ನ. 30ರ ನಂತರ ಕನ್ನಡ ನಾಮಫಲಕ ಇಲ್ಲದಿದ್ದರೆ ಲೈಸೆನ್ಸ್ ರದ್ದು: 13 ಸಾವಿರ ಅಂಗಡಿಗಳಿಗೆ ಬಿಬಿಎಂಪಿ ನೋಟೀಸ್

ಬಿಬಿಎಂಪಿಯ ಈ ಕ್ರಮಕ್ಕೆ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್​ಕೆಸಿಸಿಐ) ಕನ್ನಡ ನಾಮಫಲಕ ಅಳವಡಿಕೆಯನ್ನು ಅನುಷ್ಠಾನಕ್ಕೆ ತರುವುದು ಕಷ್ಟಸಾಧ್ಯ. ಇದಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟಿದೆ.

news18
Updated:November 21, 2019, 7:34 AM IST
ನ. 30ರ ನಂತರ ಕನ್ನಡ ನಾಮಫಲಕ ಇಲ್ಲದಿದ್ದರೆ ಲೈಸೆನ್ಸ್ ರದ್ದು: 13 ಸಾವಿರ ಅಂಗಡಿಗಳಿಗೆ ಬಿಬಿಎಂಪಿ ನೋಟೀಸ್
ಪ್ರಾತಿನಿಧಿಕ ಚಿತ್ರ
  • News18
  • Last Updated: November 21, 2019, 7:34 AM IST
  • Share this:
ಬೆಂಗಳೂರು(ನ. 21): ಕನ್ನಡ ಭಾಷೆಯಲ್ಲಿ ನಾಮಫಲಕ ಹೊಂದಿಲ್ಲದ ಅಂಗಡಿ ಮುಂಗಟ್ಟು, ಕಚೇರಿ ಇತ್ಯಾದಿಗಳ ಪರವಾನಿಗೆ ಹಿಂಪಡೆಯಲು ಬಿಬಿಎಂಪಿ ನಿರ್ಧರಿಸಿದೆ. ಬೆಂಗಳೂರಿನ ಸುಮಾರು 13 ಸಾವಿರ ಅಂಗಡಿ, ಮುಂಗಟ್ಟು ಮತ್ತು ಮಳಿಗೆಗಳಿಗೆ ಬಿಬಿಎಂಪಿ ನೋಟೀಸ್ ಜಾರಿ ಮಾಡಿದ್ದು, ಕನ್ನಡ ನಾಮಫಲಕ ಅಳವಡಿಕೆಗೆ ನವೆಂಬರ್ 30ರವರೆಗೆ ಗಡುವು ನೀಡಿದೆ. ನವೆಂಬರ್ 30ರ ನಂತರ ಕನ್ನಡ ನಾಮಫಲಕ ಹಾಕಿಲ್ಲದ ಅಂಗಡಿಗಳ ಲೈಸೆಲ್ಸ್ ರದ್ದುಗೊಳಿಸುವುದಾಗಿ ಈ ನೋಟೀಸ್​ನಲ್ಲಿ ಎಚ್ಚರಿಕೆ ಕೊಡಲಾಗಿದೆ.

ಬಿಬಿಎಂಪಿಯ ನಿಯಮಾವಳಿ ಪ್ರಕಾರ, ಯಾವುದೇ ಅಂಗಡಿ ಅಥವಾ ಮಳಿಗೆಯು ತನ್ನ ನಾಮಫಲಕದಲ್ಲಿ ಕನಿಷ್ಠ ಶೇ. 60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕು. ಇನ್ನುಳಿದ ಭಾಗವನ್ನು ಯಾವುದೇ ಭಾಷೆಯಲ್ಲಾದರೂ ಬರೆದುಕೊಳ್ಳಬಹುದು. ನವೆಂಬರ್ 1ರಂದೇ ಈ ಕ್ರಮ ಅನುಷ್ಠಾನಕ್ಕೆ ಬರಬೇಕಿತ್ತು. ಆದರೆ, ನೂತನ ಬೆಂಗಳೂರು ಮೇಯರ್ ಗೌತಮ್ ಕುಮಾರ್ ಜೈನ್ ಅವರು ಕನ್ನಡ ನಾಮಫಲಕ ಅಳವಡಿಕೆಗೆ ನವೆಂಬರ್ 30ವರೆಗೆ ಗಡುವು ನೀಡಿದ್ದಾರೆ.

ಇದನ್ನೂ ಓದಿ: ಕಾರ್ಖಾನೆಗಳಲ್ಲಿ ಮಹಿಳೆಯರಿಗೂ ನೈಟ್ ಶಿಫ್ಟ್ ಅವಕಾಶ; ರಾಜ್ಯ ಸರ್ಕಾರ ಅಧಿಸೂಚನೆ

“ನಾಮಫಲಕದಲ್ಲಿ ಶೇ. 60ರಷ್ಟು ಭಾಗ ಕನ್ನಡ ಭಾಷೆಯಲ್ಲಿರಬೇಕು. ಇದನ್ನು ಅಳವಡಿಸಿಕೊಳ್ಳದಿದ್ದರೆ ಅವರ ಪರವಾನಿಗೆ ರದ್ದುಗೊಳಿಸಲಾಗುವುದು. ಈ ನಿಯಮ ಪಾಲಿಸದ ಹೊಸ ಉದ್ಯಮಕ್ಕೂ ಲೈಸೆನ್ಸ್ ಕೊಡುವುದಿಲ್ಲ. ಕನ್ನಡ ನಾಮಫಲಕ ಇಲ್ಲದಿದ್ದರೆ ದಂಡ ಹಾಕುವ ಬದಲು ಲೈಸೆನ್ಸ್ ರದ್ದುಗೊಳಿಸುವ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ನ್ಯೂಸ್18 ವಾಹಿನಿಗೆ ಮೇಯರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪರವಾನಿಗೆ ಪಡೆದು ನಿರ್ವಹಿಸುತ್ತಿರುವ 20,689 ಅಂಗಡಿಗಳ ಪೈಕಿ 7,734 ಅಂಗಡಿಗಳು ಮಾತ್ರ ಕನ್ನಡ ನಾಮಫಲಕ ಬಳಸುತ್ತಿರುವುದು ಕಂಡು ಬಂದಿದೆ. ಇನ್ನುಳಿದ 13 ಸಾವಿರಕ್ಕಿಂತ ಹೆಚ್ಚು ಅಂಗಡಿಗಳು ಈ ನಿಯಮ ಪಾಲಿಸುತ್ತಿಲ್ಲ. ಇಂಥ ಅಂಗಡಿಗಳನ್ನು ಗುರುತಿಸಿ ನೋಟೀಸ್ ಕೊಡಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಪ್ರಚಾರ; 4 ಕಾಂಗ್ರೆಸ್ ಕಾರ್ಪೊರೇಟರ್​ಗಳ ಉಚ್ಛಾಟನೆ

ಆದರೆ, ಬಿಬಿಎಂಪಿಯ ಈ ಕ್ರಮಕ್ಕೆ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್​ಕೆಸಿಸಿಐ) ಕನ್ನಡ ನಾಮಫಲಕ ಅಳವಡಿಕೆಯನ್ನು ಅನುಷ್ಠಾನಕ್ಕೆ ತರುವುದು ಕಷ್ಟಸಾಧ್ಯ. ಇದಕ್ಕೆ ಇನ್ನೂ ಹೆಚ್ಚಿನ ಕಾಲಾವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟಿದೆ.“ಉದ್ದಿಮೆ ಮತ್ತು ವ್ಯಾಪಾರಿಗಳ ಹಿಂದೆ ಬೀಳುವ ಬದಲು ಬಿಬಿಎಂಪಿಯು ರಸ್ತೆ ಗುಂಡಿಗಳನ್ನು ಮುಚ್ಚಲು ಗಮನ ಹರಿಸಬೇಕು. ಆರ್ಥಿಕ ಹಿಂಜರಿತದಿಂದಾಗಿ ನಮಗೆ ಎದುರಾಗಿರುವ ಸಮಸ್ಯೆಗಳನ್ನು ಅವರು ಅರಿತುಕೊಳ್ಳಬೇಕು” ಎಂದು ಎಫ್​ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ಧನ ಅವರು ಹೇಳಿದ್ಧಾರೆ.

(ವರದಿ: ಸ್ಟೇಸಿ ಪೆರೀರಾ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:November 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ