Karwar: ಮಳೆ ನಿಂತ್ಮೇಲೆ ಎಲ್ಲಿ ನೋಡಿದ್ರೂ ಹಾವುಗಳು; ಒಂದೇ 7 ಜನರಿಗೆ ಕಡಿತ, 40ಕ್ಕೂ ಅಧಿಕ ಉರಗಗಳ ರಕ್ಷಣೆ

ಕಾರವಾರದ ಸದಾಶಿವ ಗಡ, ಹಬ್ಬುವಾಡಗಳಲ್ಲೂ ಹಾವುಗಳ ಉಪಟಳ ಹೆಚ್ಚಾಗಿದೆ. ನಾಗರಹಾವು, ಹೆಬ್ಬಾವು ಹೀಗೆ ಹತ್ತು ಹಲವು ಜಾತಿಯ ಹಾವುಗಳು ಮನೆಗಳಿಗೆ ನುಗ್ಗುತ್ತಿದ್ದು ಇಲಿ, ಕೋಳಿಗಳನ್ನ ಭಕ್ಷಿಸುತ್ತಿವೆ.

ಹಾವು

ಹಾವು

  • Share this:
ಉತ್ತರ ಕನ್ನಡ ಜಿಲ್ಲೆಯ  ಕರಾವಳಿ ಭಾಗದಲ್ಲಿ (Coastal Area Uttara Kannada) ಮಳೆಯ ಅಬ್ಬರ ಕಮ್ಮಿಯಾಗುತಿದ್ದಂತೆ ಇದೀಗ ನದಿ ಕೊಳ್ಳಗಳಿಂದ (Rivers) ಹರಿದು ಬರುವ ನೀರಿನಿಂದಾಗಿ ನದಿ ತಟದ ಗ್ರಾಮಗಳಲ್ಲಿ  ಹಾವುಗಳ (Snakes) ಕಾಟ ಹೆಚ್ಚಾಗಿದ್ದು ಎಲ್ಲಿ ನೋಡಿದರಲ್ಲಿ ಹಾವುಗಳೇ ಕಾಣಸಿಗುತ್ತಿವೆ. ಇದ್ರಿಂದ ಕಂಗೆಟ್ಟ ಗ್ರಾಮಸ್ಥರು (Villagers) ಪದೆ ಪದೆ ಉರಗ ರಕ್ಷಕರನ್ನ ಕರೆಯಿಸುವ ಪಜೀತಿ ಶುರುವಾಗಿದೆ. ನದಿ ತೀರದ ಭಾಗದ ಹಳ್ಳಿಗಳಲ್ಲಿ ಎಲ್ಲಿ ನೋಡಿದರಲ್ಲಿ ಹಾವುಗಳ ಕಾಟ ಶುರುವಾಗಿದೆ. ಒಂದೇ ತಿಂಗಳಲ್ಲಿ ಏಳಕ್ಕೂ ಹೆಚ್ಚು ಜನರಿಗೆ ಹಾವು ಕಚ್ಚಿ ಆಸ್ಪತ್ರೆ (Hospital) ಸೇರಿರುವ ಘಟನೆ ಕೂಡಾ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ ತಾಲೂಕಿನ (Karwar And Ankola) ಹಳ್ಳಿಗಳಲ್ಲೆ  ಹಾವುಗಳ ಕಾಟ ಅಧಿಕವಾಗಿದ್ದು ಜನ ಭಯಭೀತರಾಗಿದ್ದಾರೆ.

ಉರಗ ತಜ್ಞರಿಂದ ಒಂದೇ ತಿಂಗಳಲ್ಲಿ ನಲವತ್ತಕ್ಕೂ ಹೆಚ್ಚು ಹಾವುಗಳ ರಕ್ಷಣೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ ತಾಲೂಕಿನ ಕೆಲ ಗ್ರಾಮದಲ್ಲಿ ಇದೀಗ ಹಾವುಗಳು ನದಿಕೊಳ್ಳಗಳಿಂದ ತೇಲಿ ಬಂದು ಮನೆಯನ್ನ ಸೇರಿಕೊಳ್ಳುತ್ತಿವೆ. ಕಟ್ಟಿಗೆ ರಾಶಿ, ಕೋಳಿ ಗೂಡು ಹೀಗೆ ಎಲ್ಲೆಂದರಲ್ಲಿ ಬೆಚ್ಚಗಿನ ಸ್ಥಳ ಅರಸಿ ಸೇರಿಕೊಳ್ಳುತ್ತಿವೆ.

ಭಯದಲ್ಲೇ ದಿನ ಕಳೆಯುತ್ತಿರುವ ಜನರು

ಮನೆಯವರು ಹಾವುಗಳಿವೆ ಎಂದು ತಿಳಿಯದೇ ಕಚ್ಚಿಸಿಕೊಂಡು ಆಸ್ಪತ್ರೆ ಸೇರುತಿದ್ದಾರೆ. ಇಲ್ಲಿನ ಜನರು ಪ್ರತಿ ದಿನ ಎಲ್ಲೆಂದರಲ್ಲಿ ಹಾವುಗಳನ್ನು ನೋಡಿ ಇದೀಗ ಮನೆಯಲ್ಲಿ ಇರಲು ಸಹ ಭಯ ಪಡುವಂತಾಗಿದ್ದು, ಎಲ್ಲಿ ಯಾರಿಗೆ ಕಚ್ಚುತ್ತದೆಯೋ ಎಂದು ಭಯದಲ್ಲೇ ದಿನ ಕಳೆಯುವಂತಾಗಿದೆ.

After Rain snaked found in Karwar and ankola taluk villages dkk mrq
ಉರಗ ರಕ್ಷಣೆ


ಇದನ್ನೂ ಓದಿ:  Karwar: ಕಾರವಾರ ರೈಲ್ವೇ ನಿಲ್ದಾಣದಲ್ಲಿ ದಾಖಲೆಯಿಲ್ಲದ 2 ಕೋಟಿ ರೂ ನಗದು ವಶಕ್ಕೆ ಪಡೆದ ಪೊಲೀಸರು

ಮಳೆ ಕಡಿಮೆಯಾಗಿದೆ ಹಾವುಗಳ ಉಪಟಳ ಜೋರು

ಕರಾವಳಿ ಭಾಗದಲ್ಲಿ ಅಬ್ಬರಿಸಿದ ಮಳೆ ಇದೀಗ ಕಳೆದ ಒಂದು ವಾರದಿಂದ ತಣ್ಣಗಾಗಿದೆ. ಹೆದ್ದಾರಿ ಭಾಗದಲ್ಲಿ ನಿರಂತರ ಗುಡ್ಡ ಕುಸಿತ, ಚತುಷ್ಪತ ಹೆದ್ದಾರಿ ಕಾಮಗಾರಿಗಾಗಿ ಧರೆಗುರುಳಿದ ಗುಡ್ಡಗಳು ಹಾವುಗಳ ವಾಸಸ್ಥಾನವನ್ನು ನುಂಗಿ ಹಾಕಿದೆ. ಹೀಗಾಗಿ ಆಹಾರ ಅರಸುವ ಜೊತೆ ಬೆಚ್ಚಗಿನ ಸ್ಥಾನ ಹುಡುಕುವ ಹಾವುಗಳು ಇದೀಗ ಜನವಸತಿ ಪ್ರದೇಶಗಳತ್ತ ಮುಖಮಾಡುತ್ತಿವೆ.

ಮನೆಗಳ ಒಳಗೆ, ಮರಗಳ ಮೇಲೆ, ಹುಲ್ಲಿನ ಗೊಣಬೆಯೊಳಗೆ ಮಳೆಯಿಂದ ರಕ್ಷಿಸಿಕೊಳ್ಳಲು ಹಾವುಗಳು ಜನವಸತಿ ಪ್ರದೇಶಗಳತ್ತ ದಾಂಗುಡಿ ಇಡುತ್ತಿವೆ. ಅರಣ್ಯ ಹಾಗೂ ಗುಡ್ಡ ಪ್ರದೇಶವನ್ನು ಹೊಂದಿರುವ ಅಂಕೋಲ ತಾಲೂಕಿನ ಕೇಣಿ, ಆವರ್ಸಾ, ಬೆಲೇಕೇರಿ ಗ್ರಾಮಗಳಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತಿವೆ.

After Rain snaked found in Karwar and ankola taluk villages dkk mrq
ಉರಗ ರಕ್ಷಣೆ


ಹಲವು ಜಾತಿಯ ಹಾವುಗಳು ಪತ್ತೆ

ಕಾರವಾರದ ಸದಾಶಿವ ಗಡ, ಹಬ್ಬುವಾಡಗಳಲ್ಲೂ ಹಾವುಗಳ ಉಪಟಳ ಹೆಚ್ಚಾಗಿದೆ. ನಾಗರಹಾವು, ಹೆಬ್ಬಾವು ಹೀಗೆ ಹತ್ತು ಹಲವು ಜಾತಿಯ ಹಾವುಗಳು ಮನೆಗಳಿಗೆ ನುಗ್ಗುತ್ತಿದ್ದು ಇಲಿ, ಕೋಳಿಗಳನ್ನ ಭಕ್ಷಿಸುತ್ತಿವೆ.

ಒಂದೇ ತಿಂಗಳು ಏಳು ಜನರಿಗೆ ಹಾವು ಕಡಿತ, 40ಕ್ಕೂ ಅಧಿಕ ಉರಗ ರಕ್ಷಣೆ

ಇನ್ನು ಹಾವುಗಳಿವೆ ಎಂದು ಅರಿಯದೇ ಕೆಲವರು ಎಡತಾಗಿ ಹಾವಿನಿಂದ ಕಚ್ಚಿಸಿಕೊಂಡವರು ಸಹ ಇದ್ದು ಒಂದೇ ತಿಂಗಳಲ್ಲಿ ಏಳು ಜನರು ಹಾವಿನ ಕಡಿತಕ್ಕೊಳಗಾಗಿದ್ದಾರೆ. ಇನ್ನು ಹತ್ತಕ್ಕೂ ಹೆಚ್ಚು ಉರಗ ತಜ್ಞರು ಕೂಡ ಒಂದು ತಿಂಗಳಲ್ಲಿ ಮನೆಗೆ ಆಗಮಿಸಿ ತಲಾ ನಲವತ್ತರಂತೆ ಹಾವುಗಳನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ:  Karwar to Bengaluru: ಪ್ರಯಾಣಿಕರಿಗೆ ಖುಷಿ ಸುದ್ದಿ, ಇನ್ಮೇಲೆ 45 ನಿಮಿಷ ಬೇಗನೇ ಬೆಂಗಳೂರು ತಲುಪಿ!

ಮಾನವನ ಸ್ವಯಂ ಕೃತ ಅಪರಾಧಗಳು, ಅಭಿವೃದ್ಧಿಯ ಪರಾಕಾಷ್ಟೆಗಳು ಪರಿಸರದ ಮೇಲೆ ಪರಿಣಾಮ ಬೀರುತ್ತಲಿವೆ. ಇದರ ಪರಿಣಾಮ ಸರಿಸೃಪಗಳು,ಪ್ರಾಣಿ ,ಪಕ್ಷಿಗಳು ತಮ್ಮ ನೆಲವನ್ನು ಕಳೆದುಕೊಳ್ಳುತಿದ್ದು ಇದೀಗ ಮನುಷ್ಯರಿಗೇ ಮಾರಕವಾಗುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಗ್ರಾಮಗಳಿಗೆ ಹಾವುಗಳ ಉಪಟಳವೇ ಸಾಕ್ಷಿಯಾಗಿದೆ.
Published by:Mahmadrafik K
First published: