HOME » NEWS » State » AFTER NARAYAN ACHAR DIED NEW DEMAND COME OUT FROM AMMA KODAVA RMD

ತಲಕಾವೇರಿಗೆ ಬ್ರಾಹ್ಮಣರ ಪೂಜೆ ಬೇಡ, ನಮಗೆ ಕೊಡಿ; ಅಮ್ಮ ಕೊಡವರ ಬೇಡಿಕೆ

ಅಮ್ಮಕೊಡವರು ಪೂಜೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ  ಸಲ್ಲಿಸಿರುವುದರಲ್ಲಿ ನ್ಯಾಯವಿದೆ. ಅವರಿಗೆ ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎನ್ನೋದು ಅಮ್ಮಕೊಡವ ಮುಖಂಡರ ಅಭಿಪ್ರಾಯ.

news18-kannada
Updated:August 23, 2020, 12:27 PM IST
ತಲಕಾವೇರಿಗೆ ಬ್ರಾಹ್ಮಣರ ಪೂಜೆ ಬೇಡ, ನಮಗೆ ಕೊಡಿ; ಅಮ್ಮ ಕೊಡವರ ಬೇಡಿಕೆ
ಕಾವೇರಿ ನದಿ
  • Share this:
ಬೆಂಗಳೂರು (ಆಗಸ್ಟ್​ 23) : ಕೊಡಗಿನಲ್ಲಿ ಗಜಗಿರಿ ಬೆಟ್ಟ ಕುಸಿದು ಅರ್ಚಕ ನಾರಾಯಣ ಆಚಾರ್ ಅವರು ಮೃತಪಟ್ಟಿದ್ದರು. ಇದಾದ ಬೆನ್ನಲ್ಲೇ ಪೂಜಾ ಕೈಂಕರ್ಯವನ್ನು ನಮಗೆ ನೀಡುವಂತೆ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

150 ವರ್ಷಗಳ ಹಿಂದೆ ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ಅಮ್ಮ ಕೊಡುವರು ಪೂಜೆ ನೆರವೇರಿಸುತಿದ್ದರು. ಕಾಲ ಬದಲಾದಂತೆ ಆ ಪೂಜಾ ಕೈಂಕರ್ಯವನ್ನು ಬ್ರಾಹ್ಮಣ ಅರ್ಚಕರು ನೆರವೇರಿಸಿಕೊಂಡು ಬಂದಿದ್ದರು. ತಲಕಾವೇರಿಯಲ್ಲಿ ಪೂಜೆ ಸಲ್ಲಿಸುತಿದ್ದ ಅರ್ಚಕ ನಾರಾಯಣ ಆಚಾರ್ ಮತ್ತು ಅವರ ಕುಟುಂಬ ಭೂಕುಸಿತದಲ್ಲಿ ಮೃತಪಟ್ಟಿದೆ. ಈಗ ತಲಕಾವೇರಿಯಲ್ಲಿ ಮತ್ತೆ ಪೂಜಾ ಕೈಂಕರ್ಯ ನೆರವೇರಿಸಲು ನಮಗೆ ಅವಕಾಶ ನೀಡುವಂತೆ ಅಖಿಲ ಅಮ್ಮಕೊಡವ ಸಮಾಜ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಅಮ್ಮಕೊಡವರು ಪೂಜೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ  ಸಲ್ಲಿಸಿರುವುದರಲ್ಲಿ ನ್ಯಾಯವಿದೆ. ಅವರಿಗೆ ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎನ್ನೋದು ಅಮ್ಮಕೊಡವ ಮುಖಂಡರ ಅಭಿಪ್ರಾಯ.ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್ ಕುಟುಂಬದ ಮೂವರು ಮತ್ತು ಸಹಾಯಕ ಅರ್ಚಕರು ಇಬ್ಬರು ಸೇರಿ ಐವರು ಕಣ್ಮರೆ ಆಗಿದ್ದರು. ಎನ್‍ಡಿಆರ್ ಎಫ್, ಎಸ್ ಡಿ ಆರ್ ಎಫ್, ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಸೇರಿ 100 ಕ್ಕೂ ಹೆಚ್ಚು ಜನರು ನಿರಂತರ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ತಲಕಾವೇರಿ ಗಜಗಿರಿ ಬೆಟ್ಟ ಕುಸಿತ ಪ್ರಕರಣ; 12 ದಿನಗಳಾದ್ರೂ ಇನ್ನಿಬ್ಬರ ಸುಳಿವಿಲ್ಲ

ಈ ವೇಳೆ ಅರ್ಚಕ ನಾರಾಯಣ ಆಚಾರ್ ಮತ್ತು ಅವರ ಸಹೋದರ ಆನಂದತೀರ್ಥ ಅವರ ಶವಗಳು ಪತ್ತೆಯಾಗಿವೆ. ಜೊತೆಗೆ ಸಹಾಯಕ ಅರ್ಚಕ ರವಿಕಿರಣ್ ಮೃತದೇಹ ಕೂಡ ಶನಿವಾರ ದೊರೆತಿತ್ತು. ಬಳಿಕ ರಕ್ಷಣಾ ತಂಡಗಳಿಗೆ ಉಸ್ತುವಾರಿ ಸಚಿವ ವಿ ಸೋಮಣ್ಣ ಕಾರ್ಯಾಚರಣೆಯನ್ನು ಮುಂದುವರೆಸುವಂತೆ ಸೂಚಿಸಿದ್ದರು. ರಕ್ಷಣಾ ತಂಡಗಳು ಎಷ್ಟು ಪ್ರಯತ್ನಿಸಿದರೂ ಅರ್ಚಕ ನಾರಾಯಣ ಆಚಾರ್ ಅವರ ಪತ್ನಿ ಶಾಂತಾ ಮತ್ತು ಸಹಾಯಕ ಅರ್ಚಕ ಶ್ರೀನಿವಾಸ್ ಇನ್ನು ಪತ್ತೆಯಾಗಿಲ್ಲ.
Published by: Rajesh Duggumane
First published: August 23, 2020, 12:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories