ಸುಳ್ಳು ಸುದ್ದಿ ಹಬ್ಬಿಸಬೇಡಿ; ಐಟಿ ಅಧಿಕಾರಿಗಳ ಪ್ರಶ್ನೆಗೆ ಸಮರ್ಥ ಉತ್ತರ ನೀಡಿದ್ದೇನೆ ಎಂದ ಯಶ್​​

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ನಾನು . ಜನರ ಕಣ್ಣು ತಪ್ಪಿಸಿ ಏನು ಮಾಡಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದೇನೆ.  ನಾವು ಜನರಿಗೆ ಹೊಣೆಯಾಗಿ ಜೀವನ ನಡೆಸುವವರು

Seema.R | news18
Updated:January 11, 2019, 4:48 PM IST
ಸುಳ್ಳು ಸುದ್ದಿ ಹಬ್ಬಿಸಬೇಡಿ; ಐಟಿ ಅಧಿಕಾರಿಗಳ ಪ್ರಶ್ನೆಗೆ ಸಮರ್ಥ ಉತ್ತರ ನೀಡಿದ್ದೇನೆ ಎಂದ ಯಶ್​​
ಆದಾಯ ತೆರಿಗೆ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಯಶ್​
Seema.R | news18
Updated: January 11, 2019, 4:48 PM IST
ಆದಾಯ ತೆರಿಗೆ ಅಧಿಕಾರಿಗಳ ದಾಳಿ ಬಳಿಕ ಇಂದು ನಟ ಯಶ್​ ತಮ್ಮ ತಾಯಿಯೊಂದಿಗೆ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯಲ್ಲಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ನಂತರ ಮಾತನಾಡಿದ ಯಶ್, 'ಯಾವುದೇ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ' ಎಂದು ಮೊದಲು ಮಾಧ್ಯಮಗಳಿಗೆ ಮನವಿ ಮಾಡಿದರು.

ಇದನ್ನೂ ಓದಿ: ಪಾಕಿಸ್ತಾನದಲ್ಲೂ ತೆರೆ ಕಂಡಿದೆ 'ಕೆ.ಜಿ.ಎಫ್​': ನೆರೆ ರಾಷ್ಟ್ರದಲ್ಲೂ ರಾಕಿ ಭಾಯ್​ ಹವಾ ಶುರು..!

ತಮ್ಮ ತಾಯಿ ಪುಷ್ಪ ಜೊತೆ ವಿಚಾರಣೆಗೆ ಹಾಜರಾಗಿದ್ದ ಯಶ್​, 'ಇದು ಇಂದಿಗೆ ಮುಗಿಯುವ ತನಿಖೆಯಲ್ಲ. ಐಟಿ ವಿಚಾರಣೆ ಇನ್ನೂ ಎರಡು ವರ್ಷಗಳ ಕಾಲ ನಡೆಯಲಿದ್ದು, ಅಧಿಕಾರಿಗಳು ಕರೆದಾಗೆಲೆಲ್ಲ ನಾವು ವಿಚಾರಣೆಗೆ ಹಾಜರಾಗುತ್ತೇವೆ. ಐಟಿ ದಾಳಿ ವೇಳೆ ಮನೆಯಲ್ಲಿ ಏನು ಸಿಕ್ಕಿದೆ ಎಂದು ಅಧಿಕಾರಿಗಳಿಗೆ ಗೊತ್ತು. ಆದರೆ, ಮನೆಯಲ್ಲಿ ಸಿಕ್ಕ ವಸ್ತುಗಳ ಬಗ್ಗೆ ಕೆಲವೊಂದು ಮಾಧ್ಯಮಗಳು ಗಾಳಿ ಸುದ್ದಿ ಹಬ್ಬಿಸುತ್ತಿವೆ. ಈ ವದಂತಿಗಳೆಲ್ಲ ಸುಳ್ಳು' ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ನಾನು . ಜನರ ಕಣ್ಣು ತಪ್ಪಿಸಿ ಏನು ಮಾಡಲು ಸಾಧ್ಯ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದೇನೆ.  ನಾವು ಜನರಿಗೆ ಹೊಣೆಯಾಗಿ ಜೀವನ ನಡೆಸುವವರು' ಎಂದರು.'ಇನ್ನು ಮಾಧ್ಯಮದಲ್ಲಿ ತೋರಿಸಿದಂತೆ 40 ಲಕ್ಷ ಸಾಲ ಎಂಬುದೆಲ್ಲ ಊಹಾಪೋಹಾ. ತೆರಿಗೆ ಕಟ್ಟದೆ ಅಷ್ಟು ಸಾಲ ನೀಡುತ್ತಾರೆಯೇ ಎಂದು ಒಮ್ಮೆ ಚಿಂತಿಸಿ. ಕೆಲವು ಮಾಧ್ಯಮಗಳು ನನ್ನ ತೇಜೋವಧೆಗೆ ಇಳಿದಿವೆ' ಎಂದು ಬೇಸರದಿಂದ ನುಡಿದರು.

ಇದನ್ನೂ ಓದಿ: ಸಿನಿ ಅಡ್ಡದಲ್ಲಿ ಸಂಕ್ರಾಂತಿ: ರಾಮ್​ ಚರಣ್​, ಬಾಲಯ್ಯ, ಅಜಿತ್ ಮುಂದೆ 300 ಕೋಟಿ ಗಳಿಸುತ್ತಾ 'ಕೆ.ಜಿ.ಎಫ್'..?​
Loading...

'ಕೆ.ಜಿ.ಎಫ್'​ ಯಶಸ್ಸಿನ ಅಲೆ ಹಾಗೂ ಮಗಳ ಆಗಮನದ ಸಂತಸದಲ್ಲಿದ್ದ ಯಶ್​ಗೆ ಹೊಸವರ್ಷದ ಆರಂಭದಲ್ಲೇ ಐಟಿ ದಾಳಿ ಎದುರಾಗಿತ್ತು. ಜ.3ರಂದು ಮುಂಜಾನೆ ಯಶ್​ ಮನೆ,  ಅವರ ಪೋಷಕರು ಹಾಗೂ ರಾಧಿಕಾರ ತಾಯಿ ಮನೆ ಸೇರಿದಂತೆ ಮೂರು ದಿನಗಳ ಕಾಲ ಎಲ್ಲೆಡೆ ಪರಿಶೀಲನೆ ನಡೆದಿತ್ತು.

'ಕೆ.ಜಿ.ಎಫ್'​ ಯಶಸ್ಸಿ​ಗೆ ಕೊಂಚ ಬ್ರೇಕ್​ ನೀಡಿದ್ದ ಯಶ್​ ಮೂರುದಿನಗಳ ಕಾಲ ಇದೇ ಐಟಿ ವಿಚಾರಣೆಯಲ್ಲಿ ಭಾಗಿಯಾದರು.

PHOTOS: ಪಾಕಿಸ್ತಾನದಲ್ಲಿ ಎಲ್ಲೆಲ್ಲಿ ಹೇಗಿದೆ ಗೊತ್ತಾ 'ಕೆ.ಜಿ.ಎಫ್'​ ಹವಾ: ಇಲ್ಲಿವೆ ಕೆಲವು ಚಿತ್ರಗಳು..!


 
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ