ಮೇ 23ರ ನಂತರ ಮೋದಿಯವರಿಗೆ ಮಹಾನ್ ಫೇಕು ಮಹಾರಾಜ್ ಹೆಸರು ಬರಲಿದೆ: ಬಿಕೆ ಹರಿಪ್ರಸಾದ್​​ ಲೇವಡಿ

ಸರ್ಕಾರದ‌ ಭವಿಷ್ಯ ರಾಹುಲ್ ಗಾಂಧಿ ಮತ್ತು ದೇವೇಗೌಡರ ನಿರ್ಣಯದ ‌ಮೇಲಿದೆ. ಅವರನ್ನು ಬಿಟ್ಟು ಉಳಿದವರೆಲ್ಲರ ಮಾತುಗಳು ಕೇವಲ‌ ರಾಜಕೀಯ ಪ್ರೇರಿತ ಹೇಳಿಕೆಗಳು ಮಾತ್ರ ಎಂದು ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದರು

ಬಿ.ಕೆ.ಹರಿಪ್ರಸಾದ್

ಬಿ.ಕೆ.ಹರಿಪ್ರಸಾದ್

  • News18
  • Last Updated :
  • Share this:
ಹುಬ್ಬಳ್ಳಿ(ಮೇ 14): ಮೇ 23ರ ಚುನಾವಣಾ ಫಲಿತಾಂಶದ ನಂತರ ಪ್ರಧಾನಿ ನರೇಂದ್ರ  ಮೋದಿ ಅವರಿಗೆ "ಮಹಾನ್ ಫೇಕು ಮಹಾರಾಜ್" ಅಂತಾ ಹೆಸರು ಬರಲಿದೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ನೀಡಿದ ಕೆಲ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿ ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿಯ ಸಂದರ್ಭದಲ್ಲಿ ಮೋದಿ‌ ಮೋಡದ ವಿಜ್ಞಾನಿ ಆಗಿದ್ದರು. ಅವರು ಪ್ಲ್ಯಾಸ್ಟಿಕ್ ಸರ್ಜರಿ ವಿಜ್ಞಾನಿ ಕೂಡ ಆಗಿದ್ದಾರೆ. ಅವರ ಪದವಿಯೂ ಫೇಕ್, ಅವರ ಕೊಟ್ಟ ಕಾರ್ಯಕ್ರಮಗಳು ಕೂಡ ನಕಲಿ. ಮೊದಲು ಪ್ರಧಾನ ಸೇವಕ ಅಂದ್ರು, ಆ ಬಳಿಕ ಚೌಕಿದಾರ ಅಂದ್ರು. ಆದರೆ ಮೇ 23 ರ ಬಳಿಕ ಅವರಿಗೆ ಬೇರೆಯದೇ ಹೆಸರೇ ಬರಲಿದೆ. "ಮಹಾನ್ ಫೇಕು ಮಹಾರಾಜ್" ಬಿರುದು ಅವರಿಗೆ ಸಿಗಲಿದೆ ಎಂದು ಪ್ರಧಾನಮಂತ್ರಿ ವಿರುದ್ಧ ಬಿ.ಕೆ. ಹರಿಪ್ರಸಾದ್ ಲೇವಡಿ ಮಾಡಿದರು.

ಕಾಂಗ್ರೆಸ್ ಮುಖಂಡರು ಇರುವ ಹೋಟೆಲ್‌ಗಳ ಮೇಲೆ‌ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು,  ಐಟಿ, ಸಿಬಿಐನಂತಹ ಪಕ್ಷಗಳ ಸಮ್ಮಿಶ್ರ ಸರ್ಕಾರವೇ ಎನ್.ಡಿ.ಎ. ಆಗಿ ಹೋಗಿದೆ.  ಐಟಿ ಮತ್ತು‌ ಇಡಿಯನ್ನು ರಾಜಕೀಯ ದಾಳಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡಿದರು.

ಸರ್ಕಾರದ‌ ಭವಿಷ್ಯ ರಾಹುಲ್ ಗಾಂಧಿ ಮತ್ತು ದೇವೇಗೌಡರ ನಿರ್ಣಯದ ‌ಮೇಲಿದೆ. ಅವರನ್ನು ಬಿಟ್ಟು ಉಳಿದವರೆಲ್ಲರ ಮಾತುಗಳು ಕೇವಲ‌ ರಾಜಕೀಯ ಪ್ರೇರಿತ ಹೇಳಿಕೆಗಳು ಮಾತ್ರ ಎಂದು ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದರು.

ರಮೇಶ ಜಾರಕಿಹೊಳಿ ಈಗಲೂ ಸಹ ಪಕ್ಷದಲ್ಲಿ ಇದ್ದಾರೆ. ಅವರು ನಮ್ಮ ಪಕ್ಷದಲ್ಲೇ ಇರ್ತಾರೆ. ಬೇರೆ ಎಲ್ಲಿಯೂ‌ ಹೋಗಿಲ್ಲ. ರಮೇಶ ಜಾರಕಿಹೊಳಿ‌ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ವಿಆರ್​ ಸುದರ್ಶನ್ ನೇತೃತ್ವದ ಸಮಿತಿಯನ್ನು ಮಾಡಲಾಗಿದೆ. ಅವರು ನೊಟೀಸ್​​ ನೀಡುತ್ತಾರೆ. ಅಂತಿಮ ತಿರ್ಮಾನ  ಆ ಸಮಿತಿ  ಕೈಗೊಳ್ಳುತ್ತದೆ ಎಂದು ಹರಿಪ್ರಸಾದ್ ತಿಳಿಸಿದರು.

ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ: ಡಿಕೆ ಸುರೇಶ್

ಕುಂದಗೋಳದ ಮತದಾರರು ಮುಗ್ದರಿದ್ದಾರೆ. ಉಪಕಾರ ಸ್ಮರಿಸಿಕೊಳ್ಳುವ ಗುಣದವರಿದ್ದಾರೆ. ಸಿ.ಎಸ್. ಶಿವಳ್ಳಿ ಅವರು ಮಾಡಿದ ಒಳ್ಳೆಯ ಕೆಲಸವನ್ನು ಸ್ಮರಿಸಿ ಕಾಂಗ್ರೆಸ್​ಗೆ ಕುಂದಗೋಳದ ಜನರು ವೋಟು ಹಾಕುತ್ತಾರೆ ಎಂಬ ವಿಶ್ವಾಸವನ್ನು ಡಿಕೆ ಸುರೇಶ್ ವ್ಯಕ್ತಪಡಿಸಿದರು.

ಡಿಕೆಶಿ ಮೇಲೆ ಗುರಿ ಮಾಡಿ ನಡೆಯುತ್ತಿರುವ ರಾಜಕೀಯ ಚಟುವಟಿಕೆ ಬಗ್ಗೆ ಮಾತನಾಡಿದ ಡಿಕೆ ಶುರೇಶ್, ಪ್ರಬಲರನ್ನು ಟಾರ್ಗೆಟ್ ಮಾಡುವುದು ಸಹಜ. ಸಚಿವ ಡಿ.ಕೆ‌. ಶಿವಕುಮಾರ್ ಬಗ್ಗೆ ಆತಂಕ ಇರುವುದರಿಂದ ಬಿಜೆಪಿಯವರು ಮುಗಿಬೀಳುತ್ತಿದ್ದಾರೆ. ಜನರ ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಮತ ಸೆಳೆಯಲು ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಅಂತಾ ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
First published: