• Home
  • »
  • News
  • »
  • state
  • »
  • Belagavi Crime News: ಕ್ರಿಮಿನಾಶಕ ಸೇವಿಸಿದ ಗಂಡ ಸಾವು, ಒಂದೂವರೆ ವರ್ಷದ ಕಂದಮ್ಮನ ಕೊಂದು ನೇಣಿಗೆ ಶರಣಾದ ಪತ್ನಿ

Belagavi Crime News: ಕ್ರಿಮಿನಾಶಕ ಸೇವಿಸಿದ ಗಂಡ ಸಾವು, ಒಂದೂವರೆ ವರ್ಷದ ಕಂದಮ್ಮನ ಕೊಂದು ನೇಣಿಗೆ ಶರಣಾದ ಪತ್ನಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮರಕ್ಕೆ ವೇಲ್‌ನಿಂದ ನೇಣು ಬಿಗಿದುಕೊಂಡು ವಾಸಂತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು ಆಗಿದೆ.

  • Share this:

ಕ್ರಿಮಿನಾಶಕ ಸೇವಿಸಿದ ಗಂಡ (Husband Died) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಕ್ಕೆ ಮನನೊಂದ ಪತ್ನಿ (Woman) ಒಂದೂವರೆ ವರ್ಷದ ಹೆಣ್ಣು ಮಗುವನ್ನು (Girl Baby) ಕೊಂದು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ (Belagavi) ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಅಕ್ಟೋಬರ್ 20ರ ಮಧ್ಯಾಹ್ನ ಮಲ್ಲಹೋಳ ಗ್ರಾಮದ ಮನೆಯಲ್ಲಿ ಹೊಳೆಪ್ಪ ಮಸ್ತಿ (25) ಎಂಬವರು ವಿಷ ಸೇವಿಸಿದ್ದರು.ಯಮಕನಮರಡಿ (Yamakanamaradi) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment) ಫಲಿಸದೇ ಮೃತಪಟ್ಟಿದ್ದರು. ಪತಿ ನಿಧನದ ಬಳಿಕ ಪತ್ನಿ ವಾಸಂತಿ (20) ತವರು ಮನೆ ವಂಟಮೂರಿಗೆ ಬಂದಿದ್ರು. ಹೊಳೆಪ್ಪ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.


ವಂಟಮೂರಿ ಹೊರವಲಯದ ಗದ್ದೆಗೆ ಎರಡನೇ ಮಗಳು ಮಾನಸಳನ್ನು ಕರೆದುಕೊಂಡ ಹೋದ ವಾಸಂತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಬಳಿಕ ಅಲ್ಲಿಯೇ ಇದ್ದ ಮರಕ್ಕೆ ವೇಲ್‌ನಿಂದ ನೇಣು ಬಿಗಿದುಕೊಂಡು ವಾಸಂತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು ಆಗಿದೆ.


ಪತ್ನಿಯನ್ನು ಕೊಂದ ಪತಿ


ಪತ್ನಿಯನ್ನ ಬರ್ಬರವಾಗಿ ಕೊಲೆಗೈದು ಠಾಣೆಗೆ ಹೋಗಿ ಪತಿ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕೊದನಾಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕೊದನಾಪುರದ ರುದ್ರವ್ವ ಅಡಕಿ (55) ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಮಹಿಳೆ.


ಚನ್ನಬಸಪ್ಪ ಸಂಗಪ್ಪ ಅಡಕಿ (60) ಕೊಲೆಗೈದ ಬಳಿಕ ಪೊಲೀಸರಿಗೆ ಶರಣಾದ ಆರೋಪಿ. ಸಂಗಪ್ಪ ಅಡಕಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬುಡಕಟ್ಟಿ ಗ್ರಾಮದ ನಿವಾಸಿ. ಕೌಟುಂಬಿಕ ಕಲಹಕ್ಕೆ ಬೇಸತ್ತು ಕೊದನಾಪುರದ ತವರು ಮನೆಯಲ್ಲಿ ರುದ್ರವ್ವ ಅಡಕಿ ವಾಸವಾಗಿದ್ದರು.


After husband death woman killed daughter and died by suicide mrq
ಸಾಂದರ್ಭಿಕ ಚಿತ್ರ


ಕುಡಗೋಲಿನಿಂದ ಹೊಡೆದು ಕೊಲೆ


ಕೆಲ ದಿನಗಳ ಹಿಂದೆ ಪತ್ನಿಯ ತವರು ಮನೆಯಲ್ಲೇ ಆರೋಪಿ ಚನ್ನಬಸಪ್ಪ ಅಡಕಿ ವಾಸವಿದ್ದನು. ಇಂದು ಬೆಳಗ್ಗೆಯೂ ‌ಪತಿ-ಪತ್ನಿ ಮಧ್ಯೆ ಗಲಾಟೆ ಆಗಿದ್ದು, ಬಳಿಕ ಹೊಲಕ್ಕೆ ರುದ್ರವ್ವ ಹೊಲಕ್ಕೆ ಹೋಗಿದ್ದರು. ಅದೇ ಕೋಪದಲ್ಲಿ ಹೊಲಕ್ಕೆ ಹೋಗಿರುವ ಚನ್ನಬಸಪ್ಪ ಕುಡಗೋಲಿನಿಂದ ಹೊಡೆದು ರುದ್ರವ್ವಳನ್ನು ಕೊಲೆ ಮಾಡಿದ್ದಾನೆ.


ಕುಡಗೋಲಿನ ಹೊಡೆತಕ್ಕೆ ತೀವ್ರ ರಕ್ತಸ್ರಾವದಿಂದ ರುದ್ರವ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಿತ್ತೂರು ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಇದನ್ನೂ ಓದಿ: Traffic Rules Break: ಬೆಂಗಳೂರಲ್ಲಿ ಹಾಫ್ ಹೆಲ್ಮೆಟ್ ಧರಿಸಿದ್ದ ಪೊಲೀಸಪ್ಪನಿಗೆ ಬಿತ್ತು ದಂಡ!


ಒಂದೇ ಕುಟುಂಬದ ಮೂವರು ಆತ್ಮಹತ್ಯೆ


ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ HSR ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 54 ವರ್ಷದ ಸಂತೋಷ್ ಕುಮಾರ್, ಆತನ ಪತ್ನಿ ಓಮನ್ ಸಂತೋಷ್ ಹಾಗೂ ಮಗಳು ಸನುಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಸಮುದ್ರದಲ್ಲಿ ಸಿಲುಕಿದ್ದವನ ರಕ್ಷಣೆ


ಈಜಲು ಹೋಗಿ ಸಮುದ್ರದಲ್ಲಿ ಮುಳುಗುತಿದ್ದ ಚಲನಚಿತ್ರ ನಟನನ್ನು ರಕ್ಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ಹೈದರಾಬಾದ್ ಮೂಲದ ಚಿತ್ರನಟ ಅಖಿಲ್ ರಾಜ್ ಈಜಾಡ್ತಿದ್ರು. ಈ ವೇಳೆ ಸಮುದ್ರದ ಸುಳಿಯಲ್ಲಿ ಸಿಲುಕಿದ್ದರು. ಕೂಡಲೇ ನಟನನ್ನು  ಲೈಪ್ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.


ಇದನ್ನೂ ಓದಿ:  Dharwad: ಫೋನ್ ಮಾಡಿ ಸಂಪರ್ಕಕ್ಕೆ ಬರುವಂತೆ ಒತ್ತಡ; ಸಲಿಂಗಕಾಮಿಯ ಕಿರುಕುಳಕ್ಕೆ ಯುವಕ ಆತ್ಮಹತ್ಯೆ 


ಸಿಡಿಲು ಬಡಿದು ಇಬ್ಬರ ಸಾವು


ಬೀದರ್‌ನ ಕಮಲನಗರ ತಾಲೂಕಿನ ತೋರ್ಣಾ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. 30 ವರ್ಷದ ಕಮಲಾಬಾಯಿ ಹಾಗೂ 28 ವರ್ಷದ ವಿಠ್ಠಲ್ ಮೃತರು. ಜಮೀನಿನಲ್ಲಿ ಕೆಲಸ ಮಾಡ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ

Published by:Mahmadrafik K
First published: