ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಸಜ್ಜು? ಬಿಜೆಪಿ ಸಂಪರ್ಕದಲ್ಲಿ 5 ಶಾಸಕರು?

ವಿಧಾನಸಭೆಯಲ್ಲಿ 107 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಬಹುಮತ ಪಡೆಯಲು ಹಾಗೂ ಸರ್ಕಾರ ಸುಭದ್ರವಾಗಿರಲು ಇನ್ನು 8 ಸ್ಥಾನಗಳು ಅವಶ್ಯಕತೆ ಇದೆ. ಬಿಜೆಪಿ ಸೇರಿರುವ ಅನರ್ಹ ಶಾಸಕರು ಗೆಲ್ಲುವ ಭರವಸೆ ಇದ್ದರೂ, ಫಲಿತಾಂಶ ಏನು ಬೇಕಾದರೂ ಆಗಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ.

Seema.R | news18-kannada
Updated:December 4, 2019, 1:48 PM IST
ಮತ್ತೊಮ್ಮೆ ಆಪರೇಷನ್ ಕಮಲಕ್ಕೆ ಸಜ್ಜು? ಬಿಜೆಪಿ ಸಂಪರ್ಕದಲ್ಲಿ 5 ಶಾಸಕರು?
ಸಿಎಂ ಯಡಿಯೂರಪ್ಪ
  • Share this:
ಬೆಂಗಳೂರು (ಡಿ.04): ಅನರ್ಹ ಶಾಸಕರ ಬೆಂಬಲದಿಂದ  ಸರ್ಕಾರ ರಚಿಸಿರುವ ಬಿಜೆಪಿ ಪಾಳೆಯದಲ್ಲಿ ಈಗ ಬಹುಮತ ಭೀತಿ ಶುರುವಾಗಿದೆ. ಉಪಚುನಾವಣೆ ಫಲಿತಾಂಶ ವ್ಯತಿರಿಕ್ತವಾದರೆ ಸರ್ಕಾರ ಬೀಳುವ ಭಯ ಕಮಲಪಾಳೆಯದ ನಾಯಕರಲ್ಲಿ ಮೂಡಿದ್ದು, ಇದಕ್ಕಾಗಿ ಮತ್ತೊಂದು ಸುತ್ತಿನ ಆಪರೇಷನ್​ ಕಮಲಕ್ಕೆ ನಾಯಕರು ಕೈ ಹಾಕಿದ್ದಾರೆ ಎಂಬ ಮಾಹಿತಿ ನ್ಯೂಸ್​ 18 ಕನ್ನಡಕ್ಕೆ ಲಭಿಸಿದೆ. 

ವಿಧಾನಸಭೆಯಲ್ಲಿ 107 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಬಹುಮತ ಪಡೆಯಲು ಹಾಗೂ ಸರ್ಕಾರ ಸುಭದ್ರವಾಗಿರಲು ಇನ್ನು 8 ಸ್ಥಾನಗಳು ಅವಶ್ಯಕತೆ ಇದೆ. ಬಿಜೆಪಿ ಸೇರಿರುವ ಅನರ್ಹ ಶಾಸಕರು ಗೆಲ್ಲುವ ಭರವಸೆ ಇದ್ದರೂ, ಫಲಿತಾಂಶ ಏನು ಬೇಕಾದರೂ ಆಗಬಹುದು ಎಂಬ ಆತಂಕ ಕೂಡ ವ್ಯಕ್ತವಾಗಿದೆ.

ಈ ಹಿನ್ನೆಲೆ ಉಪಚುನಾವಣೆ ಫಲಿತಾಂಶ ನೋಡಿಕೊಂಡು ಮತ್ತೊಂದು ಸುತ್ತಿನ ಆಪರೇಷನ್​ ನಡೆಸಲು ಯೋಜನೆ ರೂಪಿಸಿದ್ದು, ಬಿಜೆಪಿ ಕಡೆ ವಾಲಿರುವ ಕಾಂಗ್ರೆಸ್​-ಜೆಡಿಎಸ್​ ನಾಯಕರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್​- ಜೆಡಿಎಸ್​ನ ಅತೃಪ್ತ​ ಶಾಸಕರನ್ನು ವಾಟ್ಸಾಪ್​ ಮೂಲಕ ರಹಸ್ಯ ಸಂಪರ್ಕ ಮಾಡಿರುವ ನಾಯಕರು ಬಿಜೆಪಿಗೆ ಬರುವ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಬಳ್ಳಾರಿ  ಗ್ರಾಮೀಣ ಕಾಂಗ್ರೆಸ್​ ಶಾಸಕ ಬಿ. ನಾಗೇಂದ್ರ,  ಕಂಪ್ಲಿ ಕ್ಷೇತ್ರದ ಕಾಂಗ್ರೆಸ್​  ಶಾಸಕ ಜೆ. ಗಣೇಶ್​, ನಾಗಠಾಣದ ಕಾಂಗ್ರೆಸ್ ಶಾಸಕ ದೇವಾನಂದ ಚವ್ಹಾಣ್​,   ಜೆಡಿಎಸ್ ಶಾಸಕ ​ಜಿ.ಟಿ‌. ದೇವೇಗೌಡ, ಸಿಂಧಗಿಯ ಜೆಡಿಎಸ್ ಶಾಸಕ ​ಎಂ.ಸಿ. ಮನಗೂಳಿ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದೆ.

ಈಗಾಗಲೇ ಈ ಶಾಸಕರ ಬಿಜೆಪಿ ನಾಯಕರು ಜೊತೆ ಗುರುತಿಸಿಕೊಂಡ ಹಿನ್ನೆಲೆ ಅವರ ಸಂಪರ್ಕಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸೋಲು ಗೆಲುವಿನ ಮೇಲೆ ಮಾತ್ರ ಬಿಜೆಪಿ ಈ ಕಾರ್ಯಕ್ಕೆ ಕೈ ಹಾಕಲಿದೆ. ಒಂದು ವೇಳೆ ಫಲಿತಾಂಶ ಬಿಜೆಪಿ ನಾಯಕರಿಗೆ ಸಂತೃಪ್ತಿ ತಂದಲ್ಲಿ ಈ ಆಪರೇಷನ್​ ಕಮಲದ ಪ್ರಯತ್ನ ಕೈಬಿಡಲಾಗುವುದು ಎನ್ನಲಾಗಿದೆ.

ಯಾರೂ ಹೋಗಲ್ಲ; ಕುಮಾರಸ್ವಾಮಿ 

ಇನ್ನು, ಈ ಕುರಿತು ಮಾತನಾಡಿದ ಜೆಡಿಎಸ್​ ನಾಯಕ, ಮಾಜಿ ಸಿಎಂ ಕುಮಾರಸ್ವಾಮಿ,  ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.  ಯಡಿಯೂರಪ್ಪ ಅಂಡ್​ ಕಂಪನಿಗೆ ಇದೇ ಕೆಲಸ . ಆಪರೇಷನ್​ ಕಮಲ ನಡೆಸೋದ್ರಲ್ಲಿ ಬಿಎಸ್​ವೈ ಪ್ರಖ್ಯಾತರು. ಆದರೆ, ಈ ಬಾರಿ ಬಿಜೆಪಿ ಪಕ್ಷಕ್ಕೆ ನಮ್ಮ ಶಾಸಕರು ಯಾವುದೇ ಕಾರಣಕ್ಕೂ ಹೋಗಲ್ಲ. ಯಡಿಯೂರಪ್ಪ ಸರ್ಕಾರ ಹಾಳು ಮಾಡುವ ಕೆಲಸ ಮಾಡುತ್ತಿದೆ. 17 ಅನರ್ಹರು ಅನುಭವಿಸಿರೋ ನೋವು ಎಲ್ಲರಿಗೂ ಗೊತ್ತು. ಯಾವ ಶಾಸಕರು ಬಿಜೆಪಿಗೆ ಹೋಗುವ ಮನಸ್ಸು ಮಾಡಲ್ಲ ಎಂದರು.ಮನಗೂಳಿಯವರು ಹೋಗಲ್ಲ, ಜಿಟಿ.ದೇವೇಗೌಡರೂ ಬಿಜೆಪಿಗೆ ಹೋಗಲ್ಲ. ದೇವಾನಂದ ಚವ್ಹಾಣ ನನ್ನ ಜೊತೆಯಲ್ಲೇ ಇದ್ದಾರೆ. ಸುಮ್ಮನೆ ಗೊಂದಲ ಸೃಷ್ಟಿ ಮಾಡಲು ಈ ರೀತಿ  ಹೆಸರನ್ನ ಬಿಟ್ಟಿದ್ದಾರೆ ಎಂದರು.

ಆತುರ ತೋರದಂತೆ ಸಿದ್ದರಾಮಯ್ಯ ಸೂಚನೆ

ಮತ್ತೊಂದು ಸುತ್ತಿನ ಆಪರೇಷನ್​ ಕಮಲ ನಡೆಯುವ ಸಾಧ್ಯತೆ ಕೇಳಿ ಬಂದ ಹಿನ್ನೆಲೆ ತಮ್ಮ ಪಕ್ಷದ ಅತೃಪ್ತ ಶಾಸಕರಿಗೆ ಯಾವುದೇ ಕಾರಣಕ್ಕೂ ಆತುರ ಬೀಳದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಈಗಾಗಲೇ ನಾಗೇಂದ್ರ, ಗಣೇಶ್​ಗೆ ಬಂದು ಭೇಟಿಯಾಗುವಂತೆ ಕೂಡ ಸೂಚನೆ ನೀಡಲಾಗಿದೆ ಎನ್ನಲಾಗಿದೆ.
First published:December 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading