Hijab Controversy: ಮಂಡ್ಯ ಬಳಿಕ ತುಮಕೂರಿನಲ್ಲಿ ಮಾರ್ದನಿಸಿದ ‘ಅಲ್ಲಾಹು ಅಕ್ಬರ್’ ಘೋಷಣೆ..!

ತುಮಕೂರಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಅಲ್ಲಾಹು ಅಕ್ಬರ್​ ಘೋಷಣೆ ಕೂಗಿ ಗಮನ ಸೆಳೆದಿದೆ.  ತುಮಕೂರಿನ ಟೌನ್ ಹಾಲ್ ಬಳಿಯಿರೋ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು: ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ಯುವಕರ ಗುಂಪು ಶ್ರೀರಾಮ್​​​ (Jai Sriram) ಎಂದು ಘೋಷಣೆ ಕೂಗುತ್ತಿರುವ ಮಧ್ಯೆ ಮುಸ್ಲಿಂ ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್​ (Allahu Akbar) ಎಂದು ಕೂಗಿದ್ದ ವಿಡಿಯೋ (Viral video) ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಆ ಯುವತಿಗೆ ಮುಸ್ಲಿಂ ಸಂಘಟನೆಗಳು 5 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು. ಹಲವು ರಾಜಕೀಯ ಮುಖಂಡರು ಯುವತಿಯ ಮನೆಗೆ ಭೇಟಿ ನೀಡಿ ಆಕೆಯ ಧೈರ್ಯವನ್ನು ಶ್ಲಾಘಿಸಿದ್ದರು. ಅದೇ ರೀತಿ ಇಂದು ತುಮಕೂರಿನಲ್ಲಿ (Tumkur) ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಅಲ್ಲಾಹು ಅಕ್ಬರ್​ ಘೋಷಣೆ ಕೂಗಿ ಗಮನ ಸೆಳೆದಿದೆ. ತುಮಕೂರಿನ ಟೌನ್ ಹಾಲ್ ಬಳಿಯಿರೋ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಹಿಜಾಬ್ ತೆಗೆದು ಶಾಲೆಯ ಒಳಗೆ ಬರುವಂತೆ ಸೂಚಿಸುತ್ತಿದ್ದ ಶಾಲಾ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.  ನಾವು ಹಿಜಾಬ್ ಧರಿಸಿಯೇ ಶಾಲೆಗೆ ಬರೋದು ಅಂತ ಪಟ್ಟು ಹಿಡಿದರು.

ಇದನ್ನೂ ಓದಿ: Hijab Controversy: 'ಶ್ರೀರಾಮ್' ಮಧ್ಯೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಯುವತಿಯ ಅದೃಷ್ಟವೇ ಬದಲಾಗಿ ಹೋಯ್ತು!

ಮನವೊಲಿಕೆ ಪ್ರಯತ್ನ ವಿಫಲ

ಸುಮಾರು 30 ರಿಂದ 40 ವಿದ್ಯಾರ್ಥಿನಿಯರು ಗುಂಪು ಸೇರಿ ಹಿಜಾಬ್ ಇಲ್ಲದೆ ಒಳಗೆ ಬರಲ್ಲ ಎಂದು ಹಠ ಹಿಡಿದರು. ಮನವೊಲಿಕೆಗೆ ಬಗ್ಗದ ವಿದ್ಯಾರ್ಥಿನಿಯರು ಪೊಲೀಸರ ಜೊತೆ ವಾಗ್ವಾದಕ್ಕೀಳಿದರು.  ಸ್ಥಳಕ್ಕೆ ತಹಶೀಲ್ದಾರ್ ಮೋಹನ್ ಕುಮಾರ್ ಭೇಟಿ ನೀಡಿ ಕೋರ್ಟ್ ಆದೇಶ ಪಾಲಿಸುವಂತೆ ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ಹೇಳಿದರು. ಏನೇ ಆಗ್ಲಿ ಹಿಜಾಬ್ ತೆಗೆಯುವುದಿಲ್ಲವೆಂದು ವಿದ್ಯಾರ್ಥಿನಿಯರ ಪಟ್ಟು ಹಿಡಿದರು.

ಪ್ರತಿಭಟನೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ

ನಂತರ ತುಮಕೂರಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಪ್ರತಿಭಟನಾ ಮೆರವಣಿಗೆ ಮಾಡಿದ್ದಾರೆ. ಎಂಪ್ರೆಸ್ ಕಾಲೇಜಿನಿಂದ ಟೌನ್​ ಹಾಲ್​ ವರೆಗೆ ಪ್ರತಿಭಟನಾ ಱಲಿ ನಡೆಸಿದರು. ಈ ವೇಳೆ ಅಲ್ಲಾಹು ಅಕ್ಬರ್ ಎಂದು ಕೂಗುತ್ತಾ ಸಾಗಿದ್ದಾರೆ. ಹಿಜಾಬ್ ತ್ಯಜಿಸಲ್ಲ. ಶಾಲೆಗೆ ಹೋಗಲ್ಲ ಎಂದು ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗಿದರು. 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ.

ಯಾವುದೇ ಧರ್ಮ ಇದ್ರೂ ಅದು ಮನೆಯಲ್ಲಿ ಇರಬೇಕು

ಜಿಲ್ಲೆಯಲ್ಲಾದ ಬೆಳವಳಿಗೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸೊಗಡು ಶಿವಣ್ಣ, ಎಲ್ಲೋ ಒಂದು ಕಡೆ ಹುಟ್ಟಿಕೊಂಡ ಹಿಜಾಬ್ ವಿವಾದ ಇವತ್ತು ದೇಶ ವ್ಯಾಪ್ತಿ ಹಬ್ಬಿದೆ‌. ನಾನು ಇದನ್ನ ಖಂಡನೆ ಮಾಡುತ್ತೇನೆ. ಇವತ್ತು ಎಂಪ್ರೆಸ್ ಶಾಲೆಯ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಅವರ ಮೇಲೆ ಕ್ರಮ ತಗೋಬೇಕಿತ್ತು. ಯಾವುದೇ ಧರ್ಮ ಇದ್ರೂ ಅದು ಮನೆಯಲ್ಲಿ ಇರಬೇಕು.. ಶಾಲಾ ಕಾಲೇಜುಗಳಲ್ಲಿ ಅಲ್ಲ‌. ಇನ್ಮುಂದೆ ಯಾರು ಈ ರೀತಿ ಮಾಡ್ತಾರೆ ಅಂತವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಇನ್ನು ಕೆಲವು ವರ್ಷಗಳಲ್ಲಿ ಹಿಂದೂಗಳು ಉಳಿಬೇಕು ಅಂತ ಹೋರಾಟ ಮಾಡ್ಬೇಕು‌, ಅಂತಹ ಪರಿಸ್ಥಿತಿ ಬರುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: Hijab Controversy: ಶಾಲಾ ಕಾಲೇಜುಗಳ ಸುತ್ತ ಮುಂದುವರೆದ ನಿಷೇಧಾಜ್ಞೆ, ನಿಲ್ಲದ ವಿದ್ಯಾರ್ಥಿನಿಯರ ಪರ-ವಿರೋಧ ನಿಲುವು

ಒದ್ದು ಒಳಗಡೆ ಹಾಕ್ಬೇಕು..

ಕಾಂಗ್ರೆಸ್​​ ಶಾಸಕ ಜಮೀರ್ ಅಂತವರು ಪ್ರಚೋದನೆ ಕೊಡ್ತಾರೆ.. ಜಮೀರ್, ಎಸ್ ಡಿಪಿಐ ಅಂತವರನ್ನ ಒದ್ದು ಒಳಗಡೆ ಹಾಕ್ಬೇಕು. ರಾಜ್ಯ ಸರ್ಕಾರ ಈ ವಿವಾದದಲ್ಲಿ ಎಡವಿದೆ‌. ಓಟ್ ನೀವು ಯಾರಿಗೆ ಬೇಕಾದ್ರು ಹಾಕಿ ಹಿಂದೂ ಹಿಂದೂಗಳಾಗಿ ಉಳಿರಿ ಅಂತ ಕೇಳ್ಕೊತಿನಿ. ಮೊದಲು ಹಿಂದೂಗಳು ಒಂದಾಗಿ ಸಮಾಜಕ್ಕಾಗಿ ದುಡಿರಿ.. ಸಮಾಜದಲ್ಲಿ ಹಿಂದೂಗಳ ಒಗ್ಗಟ್ಟನ್ನ ತೋರಿಸಬೇಕು. ಅಲ್ಲಾಹು ಅಕ್ಬರ್ ಅಂತ ಘೋಷಣೆ ಕೂಗಿದ್ದಕ್ಕೆ ವಿದ್ಯಾರ್ಥಿನಿ ಗಿಫ್ಟ್ ಗಳನ್ನ ಕೊಟ್ಟಿದ್ದಾರೆ. ಆ ಗಿಫ್ಟ್ ಗಳನ್ನ ಕೊಡೋರ ವಿರುದ್ಧ ಮುಲಾಜಿಲ್ಲದೇ ಸರ್ಕಾರ ಶಿಸ್ತು ಕ್ರಮ ತಗೋಬೇಕು ಎಂದು ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.
Published by:Kavya V
First published: