾಜೀನಾಮೆ ಪತ್ರವನ್ನು ಸಲ್ಲಿಸಿ ತಕ್ಷಣ ಮುಂಬೈಗೆ ಹಿಂದಿರುಗಿದ್ದರು. ಶುಕ್ರವಾರ ಮುಂಬೈನ ಪ್ರಸಿದ್ಧ ಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶನ ದರ್ಶನ ಪಡೆದಿದ್ದ ಶಾಸಕರು ಇಂದು ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ.

MAshok Kumar | news18
Updated:July 13, 2019, 4:03 PM IST
ನಿನ್ನೆ ಸಿದ್ಧಿವಿನಾಯಕ ಇಂದು ಶಿರಡಿ ಸಾಯಿಬಾಬಾ; ದೈವ ದರ್ಶನದಲ್ಲಿ ಬ್ಯುಸಿಯಾದ ಅತೃಪ್ತ ಶಾಸಕರು
ಶಿರಡಿಯ ಸಾಯಿಬಾಬಾ ಅಂಗಳದಲ್ಲಿ ಅತೃಪ್ತರು.
  • News18
  • Last Updated: July 13, 2019, 4:03 PM IST
  • Share this:
ಮುಂಬೈ (ಜುಲೈ.13); ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿ ಮಾಡಿದ್ದ, ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿದ್ದ ಅತೃಪ್ತ ಶಾಸಕರು ಇಂದು ಕೂಲ್ ಮೂಡ್​ನಲ್ಲಿದ್ದು ಮುಂಬೈನ ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಪಕ್ಷದ 13 ರೆಬೆಲ್ ಶಾಸಕರು ಮುಂಬೈನಲ್ಲಿದ್ದು ಎಲ್ಲರೂ ಇಂದು ಇಲ್ಲಿನ ಅಹಮದ್ ನಗರ ಜಿಲ್ಲೆಯ ಶಿರಡಿಗೆ ತಲುಪಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ. ಬೆಳಗ್ಗೆಯೇ ಖಾಸಗಿ ವಿಮಾನದಲ್ಲಿ ಮುಂಬೈನಿಂದ ಶಿರಡಿಗೆ ಪ್ರಯಾಣ ಬೆಳೆಸಿದ್ದ ಶಾಸಕರು ಸಂಜೆ ವೇಳೆಗೆ ಮತ್ತೆ ಮುಂಬೈಗೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ.

ಸುಪ್ರೀಂ ಕೋರ್ಟ್ ಸೂಚನೆಯಂತೆ ಗುರುವಾರ ಬೆಂಗಳೂರಿಗೆ ಆಗಮಿಸಿದ್ದ ರೆಬೆಲ್ ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ಖುದ್ದು ಹಸ್ತಾಕ್ಷರದಲ್ಲಿ ಬರೆಯಲಾಗಿದ್ದ ರಾಜೀನಾಮೆ ಪತ್ರವನ್ನು ಸಲ್ಲಿಸಿ ತಕ್ಷಣ ಮುಂಬೈಗೆ ಹಿಂದಿರುಗಿದ್ದರು. ಶುಕ್ರವಾರ ಮುಂಬೈನ ಪ್ರಸಿದ್ಧ ಸಿದ್ಧಿ ವಿನಾಯಕ ದೇವಾಲಯದಲ್ಲಿ ಗಣೇಶನ ದರ್ಶನ ಪಡೆದಿದ್ದ ಶಾಸಕರು ಇಂದು ಶಿರಡಿ ಸಾಯಿಬಾಬಾ ದರ್ಶನ ಪಡೆದಿದ್ದಾರೆ.

ಜೂನ್ 12 ರಿಂದ 11 ದಿನಗಳ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಆದರೆ ಅತೃಪ್ತ ಶಾಸಕರು ಈ ಅಧಿವೇಶನದಲ್ಲಿ ಪಾಲ್ಗೊಂಡಿಲ್ಲ. ಇನ್ನೂ ಮಂಗಳವಾರ ಇವರ ರಾಜೀನಾಮೆ ಅರ್ಜಿ ಕುರಿತು ವಿಚಾರಣೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬರಲಿದ್ದು ಎಲ್ಲರ ಹಣೆಬರಹ ನಿರ್ಧಾರವಾಗಲಿದೆ.

ಇದನ್ನೂ ಓದಿ : ಎದೆ ಬಗೆದರೆ ನಾನೇ ಇರುತ್ತೇನೆ ಎಂದವನಿಗೆ ರಾಜೀನಾಮೆ ನೀಡುವಾಗ ರಾಮ ಸ್ವರೂಪದ ಸಿದ್ದರಾಮಯ್ಯ ನೆನಪಾಗಲಿಲ್ಲವೇ?; ಎಂಟಿಬಿ​ಗೆ ಸಿದ್ದು ಪ್ರಶ್ನೆ

First published:July 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ