Siddaramaiah ಅವರಿಗೆ ಉಲ್ಟಾ ಮಚ್ಚೆ ಇದೆ, ಕರ್ನಾಟಕದ ನಂತ್ರ ತೆಲಂಗಾಣದಲ್ಲಿ ಅಧಿಕಾರಕ್ಕೆ: C T Ravi

ಮೋದಿ ಅವರಪ್ಪನಾಣೆ ಪ್ರಧಾನಿ ಆಗಲ್ಲ ಅಂತ ಹೇಳಿದ್ರು . ನಾನೇ ಮುಂದಿನ ಸಿಎಂ ಅಂದ್ರು , ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ್ರು. ಕೆಲವರಿಗೆ ಉಲ್ಟಾ ಮಚ್ಚೆ ಇರುತ್ತೆ, ಅದು ಸಿದ್ದರಾಮಯ್ಯ ಅವರಿಗಿದೆ ಅನಿಸ್ತಿದೆ. ಅವರು ಹೇಳೋದೆಲ್ಲಾ ಉಲ್ಟಾ ಆಗುತ್ತೆ ಎಂದು ಕಿಡಿಕಾರಿದರು.

ಸಿಟಿ ರವಿ

ಸಿಟಿ ರವಿ

  • Share this:
ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (BJP National General Secretary CT Ravi) ಮಾಧ್ಯಮಗಳ ಜೊತೆ ಮಾತನಾಡಿದರು. ತೆಲಂಗಾಣದ ಭಾಗ್ಯನಗರ ಈಗಿನ ಹೈದ್ರಾಬಾದ್‌ನಲ್ಲಿ (Hyderabad) ರಾಷ್ಟ್ರೀಯ ಕಾರ್ಯಕಾರಿಣಿ ಜೆ.ಪಿ ನಡ್ಡಾ (JP Nadda) ನೇತೃತ್ವದಲ್ಲಿ ನಡೆಯಿತು. ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿವಿಧ ರಾಜ್ಯದ ಸಿಎಂಗಳು, ಅಧ್ಯಕ್ಷರು,‌ ಪದಾಧಿಕಾರಿಗಳು ಭಾಗಿಯಾಗಿದ್ರು. ಎರಡು ದಿನಗಳ ಕಾಲ ಪ್ರಧಾನಿಗಳು ಭಾಗಿಯಾಗಿದ್ದಲ್ಲದೆ ಮಾರ್ಗದರ್ಶನ ಮಾಡಿದ್ರು. ದಕ್ಷಿಣ ರಾಜ್ಯದಲ್ಲಿ (South India States) ಬಿಜೆಪಿ ಬೆಳವಣಿಗೆ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಕರ್ನಾಟಕದ (Karnataka) ನಂತರ ತೆಲಂಗಾಣದಲ್ಲಿ (Telangana) ಅಧಿಕಾರಕ್ಕೆ ಬರೋದು ಉಪಚುನಾವಣೆಯಲ್ಲಿ ವ್ಯಕ್ತವಾಗಿದೆ.  ದೊಡ್ಡ ಪ್ರಮಾಣದಲ್ಲಿ ಯುವಕರು, ಮಹಿಳೆಯರನ್ನ ಒಳಗೊಂಡಂತೆ ದೊಡ್ಡ ಪ್ರಮಾಣದಲ್ಲಿ ಯಾರ್ಲಿಯಲ್ಲಿ ಭಾಗಿಯಾಗಿದ್ದು ಸ್ಪಷ್ಟ ಸಂದೇಶ ದೊರೆತಿದೆ ಎಂದು ಸಿ ಟಿ ರವಿ ಹೇಳಿದರು.

ಕರ್ನಾಟಕದ ನಂತರ ತೆಲಂಗಾಣ ಬಿಜೆಪಿ ಮಡಿಲಿಗೆ ಬೀಳಲಿದೆ. ತಮಿಳುನಾಡಿನಲ್ಲೂ ಬಿಜೆಪಿ ಬೆಳವಣಿಗೆ ಆಶಾದಾಯಕವಾಗಿದೆ. ರಾಜ್ಯಾಧ್ಯಕ್ಷ ಅಣ್ಣಮಲೈ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತಿದೆ. ತಮಿಳುನಾಡಿನ ಜನ ಬದಲಾವಣೆ ಬಯಸುತ್ತಿರೋದು ಅನುಭವಕ್ಕೆ ಬರ್ತಿದೆ ಎಂದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಸದೃಢ

ಪಾಂಡಿಚೇರಿಯಲ್ಲಿ ಈಗಾಗಲೇ ಅಧಿಕಾರದಲ್ಲಿ ಪಾಲುದಾರರಾಗಿದ್ದೇವೆ. ಆಂಧ್ರದಲ್ಲಿ ಪ್ರಯತ್ನ ಪಡಬೇಕಿದೆ. ಕೇಂದ್ರದ ವಿವಿಧ ಯೋಜನೆಗಳು 70ರಷ್ಟು ಜನರಿಗೆ ಮುಟ್ಟಬೇಕಿದೆ. ಯಾವುದೇ ಜಾತಿ, ಧರ್ಮದ ತಾರತಮ್ಯ ಇಲ್ಲದೆ ಬಡವರಿಗೆ, ದಲಿತರಿಗೆ, ಮಹಿಳೆಯರಿಗೆ ನ್ಯಾಯ ಒದಗಿಸೋ ಕೆಲಸ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದೆ. ಅದರ ಲಾಭಾಂಶವನ್ನ ಪಕ್ಷದ ಜೊತೆ ಯಶಸ್ವಿಯಾಗಿ ಜೋಡಿಸಬೇಕಿದೆ. ಇದರಿಂದ ದಕ್ಷಿಣದಲ್ಲೂ ಬಿಜೆಪಿ ಸದೃಡವಾಗೋದ್ರಲ್ಲಿ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:  CM Raceನಲ್ಲಿ ಡಿಕೆ ಶಿವಕುಮಾರ್; ಪರೋಕ್ಷವಾಗಿ ಮಠಾಧೀಶರ ಆಶೀರ್ವಾದ ಕೇಳಿದ ಕೆಪಿಸಿಸಿ ಅಧ್ಯಕ್ಷ

ಪ್ರಧಾ‌ನಿಗಳು ಸ್ನೇಹಯಾತ್ರೆಯ ಕಲ್ಪನೆ ಬಿಂಬಿಸಿದ್ದಾರೆ. ಆ ಮೂಲಕ ಬಿಜೆಪಿ ವಿಚಾರದಾರೆ, ಯೋಜನೆಗಳನ್ನ ಜನರಿಗೆ ಮುಟ್ಟಿಬೇಕಿದೆ. ಸಂಕಲ್ಪ ವ್ಯಕ್ತವಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ

ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ ಮುಂದು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಉಲ್ಟಾ ಮಚ್ಚೆ ಇದೆ. ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತೆ ಎಂದು ವ್ಯಂಗ್ಯ ಮಾಡಿದರು.

ಗೋವಾದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯೋದು ಏನಾಯ್ತು..? ಯುಪಿಯಲ್ಲಿ ಏನಾಯ್ತು, ಮೇ ಲಡಕೀ ಹೂ, ಲಡ್ ಸಕ್ತಾಹೂ ಅಂದ್ರು.  ಏನಾಯ್ತು, ನಿಂತ ಸ್ಥಾನಗಳೆಷ್ಟು ಗೆದ್ದ ಸೀಟುಗಳೆಷ್ಟು? ಸಿದ್ದರಾಮಯ್ಯ ಹೇಳೋದೆಲ್ಲಾ ಉಲ್ಟಾ ಆಗುತ್ತೆ ಎಂದು ಲೇವಡಿ ಮಾಡಿದರು.

ಅವರು ಹೇಳೋದೆಲ್ಲ ಉಲ್ಟಾ ಆಗುತ್ತೆ

ಮೋದಿ ಅವರಪ್ಪನಾಣೆ ಪ್ರಧಾನಿ ಆಗಲ್ಲ ಅಂತ ಹೇಳಿದ್ರು . ನಾನೇ ಮುಂದಿನ ಸಿಎಂ ಅಂದ್ರು , ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ್ರು. ಕೆಲವರಿಗೆ ಉಲ್ಟಾ ಮಚ್ಚೆ ಇರುತ್ತೆ, ಅದು ಸಿದ್ದರಾಮಯ್ಯ ಅವರಿಗಿದೆ ಅನಿಸ್ತಿದೆ. ಅವರು ಹೇಳೋದೆಲ್ಲಾ ಉಲ್ಟಾ ಆಗುತ್ತೆ ಎಂದು ಕಿಡಿಕಾರಿದರು.

ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ್ ಸಿನ್ಹಾ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಇಡಿ ಐಟಿ ಭಯ ತಪ್ಪು. ಮಾಡಿದವರಿಗೆ ಭಯ ಇದ್ದೆ ಇರುತ್ತದೆ. ತಪ್ಪು ಮಾಡದವರಿಗೆ ಭಯ ಬೇಡ. ತಪ್ಪು ಮಾಡಿದವರಿಗೆ ಐಟಿ ಇಡಿಯಿಂದ ತಪ್ಪಿಸಿಕೊಳ್ಳೊಕೆ ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:  Congress ಹಿರಿಯ ನಾಯಕರ ಹೇಳಿಕೆಗಳು ಪಕ್ಷಕ್ಕೆ ಇರುಸು ಮುರುಸು ತರುತ್ತಿದೆ; ಡಿಕೆ ಸುರೇಶ್ ಅಸಮಾಧಾನ

ಅಬ್ಲುಲ್ ಕಲಾಂರನ್ನು ಆಯ್ಕೆ ಮಾಡಿದ್ದೀವಿ

ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು 10 ನೇ ತಾರೀಖು ರಾಜ್ಯಕ್ಕೆ ಬರುತ್ತಿದ್ದಾರೆ. ಮೊದಲ ಬಾರಿ ರಾಷ್ಟ್ರಪತಿ ಮಾಡುವ ಅವಕಾಶ ನಮಗೆ ಬಂದಾಗ ವಾಜಪೇಯಿ ಅವರ ನೇತೃತ್ವದಲ್ಲಿ ಅಬ್ಲುಲ್ ಕಲಾಂರನ್ನು ಆಯ್ಕೆ ಮಾಡಿದ್ದೀವಿ. ಎಲ್ಲಾರೂ ಖುಷಿ ಪಟ್ಟು ನಮ್ಮಲ್ಲೆ ಒಬ್ಬರನ್ನು ಮಾಡಿದ್ದಾರೆ ಎಂದು ಸಂತಸ ಪಟ್ಟರು. ಆದರೆ ಯುಪಿಎ ಕಲಾಂರನ್ನು ಎರಡನೇ ಅವಧಿಗೆ ರಾಷ್ಟ್ರಪತಿ ಆಗಲು ಅವಕಾಶ ನೀಡಲಿಲ್ಲ. ರಮಾನಾಥ್ ಕೋವಿಂದ್ ಯಾವುದೇ ವಿವಾದ ಇಲ್ಲದೇ ಅವಧಿ ಮುಗಿಸಿದ್ದಾರೆ

ಈಗ ದ್ರೌಪದಿ ಮುರ್ಮು ಅಪಾರ ಅನುಭವ ಹೊಂದಿದವರು, ಸಾಮಾಜಿಕ ನ್ಯಾಯ ಎನ್ನೋದು ನಮಗೆ ಮುಖವಾಡ ಅಲ್ಲ, ಅದು ನಮಗೆ  ಬದ್ಧತೆ ಎಂದು ಹೇಳಿದರು.
Published by:Mahmadrafik K
First published: