ಬೆಲೆಯೇರಿಕೆ ಹಿನ್ನೆಲೆ ಮೆಣಸಿಗೂ ತಟ್ಟಿದ ಕಳ್ಳರ ಕಾಟ; ಗದಗದಲ್ಲಿ 5 ಕ್ವಿಂಟಾಲ್ ಒಣ ಮೆಣಸಿನಕಾಯಿ ಕಳವು

ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದ್ದೇ ತಡ ಕಳ್ಳರು ತಮ್ಮ ಕೈಚಳಕ ತೋರಿಸಲು ಶುರುಮಾಡಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದ ರೈತ ಕೃಷ್ಣ ಪಾಟೀಲ್ ಎನ್ನುವವರ ಜಮೀನಿನಲ್ಲಿ ಲಕ್ಷಾಂತರ ರೂ. ಮೌಲ್ಯದ 5 ಕ್ವಿಂಟಾಲ್ ಗೂ ಹೆಚ್ಚು ಮೆಣಸಿನಕಾಯಿ ಕಳ್ಳತನವಾಗಿದೆ.

Sushma Chakre | news18-kannada
Updated:January 11, 2020, 9:30 AM IST
ಬೆಲೆಯೇರಿಕೆ ಹಿನ್ನೆಲೆ ಮೆಣಸಿಗೂ ತಟ್ಟಿದ ಕಳ್ಳರ ಕಾಟ; ಗದಗದಲ್ಲಿ 5 ಕ್ವಿಂಟಾಲ್ ಒಣ ಮೆಣಸಿನಕಾಯಿ ಕಳವು
ಒಣ ಮೆಣಸಿನಕಾಯಿ
  • Share this:
ಗದಗ (ಜ. 11): ಗದಗ ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಕ್ವಿಂಟಾಲ್​ಗೆ 33 ಸಾವಿರ ರೂ.ಗೆ ಮಾರಾಟವಾಗಿದ್ದೇ ತಡ ಕಳ್ಳರ ಕಣ್ಣು ಮೆಣಸಿನಕಾಯಿ ಮೇಲೆ ಬಿದ್ದಿದೆ. ಮನೆಗೆ ನುಗ್ಗಿ ಚಿಚನ, ಬೆಳ್ಳಿ, ಹಣ, ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಕಳ್ಳರು ಈಗ ಮೆಣಸಿನಕಾಯಿ ಕದಿಯಲು ಶುರುಮಾಡಿದ್ದಾರೆ. ಹೀಗಾಗಿ, ರೈತರಿಗೆ ಮೆಣಸಿನಕಾಯಿಯನ್ನು ಕಾಪಾಡಿಕೊಳ್ಳುವುದು ಹೇಗಪ್ಪ ಎಂಬ ಚಿಂತೆ ಶುರುವಾಗಿದೆ.

ಗಗನಕ್ಕೇರಿದ್ದ ಈರುಳ್ಳಿ ಬೆಲೆ ಇದೀಗ ನಿಧಾನವಾಗಿ ಕೆಳಗಿಳಿಯುತ್ತಿದೆ. ಇದರ ನಡುವೆ ಗದಗದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿದ್ದು, ಗದಗದ ರೈತರು ತಂದಿದ್ದ ಬ್ಯಾಡಗಿ ಮೆಣಸಿನಕಾಯಿ ಅಲ್ಲಿನ ಎಪಿಎಂಸಿಯಲ್ಲಿ ಒಂದು ಕ್ವಿಂಟಾಲ್​ಗೆ ಬರೋಬ್ಬರಿ 33,259 ರೂ.ಗೆ ಮಾರಾಟವಾಗಿತ್ತು. ಈ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಕಳ್ಳರ ಹಾವಳಿ ಹೆಚ್ಚಾಗಿದೆ.

ಇದನ್ನೂ ಓದಿ: ಈರುಳ್ಳಿ ಬಳಿಕ ಮತ್ತೆ ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ; ಗಗನಕ್ಕೇರಿದ ಒಣ ಮೆಣಸಿನಕಾಯಿ ದರ

ಮೆಣಸಿನಕಾಯಿ ಬೆಳೆಗೆ ಚಿನ್ನದ ಬೆಲೆ ಬಂದಿದ್ದೇ ತಡ ಕಳ್ಳರು ತಮ್ಮ ಕೈಚಳಕ ತೋರಿಸಲು ಶುರುಮಾಡಿದ್ದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ತೋಟಗಂಟಿ ಗ್ರಾಮದ ರೈತ ಕೃಷ್ಣ ಪಾಟೀಲ್ ಎನ್ನುವವರ ಜಮೀನಿನಲ್ಲಿ ಮೆಣಸಿನಕಾಯಿ ಕಳ್ಳತನವಾಗಿದೆ. ಲಕ್ಷಾಂತರ ರೂ. ಮೌಲ್ಯದ 5 ಕ್ವಿಂಟಾಲ್ ಗೂ ಹೆಚ್ಚು ಮೆಣಸಿನಕಾಯಿ ಕಳ್ಳತನವಾಗಿದೆ. ಜಮೀನಿನಲ್ಲಿ ಒಣ ಮೆಣಸಿನಕಾಯಿ ಹಾಕಿದ್ದಾಗ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಜಮೀನಿನಿಂದ ಕದ್ದ ಮೆಣಸಿನಕಾಯಿಯನ್ನು ಟಾಟಾ ಎಸ್ ವಾಹನದಲ್ಲಿ ಸಾಗಿಸಿದ್ದಾರೆ.

ಕಳ್ಳರನ್ನು ಬೆನ್ನಟ್ಟಿದಾಗ ರೈತನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ಖದೀಮರು ಮೆಣಸಿನಕಾಯಿಯೊಂದಿಗೆ ಪರಾರಿಯಾಗಿದ್ದಾರೆ. ಹಲ್ಲೆಯಿಂದ ರೈತ ಕೃಷ್ಣ ಪಾಟೀಲ್ ಕೈಗೆ ಗಾಯವಾಗಿದ್ದು, ನರೇಗಲ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.

(ವರದಿ: ಸಂತೋಷ್ ಕೊಣ್ಣೂರು)
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ