Ramanagara: ಹಿಜಾಬ್ ನಂತರ ಹಲಾಲ್ ಗದ್ದಲ, ಮಾಂಸದಲ್ಲೂ ಶುರುವಾಯ್ತು ಧರ್ಮದ ಭೇದ

ಏಪ್ರಿಲ್ 14 ಕ್ಕೆ ರಂಗನಾಥಸ್ವಾಮಿ ತೇರು ನಡೆಯಲಿದ್ದು ಈ ಹಿನ್ನೆಲೆ ಜಾತ್ರೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ಕೊಡದಿರಲು ಹಿಂದೂ ಜಾಗೃತಿ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಮನವಿ ಮಾಡಿದ್ದರು. ಈ ಹಿನ್ನೆಲೆ ಮಾಗಡಿ ತಾಲೂಕು ಪಂಚಾಯತ್ ನಲ್ಲಿ ಸಭೆ ನಡೆಸಲಾಯಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಮನಗರ(ಮಾ.31): ಜಿಲ್ಲೆಯ ಮಾಗಡಿ ಶ್ರೀ ರಂಗನಾಥಸ್ವಾಮಿ‌ ಜಾತ್ರಾ ಮಹೋತ್ಸವ ಹಿನ್ನೆಲೆಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ಕೊಡದಿರಲುರಾಮನಗರದ ಹಿಂದೂ ಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಯುಗಾದಿ (Ugadi) ಹಬ್ಬದ ಮರುದಿನದಿಂದ ಜಾತ್ರೆ ಪ್ರಾರಂಭವಾಗಲಿದೆ. ಏಪ್ರಿಲ್ 14 ಕ್ಕೆ ರಂಗನಾಥಸ್ವಾಮಿ ತೇರು ನಡೆಯಲಿದ್ದು ಈ ಹಿನ್ನೆಲೆ ಜಾತ್ರೆಯಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರ (Business) ಮಾಡಲು ಅವಕಾಶ ಕೊಡದಿರಲು ಹಿಂದೂ ಜಾಗೃತಿ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಮನವಿ ಮಾಡಿದ್ದರು. ಈ ಹಿನ್ನೆಲೆ ಮಾಗಡಿ ತಾಲೂಕು ಪಂಚಾಯತ್ ನಲ್ಲಿ ಸಭೆ ನಡೆಸಲಾಯಿತು.

ಶಾಸಕ ಎ.ಮಂಜು, ಅಪರ ಜಿಲ್ಲಾಧಿಕಾರಿ ಜವರೇಗೌಡ ನೇತೃತ್ವದಲ್ಲಿ ಸಭೆ ನಡೆಸಿದ್ದು ಯಾವುದೇ ಕಾರಣಕ್ಕೂ ಅದಕ್ಕೆಲ್ಲ ಅವಕಾಶ ಇಲ್ಲ, ಮಾಗಡಿ ಕೆಂಪೇಗೌಡರ ಶಾಂತಿಯ (Peace) ನಾಡು. ಇಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಹಿಂದಿನಿಂದಲೂ ನಡೆದುಬಂದಿರುವ ಸಂಪ್ರದಾಯ ಮುಂದುವರೆಯಲಿದೆ. ಗೊಂದಲ ಸೃಷ್ಟಿಸಿದರೆ ಅಂತಹವರ ವಿರುದ್ಧ ಕ್ರಮವಹಿಸಲಾಗುತ್ತೆ ಎಂದು ಮಾಗಡಿ ಶಾಸಕ ಎ.ಮಂಜು - ಅಪರ ಜಿಲ್ಲಾಧಿಕಾರಿ (DC) ಜವರೇಗೌಡ ಸಭೆಯಲ್ಲಿ ಎಚ್ಚರಿಕೆ ನೀಡಿದರು.

ಬಿಜೆಪಿಯ ಮತ್ತೊಂದು ವರಸೆ ಏನು?

ಇನ್ನು ಮತ್ತೊಂದು ಕಡೆ ರಾಮನಗರದಲ್ಲಿಯೂ ಹಲಾಲ್ ಗದ್ದಲ ಪ್ರಾರಂಭವಾಗಿದ್ದು ಬಿಜೆಪಿ ಮುಖಂಡ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.‌ ರಾಮನಗರದ ಬಿಜೆಪಿ ಮುಖಂಡ ಮಂಜು ಮನವಿ ಮಾಡಿದ್ದು ಯುಗಾದಿ ಹಬ್ಬದಲ್ಲಿ ಹಿಂದೂ ಮಟನ್ ಸ್ಟಾಲ್ ನ ಜಟ್ಕಾ ಮಟನ್ ಖರೀದಿ ಮಾಡಿ. ಹಲಾಲ್ ಮಾಡಿದ ಮಟನ್ ಖರೀದಿ ಮಾಡಬೇಡಿ.

ಇದನ್ನೂ ಓದಿ: Yeshaswini Health Scheme: ರಾಜ್ಯದಲ್ಲಿ ಮತ್ತೆ ‘ಯಶಸ್ವಿನಿ ಯೋಜನೆ‘ ಜಾರಿ: ಯಾವೆಲ್ಲಾ ಚಿಕಿತ್ಸೆಗಳಿಗೆ ಅನ್ವಯವಾಗುತ್ತೆ?

ಮಟನ್ ಸ್ಟಾಲ್ ನಲ್ಲಿ ನಮ್ಮ ಹಿಂದೂಗಳೇ ಇರಲಿ, ಅನ್ಯಧರ್ಮೀಯರು ಇದ್ದರೆ ಖರೀದಿ ಮಾಡಬೇಡಿ. ಹಲಾಲ್ ಮಾಂಸವನ್ನ ಅವರ ದೇವರಿಗೆ ಒಪ್ಪಿಸಿರುತ್ತಾರೆ.  ಅದನ್ನ ನಮ್ಮ ದೇವರಿಗೆ ಒಪ್ಪಿಸಿರುವುದಿಲ್ಲ, ಹಾಗಾಗಿ ಹಲಾಲ್ ಮಾಂಸ ಖರೀದಿ ಬೇಡ. ನಮ್ಮ ಹಿಂದೂಗಳ ಜಟ್ಕಾ ಮಟನ್ ಖರೀದಿ ಮಾಡಿ ಎಂದು ರಾಮನಗರದ ಬಿಜೆಪಿ ಮುಖಂಡ ಮಂಜು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಹಿಜಾಬ್ ಗದ್ದಲ್ಲ

ಹಿಜಾಬ್ ವಿಚಾರವಾಗಿಯೂ ಸಹ ಶಾಂತಿಯಾಗಿದ್ದ ರಾಮನಗರ ಜಿಲ್ಲೆಯಲ್ಲಿ ರಾಮನಗರದ ಡಿಗ್ರಿ ಕಾಲೇಜಿನಲ್ಲಿ ಮೊದಲಿಗೆ ವಿದ್ಯಾರ್ಥಿನಿಯರು ಗದ್ದಲ ಎಬ್ಬಿಸಿದ್ದರು. ಈಗ ಮುಸ್ಲಿಂ ಸಮುದಾಯದವರಿಗೆ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಬೇಡ ಎಂಬ ವಿಚಾರವಾಗಿ ಮತ್ತೆ ಜಿಲ್ಲೆಯಲ್ಲಿ ಕೂಗು ಎದ್ದಿದೆ.

ಇದನ್ನೂ ಓದಿ: Mysuru: ಮದುವೆಯಾದ ಪ್ರೇಮಿಗಳ ಮೇಲೆ ಮಾರಣಾಂತಿಕ ಹಲ್ಲೆ, ಮಗಳನ್ನು ಎಳೆದೊಯ್ದ ಪೋಷಕರು

ಮತ್ತೊಂದು ಕಡೆ ಹಲಾಲ್ ವಿಚಾರವಾಗಿಯೂ ಸಹ ಗದ್ದಲ ಸೃಷ್ಟಿಯಾಗಿದ್ದು ರಾಮನಗರದಲ್ಲಿಯೂ ಸಹ ಬೂದಿ ಮುಚ್ಚಿದ ಕೆಂಡದಂತಿದೆ ವಾತವರಣ ಸೃಷ್ಟಿಯಾಗಿದೆ.
ರಾಮನಗರ - ಚನ್ನಪಟ್ಟಣ ಎರಡೂ ತಾಲೂಕು ಸೂಕ್ಷ್ಮ. ಅದರಲ್ಲಿಯೂ ವಿಶೇಷವಾಗಿ ಚನ್ನಪಟ್ಟಣ ಕ್ಷೇತ್ರ ಅತ್ಯಂತ ಸೂಕ್ಷ್ಮ ಕ್ಷೇತ್ರ. ಚನ್ನಪಟ್ಟಣದಲ್ಲಿ ಒಮ್ಮೆ ಕಿಡಿಹೊತ್ತಿಕೊಂಡರೆ ಅದನ್ನ ಹಾರಿಸಲು ಸಾಧ್ಯವಿಲ್ಲ. ಇಷ್ಟು ವರ್ಷ ಶಾಂತವಾಗಿದ್ದ ರಾಮನಗರ ಜಿಲ್ಲೆಯಲ್ಲಿ ಈಗ ಹಿಜಾಬ್, ಹಲಾಲ್ ಹಾಗೂ ಇತರೆ ವಿಚಾರವಾಗಿ ಕಿಡಿಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.‌

ಹಲಾಲ್ & ಜಟ್ಕಾ ಮಾಂಸ, ಹೀಗಂದರೇನು?

ಮುಸ್ಲಿಮರು ನಡೆಸುವ ಮಾಂಸದಂಗಡಿಗಳಲ್ಲಿ ನೀಡಲಾಗುವ ಮಾಂಸವನ್ನು ಹಲಾಲ್ ಮಾಂಸ ಎಂದು ಕರೆಯಲಾಗುತ್ತದೆ. ಹಾಗೆಯೇ ಹಿಂದೂಗಳು ನಡೆಸುವ ಮಾಂಸದಂಗಡಿಯಲ್ಲಿ ನೀಡಲಾಗುವ ಮಾಂಸಕ್ಕೆ ಜಟ್ಕಾ ಮಾಂಸ ಎನ್ನಲಾಗುತ್ತದೆ, ಸದ್ಯ ರಾಮನಗರದಲ್ಲಿ ಹಲಾಲ್ ಮಾಂಸವನ್ನು ಕೊಳ್ಳಬಾರದು ಎನ್ನುವ ಮಾತು ಶುರುವಾಗಿದೆ. ಇದರಿಂದ ಮುಸ್ಲಿಂ ವ್ಯಾಪಾರಿಗಳಿಗೆ ಹೊಡೆತ ಬೀಳಲಿದೆ.
Published by:Divya D
First published: