• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Madal Virupakshappa: ಎಫ್​ಐಆರ್ ದಾಖಲಾಗಿ 3 ದಿನವಾದ್ರೂ ಬಿಜೆಪಿ ಶಾಸಕ ನಾಪತ್ತೆ; 350 ಕೋಟಿ ಡೀಲ್ ಆರೋಪ

Madal Virupakshappa: ಎಫ್​ಐಆರ್ ದಾಖಲಾಗಿ 3 ದಿನವಾದ್ರೂ ಬಿಜೆಪಿ ಶಾಸಕ ನಾಪತ್ತೆ; 350 ಕೋಟಿ ಡೀಲ್ ಆರೋಪ

ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿ ಶಾಸಕ

ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿ ಶಾಸಕ

ಇನ್ನು KSDL ನ CSR ಫಂಡ್ ದುರ್ಬಳಕೆ ಆಗಿದೆ. ಕೆಲವರಿಗೆ  2 ಪರ್ಸೆಂಟ್ ಕಮಿಷನ್ ಹೋಗಿದೆ. CSR ಫಂಡ್​ನಲ್ಲಿ ಸಚಿವ ಭೈರತಿ ಬಸವರಾಜುಗೆ ₹3.70 ಕೋಟಿ ಹಣ ಹೋಗಿದೆ ಎಂದು KSDL ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಆರೋಪ ಮಾಡಿದ್ದಾರೆ.

  • Share this:

ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (BJP MLA Madal Virupakshappa) ಮೇಲೆ ಲೋಕಾಯುಕ್ತ ದಾಳಿ (Lokayukta Raid) ನಡೆದು, ಎಫ್​ಐಆರ್ (FIR) ದಾಖಲಾಗಿ 3 ದಿನವಾಗಿದೆ. ಆದ್ರೆ A1 ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಎಲ್ಲಿದ್ದಾರೆ ಅನ್ನೋ ಮಾಹಿತಿ ಸಿಕ್ಕಿಲ್ಲ. ಪುತ್ರ ಪ್ರಶಾಂತ್ (Prashanth Madal) ಲಾಕ್ ಆಗ್ತಿದ್ದಂತೆ ಶಾಸಕ ಮಾಡಾಳ್ ನಾಪತ್ತೆಯಾಗಿದ್ದು, ವಿರೂಪಾಕ್ಷಪ್ಪ ಬಂಧನಕ್ಕಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನಿಗೆ (Anticipatory Bail) ಮಾಡಾಳ್​ ಪ್ರಯತ್ನಿಸಿದ್ದಾರೆ.


ಈ ಮಧ್ಯೆ ಮಾನಹಾನಿ ಆಗುವಂತಹ ಸುದ್ದಿಗಳನ್ನ ಬಿತ್ತರ ಮಾಡದಂತೆ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರ ಪ್ರಶಾಂತ್​​ ಕೋರ್ಟ್ ಮೊರೆ ಹೋಗಿದ್ದಾರೆ . ಆದ್ರೆ ಸಿಟಿ ಸಿವಿಲ್ ಕೋರ್ಟ್ ಶಾಸಕ ಮತ್ತು ಪುತ್ರನ ಅರ್ಜಿಯನ್ನ  ಮಾರ್ಚ್​ 6ಕ್ಕೆ ಮುಂದೂಡಿದೆ.


ಮಾಡಾಳ್ ₹350 ಕೋಟಿ ಡೀಲ್?


ಶಾಸಕ ಮಾಡಾಳ್​ ವಿರುಪಾಕ್ಷಪ್ಪ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. KSDL ನಿಂದ ಸುಮಾರು ₹350 ಕೋಟಿ ಹಗರಣ ನಡೆಸಿರೋ ಆರೋಪ ಕೇಳಿ ಬಂದಿದೆ.


ಮಾರ್ಕೆಟ್​​ನಲ್ಲಿ  ಸ್ಯಾಂಡಲ್ ಆಯಿಲ್ ಬೆಲೆ ₹1,550 ರೂ. ಇದೆ. ಆದ್ರೆ ಟೆಂಡರ್​ದಾರರು ₹2,625 ರೂ. ಬಿಡ್ ಕರೆದಿದ್ದರು. ಇದರಿಂದಾಗಿ ಸ್ಯಾಂಡಲ್ ಆಯಿಲ್​ನಲ್ಲೇ ಸುಮಾರು ₹50 ಕೋಟಿ ನಷ್ಟ ಉಂಟಾಗಿದೆ ಎಮದು  KSDL ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಆರೋಪಿಸಿದ್ದಾರೆ.


ಸಚಿವ ಭೈರತಿಗೆ ₹3.70 ಕೋಟಿ?


ಇನ್ನು KSDL ನ CSR ಫಂಡ್ ದುರ್ಬಳಕೆ ಆಗಿದೆ. ಕೆಲವರಿಗೆ  2 ಪರ್ಸೆಂಟ್ ಕಮಿಷನ್ ಹೋಗಿದೆ. CSR ಫಂಡ್​ನಲ್ಲಿ ಸಚಿವ ಭೈರತಿ ಬಸವರಾಜುಗೆ ₹3.70 ಕೋಟಿ ಹಣ ಹೋಗಿದೆ ಎಂದು KSDL ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಆರೋಪ ಮಾಡಿದ್ದಾರೆ.


ಚನ್ನಗಿರಿಯಲ್ಲಿ ಶಾಲೆ ನಿರ್ಮಾಣಕ್ಕೆ ಅಂತ ಫಂಡ್ ಹೋಯ್ತು ಆದರೆ ಅದು ಸದ್ಬಳಕೆ ಆಗಿದೆಯೋ ಇಲ್ಲವೋ ಅನ್ನೋದು ಗೊತ್ತಿಲ್ಲ ಎಂದು ಶಿವಶಂಕರ್ ಹೇಳಿದ್ದಾರೆ.


ಮಾಡಾಳ್ ಬಂಧನಕ್ಕೆ ಒತ್ತಾಯ


ಮಾಡಾಳು ವಿರೂಪಾಕ್ಷಪ್ಪ ಮತ್ತು ಪುತ್ರನ ಲಂಚ ಪ್ರಕರಣ ಕಾಂಗ್ರೆಸ್‌ಗೆ ಅಸ್ತ್ರ ಸಿಕ್ಕಂತಾಗಿದೆ. 40 ಪರ್ಸೆಂಟ್ ಆರೋಪಕ್ಕೆ ಇದು ಸಾಕ್ಷಿ ಅಂತಿರುವ ಕಾಂಗ್ರೆಸ್, ಸಿಎಂ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಹೊರಟಿದ್ದರು. ಮಾರ್ಗ ಮಧ್ಯೆಯೇ ಪೊಲೀಸರು ತಡೆದರು.


ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ನಾಯಕರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮಾಡಿದ್ರು. ಬಳಿಕ ಕಾಂಗ್ರೆಸ್ ನಾಯಕರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ‘ಸೂಟ್‌ಕೇಸ್’ ಸರ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


‘ಕೈ’ಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ’


ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಕಾಲದಲ್ಲಿ ಮಂತ್ರಿ ಕಚೇರಿಯಲ್ಲಿ 2 ಲಕ್ಷ ರೂಪಾಯಿ ಸಿಕ್ಕಿತ್ತು. ಆಗ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿದ್ರಾ ಎಂದು ತಿರುಗೇಟು ನೀಡಿದ್ದಾರೆ.


ಇದನ್ನೂ ಓದಿ: Madalu Prashant: ಬಗೆದಷ್ಟು ಹೊರ ಬರುತ್ತಿದೆ ಮಾಡಾಳು ಮಗನ ಭ್ರಷ್ಟಾಚಾರ! ಡೀಲ್ ನಡೆಸ್ತಿದ್ದನಾ ಪ್ರಶಾಂತ್?


ಅವತ್ತು ಲೋಕಾಯುಕ್ತ ಇದ್ದಿದರೆ ಬಂಧನ ಆಗತ್ತಿದ್ದರು. ಸುಮಾರು 59 ಭ್ರಷ್ಟಾಚಾರ ಪ್ರಕರಣಗಳು ಮುಚ್ಚಿ ಹಾಕಿದ್ದರು. ನಮ್ಮ ಮೇಲೆ ಆರೋಪಿಸಿ ಕಾಂಗ್ರೆಸ್ ಪಾಪ ಕಳೆದುಕೊಳ್ಳಲು ಸಾಧ್ಯವಿಲ್ಲ. ನಾವು ಲೋಕಾಯುಕ್ತವನ್ನು ಮರುಸ್ಥಾಪನೆ ಮಾಡಿದ್ದೇವೆ. ಕಾಂಗ್ರೆಸ್​ಗೆ ಪ್ರತಿಭಟನೆ ಮಾಡುವ ನೈತಿಕತೆ ಇಲ್ಲ ಅಂತಾ ಸಿಎಂ ವಾಗ್ದಾಳಿ ನಡೆಸಿದ್ದಾರೆ.

Published by:Mahmadrafik K
First published: