ಉಪಚುನಾವಣಾ ಫಲಿತಾಂಶದ ಬಳಿಕ ದೆಹಲಿಗೆ ಸಿಎಂ: ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್​ ಜೊತೆ ಚರ್ಚೆ

ಗೆದ್ದ ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನದ ಆಫರ್ ಸುದ್ದಿ​ ಕೇಳಿ ಈಗಾಗಲೇ ಮೂಲ ಬಿಜೆಪಿ ನಾಯಕರಲ್ಲಿ ಮುನಿಸು ಮನೆ ಮಾಡಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಹಗಲು-ರಾತ್ರಿ ಪಕ್ಷಕ್ಕಾಗಿ ನಾವು ಶ್ರಮಪಟ್ಟಿದ್ದೇವೆ. ಈಗ ಏಕಾಏಕಿ ಅನರ್ಹರಿಗೆ ಮಣೆ ಹಾಕುತ್ತಿರುವ ನಾಯಕರ ನಡೆ ಸರಿಯಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ. 

news18-kannada
Updated:December 7, 2019, 3:35 PM IST
ಉಪಚುನಾವಣಾ ಫಲಿತಾಂಶದ ಬಳಿಕ ದೆಹಲಿಗೆ ಸಿಎಂ: ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್​ ಜೊತೆ ಚರ್ಚೆ
ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಡಿ.07): ಉಪಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸಿಎಂ ಬಿಎಸ್​ ಯಡಿಯೂರಪ್ಪ ದೆಹಲಿಗೆ ಪಯಣಿಸಲಿದ್ದು, ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್​ ಜೊತೆ ಚರ್ಚೆ ನಡೆಸಲಿದ್ದಾರೆ. 

ಅನರ್ಹಶಾಸಕರಿಗೆ ಟಿಕೆಟ್​ ನೀಡಿರುವ ಜೊತೆಗೆ ಮಂತ್ರಿ ಸ್ಥಾನದ ಭರವಸೆಯನ್ನು ಸಿಎಂ ನೀಡಿದ್ದು, ಈ ಹಿನ್ನೆಲೆ ಈ ಕುರಿತು ಚರ್ಚಿಸಲು  ಹೈ ಕಮಾಂಡ್ ನಾಯಕರ​ ಭೇಟಿಯಾಗಲಿದ್ದಾರೆ. ಚುನಾವಣೆಯಲ್ಲಿ ಕನಿಷ್ಠ 7 ಅನರ್ಹ ಶಾಸಕರು ಗೆಲ್ಲಲ್ಲೇ ಬೇಕಾದ ಅನಿವಾರ್ಯತೆ ಬಿಜೆಪಿ ಸರ್ಕಾರಕ್ಕೆ ಇದೆ. ಒಂದು ವೇಳೆ  7 ಶಾಸಕರು ಗೆಲ್ಲದಿದ್ದರೆ ಮುಂದೇನು ಮಾಡುವುದು ಎಂಬ ಕುರಿತು ಕೂಡ ಈ ಸಂದರ್ಭದಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.

ಗೆದ್ದ ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನದ ಆಫರ್ ಸುದ್ದಿ​ ಕೇಳಿ ಈಗಾಗಲೇ ಮೂಲ ಬಿಜೆಪಿ ನಾಯಕರಲ್ಲಿ ಮುನಿಸು ಮನೆ ಮಾಡಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಹಗಲು-ರಾತ್ರಿ ಪಕ್ಷಕ್ಕಾಗಿ ನಾವು ಶ್ರಮಪಟ್ಟಿದ್ದೇವೆ. ಈಗ ಏಕಾಏಕಿ ಅನರ್ಹರಿಗೆ ಮಣೆ ಹಾಕುತ್ತಿರುವ ನಾಯಕರ ನಡೆ ಸರಿಯಲ್ಲ ಎಂಬ ಮಾತು ಕೂಡ ಕೇಳಿ ಬಂದಿದೆ.

ಈಗಾಗಲೇ ಅನರ್ಹರಿಗೆ ಟಿಕೆಟ್​ ನೀಡಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವ ಹಿನ್ನೆಲೆ ಅವರನ್ನು ಸಮಾಧಾನಗೊಳಿಸಲು ಅನರ್ಹ ಶಾಸಕರ ಜೊತೆ ಮತ್ತಿತ್ತರ ಬಿಜೆಪಿ ನಾಯಕರಿಗೂ ಮಂತ್ರಿಸ್ಥಾನ ನೀಡುವ ಕುರಿತು ಕೂಡ ಬಿಎಸ್​ವೈ ಚಿಂತಿಸಿದ್ದು, ಅವರುಗಳ ಹೆಸರನ್ನು ಹೈ ಕಮಾಂಡ್​ ಮುಂದೆ ಪ್ರಸ್ತಾಪಿಸಲು ಸಿಎಂ ಸಿದ್ಧತೆ ನಡೆಸಿದ್ದಾರೆ.

ಇದನ್ನು ಓದಿ: ನಮ್ಮ ಸಮೀಕ್ಷೆ ಪ್ರಕಾರ ನಾವು ಸೋಲುವುದಿಲ್ಲ; ಸತೀಶ್​ ಜಾರಕಿಹೊಳಿ ವಿಶ್ವಾಸ

ಪಕ್ಷದಲ್ಲಿ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಈಗಾಗಲೇ ಸಿಎಂ ಮೇಲೆ ಹೆಚ್ಚಿನ ಒತ್ತಡ ಕೇಳಿ ಬಂದಿದೆ. ಅವರನ್ನು ಸಮಾಧಾನ ಪಡಿಸುವ ಜವಾಬ್ದಾರಿ ಕೂಡ ಯಡಿಯೂರಪ್ಪ ಮೇಲೆ ಇದ್ದು, ಅವರು ಹೇಗೆ ಈ ಕಾರ್ಯ ಮಾಡುತ್ತಾರೆ ಎಂಬುದು ಕಾದು  ನೋಡಬೇಕಿದೆ. ಸಿಎಂ ಕೂಡ ಯಾವ ಅನರ್ಹ ಶಾಸಕರು ಗೆಲ್ಲಲ್ಲಿದ್ದಾರೆ. ಅದರಲ್ಲಿ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಕುರಿತು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
First published: December 7, 2019, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading