Anekal: ಮಳೆ ನೀರಿಗೆ ಕೆರೆಯಂತಾದ ಹೈವೇ ಸಬ್ ವೇ​; ಸಾರ್ವಜನಿಕರು ಹೈರಾಣು

ಹೈವೇ ಅಧಿಕಾರಿಗಳು ಅಂಡರ್ ಪಾಸ್ ಬಗ್ಗೆ ಮುತುವರ್ಜಿ ವಹಿಸುವುದಿಲ್ಲ. ಹಾಗಾಗಿ ಪಾದಚಾರಿಗಳು ಅನಿವಾರ್ಯವಾಗಿ ಹೆದ್ದಾರಿ ದಾಟಲು ಮುಂದಾಗುತ್ತಾರೆ. ಈ ವೇಳೆ ಅಪಘಾತಗಳು ಸಂಭವಿಸುತ್ತವೆ. ನೀರು ಹೊರ ಹಾಕಲು ಪಂಪ್ ಮಷಿನ್ ಅಳವಡಿಸಿದ್ದಾರೆ‌. ಅದರಿಂದಲೂ ಪ್ರಯೋಜನವಾಗುತ್ತಿಲ್ಲ

ಸಬ್ ವೇ

ಸಬ್ ವೇ

  • Share this:
ಬೆಂಗಳೂರು: ಹೆದ್ದಾರಿಯಲ್ಲಿನ (Highway) ಅಪಘಾತಗಳನ್ನು (Accident) ತಪ್ಪಿಸಲು, ಪಾದಚಾರಿಗಳು ಸುರಕ್ಷತಾ ರಸ್ತೆ ದಾಟಲು ಹೆದ್ದಾರಿಗೆ ಅಡ್ಡಲಾಗಿ ಹೆದ್ದಾರಿ ಪ್ರಾಧಿಕಾರ (NHAI) ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಸಬ್ ವೇ (Sub Way) ನಿರ್ಮಾಣ ಮಾಡಿದೆ. ಆದ್ರೆ ಅವೈಜ್ಞಾನಿಕವಾಗಿ ಅಂಡರ್ ಪಾಸ್ ನಿರ್ಮಾಣ, ಜೊತೆಗೆ ಅಸಮರ್ಪಕ ನಿರ್ವಹಣೆಯಿಂದಾಗಿ ಮಳೆ (Rain) ಸುರಿದರೆ ಅಂಡರ್ ಪಾಸ್ ಕೆರೆಯಂತಾಗುತ್ತದೆ. ಪರಿಣಾಮ ಪಾದಚಾರಿಗಳು ಅದರಲ್ಲು ಮಹಿಳೆಯರು ಮತ್ತು ಮಕ್ಕಳು ಹರಸಾಹಸಪಟ್ಟು ಸಬ್ ವೇನಲ್ಲಿ ಸಂಚರಿಸುವಂತಾಗಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪಾದಚಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಹೌದು ಹೀಗೆ ಸಬ್ ವೇನಲ್ಲಿ ಕೆರೆಯಂತೆ ನಿಂತಿರುವ ಮಳೆ ನೀರು. ಮಳೆ ನೀರಿನಲ್ಲಿಯೇ ಹರಸಾಹಸಪಟ್ಟು ಸಾಗುತ್ತಿರುವ ಪಾದಚಾರಿಗಳು. ಈ ಎಲ್ಲಾ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಬಳಿ. ಪದೇ ಪದೇ ಹೊಸೂರು ಹೆದ್ದಾರಿಯಲ್ಲಿ ರಸ್ತೆ ದಾಟುವ ವೇಳೆ ಅಪಘಾತಗಳು ಸಂಭವಿಸಿ ಅಮಾಯಕ ಪಾದಚಾರಿಗಳು ಸಾವನ್ನಪ್ಪುತ್ತಿದ್ದರು. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಚ್ಚು ಜನ ರಸ್ತೆ ಕ್ರಾಸ್ ಮಾಡುವ ಸ್ಥಳಗಳಲ್ಲಿ ಕೋಟ್ಯಾಂತರ ವೆಚ್ಚದಲ್ಲಿ ಪಾದಚಾರಿಗಳ ಸಬ್ ವೇ ನಿರ್ಮಿಸಲಾಗಿದೆ.

After rainfall Anekal Subway submerged cank mrq
ನೀರು ತುಂಬಿಕೊಂಡಿರುವ ದೃಶ್ಯ


ಐದಾರು ಅಡಿಯಷ್ಟು ನೀರು ಸಂಗ್ರಹ

ಆದ್ರೆ ಅವೈಜ್ಞಾನಿಕವಾಗಿ ಸಬ್ ವೇ ನಿರ್ಮಾಣ ಮಾಡಿರುವುದರಿಂದ ಮಳೆ ನೀರು ಸಾರಾಗವಾಗಿ ಹರಿದು ಹೋಗುತ್ತಿಲ್ಲ. ಪರಿಣಾಮವಾಗಿ ಐದಾರು ಅಡಿ ಮಳೆ ನೀರು  ಸಂಗ್ರಹಗೊಂಡು ಪಾದಚಾರಿಗಳು ಕಷ್ಟಪಟ್ಟು ಸಬ್ ವೇ ಮೂಲಕ ಸಾಗಬೇಕಿದ್ದು, ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪಾದಚಾರಿಗಳಾದ ಮಹಾದೇವ ಸ್ವಾಮಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Karnataka Weather: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೋರು ಮಳೆ, ಭೂಕುಸಿತದ ಆತಂಕ; ನಾಲ್ಕು ದಿನ ಮಳೆ ಅಲರ್ಟ್

After rainfall Anekal Subway submerged cank mrq
ನೀರು ತುಂಬಿಕೊಂಡಿರುವ ದೃಶ್ಯ


ಐದಾರು ದಿನವಾದರೂ ಹರಿದು ಹೋಗದ ನೀರು

ಇನ್ನೂ ಮಳೆ ಸುರಿದರೆ ಹೈವೇ ಸಬ್ ವೇ ನೀರಿನಿಂದ ತುಂಬಿ ಹೋಗುತ್ತವೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಅಂಡರ್ ಪಾಸ್ ಮೂಲಕ ಸಾಗಲು ಹೆದರುತ್ತಾರೆ.  ಸಣ್ಣ ಮಳೆ ಸುರಿದರೂ ಸಬ್ ವೇ ಜಲಾವೃತವಾಗುತ್ತದೆ. ಐದಾರು ದಿನ ಕಳೆದರೂ ಮಳೆ ನೀರು ಖಾಲಿಯಾಗುವದಿಲ್ಲ.

ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ಹೈವೇ ಅಧಿಕಾರಿಗಳು ಸಬ್ ವೇ ಸಮಸ್ಯೆ ಬಗ್ಗೆ ಮುತುವರ್ಜಿ ವಹಿಸುವುದಿಲ್ಲ. ಹಾಗಾಗಿ ಪಾದಚಾರಿಗಳು ಅನಿವಾರ್ಯವಾಗಿ ಹೆದ್ದಾರಿ ದಾಟಲು ಮುಂದಾಗುತ್ತಾರೆ. ಈ ವೇಳೆ ಅಪಘಾತಗಳು ಸಂಭವಿಸುತ್ತವೆ. ನೀರು ಹೊರ ಹಾಕಲು ಪಂಪ್ ಮಷಿನ್ ಅಳವಡಿಸಿದ್ದಾರೆ‌. ಅದರಿಂದಲೂ ಪ್ರಯೋಜನವಾಗುತ್ತಿಲ್ಲ ಎಂದು ಪಾದಚಾರಿಯಾದ ರವಿ ಹೈವೇ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

After rainfall Anekal Subway submerged cank mrq
ನೀರು ತುಂಬಿಕೊಂಡಿರುವ ದೃಶ್ಯ


ಒಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ನಿರ್ಮಿಸಿದ ಅಂಡರ್ ಪಾಸ್ ಗಳು ಅನುಕೂಲಕ್ಕಿಂತ ಪಾದಚಾರಿಗಳಿಗೆ ಅನಾನುಕೂಲವೇ ಹೆಚ್ಚಾಗುತ್ತಿದೆ. ಅದ್ರಲ್ಲು ಮಳೆ ಸಮಯದಲ್ಲಿ ಮತ್ತು ರಾತ್ರಿ ವೇಳೆ ಪುಂಡ ಪೋಕರಿಗಳ ಹಾವಳಿಗೆ ಪಾದಚಾರಿಗಳು ಕಂಗಾಲು ಆಗಿದ್ದು, ಇನ್ನಾದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಬ್ ವೇಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಮೂಲಕ ಅಂಡರ್ ಪಾಸ್ ಗಳನ್ನು ಜನಸ್ನೇಹಿಯಾಗಿ ರೂಪಿಸಬೇಕಿದೆ.

ರಾಜಧಾನಿಯಲ್ಲಿ ಮಳೆ ಸಾಧ್ಯತೆ

ಸಿಲಿಕಾನ್ ಸಿಟಿಯಲ್ಲಿ ಸಂಜೆ ಆಗುತ್ತಿದ್ದಂತೆ ವರುಣನ ಅಬ್ಬರ ಶುರುವಾಗುತ್ತಿದೆ. ಅದು ಗುಡುಗು ಸಹಿತ ಮಳೆ. ರಾಜಧಾನಿಯಲ್ಲಿ ಅಲ್ಲದ ಮರಗಳು, ರಂಬೆ ಕೊಂಬೆಗಳು ಧರೆಗೆ ಉರುಳಿತ್ತಿವೆ. ಇಂದು ರಾಜಧಾನಿಯಲ್ಲಿ ಗರಿಷ್ಠ 27 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ಇದನ್ನೂ ಓದಿ:  Praveen Murder Case: ಮನೆಗೆ ಬರುವ ರಾಜಕಾರಣಿಗಳಿಗೆ ಪ್ರವೀಣ್ ಕುಟುಂಬಸ್ಥರ ಷರತ್ತು!

ಮಳೆಯ ಅಲರ್ಟ್

ಇಂದಿನಿಂದ ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಇಂದು ನಾಳೆ ಬೆಂಗಳೂರು ಮತ್ತು ಗ್ರಾಮಾಂತರದಲ್ಲಿ ಗುಡುಗು ಮಿಂಚು ಸಹಿತ ಹಲವೆಡೆ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞ ಪ್ರಸಾದ್ ರಿಂದ ಮಾಹಿತಿ ನೀಡಿದ್ದಾರೆ.
Published by:Mahmadrafik K
First published: