ಮೈತ್ರಿ ಸರ್ಕಾರ ಬೀಳಿಸಿದ್ದು ಯಾರು?; ಆರೋಪ ಪ್ರತ್ಯಾರೋಪಗಳ ಕಿಡಿ ಹೊತ್ತಿಸಿ ಇದೀಗ ಶಾಂತಿ ಪಠಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ!

ಅಸಲಿಗೆ ಸರ್ಕಾರ ಬಿದ್ದ ನಂತರವೂ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಮುಂದುವರೆಯಲಿದೆ. ಎರಡೂ ಪಕ್ಷ ಒಟ್ಟಾಗಿ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಸೋಲಿಗೆ ರಣತಂತ್ರ ರೂಪಿಸಲಿದೆ ಎಂದೇ ಎರಡೂ ಪಕ್ಷದ ಪ್ರಮುಖ ನಾಯಕರು ಹೇಳುತ್ತಿದ್ದರು. ಅಲ್ಲಿಗೆ ಉಬಯ ಪಕ್ಷಗಳ ನಡುವಿನ ಸಂಬಂಧ ಸರಿ ಇದೆ ಎಂಬ ಸಂದೇಶ ರವಾನೆಯಾಗುತ್ತಿದ್ದ ಹೊತ್ತಿಗೆ, ಇದಕ್ಕೆ ಖುದ್ದು ಬೆಂಕಿ ಹಚ್ಚಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ.

MAshok Kumar | news18
Updated:August 23, 2019, 5:16 PM IST
ಮೈತ್ರಿ ಸರ್ಕಾರ ಬೀಳಿಸಿದ್ದು ಯಾರು?; ಆರೋಪ ಪ್ರತ್ಯಾರೋಪಗಳ ಕಿಡಿ ಹೊತ್ತಿಸಿ ಇದೀಗ ಶಾಂತಿ ಪಠಿಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ!
ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ.
  • News18
  • Last Updated: August 23, 2019, 5:16 PM IST
  • Share this:
ಬೆಂಗಳೂರು (ಆಗಸ್ಟ್.23); ಮೈತ್ರಿ ಸರ್ಕಾರ ಬೀಳಿಸಿದ್ದು ಯಾರು? ಹೀಗೊಂದು ಪ್ರಶ್ನೆ ಕಳೆದು ಕೆಲ ದಿನಗಳಿಂದ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಹಿರಿಯ ನಾಯಕರ ಜಿದ್ದಾಜಿದ್ದಿಗೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ “ದೇಶದ ರಾಜಕೀಯ ವಿದ್ಯಾಮಾನಗಳು ಏಕರೂಪವಾಗಿರುವಾಗ, ಜಾತ್ಯಾತೀತ ಶಕ್ತಿಗಳು ಒಗ್ಗಟ್ಟಾಗಿರಬೇಕು ಎಂದು ಕರೆ ನಿಡಿದ್ದಾರೆ.

ಹಲವು ದಿನಗಳಿಂದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರುತ್ತಿರುವ ಹೆಚ್.ಡಿ. ದೇವೇಗೌಡ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ಕಾರಣ, ಪ್ರತಿಪಕ್ಷದ ನಾಯಕನಾಗುವ ಆಸೆಗಾಗಿ ಅವರು ಸರ್ಕಾರವನ್ನು ಬೀಳಿಸಿದರು ಎಂದು ಆರೋಪ ಮಾಡಿದ್ದರು. ಈ ಆರೋಪಕ್ಕೆ ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ ದೇವೇಗೌಡ ಅವರ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿದ್ದರು. ಅಲ್ಲದೆ ಸರ್ಕಾರ ಬೀಳಲು ಇವರ ಕುಟುಂಬ ರಾಜಕಾರಣವೇ ಕಾರಣ ಎಂದು ನೇರಾ ನೇರ ಆರೋಪ ಮಾಡಿದ್ದರು.ಈ ಕುರಿತು ಟ್ವೀಟರ್​ನಲ್ಲಿ ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ, “ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲು ಇದು ಸಕಾಲವಲ್ಲ. ದೇಶದ ರಾಜಕೀಯ ವಿದ್ಯಾಮಾನಗಳು ಏಕರೂಪವಾಗಿವೆ. ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕಾದ ಇಂತಹ ಸಂದರ್ಭದಲ್ಲಿ ಒಡಕಿನ ಮಾತುಗಳು ಆರೋಗ್ಯಕರವಲ್ಲ. ಕಾಲ ಕೂಡಿ ಬಂದಾಗ ಖಂಡಿತ ಎಲ್ಲದಕ್ಕೂ ಉತ್ತರಿಸುವೆ” ಎಂದು ಹೇಳುವ ಮೂಲಕ ಕಾಂಗ್ರೆಸ್-ಜೆಡಿಎಸ್ ನಾಯಕ ಆರೋಪ-ಪ್ರತ್ಯಾರೋಪಗಳಿಗೆ ಪೂರ್ಣ ವಿರಾಮ ಇಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಈ ಆರೋಪ-ಪತ್ಯಾರೋಪಗಳ ಪರ್ವಕ್ಕೆ ನಾಂದಿ ಹಾಡಿದ್ದೆ ಮಾಜಿ ಸಿಎಂ ಕುಮಾರಸ್ವಾಮಿ ಎಂಬುದು ಉಲ್ಲೇಖಾರ್ಹ.ಇದನ್ನೂ ಓದಿ : ಆಂಧ್ರ ಸಿಎಂ ಜಗನ್​​​ ರೀತಿ ಕುಮಾರಸ್ವಾಮಿ ಬೆಳೆಯಲಿ ಎಂದು ಆಶಿಸಿದ್ದೆ; ಮಾಜಿ ಸಚಿವ ಚಲುವರಾಯಸ್ವಾಮಿ

ಇವರು ಆರೋಪಿಸಬಹುದು. ಆದರೆ, ಬೇರೆ ಪಕ್ಷದ ನಾಯಕರು ಪ್ರತ್ಯಾರೋಪ ಮಾಡಿದರೆ ಶಾಂತಿ ಮಂತ್ರ:

ಅಸಲಿಗೆ ಸರ್ಕಾರ ಬಿದ್ದ ನಂತರವೂ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಮುಂದುವರೆಯಲಿದೆ. ಎರಡೂ ಪಕ್ಷ ಒಟ್ಟಾಗಿ ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಸೋಲಿಗೆ ರಣತಂತ್ರ ರೂಪಿಸಲಿದೆ ಎಂದೇ ಎರಡೂ ಪಕ್ಷದ ಪ್ರಮುಖ ನಾಯಕರು ಹೇಳುತ್ತಿದ್ದರು. ಅಲ್ಲಿಗೆ ಉಬಯ ಪಕ್ಷಗಳ ನಡುವಿನ ಸಂಬಂಧ ಸರಿ ಇದೆ ಎಂಬ ಸಂದೇಶ ರವಾನೆಯಾಗುತ್ತಿದ್ದ ಹೊತ್ತಿಗೆ, ಇದಕ್ಕೆ ಖುದ್ದು ಬೆಂಕಿ ಹಚ್ಚಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ.

ಕಳೆದ ಮಂಗಳವಾರ 'ದಿ ಪ್ರಿಂಟ್' ಎಂಬ ಡಿಜಿಟಲ್ ಮೀಡಿಯಾ ಒಂದಕ್ಕೆ ಸಂದರ್ಶನ ನೀಡಿದ್ದ ಕುಮಾರಸ್ವಾಮಿ, “ಸಿದ್ದರಾಮಯ್ಯನವರಿಗೆ ಜೆಡಿಎಸ್​ ಹಾಗೂ ದೇವೇಗೌಡರ ಕುಟುಂಬವೇ ಮೊದಲ ವೈರಿ ಆನಂತರವೇ ಬಿಜೆಪಿ. ಇದೇ ಕಾರಣಕ್ಕೆ ಸರ್ಕಾರ ಬೀಳಿಸಲು ಅವರು ಎಲ್ಲಾ ಪ್ರಯತ್ನವನ್ನು ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿನ ಸೋಲಿಗೂ ಸಹ ಅವರ ಅಸಹಕಾರವೇ ಕಾರಣ"ಎಂದು ಸಿದ್ದರಾಮಯ್ಯನವರನ್ನು ಕಟು ಟೀಕೆಗೆ ಗುರಿಮಾಡುವ ಮೂಲಕ ಮೊದಲಿಗರಾಗಿ ಆರೋಪ-ಪ್ರತ್ಯಾರೋಪಗಳ ಕಣಕ್ಕೆ ಧುಮುಕಿದ್ದರು.

ಗುರುವಾರ ಎರಡನೇಯವರಾಗಿ ಇದೇ ಕಣ ಪ್ರವೇಶಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಸಹ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದ್ದರು. ಇದರಿಂದ ಎಚ್ಚೆತ್ತ ಸಿದ್ದರಾಮಯ್ಯ ಇಂದು ಖುದ್ದು ಪತ್ರಿಕಾಗೋಷ್ಠಿ ನಡೆಸುವ ಮೂಲಕ ತಮ್ಮ ಮೇಲಿನ ಎಲ್ಲಾ ಟೀಕೆ ಹಾಗೂ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡಿದ್ದಾರೆ. ಈ ಮೂಲಕ ತಮ್ಮ ಮೇಲಿನ ಆರೋಪಗಳು ನಿರಾಧಾರ ಎಂದು ಸಾಬೀತುಪಡಿಸಿದ್ದಾರೆ. ಆದರೆ, ಅತ್ತ ಕಡೆ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸುತ್ತಿದ್ದಂತೆ ಇತ್ತಕಡೆ ಎಚ್ಚೆತ್ತಿರುವ ಕುಮಾರಸ್ವಾಮಿ ಮತ್ತೆ ಜಾತ್ಯಾತೀತ ಶಕ್ತಿಗಳು ಒಗ್ಗೂಡಬೇಕು ಎಂಬ ಕರೆ ನೀಡುತ್ತಿದ್ದಾರೆ.

ಈ ಮೂಲಕ ಜೆಡಿಎಸ್​ ನಾಯಕರು ಯಾರನ್ನು ಬೇಕಾದರೂ ಟೀಕೆ ಮಾಡಬಹುದು, ಆದರೆ, ಯಾರೂ ಜೆಡಿಎಸ್​ ನಾಯಕರನ್ನು ಟೀಕೆ ಮಾಡುವಂತಿಲ್ಲ ಎಂಬುದನ್ನು ಅವರು ಮತ್ತೊಮ್ಮೆ ಪರೋಕ್ಷವಾಗಿ ಹೇಳುವಂತಿದೆ. ಆದರೆ, ಬಹುಕಾಲದಿಂದ ಇನ್ನೂ ಜೀವಂತವಾಗಿಯೇ ಇರುವ ದೊಡ್ಡ ಗೌಡರ ಕುಟುಂಬ ಹಾಗೂ ಸಿದ್ದರಾಮಯ್ಯನವರ ನಡುವಿನ ವೈಮನಸ್ಯ ಬಿಜೆಪಿಗೆ ಲಾಭದಾಯಕವಾಗಿದೆ ಎಂದು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಇದನ್ನೂ ಓದಿ : ದೇವೇಗೌಡ ಸಿದ್ದರಾಮಯ್ಯ ಇಬ್ಬರೂ ಬೆನ್ನಿಗೆ ಚೂರಿ ಹಾಕುವವರೇ; ಸಂಸದ ಶ್ರೀನಿವಾಸ ಪ್ರಸಾದ್​​ ವಾಗ್ದಾಳಿ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading