ಇಂದು ನೂತನ ಶಾಸಕರ ಪ್ರಮಾಣವಚನ; ಸಿಎಂ ಬಳಿ ಬಂದ ಶರತ್ ಬಚ್ಚೇಗೌಡಗೆ ಮುಖಭಂಗ

ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸುರೇಶಕುಮಾರ್​, ನಾಗೇಶ್​, ಆರ್. ಅಶೋಕ ಸೇರಿದಂತೆ ಇತರೆ ಶಾಸಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

news18-kannada
Updated:December 22, 2019, 12:26 PM IST
ಇಂದು ನೂತನ ಶಾಸಕರ ಪ್ರಮಾಣವಚನ; ಸಿಎಂ ಬಳಿ ಬಂದ ಶರತ್ ಬಚ್ಚೇಗೌಡಗೆ ಮುಖಭಂಗ
ಶರತ್​ ಬಚ್ಚೇಗೌಡ
  • Share this:
ಬೆಂಗಳೂರು (ಡಿ.22): ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದ 15 ಶಾಸಕರ ಪೈಕಿ 13 ಶಾಸಕರು ಇಂದು ವಿಧಾನಸಭೆಯ ಬ್ಯಾಕ್ವೆಂಟ್ ಹಾಲ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಸಿಎಂ ಬಳಿ ಮಾತನಾಡಲು ಬಂದ ಶರತ್ ಬಚ್ಚೇಗೌಡಗೆ ಮುಖಭಂಗ ಕೂಡ ಆಯಿತು.

ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸುರೇಶಕುಮಾರ್​, ನಾಗೇಶ್​, ಆರ್. ಅಶೋಕ ಸೇರಿದಂತೆ ಇತರೆ ಶಾಸಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮೊದಲಿಗೆ ಅಥಣಿ ಶಾಸಕ ಮಹೇಶ ಕುಮಠಳ್ಳಿ ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ಶ್ರೀಮಂತ ಪಾಟೀಲ, ರಮೇಶ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಬಿ.ಸಿ. ಪಾಟೀಲ್​, ಅರುಣಕುಮಾರ್​​, ಆನಂದಸಿಂಗ್ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಡಾ. ಸುಧಾಕರ್ ಭಗವಂತ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಕೆ.ಆರ್. ಪುರ ಶಾಸಕ ಭೈರತಿ ಬಸವರಾಜ ಸತ್ಯ, ನಿಷ್ಠೆ ಹೆಸರಿನಲ್ಲಿ ಪ್ರಮಾಣ ತೆಗೆದುಕೊಂಡರು.

ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ, ಗೋಪಾಲಯ್ಯ ಹಾಗೂ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಹಾಗೂ ಕೊನೆಯದಾಗಿ ನಾರಾಯಣಗೌಡ ಪ್ರಮಾಣ ವಚನ ಸ್ವೀಕಾರ ಮಾಡಿದರು. ಶರತ್ ಬಚ್ಚೇಗೌಡ ಪ್ರಮಾಣ ವಚನ ಸ್ವೀಕರಿಸುವ ವೇಳೆ ಅವರ ಬೆಂಬಲಿಗರು ಕೇಕೆ ಹಾಕಿ ಹರ್ಷೋದ್ಘಾರ ವ್ಯಕ್ತಪಡಿಸಿದರು.ಕಾಂಗ್ರೆಸ್​ ಶಾಸಕರು ಗೈರು:

15 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್​ ಗೆದ್ದಿತ್ತು. ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಹಾಗೂ ಹುಣಸೂರು ಕ್ಷೇತ್ರದಿಂದ ಮಂಜುನಾಥ ಗೆದ್ದಿದ್ದರು. ಆದರೆ, ಇವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.ಶರತ್​ ಬಚ್ಚೇಗೌಡಗೆ ಮುಖಭಂಗ:

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿಎಂ ಮಾತನಾಡಿಸಲು ಶರತ್ ಬಚ್ಚೇಗೌಡ ಆಗಮಿಸಿದರು. ಆದರೆ, ಶರತ್ ಬಚ್ಚೇಗೌಡ ಜೊತೆ ಬಿಎಸ್​ವೈ ಮಾತನಾಡದೆ ನಡೆದರು. ಈ ಮೂಲಕ ಶರತ್​ ಬಚ್ಚೇಗೌಡ ತೀವ್ರ ಮುಖಭಂಗ ಎದುರಿಸಿದರು.
Published by: Rajesh Duggumane
First published: December 22, 2019, 11:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading