HOME » NEWS » State » AFTER RELEASED SEX CD FOR THE FIRST TIME RAMESH JARKIHOLI CALLED PRESS MEET SESR

Ramesh Jarkiholi: ಇಂದು ಸುದ್ದಿಗೋಷ್ಠಿ ಕರೆದ ರಮೇಶ್​ ಜಾರಕಿಹೊಳಿ; ಸಿಡಿ ಪ್ರಕರಣ ಬಹಿರಂಗ ಸಾಧ್ಯತೆ

ಇಂದು ತಮ್ಮ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ಸಿಡಿ ಪ್ರಕರಣ ಬಹಿರಂಗಕ್ಕೆ ಕಾರಣ ಯಾರು? ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

news18-kannada
Updated:March 9, 2021, 7:16 AM IST
Ramesh Jarkiholi: ಇಂದು ಸುದ್ದಿಗೋಷ್ಠಿ ಕರೆದ ರಮೇಶ್​ ಜಾರಕಿಹೊಳಿ; ಸಿಡಿ ಪ್ರಕರಣ ಬಹಿರಂಗ ಸಾಧ್ಯತೆ
ಸಚಿವ ರಮೇಶ್ ಜಾರಕಿಹೊಳಿ.
  • Share this:
ಬೆಂಗಳೂರು (ಮಾ. 9): ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದವರು ರಮೇಶ್​ ಜಾರಕಿಹೊಳಿ. ಸರ್ಕಾರದಲ್ಲಿ ಪ್ರಭಾವಿ ಖಾತೆ ಪಡೆಯುವ ಮೂಲಕ ಬಿಜೆಪಿ ಸರ್ಕಾರದಲ್ಲಿ ಶಕ್ತಿ ಹೆಚ್ಚಿಸಿಕೊಂಡಿದ್ದ ರಮೇಶ್​ ಜಾರಕಿಹೊಳಿ ಈಗ ಮಾಜಿ ಸಚಿವರು. ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆಹೊತ್ತು ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಿಡಿ ಪ್ರಕರಣ ಸ್ಪೋಟಗೊಳ್ಳುತ್ತಿದ್ದಂತೆ ಅಜ್ಞಾತವಾಸಕ್ಕೆ ತೆರಳಿದ ಅವರು ತಮ್ಮ ರಾಜೀನಾಮೆಯನ್ನು ಸಹೋದರ ಬಾಲಚಂದ್ರ ಜಾರಕಿಹೊಳಿ ಕೈಯಿಂದ ಮುಖ್ಯಮಂತ್ರಿಗಳಿಗೆ ತಲುಪಿಸುವ ಕಾರ್ಯ ಮಾಡಿದರು. ಈ ವೇಳೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಶೀಘ್ರದಲ್ಲಿಯೇ ಈ ಸಿಡಿ ವಿಚಾರ ಸಂಬಂಧ ರಮೇಶ್​ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ ಎಂದಿದ್ದರು.

ಈ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಖುದ್ದು ರಮೇಶ್​ ಜಾರಕಿಹೊಳಿ ಈ ಸಿಡಿ ಪ್ರಕರಣ ಸಂಬಂಧ ಮಾತನಾಡಲು ಸುದ್ಧಿಗೋಷ್ಟಿ ನಡೆಸಲು ಮುಂದಾಗಿದ್ದಾರೆ. ಮಾರ್ಚ್​ 9ರ ಅಂದರೆ ಇಂದು ಬೆಳಗ್ಗೆ 10. 30ಕ್ಕೆ ಅವರು ಈ ಪ್ರಕರಣ ಸಂಬಂಧ ಮಾತನಾಡುವ ಸಾಧ್ಯತೆ ಇದೆ. ಮಂಗಳವಾರ ತಮ್ಮ ಸದಾಶಿವನಗರದ ಮನೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದು, ಈ ಸಿಡಿ ಪ್ರಕರಣ ಬಹಿರಂಗಕ್ಕೆ ಕಾರಣ ಯಾರು? ಎಂಬ ಬಗ್ಗೆ ಮಾತನಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ರಮೇಶ್​ ಜಾರಕಿಹೊಳಿ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಚಿವರು, ನಾಯಕರು ಮೌನ ತಾಳಿದ್ದು, ಇದುವರೆಗೂ ಯಾರು ಈ ಪ್ರಕರಣ ಕುರಿತು ತುಟಿ ಬಿಚ್ಚಿಲ್ಲ. ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿದ್ದ ಈ ಪ್ರಕರಣವನ್ನು  ಕಾಂಗ್ರೆಸ್​ ಸದಸ್ಯರು ಮಾತ್ರ  ಅಸ್ತ್ರ ಮಾಡಿಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ಇದನ್ನು ಓದಿ: ಚಾಮರಾಜನಗರ ಜಿಲ್ಲಾಭಿವೃದ್ಧಿಗೆ ಬಜೆಟ್ ಘೋಷಣೆಗಳೇನು ಗೊತ್ತಾ?

ಸಚಿವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಯುವತಿಯೊಬ್ಬಳಿಗೆ ಕೆಲಸ ಕೊಡಿಸುವ ನೆಪದಿಂದ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ದಿನೇಶ್​ ಕಲ್ಲಹಳ್ಳಿ  ನಗರದ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೆ, ಮಾಧ್ಯಮಗಳ ಎದುರು ಮಾತನಾಡಿ ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು. ಆದರೆ, ಕಳೆದೆರಡು ದಿನಗಳ ಹಿಂದೆ ದಿಢೀರ್​ ಬೆಳವಣಿಗೆಯಲ್ಲಿ ಅವರು  ಸಚಿವರ ವಿರುದ್ಧ  ನೀಡಿದ್ದ ದೂರನ್ನು ಹಿಂಪಡೆದಿದ್ದರು. ಇದು ಕೂಡ ಸಾಕಷ್ಟು ಅನುಮಾನ ಮೂಡಿಸಿತ್ತು. ಅಲ್ಲದೇ, ಸಂತ್ರಸ್ತ ಮಹಿಳೆ ಬಗ್ಗೆ ಕೂಡ ಇದುವರೆಗೂ ಯಾವುದೇ ಮಾಹಿತಿ ಹೊರಬಂದಿಲ್ಲ. ದೂರಿನಲ್ಲಿ ದಾಖಲೆಯಾಗಿದ್ದಂತೆ ಆರ್​ಟಿನಗರದಲ್ಲಿದ್ದ ಎಲ್ಲಾ ಮಹಿಳಾ ಪಿಜಿಗಳನ್ನು ಪರಿಶೀಲಿಸಿದರೂ ಸಂತ್ರಸ್ತೆ ಸುಳಿವು ಸಿಕ್ಕಿರಲಿಲ್ಲ.

ಈ ಹಿನ್ನಲೆ ಮಂಗಳವಾರ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಇದಕ್ಕೆಲ್ಲಾ ಉತ್ತರ ಸಿಗುವ ಸಾಧ್ಯತೆಗಳಿರಬಹುದು ಎನ್ನಲಾಗಿದೆ.  ದಿನೇಶ್​ ಕಲ್ಲಹಳ್ಳಿ ಕುರಿತು, ಸಿಡಿ ಬಿಡುಗಡೆ ಮಾಡಿದವರು ಯಾರು? ಸಂತ್ರಸ್ತೆ ಕುರಿತು ಮಾಜಿ ಸಚಿವರು ತಿಳಿಸುವರೆ ಎನ್ನುವ ಕುತೂಹಲ ಮೂಡಿದೆ.
Published by: Seema R
First published: March 8, 2021, 8:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories