ರಾಷ್ಟ್ರಧ್ವಜ ನೇಯುವ ನೇಕಾರ ಮಹಿಳೆಯರ ಗೋಳು ಕೇಳತ್ತಾ ಬಿಎಸ್ ಯಡಿಯೂರಪ್ಪ ಸರ್ಕಾರ?

ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ 1981ರಲ್ಲಿ ಸ್ಥಾಪನೆಯಾಗಿದ್ದು. ಸದ್ಯ 60ಮಹಿಳೆಯರು ನೇಯ್ಗೆಯಲ್ಲಿ ತೊಡಗಿದ್ದಾರೆ. ಇಲ್ಲಿ ಕಳೆದ 15 ವರ್ಷಗಳಿಂದ ರಾಷ್ಟ್ರಧ್ವಜದ ಬಟ್ಟೆಯನ್ನ ತಯಾರಿಸುತ್ತಲೇ ಬರಲಾಗುತ್ತಿದೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನ ಹುಬ್ಬಳ್ಳಿ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಸದ್ಯ ಪ್ರತಿ ತಿಂಗಳು 1500 ಮೀಟರ್ ರಾಷ್ಟ್ರ ಧ್ವಜ ಬಟ್ಟೆಯಿಂದ 6ಲಕ್ಷದವರೆಗೂ ಉತ್ಪಾದನೆಯಿದ್ದು, ಹೀಗಿರುವಾಗ ಇಲ್ಲಿ ಕೆಲಸ ಮಾಡುವ ನೇಕಾರರಿಗೆ ಮಾತ್ರ ದುಡಿತಕ್ಕೆ ತಕ್ಕಂತೆ ಸಮರ್ಪಕ ಕೂಲಿ ಮಾತ್ರ ಸಿಗುತ್ತಿಲ್ಲ.

ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ

ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ

 • Share this:
  ಬಾಗಲಕೋಟೆ (ಜ.25): ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ದಿನ ಹತ್ತಿರ ಬಂದಾಗ ಮಾತ್ರ ರಾಷ್ಟ್ರಧ್ವಜ ಬಟ್ಟೆ ನೇಕಾರರು ನೆನಪಾಗುತ್ತಾರೆ. ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಹೆಮ್ಮೆಯ ಪ್ರತೀಕವಾಗಿರುವ ರಾಷ್ಟ್ರಧ್ವಜದ ಬಟ್ಟೆಯನ್ನು ನೇಕಾರರು ಮಹಿಳೆಯರು ತಯಾರಿಸುತ್ತಾರೆ. ಅವರು ಅಭಿಮಾನದಿಂದ ಮಾಡುವ ಕೆಲಸಕ್ಕೆ ಮಾತ್ರ ಇಂದಿಗೂ ಸಮರ್ಪಕ ಕೂಲಿ ಸಿಗ್ತಿಲ್ಲ.

  ಕಳೆದ ೧೫ ವರ್ಷಗಳಿಂದ ಖಾದಿ ಕೇಂದ್ರದಲ್ಲಿ ರಾಷ್ಟ್ರಧ್ವಜದ ಬಟ್ಟೆ ನೇಯುತ್ತಲೇ ಬದುಕು ಸಾಗಿಸುತ್ತಿರುವ ನೇಕಾರರ ಬದುಕು ಅತ್ಯಂತ ಕಷ್ಟದಿಂದ ಕೂಡಿದೆ. ಈ ಮಧ್ಯೆ ಮತ್ತೊಮ್ಮೆ ರಾಷ್ಟ್ರಧ್ವಜವನ್ನ ಹಾರಿಸುವ ಗಣರಾಜ್ಯೋತ್ಸವ ದಿನ ಬಂದಿದೆ. ಆದರೆ ಇಲ್ಲಿನ ನೇಕಾರರ ಗೋಳು ಕೇಳೋರು ಮಾತ್ರ ಯಾರೂ ಇಲ್ಲ. ರಾಜ್ಯ ಸರ್ಕಾರ, ಸಿಎಂ ಬಿ ಎಸ್ ಯಡಿಯೂರಪ್ಪ ನಮಗೆ ಹೆಲ್ಪ್ ಮಾಡಿ ಎಂದು ನೇಕಾರ ಮಹಿಳೆಯರು ಮೊರೆಯಿಡುತ್ತಿದ್ದಾರೆ‌.

  ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ತಯಾರಿಸುವ ತಿರಂಗಾ ಧ್ವಜ ಫೇಮಸ್

  ತುಳಸಿಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ 1981ರಲ್ಲಿ ಸ್ಥಾಪನೆಯಾಗಿದ್ದು. ಸದ್ಯ 60ಮಹಿಳೆಯರು ನೇಯ್ಗೆಯಲ್ಲಿ ತೊಡಗಿದ್ದಾರೆ. ಇಲ್ಲಿ ಕಳೆದ 15 ವರ್ಷಗಳಿಂದ ರಾಷ್ಟ್ರಧ್ವಜದ ಬಟ್ಟೆಯನ್ನ ತಯಾರಿಸುತ್ತಲೇ ಬರಲಾಗುತ್ತಿದೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನ ಹುಬ್ಬಳ್ಳಿ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಸದ್ಯ ಪ್ರತಿ ತಿಂಗಳು 1500 ಮೀಟರ್ ರಾಷ್ಟ್ರ ಧ್ವಜ ಬಟ್ಟೆಯಿಂದ 6ಲಕ್ಷದವರೆಗೂ ಉತ್ಪಾದನೆಯಿದ್ದು, ಹೀಗಿರುವಾಗ ಇಲ್ಲಿ ಕೆಲಸ ಮಾಡುವ ನೇಕಾರರಿಗೆ ಮಾತ್ರ ದುಡಿತಕ್ಕೆ ತಕ್ಕಂತೆ ಸಮರ್ಪಕ ಕೂಲಿ ಮಾತ್ರ ಸಿಗುತ್ತಿಲ್ಲ.

  1 ಮೀಟರ್ ಬಟ್ಟೆ ನೇಯ್ದರೆ 20 ರಿಂದ 25 ರೂಪಾಯಿ ಸಿಗುತ್ತದೆ, ಹೀಗೆ ದಿನವಿಡೀ ದುಡಿದರೂ ಸಮರ್ಪಕ ಕೂಲಿ ಸಿಗುವುದಿಲ್ಲ. ಇದರಿಂದ ಇಲ್ಲಿಗೆ ರಾಷ್ಟ್ರಧ್ವಜದ ಬಟ್ಟೆ ತಯಾರಿಸಲು ಬರುವ ನೇಕಾರರು ಸೂಕ್ತ ಕೂಲಿ ಸಿಗದೇ ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ. ದಿನಕ್ಕೆ 100-150 ರೂಪಾಯಿ ದುಡಿಯ ಬೇಕಾದರೂ ಶೋಚನೀಯ ಪರಿಸ್ಥಿತಿ ಇಲ್ಲಿದೆ. ಹೀಗಾಗಿ ಸರ್ಕಾರ ರಾಷ್ಟ್ರಧ್ವಜದ ಬಟ್ಟೆ ತಯಾರಿಸೋ ನಮ್ಮಂತಹ ನೇಕಾರರ ಗೋಳು ಕೇಳಿ ಕೂಲಿ ಹೆಚ್ಚಿಸುವಂತಾಗಲಿ. ನೂತನ ಸಿಎಂ ಯಡಿಯೂರಪ್ಪನವರೇ ಪ್ಲೀಸ್ ನಮಗೆ ಸಹಾಯ  ಮಾಡಿ ಅಂತಿದ್ದಾರೆ ಇಲ್ಲಿನ ನೇಕಾರ ಮಹಿಳೆಯರು.  ಇನ್ನು ಇಂದಿನ ದಿನಗಳಲ್ಲಿ ಬೇರೆ ಬೇರೆ ಕೂಲಿಗಳಿಗೆ ಹೋಲಿಸಿಕೊಂಡರೆ ರಾಷ್ಟ್ರಧ್ವಜ ಬಟ್ಟೆ ತಯಾರಿಸುವ ನೇಕಾರರಿಗೆ ಕೊಡುವ ಕೂಲಿ ಮಾತ್ರ ಕಡಿಮೆಯಿದ್ದು. ಬೇರೆ ಕಡೆಗೆ ಹೋದರೆ ಇದಕ್ಕಿಂತಲೂ ಹೆಚ್ಚಿನ ಕೂಲಿ ಪಡೀಬಹುದು. ಆದರೆ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಅಭಿಮಾನದಿಂದ ಇಲ್ಲಿನ ನೇಕಾರರು ಮಾತ್ರ ಬೇರೆ ಉದ್ಯೋಗದತ್ತ ಮುಖಮಾಡಿಲ್ಲ. ಹೀಗಾಗಿ ಕಡಿಮೆ ಕೂಲಿ ಪಡೆದು ರಾಷ್ಟ್ರಧ್ವಜದ ಬಟ್ಟೆ ತಯಾರಿಕೆಯಲ್ಲಿ ಅತ್ಯಂತ ಸ್ವಾಭಿಮಾನದ ಬದುಕನ್ನ ಇಲ್ಲಿನ ನೇಕಾರರು ನಡೆಸುತ್ತಿದ್ದಾರೆ. ಇಲ್ಲಿರೋ ನೇಕಾರರಿಗೆ ಕೂಲಿ ಹೆಚ್ಚಿಗೆ ಮಾಡಬೇಕು ಮತ್ತು ವಯಸ್ಸಾದ ಬಳಿಕ ಹಲವಾರು ವರ್ಷ ದುಡಿದವರಿಗೆ ನಿವೃತ್ತಿ ವೇತನ(ಪಿಂಚಣಿ)ವೊಂದನ್ನು ಕೊಡುವಂತಾಗಬೇಕು. ಹೀಗಾಗಿ ಸರ್ಕಾರ ನಮ್ಮಂತಹ ಬಡನೇಕಾರರ ಪ್ರೋತ್ಸಾಹಕ್ಕೆ ನಿಲ್ಲಬೇಕು ಅಂತಾರೆ ನೇಕಾರರು.

  ಖಾದಿ ಕೇಂದ್ರದ ನೇಯ್ಗೆಯವರಿಗೆ ಬಿಡುಗಡೆ ಮಾಡಿಲ್ಲ ಅನುದಾನ

  ರಾಜ್ಯ ಸರ್ಕಾರ ಬಟ್ಟೆ ನೇಯುವ ನೇಕಾರರಿಗೆ ಪ್ರತಿ ಮೀಟರ್ ಗೆ 7ರೂ ಹಾಗೂ ಲಡಿಗೆ 3ರಂತೆ ಅನುದಾನ ಕೊಡುತ್ತದೆ. ಆದರೆ ರಾಜ್ಯ ಸರ್ಕಾರ 1986ರಲ್ಲಿ ಒಂದು ವರ್ಷ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನು ಕಳೆದ ವರ್ಷ 6 ತಿಂಗಳು ಮಾತ್ರ ಅನುದಾನ ಬಿಡುಗಡೆ ಮಾಡಿ ಇನ್ನುಳಿದು ಬಾಕಿ ಉಳಿಸಿಕೊಂಡಿದೆ.

  ಖಾದಿ ಗ್ರಾಮೋದ್ಯೋಗ ಕೇಂದ್ರದ ಸಂಯುಕ್ತ ಸಂಘದಿಂದ ಈಚೆಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದಾರೆ. ಜನವರಿ ತಿಂಗಳಾಂತ್ಯಕ್ಕೆ ಮತ್ತೆ ಖಾದಿ ಗ್ರಾಮೋದ್ಯೋಗ ಕೇಂದ್ರದ ನೇಕಾರರು ಬೇಡಿಕೆ ಹೊತ್ತು ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ.

  ಒಟ್ಟಿನಲ್ಲಿ ರಾಷ್ಟ್ರಧ್ವಜದ ಬಟ್ಟೆ ತಯಾರಿಸುವ ಕಾಯಕದಲ್ಲಿ ನಿರತರಾಗಿರುವ ನೇಕಾರ ಮಹಿಳೆಯರು ಬದುಕು ಸಂಕಷ್ಟದಲ್ಲಿದೆ. ಆದರೆ ರಾಷ್ಟ್ರೀಯ ಹಬ್ಬದಂದು ನಾವೆಲ್ಲ ಸಂಭ್ರಮಿಸುತ್ತೇವೆ‌. ತುಳಸಿಗೇರಿ ಖಾದಿ ಗ್ರಾಮೋದ್ಯೋಗದ ನೇಕಾರರು ಅಭಿಮಾನದ ಮೂಲಕ ಕಡಿಮೆ ಕೂಲಿ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರ, ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಈ ಭಾಗದ ಡಿಸಿಎಂ ಗೋವಿಂದ ಕಾರಜೋಳ ಕಣ್ತೆರೆದು ನೋಡಿ ಕೂಲಿ ಹೆಚ್ಚಿಸುವುದು ಮತ್ತು ನಿವೃತ್ತಿ ವೇತನ ನೀಡುವಂತಹ ನಿರ್ಣಯ ಕೈಗೊಳ್ಳುವದರ ಮೂಲಕ ಖಾದಿ ಗ್ರಾಮೋದ್ಯೋಗ ಕೇಂದ್ರದ ನೇಕಾರರ ಬೇಡಿಕೆಗೆ ಸ್ಪಂದಿಸಿ ಬೇಕಿದೆ.

  (ವರದಿ: ರಾಚಪ್ಪ ಬನ್ನಿದಿನ್ನಿ)

  ಇದನ್ನೂ ಓದಿ: ನಾನು ನನ್ನ ಮುಖವನ್ನು ಬೆವರಿನಿಂದ ಮಸಾಜ್ ಮಾಡಿಕೊಳ್ಳುತ್ತೇನೆ; ಕಾಂತಿಯುತ ತ್ವಚೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಪ್ರಧಾನಿ ಮೋದಿ

  ಇದನ್ನೂ ಓದಿ: ‘ಮನ್ನತ್‘ ಮನೆಯ ಕೋಣೆಯನ್ನ ಬಾಡಿಗೆ ಕೇಳಿದ ಅಭಿಮಾನಿ!; ಶಾರುಖ್​ ಖಾನ್​ ನೀಡಿದ ಉತ್ತರವೇನು ಗೊತ್ತಾ?

  ಇದನ್ನೂ ಓದಿ: ಹಾಸನದಲ್ಲಿ ಮನೆಗೆ ನುಗ್ಗಿ ಮಹಿಳೆಯ ಕೊಲೆ ಯತ್ನ; ಬಿಹಾರ ಮೂಲದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ
  First published: