ಮಂಗಳೂರು ಬಾಂಬ್ ಪ್ರಕರಣದ ನಂತರ ರಾಜ್ಯದಲ್ಲಿ ಹೈ ಅಲರ್ಟ್ - ಐತಿಹಾಸಿಕ ಗೋಳಗುಮ್ಮಟಕ್ಕೆ ನಾಮಕಾವಸ್ತೆ ಭದ್ರತೆ

ಗೋಳಗುಮ್ಮಟದಲ್ಲಿ ಇದ್ದ ಒಂದೇ ಒಂದು ಮೆಟಲ್ ಡಿಟೆಕ್ಟರ್ ಯಂತ್ರ ಕೂಡ ಸ್ಥಗಿತವಾಗಿದ್ದು, ಹಲವು ತಿಂಗಳುಗಳಿಂದ ಕಾರ್ಯ ನಿರ್ವಹಿಸದ ಕಾರಣ ಸ್ಫೋಟಕ ವಸ್ತುಗಳ ಪತ್ತೆಯು ನಡೆಯುತ್ತಿಲ್ಲ

ಗೋಳಗುಮ್ಮಟ

ಗೋಳಗುಮ್ಮಟ

  • Share this:
ವಿಜಯಪುರ(ಜ.22) : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ನಡೆಯುತ್ತಿದೆ. ಆದರೆ, ವಿಜಯಪುರದಲ್ಲಿರುವ ಐತಿಹಾಸಿಕ ಸ್ಮಾರಕಕ್ಕೆ ಭದ್ರತೆ ಇದ್ದೂ ಇಲ್ಲದಂತಾಗಿದೆ. ವಿಶ್ವವಿಖ್ಯಾತ ಗೋಳಗುಮ್ಮಟಕ್ಕಿಲ್ಲ ಸೂಕ್ತ ಭದ್ರತೆ ಕೊರತೆಯಿದೆ ಎಂಬ ಆರೋಪ ಕೇಳಿ ಬರುತ್ತಿದೆ. 

ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲಿನ ಗೋಳಗುಮ್ಮಟದ ಆವರಣದಲ್ಲಿ ಎಲ್ಲರು ಹೋಗಬಹುದು ಎಂಬಂತಾಗಿದೆ. ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂಥ ಪರಿಸ್ಥಿತಿ ಇದೆ. ಗೋಳಗುಮ್ಮಟದ ಆವರಣದಲ್ಲಿ ಶ್ವಾನಗಳು ಆರಾಮಾಗಿ ಓಡಾಡಿಕೊಂಡಿವೆ.

ಯಾರು ಬಂದು ಹೋದರೂ ಇಲ್ಲಿ ತಪಾಸಣೆ ಮಾಡುವುದಿಲ್ಲ. ಆವರಣದಲ್ಲಿರುವ  ಭದ್ರತಾ ಸಿಬ್ಬಂದಿಗಳು ಕೂಡ ಇದ್ದೂ ಇಲ್ಲದಂತಾಗಿದೆ. ತಮ್ಮ ಎದುರೇ ನಾಯಿಗಳು ಓಡಾಡಿಕೊಂಡಿದ್ದರೂ ಇವರ ಮನೋಸ್ಥಿತಿ ಡೋಂಟ್ ಕೇರ್ ಎನ್ನುವಂತಿದೆ.

detective matter
ಮೆಟಲ್ ಡಿಟೆಕ್ಟರ್


ಗೋಳಗುಮ್ಮಟದಲ್ಲಿ ಇದ್ದ ಒಂದೇ ಒಂದು ಮೆಟಲ್ ಡಿಟೆಕ್ಟರ್ ಯಂತ್ರ ಕೂಡ ಸ್ಥಗಿತವಾಗಿದ್ದು, ಹಲವು ತಿಂಗಳುಗಳಿಂದ ಕಾರ್ಯ ನಿರ್ವಹಿಸದ ಕಾರಣ ಸ್ಫೋಟಕ ವಸ್ತುಗಳ ಪತ್ತೆಯು ನಡೆಯುತ್ತಿಲ್ಲ. ಆದರೂ ಎಚ್ಚೆತ್ತುಕೊಳ್ಳದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ : ಕಾನೂನು ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿ ಎಸ್ ಉಗ್ರಪ್ಪ

ಗೋಳಗುಮ್ಮಟಕ್ಕೆ ಸೂಕ್ತ ಭದ್ರತೆ ಒದಗಿಸದೆ ನಿರ್ಲಕ್ಷ್ಯ ತೋರಿದ ಇಲಾಖೆ ವಿರುದ್ಧ ಜನ ಹಿಡಿಶಾಪ ಹಾಕುವಂತಾಗಿದೆ. ಪ್ರತಿನಿತ್ಯ ಈ ಐತಿಹಾಸಿಕ ಗೋಳಗುಮ್ಮಟ ವೀಕ್ಷಣೆಗೆ ಕರ್ನಾಟವಷ್ಟೇ ಅಲ್ಲ ದೇಶದ ನಾನಾ ಭಾಗಗಳಿಂದ ಹಾಗೂ ವಿದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.  ಈ ಹಿನ್ನಲೆಯಲ್ಲಿ ಈಗಲಾದರೂ ಈಗಲಾದರೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
First published: