ಮತದಾನದ ಬಳಿಕ ರಿಲಾಕ್ಸ್​​ ಮೂಡ್​ನಲ್ಲಿ ಅಭ್ಯರ್ಥಿಗಳು

ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ  ಕ್ಷೇತ್ರದ್ಯಾಂತ ಮತ ಬೇಟೆ ಮಾಡಿದರರು. ಈಗ ಮೂರು ಪಕ್ಷದ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದಾರೆ. 

Seema.R | news18-kannada
Updated:December 6, 2019, 5:17 PM IST
ಮತದಾನದ ಬಳಿಕ ರಿಲಾಕ್ಸ್​​ ಮೂಡ್​ನಲ್ಲಿ ಅಭ್ಯರ್ಥಿಗಳು
ಕೆಆರ್​ ಪೇಟೆ ಕಾಂಗ್ರೆಸ್​ ಅಭ್ಯರ್ಥಿ ಕೆಬಿ ಚಂದ್ರಶೇಖರ್​
  • Share this:
ಬೆಂಗಳೂರು (ಡಿ.06): ಕಳೆದ 20 ದಿನಗಳಿಂದ ಕ್ಷೇತ್ರ ಅಕ್ಷರಶಃ ರಣರಂಗವಾಗಿ ರೂಪುಗೊಂಡಿದ್ದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ತಣ್ಣಗಿನ ವಾತಾವರಣ ಕಂಡು ಬಂದಿದೆ. ಉಪಚುನಾವಣೆ ಹಿನ್ನೆಲೆ ಕಾಲಿಗೆ ಚಕ್ರಗೊಂಡು ತಿರುಗುತ್ತ, ಮತದಾರರ ಮತಯಾಚಿಸುತ್ತಿದ್ದ ಅಭ್ಯರ್ಥಿಗಳು ಈಗ ರಿಲಾಕ್ಸ್​ ಮೂಡ್​ಗೆ ಜಾರಿದ್ದು, ಕುಟುಂಬಸ್ಥರು, ಕಾರ್ಯಕರ್ತರ ಜೊತೆ ಕಾಲ ಕಳೆಯುತ್ತಿದ್ದಾರೆ. 

ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ  ಕ್ಷೇತ್ರದ್ಯಾಂತ ಮತ ಬೇಟೆ ಮಾಡಿದರರು. ಈಗ ಮೂರು ಪಕ್ಷದ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತಲ್ಲೀನರಾಗಿದ್ದಾರೆ.

ಇನ್ನು ಕೆಆರ್​ ಪೇಟೆ ಕಾಂಗ್ರೆಸ್​ ಅಭ್ಯರ್ಥಿ  ಕೆ.ಬಿ.ಚಂದ್ರಶೇಖರ್ ಕೆಆರ್‌ಪೇಟೆಯ ತಮ್ಮ ನಿವಾಸದಲ್ಲಿ ಮೊಮ್ಮಗಳೊಂದಿಗೆ ಆಟವಾಡುವ ಮೂಲಕ ಇಷ್ಟು ದಿನ ಇದ್ದ ಉಪಚುನಾವಣೆಯ ಜಂಜಾಟವನ್ನು ಮರೆತು ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಇದರ ಜೊತೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಜೊತೆ ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ ಮಾಡುತ್ತಿದ್ದಾರೆ ಕುಳಿತಿದ್ದಾರೆ.

ಸಮೀಕ್ಷೆಯ ಕುರಿತು ಮಾತನಾಡಿದ ಚಂದ್ರಶೇಖರ್ ನನ್ನ ಜನರ ನಾಡಿಮಿಡಿತದ ಸಮೀಕ್ಷೆ ನನ ಗೊತ್ತು. ನಾನು ಈ ಬಾರಿ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನು ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಸಹ ಕೆಆರ್‌ಪೇಟೆಯ ತಮ್ಮ ನಿವಾಸದಲ್ಲಿ ಕಾರ್ತಕರ್ತರು ಹಾಗೂ ತಮ್ಮ ಹಿತೈಷಿಗಳ ಜೊತೆ ಉಪಚುನಾವಣೆಯ ಬಗ್ಗೆ ಚರ್ಚೆ ಮಾಡುವುದರ ಮೂಲಕ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಸಾಂಪ್ರದಾಯಿಕ ಎದುರಾಳಿ ಕಾಂಗ್ರೆಸ್ ನಾವು 25ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದರು. . ಇನ್ನೂ ಬಿಜೆಪಿ ಅಭ್ಯರ್ಥಿ ಕೆ‌.ಸಿ.ನಾರಾಯಣಗೌಡ ಬೆಂಗಳೂರಿನಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ.

ಇದನ್ನು ಓದಿ: ಸಮೀಕ್ಷೆ ಏನೇ ಹೇಳಲಿ, ಗೋಕಾಕ್​ನಲ್ಲಿ ಗೆಲ್ಲೋದು ಕಾಂಗ್ರೆಸ್ಸೇ: ಲಖನ್ ಜಾರಕಿಹೊಳಿ

ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಇವತ್ತು ಸುಮಾರು 11ಘಂಟೆಗೆ ಎದ್ದು ಕಾರ್ಯಕರ್ತರ ಜೊತೆ ಮನೆಯಲ್ಲೆ ಚರ್ಚೆ ನಡೆಸಿದರು.  ಜೊತೆಗೆ ಇಷ್ಟು ದಿನ ಬೆಳ್ಳಂಬೆಳಗ್ಗೆ ಪ್ರಚಾರಕ್ಕೆ ಎದ್ದು ಹೋಗುತ್ತಿದ್ದ ಹೆಬ್ಬಾರ್ ಇವತ್ತು ತಮ್ಮ ಕಾರ್ಯಕರ್ತರಿಗೆ ಬೆಂಬಲಿಗರಿಗೆ ಮನೆಗೆ ಕರೆದು ಚರ್ಚೆ ನಡೆಸಿ, ಸೋಲುಗೆಲುವಿನ ಲೆಕ್ಕಾಚಾರದ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚಿಸಿದರು.ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಹಳ್ಳಿ, ಕೂಡ ವಿಶ್ರಾಂತಿ ಮೂಡ್​ನಲ್ಲಿದ್ದು, ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ತಮ್ಮ ಪರ ದುಡಿದ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
First published: December 6, 2019, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading