• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Crime News: ಚುನಾವಣೆ ಬೆನ್ನಲ್ಲೇ ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ! ಅಸಲಿಗೆ ಆಗಿದ್ದೇನು?

Crime News: ಚುನಾವಣೆ ಬೆನ್ನಲ್ಲೇ ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ! ಅಸಲಿಗೆ ಆಗಿದ್ದೇನು?

ಯಾದಗಿರಿ ಬಿಜೆಪಿ ಕಾರ್ಯಕರ್ತನ ಕೊಲೆ

ಯಾದಗಿರಿ ಬಿಜೆಪಿ ಕಾರ್ಯಕರ್ತನ ಕೊಲೆ

ಬಿಜೆಪಿ ಕಾರ್ಯಕರ್ತ ಶ್ರೀನಿವಾಸ ಕೊಲೆ ಮಾಡಿದ್ದನ್ನು ಖಂಡಿಸಿ ಯಾದಗಿರಿ ನಗರದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Share this:

ಯಾದಗಿರಿ: ಹೋಟೆಲ್​​ಗೆ (Hotel) ಊಟ ಮಾಡಲೆಂದು ತೆರಳಿದ ವ್ಯಕ್ತಿಯೂ ಹೋಟೆಲ್​​ ನೌಕರನಿಂದಲೇ ಹತ್ಯೆಯಾಗಿದ್ದಾನೆ. ಜಗಳ ಬಿಡಿಸಲು ಹೋದ ಶ್ರೀನಿವಾಸ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ (Murder) ಮಾಡಲಾಗಿದೆ. ಕೊಲೆಯಾದ ವ್ಯಕ್ತಿ ಶ್ರೀನಿವಾಸ, ಬಿಜೆಪಿ (BJP) ಕಾರ್ಯಕರ್ತನಾಗಿದ್ದು, ಬಿಜೆಪಿ ಕಾರ್ಯಕರ್ತನ ಕಗ್ಗೊಲೆಯಿಂದ ಬಿಜೆಪಿ ಪ್ರತಿಭಟನೆ ನಡೆಸಿದೆ. ಚುನಾವಣೆಯ (Election) ಸಂದರ್ಭದಲ್ಲೂ ಯಾದಗಿರಿ (Yadagiri) ನಗರ ಶಾಂತಿಯುತವಾಗಿತ್ತು. ಯಾವುದೇ ಕೋಮು ಗಲಾಟೆಯಾಗಿಲ್ಲ. ಆದರೆ ನಿನ್ನೆ ರಾತ್ರಿ ಒಂದು ಕೋಮಿನ ಗುಂಪಿನವರ ಜಗಳ ಬಿಡಿಸಲು ಹೋದ ಬಿಜೆಪಿ ಕಾರ್ಯಕರ್ತ ಶ್ರೀನಿವಾಸನ ಹೊಟ್ಟೆ ಭಾಗದಲ್ಲಿ ಚಾಕು ಇರಿದು ಕೊಲೆ ಮಾಡಿದ್ದಾರೆ. ಕೊಲೆ ಘಟನೆಯಿಂದ ಜನರು ಭಯದಲ್ಲಿ ಜೀವನ ನಡೆಸುವಂತಾಗಿದೆ.


ಏನಿದು ಘಟನೆ?


ಯಾದಗಿರಿ ನಗರದ ಶುಭಂ ಪೆಟ್ರೋಲ್ ಬಂಕ್ ಮುಂಭಾಗದ ರಾಯಲ್ ಗಾರ್ಡನ್ ಮುಂಭಾಗದಲ್ಲಿ ನಿನ್ನೆ ತಡರಾತ್ರಿ ಕೊಲೆ ಘಟನೆ ಜರುಗಿದೆ. ಭವಾನಿ ವೈನ್ ಶಾಪ್ ಮಾಲೀಕ ಚಂದ್ರಶೇಖರ ಅವರು, ರಾಯಲ್ ಗಾರ್ಡನ್ ಪಕ್ಕದಲ್ಲಿ ಕಾರ್ ನಿಲ್ಲಿಸಿದ್ದರು. ಚಂದ್ರಶೇಖರ ಅವರ ಕಾರ್ ನ ಹಿಂಭಾಗದಲ್ಲಿ, ಬೇರೆ ಒಂದು ಕಾರ್-ಬೈಕ್ ನಿಲುಗಡೆ ಮಾಡಲಾಗಿತ್ತು. ಇದರಿಂದ ಚಂದ್ರಶೇಖರ ಕಾರ್ ತೆಗೆದುಕೊಂಡು ಹೋಗ ಬೇಕೆಂದರೆ ಸಾಧ್ಯವಾಗಿಲ್ಲ.


ಇದನ್ನೂ ಓದಿ: Bhavani Revanna: ಎಲೆಕ್ಷನ್​​ ಮುಗಿದ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಭವಾನಿ ರೇವಣ್ಣ


ರಾಯಲ್ ಗಾರ್ಡನ್ ಹೊಟೇಲ್ ನ ಗ್ರಾಹಕರು ಕಾರ್ ಹಿಂಭಾಗದಲ್ಲಿ, ಕಾರ್ ಬೈಕ್ ನಿಲುಗಡೆ ಮಾಡಿರಬಹುದೆಂದು ಅರಿತು, ಚಂದ್ರಶೇಖರ ರಾಯಲ್ ಗಾರ್ಡನ್ ಹೊಟೇಲ್ ಒಳಗೆ ತೆರಳಿ, ಹೊಟೇಲ್ ಮಾಲಿಕನಿಗೆ ನಿಮ್ಮ ಗ್ರಾಹಕರು ಕಾರ್,ಬೈಕ್ ನಿಲ್ಲಿಸಿದ್ದು ತೆಗೆಯಬೇಕೆಂದು ಹೇಳಿದ್ದಾನೆ. ಈ ವಿಚಾರಕ್ಕೆ ಚಂದ್ರಶೇಖರ ಹಾಗೂ ಹೋಟೆಲ್ ಮಾಲಿಕ ಅಬ್ದುಲ್ ಸತ್ತಾರ್ ನಡುವೆ ಜಗಳವಾಗಿದೆ. ನಿನ್ನೆ ರಾತ್ರಿ ಜಗಳ ನಡೆದಿದ್ದು, ಹೋಟೆಲ್ ನಲ್ಲಿ ಕೆಲಸ ಮಾಡುವ ನೌಕರರು ಆಗಮಿಸಿ ಗಲಾಟೆ ಮಾಡಿದ್ದಾರೆ.




ಈ ವೇಳೆ ಯಾದಗಿರಿ ನಗರದ ಅಸಾರ್ ಮೊಹಲ್ಲಾದ ನಿವಾಸಿ ಶ್ರೀನಿವಾಸ ಕೂಡ ಹೋಟೆಲ್​​ಗೆ ಊಟಕ್ಕೆ ತೆರಳಿದ್ದನು. ಜಗಳವಾಗುವದನ್ನು ಅರಿತು ಶ್ರೀನಿವಾಸ ಜಗಳ ಬಿಡಿಸಲು ಮುಂದಾಗಿದ್ದು, ಈ ವೇಳೆ ಹೋಟೆಲ್​ ನೌಕರ ಮಹ್ಮದ್ ಅನಾಸ ಅಬ್ದುಲ್ ಖಾನ್ ಚಾಕು ತೆಗೆದುಕೊಂಡು ಬಂದು ಬಿಜೆಪಿ ಕಾರ್ಯಕರ್ತ ಶ್ರೀನಿವಾಸನಿಗೆ ಕೊಲೆ ಮಾಡಿದ್ದಾನೆ. ಈ ವೇಳೆ ಚಂದ್ರಶೇಖರಗೆ ಕೂಡ ಗಾಯವಾಗಿದೆ.


ಕೊಲೆಯಾದ ಶ್ರೀನಿವಾಸ ಯಾದಗಿರಿಯ ಗಾಂಧಿ ವೃತ್ತದ ಸಮೀಪದ ಮನೆ ಮುಂಭಾಗದಲ್ಲಿ ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದನು. ಶ್ರೀನಿವಾಸನ ಪತ್ನಿ ಹಾಗೂ ಮಕ್ಕಳಿಬ್ಬರು ರಜೆ ನಿಮಿತ್ಯ ಊರಿಗೆ ಹೋಗಿದ್ದರು. ಹೀಗಾಗಿ,ಮನೆಯಲ್ಲಿ ಯಾರು ಇಲ್ಲದಕ್ಕೆ ಹೋಟೆಲ್​ಗೆ ಊಟಕ್ಕೆ ತೆರಳಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.


ಘಟನೆ ಸಂಬಂಧ ಹೋಟೆಲ್​ ಮಾಲೀಕ ಹಾಗೂ ನೌಕರರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮುಖ ಆರೋಪಿ ಮಹ್ಮದ್ ಅನಾಸ್ ಅಬ್ದುಲ್ ಖಾನ್ ಸೇರಿ ಐವರು ಆರೋಪಿಗಳನ್ನು ಯಾದಗಿರಿ ನಗರ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಎಸ್​​ಪಿ ಡಾ ಸಿ.ಬಿ ವೇದಮೂರ್ತಿ ಭೇಟಿ ನೀಡಿದ್ದಾರೆ.


ಬಿಜೆಪಿ ಕಾರ್ಯಕರ್ತನ ಕೊಲೆ ಆರೋಪಿಗಳಿಗೆ ಶಿಕ್ಷೆಗೆ ಆಗ್ರಹ


ಬಿಜೆಪಿ ಕಾರ್ಯಕರ್ತ ಶ್ರೀನಿವಾಸ ಕೊಲೆ ಮಾಡಿದ್ದನ್ನು ಖಂಡಿಸಿ ಯಾದಗಿರಿ ನಗರದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೊಲೆ ಗಡುಕರಿಗೆ ಗಲ್ಲು ಶಿಕ್ಷೆ ನೀಡಬೇಕು, ಮೃತ ಕುಟುಂಬಸ್ಥರಿಗೆ ಪರಿಹಾರ ನೀಡಬೇಕೆಂದು ಪ್ರತಿಭಟನೆ ನಿರತ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.


ಊಟ ಮಾಡಲು ಹೊಟೇಲ್ ಗೆ ಹೋದ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ, ಹೋಟೆಲ್​ ನೌಕರನಿಂದಲೇ ಹತ್ಯೆಯಾಗಿದ್ದಾನೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ಸೂಕ್ತ ಕ್ರಮಕೈಗೊಳ್ಳುವ ಜೊತೆ ಮತ್ತೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ.

First published: